ಸದಸ್ಯ:Hamsa.KS1910462/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೋಗಾಲ ಹಳ್ಳಿ[ಬದಲಾಯಿಸಿ]

ಅದರಲ್ಲಿ ಪ್ರಾಮುಖ್ಯತೆ ಹೊಂದಿರುವ ವಿಷಯವೆಂದರೆ ಇಲ್ಲಿ ನಡೆಯುವ ಜಾತ್ರೆ ಹಾಗೂ ಪೂಜಾ ಕಾರ್ಯಕ್ರಮಗಳು ಮತ್ತು ಜನರ ವೇಷಭೂಷಣಗಳು ವಿಭಿನ್ನ ಅಲ್ಲಿಯ ಜನರು ದೈವದ ಮೇಲೆ ಇಟ್ಟಿರುವ ನಂಬಿಕೆ ಮತ್ತು ಅವರು ನಡೆಸುವ ಪಲ್ಲಕ್ಕಿ ಮೆರವಣಿಗೆ ಹಾಗೂ ದೇವರ ಅಲಂಕಾರ ಮತ್ತು ಪೂಜಾ ವ್ಯವಸ್ಥೆ ಬಂದ ಹಳ್ಳಿಯ ಎಲ್ಲಾ ಜನರು, ಮಕ್ಕಳು, ಮತ್ತು ವೃದ್ಧರು ಸೇರಿ ಆಚರಿಸುವ ಹಬ್ಬ ಎಂದು ಅಲ್ಲಿಯ ಸುತ್ತ ಮುತ್ತಲಿನ ಊರಿನಲ್ಲಿ ಪ್ರಸಿದ್ದವಾಗಿದೆ. ಅಲ್ಲಿಯ ಜನರು ಮಲೆ ಮಹಾದೇಶ್ವರನು ಶ್ರೀ ಮಹಾದೇಶ್ವರ ಸ್ವಾಮಿಯನ್ನು ಈ ಊರಿನ ದೇವಸ್ಥಾನದಲ್ಲಿ ಸ್ಥಾಪಿಕೆ ಪೂಜಾ-ಕಾರ್ಯವನ್ನು ನಡೆಸುತ್ತಾರೆ. ಈ ಊರಿನಲ್ಲಿ ಜಾತಿಯತೆ ಹಾಗೂ ಮುಟ್ಟುವಿಕೆ ಮಡಿ, ಮೈಲಿಗೆ ಎಂದು ನಡೆಸುತ್ತಾರೆ. ಅಲ್ಲಿಯ ಜನರು ಬಂದು ಹಳ್ಳಿಯಲ್ಲಿ ಮೂರು ಭಾಗವಾಗಿ ಮತ್ತು ಬೇರೆ ಬೇರೆ ಜಾತಿಯತೆಯನ್ನು ಮಾಡಿಕೊಂಡು ಬದುಕುತ್ತಿದ್ದರೆ, ಈ ಹಳ್ಳಿಯಲ್ಲಿ ಜಮೇಲಿನ ದೊಡ್ಡಿ ಮತ್ತು ಕೆಳಗಿನ ದೊಡ್ಡಿ ಎಂದು ಮಾಡಿದ್ದರೆ ಅಲ್ಲಿಯ ಜನರು ಮೇಲಿನ ದೊಡ್ಡಿಯಲ್ಲಿ ನೆಲವರ್ಗದ ಜನರು ಹಾಗೂ ಕೆಳಗಿನ ದೊಡ್ಡಿಯಲ್ಲಿ ಕೆಳವರ್ಗದ ಜನರು ಜೀವಿಸುತ್ತಿದ್ದಾರೆ. ಕೆಳವರ್ಗದ ಜನರು ಎಂದರೆ ಕೆಳ ಜಾತಿಯ ಜನರು ಅವರಿಗೆ ಒಂದು ಭಾಗ ಮಾಡಿದ್ದು ಅಲ್ಲಿಯ ಜನರು ಕೂಲಿ ಮತ್ತು ಬೇರೆ ಕೆಲಸಗಳನ್ನು ಮೇಲವರ್ಗದ ಜನರು ಬಳ್ಳಿ ಮಾಡಬೇಕಾಗಿರುತ್ತದೆ. ಆದ್ದರಿಂದ ಹಳ್ಳಿಯ ಜಾತ್ರೆ ಕಾರ್ಯಕ್ರಮಗಳನ್ನು ಅವರಿಗೆ ಬೇರೆ ಸ್ಥಾನ ನೀಡಿದ್ದಾರೆ. ಅಲ್ಲಿಯ ಮೇಲವರ್ಗದ ಜನರು ಕೆಳವರ್ಗದ ಜನರಿಗೆ ಹೇಳಿದ್ದು ಕೆಲಸಗಳನ್ನು ತಪ್ಪದೆ ಮಾಡಬೇಕಾಗಿರುತ್ತದೆ. ಒಂದು ವೇಳೆ ತಪ್ಪಿದಲ್ಲಿ ಅವರಿಗೆ ಶಿಕ್ಷೆಗಳು ತಪ್ಪಿದಲ್ಲ, ಈ ಹಳ್ಳಿಯು ಒಂದು ಕಾಡು ಪ್ರದೇಶವಾಗಿದ್ದು, ಅಲ್ಲಿಯವರ ಜೀವನಶೈಲಿ ಹೊರಗೆ ಎಲ್ಲೂ ತಿಳಿದಿಲ್ಲ, ಅಲ್ಲಿಯ ಜನರು ಜೀವನ ಹೊರಗಿನ ಜನರ ಜೀವನ ಶೈಲಿಗಿಂತಲ್ಲ ವಿಭಿನ್ನ ಆ ಕಾಡು ಪ್ರದೇಶದಲ್ಲಿ ಸ್ಥಾಪಿಸಿರುವ ದೇವರೆ ಮಹಾದೇಶ್ವರ ಸ್ವಾಮಿ ಈ ಜಾತ್ರೆಯಲ್ಲಿ ಮಾತ್ರ ಮೇಲವರ್ಗದ ಮತ್ತು ಕೆಳವರ್ಗದ ಜನರು ಒಂದಾಗಿ ಆಚರಿಸುವ ಹಬ್ಬವಾಗಿದೆ.

ಸ್ಥಳ[ಬದಲಾಯಿಸಿ]

ಕರ್ನಾಟಕ ರಾಜ್ಯದ ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ, ಜಿಲ್ಲೆಯಲ್ಲಿ ಒಂದು ಪ್ರಾಂತ್ಯವಾದ ಸೋಗಾಲ ಎಂಬ ಹಳ್ಳಿಯಲ್ಲಿ ತುಂಬ ವಿಷಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ.

ಪರಿಚಯ[ಬದಲಾಯಿಸಿ]

ಶ್ರೀ ಮಹಾದೇರ್ಶವರ ಸ್ವಾಮಿ ಜಾತ್ರೆ, ಈ ಜಾತ್ರೆ ಹಳ್ಳಿಯಲ್ಲಿ ಹದಿನೈದು ವರ್ಷಕ್ಕೆ ಒಮ್ಮೆ ನಡೆಸುತ್ತಾರೆ. ಹದಿನೈದು ವರ್ಷಗಳಿಗೆ ಒಮ್ಮೆ ನಡೆಸುವ ಹಬ್ಬ ಈ ಹಬ್ಬ ಒಂದು ವಾರಗಳ ಕಾಲ ನಡೆಯುತ್ತದೆ. ಒಂದು ಒಂದು ದಿನ ಬಂದು ಬಂದು ವೈಷ್ಣತೆ ಹೊಂದಿದ್ದು ಮೊದಲು ದಿನದಂತೆ ಕಂಬಿದ್ದ ಪೂಜೆಯಿಂದ ಆರಂಭಿಸಿ, ಕಂಬವನ್ನು ಕೊನೆಯ ದಿನದಂದು ಪೂಜಾರಿಯ ಬೆನ್ನಮೇಲೆ ಕರೆದುಕೊಂಡು ಹೋಗಿ ಕಾಡಿನಲ್ಲಿ ಎಸೆದು ಬರುತ್ತಾರೆ. ಕಂಬವನ್ನು ಉಳ್ಳುವಾಗ ಒಂದು ಗುಂಡಿಯಲ್ಲಿ ಉಪ್ಪು ಹಾಕಿ ಉಪ್ಪಿನ ಮೇಲೆ ಹೂವನ್ನು ಇಟ್ಟು ಅದರ ಮೇಲೆ ಕಂಬವನ್ನು ಸ್ಥಾಪಿಸುತ್ತಾರೆ. ಅದರ ವೈಶಿಷ್ಟತೆ ಏನೆಂದರೆ ಈ ಹೂವು ಕೊನೆಯ ದಿನದವರೆಗೂ ಕೆಡದೆ ಹಾಗೆ ಇರುತ್ತದೆ. ಇನ್ನೂ ಎರಡನೇ ದಿನಕ್ಕೆ ಬಂದರೆ ನಿಜವಾದ ಹಬ್ಬದ ಸಂಭ್ರಮ ಶುರುವಾಗಿರುತ್ತದೆ. ಹೇಗೆಂದರೆ ಅಲ್ಲಿಯ ಹೆಣ್ಣುಮಕ್ಕಳು ರಾತ್ರಿಯವೇಳೆ ಶ್ರಂಗರಗೊಂಡು ಮನೆಯ ದೇವರಿಗೆ ಅಕ್ಕಿಯಿಂದ ಮಾಡಿದ ಸಹಿ ತಿಂಡಿಯನ್ನು ತೆಗೆದು ದೇವರ ಪಲ್ಲಕ್ಕಿಯ ಜೊತೆ ರಾತ್ರಿ ವೇಳೆ ಮೆರವಣಿಗೆ ಹೋಗುತ್ತಾರೆ. ನೋಡಲು ಎರಡು ಕಣ್ಣು ಸಾಲದು. ರಾತ್ರಿ ಮುಗಿದು ಬೆಳಿಗ್ಗೆ: ಮತ್ತೆ ಮೂರನೇ ದಿನ ಬೆಳಿಗ್ಗೆ ಹಳ್ಳಿಯ ಎಲ್ಲಾ ಜನರು ಮುಂಜಾನೆ ಐದು ಗಂಟೆಗೆ ಎದ್ದು ಆಚೆ ಮನೆಯ ಮುಂದೆ ನೀರು ಹಾಖಿ ರಂಗೋಲಿ ಮತ್ತೆ ಹೂವು, ಹಣ್ಣಿನಿಂದ ಅಲಂಕರಿಸುತ್ತಾರೆ. ಸಂಜೆ ಊತಿನ ದೇವಸ್ಥಾನದ ಬಳಿ ಎಲ್ಲರೂ ಸೇರಿ ಬಾಯಿಬಗ್ಗೆ ಎಂದು ತಮ್ಮ ತಮ್ಮ ಬಾಯಿಗೆ ಬೀಗವನ್ನು ಹಾಕಿಸಿಕೊಳ್ಳುತ್ತಾರೆ ಎಂದರೆ ಬಾಯಿಗೆ ಕಂಬಿಯಿಂದ ಚುಚ್ಚಿ ಅದನ್ನು ಹರಕೆ ದೇವರಿಗೆ ಮತ್ತು ದಿನ ಪೂರೈಸುತ್ತಾರೆ. ನಾಲ್ಕನೇ ದಿನ ಹಬ್ಬದ ಸಂಭ್ರಮ ಜೋರಾಗಿರುತ್ತದೆ. ಆನರು ಸಂತೋಷ ಸಡಗರಗಳಿಂದ ಹಳ್ಳಿಯ ಪ್ರತಿಯೊಂದು ಮನೆಗೆ ಈ ದೀಪದಿಂದ ಆಲಂಕಾರಗೊಳಿಸಿರುತ್ತಾರೆ. ದೇವಸ್ಥಾನದ ಬಳಿ ಮರದ ಕಟ್ಟಿಗೆಗಳನ್ನು ಜೋಡಿಸಿ ಬೆಂಕಿಯಿಂದ ಕೆಂಡವಾಗಿ ಮಾಡಿ ಊತಿನ ದನಗಳಿಗೆ ಬಣ್ಣಗಳಿಂದ ಅಲಂಕರಿಸಿರುತ್ತಾರೆ. ಸುಮಾರು ಅರ್ಧಹಳ್ಳಿಯ ದನಗಳನ್ನು ದಾರಿಯಲ್ಲಿ ನಿಲ್ಲಿಸಿ ಆ ಕೆಂಡದ ಮೇಲೆ ನಡೆಸಿಕೊಂಡು ಹೋಗುತ್ತಾರೆ. ಆನಂತರ ದನಗಳು ತುಳಿದ ಕೆಂಡಗಳನ್ನು ಪ್ರಸಾದವೆಂದು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇನ್ನೂ ಕೊನೆಯ ಎಂದು ಮೂರು ದಿನಗಳೂ ಜಾತ್ರೆ ಮುಗಿಯುವ ದಿನಗಳು ಹೇಗಿರುತ್ತೆ ಎಂದರೆ ಪಲ್ಲಕ್ಕಿ ನಿಡಿ ಮತ್ತು ಪ್ರಸಾದ ವಿತರಣೆ, ದೇವಸ್ಥಾನದ ಪೂಜಾರಿಗಳು ಮಡಿಯಿಂದ ಪೂಜೆ ನಡೆಸುತ್ತಾರೆ. ದೇವಸ್ಥಾನದ ಮುಂಭಾಗ ಕಟ್ಟಿಗೆಗಳನ್ನು ಬೆಂಕಿ ಹಾಕಿ ಕೆಂಡವನ್ನು ಮಾಡಿ ಅದರ ಮೇಲೆ ದೇವಸ್ಥಾನದ ಪೂಜಾಗಳು ದೇವರನ್ನು ತಲೆಯ ಮೇಲೆ ಇಟ್ಟುಕೊಂಡು ಕೆಂಡದ ಮೇಲೆ ನಡೆದು ಬರುತ್ತಾರೆ. ಆನಂತರ ದೇವರ ಪೂಜೆ ಪ್ರಾರಂಭಿಸುತ್ತಾರೆ. ಊರಿನ ಜನರು ಅದನ್ನು ನೋಡಿ ಸಂಭ್ರಮ ಪಡುತ್ತಾರೆ. ತಮ್ಮ ಹರಕೆಗಳನ್ನು ಈಡೇರಿಸಿಕೊಳ್ಳಲು ಉಪ್ಪು ಅಗಳು ಎಲ್ಲವನ್ನು ಕೆಂಡ ಹಾಕುತ್ತಾರೆ. ದೇವರಲ್ಲಿ ಒಳ್ಳೆಯ ಜಗುಲಿ ಎದುರು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಆನಂತರ ಮನೆಗೆ ಬಂದ ಸಂಬಂಧಿಕರು, ನೆಂಟರು, ಎಲ್ಲರಿಗೂ ತರ ತರಹದ ಊಟವನ್ನು ಮಾಡಿ ಬಡಿಸುತ್ತಾರೆ. ನಂತರ ದೇವರ ಮೆರವಣಿಗೆಯು ಊ ಬೀದಿ ಬೀದಿಗಳಲ್ಲಿ ನಡೆಯುತ್ತದೆ. ನಮ್ಮ ಊರಿನ ಪ್ರಕ್ರಿಯೆ ಮನೆಯವರು ಮನೆಯ ಮುಂಭಾಗ ದೇವರು ಮೆರಣಿಗೆಗೆ ಬಂದಾಗ ಪೂಜೆ ಮಾಡಿಸುತ್ತಾರೆ. ಆನಂತರ ಮನೆ-ಮನೆಯಲ್ಲಿರುವ ತಿಂಡಿ-ತಿನಿಸುಗಳನ್ನು ಖರೀದಿಸುತ್ತಾರೆ.

ಹೀಗೆ ನಮ್ಮ ಊತಿನಲ್ಲಿ ಸೋಗಾಲದಲ್ಲಿ ಸಂಭ್ರಮದಿಂದ ಹಬ್ಬ ಮಾಡುತ್ತಾರೆ. ಇದರಲ್ಲಿ ತಿಳಿಯುವುದು ಏನೆಂದರೆ ಯಾವುದೇ ವರ್ಗದ ಜನರು ಇದ್ದರೂ ದೇವರ ಬಳಿ ಒಂದೇ. ಆದ್ದರಿಂದ ಜಾತಿಯತೆ ಮುಟುವಿಕೆಯನ್ನು ಬಿಟ್ಟು ಎಲ್ಲರೂ ಒಂದೇ ಎಂದು ತಿಳಿದು ಬಾಳಬೇಕು. ಒಬ್ಬರ ಕಷ್ಟಕ್ಕೆ ಒಬ್ಬರು ಆಗಬೇಕು ಎಂದು ತಿಳಿಸುತ್ತೇವೆ.

ಉಲ್ಲೇಖಗಳು[ಬದಲಾಯಿಸಿ]

<r>https://en.wikipedia.org/wiki/Channapatna</r>

<r>https://en.wikipedia.org/wiki/Ramanagara</r>