ಸದಸ್ಯ:Gopala Krishna A/Pavanaja
ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಡಾ.ಯು.ಬಿ.ಪವನಜ.
ಕನ್ನಡ ವಿಕಿಪೀಡಿಯಕ್ಕೆ ಕೊಡುಗೆ
[ಬದಲಾಯಿಸಿ]ಡಾ.ಯು.ಬಿ. ಪವನಜರ ಪೂರ್ಣ ಹೆಸರು ಡಾ. ಉಬರಡ್ಕ ಬೆಳ್ಳಿಪ್ಪಾಡಿ ಪವನಜ. ಇವರು ಕನ್ನಡ ವಿಕಿಪೀಡಿಯದ ಆರಂಭದ ದಿನಗಳಲ್ಲಿ ಮತ್ತು ಈಗಲೂ ಕೊಡುಗೆ ನೀಡಿದ ಸಕ್ರಿಯ ಸಂಪಾದಕರಲ್ಲಿ ಒಬ್ಬರು. ಕನ್ನಡ ವಿಕಿಪೀಡಿಯಕ್ಕೆ ಇವರ ಕೊಡುಗೆ ಅಪಾರ. ಕರ್ನಾಟಕದ ಅನೇಕ ಕಾಲೇಜುಗಳಿಗೆ ಹೋಗಿ ಅಲ್ಲಿ ಕಾರ್ಯಾಗಾರಗಳನ್ನು ನಡೆಸಿ ಅನೇಕ ವಿದ್ಯಾರ್ಥಿಗಳನ್ನು ಸಕ್ರಿಯ ವಿಕಿಪೀಡಿಯ ಬಳಕೆದಾರರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಡಿಎಸ್ಇಆರ್‌ಟಿಯ ವಿಜ್ಞಾನ ಪಠ್ಯಯೋಜನೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಜ್ಞಾನವನ್ನು ಆಡುಭಾಷೆಯಲ್ಲಿ ತಲುಪಿಸಬೇಕೆಂದು ಉತ್ಸಾಹಿಯಾಗಿ ಕೆಲಸ ಮಾಡಿದ್ದಾರೆ. ತುಳು ವಿಕಿಪೀಡಿಯವನ್ನು ಜೀವಂತ ಮಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ.
ಇತರೆ
[ಬದಲಾಯಿಸಿ]ಇವರು ಕನ್ನಡದ ಪ್ರಪ್ರಥಮ ಜಾಲತಾಣ ವಿಶ್ವಕನ್ನಡ.ಕಾಂನ್ನು ೧೯೯೬ ಡಿಸೆಂಬರ್‌ನಲ್ಲಿ ಸೃಷ್ಟಿಸಿದ್ದರು. ಇವರು ವಿಜ್ಞಾನಿ, ಸಾಪ್ಟ್‌ವೇರ್ ತಂತ್ರಜ್ಞ. ಇವರು ಬರೆಯುವವ ಗ್ಯಾಜೆಟ್ ಲೋಕ ಪ್ರತೀ ಗುರುವಾರ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ ಮತ್ತು ಮುಂಬಯಿಯ ವಿಶ್ವವಿದ್ಯಾನಿಲಯದಿಂದ ಪಿ.ಎಚ್‌ಡಿ ಪದವಿ ಪಡೆದುಕೊಂಡರು. ನಂತರ ತೈವಾನ್‌ನಲ್ಲಿ ಉನ್ನತ ಸಂಶೋಧನೆ ನಡೆಸಿದರು. ಮುಂಬಯಿಯ ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ (ಬಿಎಆರ್‌ಸಿ) ೧೫ ವರ್ಷಗಳ ಕಾಲ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ, ೧೯೯೭ರ ಜೂನ್‌ನಲ್ಲಿ ಬಿ.ಎ.ಆರ್.ಸಿ. ವಿಜ್ಞಾನಿ ಹುದ್ದೆಗೆ ರಾಜೀನಾಮೆ ನೀಡಿದರು. ಇವರ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನವೂ ಇದೆ. ಚಿಕ್ಕ ಮಕ್ಕಳಿಗೆ ಪ್ರೋಗ್ರಾಮ್ಮಿಂಗ್‌ನ ಮೂಲಭೂತ ತತ್ತ್ವಗಳನ್ನು ಸರಳವಾಗಿ ಕಲಿಸುವ, ಜಗತ್ತಿನಾದ್ಯಂತ ತುಂಬ ಜನಪ್ರಿಯವಾಗಿರುವ, ಲೋಗೋ ತಂತ್ರಾಂಶವನ್ನು ಕನ್ನಡೀಕರಿಸಿ ಅದಕ್ಕೆ ಮಂಥನ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕ ಸರಕಾರದ ತಂತ್ರಾಂಶ ಸಲಹಾ ಸಮಿತಿ ಸದಸ್ಯರೂ ಆಗಿದ್ದಾರೆ.