ಸದಸ್ಯ:Gagangt412
Gagan Ganapathy A.U | |
---|---|
Born | Gagan Ganapathy A.U 12-10-1997 Kodagu, Gonikoppal |
Nationality | Indian |
Education | B.Com |
Alma mater | Coorg Pre-University College |
Occupation | Student |
ನನ್ನ ಹೆಸರು ಗಗನ್ ಗಣಪತಿ ಎ.ಯು. ನಾನು ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆನೆ. ನಾನು ಇಲ್ಲಿ ಬಿ.ಕಾಂ ಮಾಡುತ್ತಿದ್ದೆನೆ.
ಬಾಲ್ಯ
[ಬದಲಾಯಿಸಿ]ನಾನು ಹುಟ್ಟಿದ್ದು ೧೨-೧೦-೧೯೯೭,ಕೊಡಗಿನ ಗೋಣಿಕೊಪ್ಪಲು ಎಂಬ ಊರಿನಲ್ಲಿ. ನನ್ನ ಬಾಲ್ಯವೂ ತುಂಬಾ ಸುಖ ಸಂತೋಷ ತುಂಬಿದ್ದ ದಿನಗಳಾಗಿದ್ದವೂ. ನನ್ನ ತಂದೆ-ತಾಯಿ, ತಾತ-ಅಜ್ಜಿ ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರು. ನಾನು ನನ್ನ ಊರಿನ ಹತ್ತಿರ ಇರುವ ಶಾಲೆಗೆ ಹೋಗುತ್ತಿದ್ದೆ. ನನ್ನ ತಾಯಿ ಅಲ್ಲಿ ಶಿಕ್ಷಕರಾಗಿದರಿಂದ ನನಗೆ ತುಂಬಾ ಅನುಕೂಲವಾಯಿತು. ನನಗೆ ಓದಿನಲ್ಲಿ ತುಂಬಾ ಆಸಕ್ತಿ ಇತ್ತು ಹಾಗೂ ನಾನು ಚೆನ್ನಾಗಿ ಓದಿ ಒಳೆಯ ಅಂಕಗಳನ್ನು ಪಡೆಯುತ್ತಿದ್ದೆ. ನನಗೆ ಕ್ರೀಡೆಗಳಲ್ಲಿ ಆಸಕ್ತಿ ಇರಲಿಲ್ಲ ಆದರೆ ನಾನು ೬ನೇ ತರಗತಿಯಿಂದ ಕ್ರಿಕೆಟ್ ನೋಡಲು ಪ್ರಾರಂಭ ಮಾಡಿದೆ. ನನಗೆ ಸಚಿನ್ ತೆಂಡುಲ್ಕರ್ ಆಟ ನೋಡಲು ತುಂಬಾ ಇಷ್ಟ. ನಾನು ೮ನೇ ತರಗತಿಯಿಂದ ಕ್ರಿಕೆಟ್ ಆಡಲು ಶುರು ಮಾಡಿದೆ ಆದ್ದರಿಂದ ನಾನು ಈ ಆಟ ಚೆನ್ನಾಗಿ ಆಡುತ್ತೆನೆ.
ಶಿಕ್ಷಣ
[ಬದಲಾಯಿಸಿ]ನನ್ನ ಪ್ರಾಥಮಿಕ ಶಿಕ್ಷಣವೂ ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು ನಾನು ನರ್ಸರಿಯಿಂದ ೭ನೇ ತರಗತಿಯವರೆಗೆ ಈ ಶಾಲೆಯಲ್ಲಿ ಓದಿದ್ದೆ. ನಮಗೆ ಶಿಕ್ಷಕರು ಚೆನ್ನಾಗಿ ಪಾಠ ಕಲಿಸುತ್ತಿದ್ದರು. ನಾನು ಶಿಕ್ಷಕರಿಗೆ ತಕ್ಕಂತೆ ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯುತ್ತಿದ್ದೆ. ೭ನೇ ತರಗತಿಯ ನಂತರ ೮ ರಿಂದ ೧೦ನೇ ತರಗತಿಯವರೆಗೆ ನಾನು ಲಯನ್ಸ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದೆ. ಈ ಮೂರು ವರ್ಷಗಳಲ್ಲಿ ನಾನು ತುಂಬಾ ಕ್ರಿಕೆಟ್ ಆಡುತ್ತಿದ್ದೆ ಇದರಿಂದ ನಾನು ಓದಿನ ಕಡೆ ಗಮನ ಕೊಡಲಿಲ್ಲ. ಆದರೆ ೧೦ನೇ ತರಗತಿಯಲ್ಲಿ ಓದಲೇ ಬೇಕಾದರಿಂದ ಹಾಗೂ ಒಳೆಯ ಅಂಕಗಳು ಪಡೆಯಬೇಕಾದರಿಂದ ನಾನು ಓದಿ ನನಗೆ ಎಸ್.ಎಸ್.ಎಲ್.ಸಿಯಲ್ಲಿ ೮೨% ಬಂತು. ನಂತರ ನಾನು ನನ್ನ ಪದವಿಪೂರ್ವ ಶಿಕ್ಷಣಕ್ಕೆ ಕೂರ್ಗ್ ಪ್ರಿ-ಯೂನಿವರ್ಸಿಟಿ ಕಾಲೇಜಿಗೆ ಸೇರಿದೆ ನಾನು ವಾಣಿಜ್ಯ್ ಶಾಸ್ತ್ರ ಆಯ್ಕೆ ಮಾಡಿಕ್ಕೊಂಡೆ. ಇಲ್ಲಿ ನನಗೆ ಇಷ್ಟವಾದ ವಿಷಯಗಯಳಿತ್ತು. ನಾನು ಓದಿನಲ್ಲಿ ಆಸಕ್ಕಿ ತೋರಿ, ಆಟದಲ್ಲೂ ಮುಂದುವರೆದರಿಂದ ನನ್ನನ್ನು ಹೌಸ್ ಕಾಪ್ಟನ್ ಮಾಡಿದರು. ಪಿಯುಸಿಯ ಕೊನೇಯ ಪರೀಕ್ಷೆಯಲ್ಲಿ ನನಗೆ ಬಂದಿದ್ದು ೯೩% ಇದರಿಂದಾಗಿ ನನಗೆ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದಲು ಅವಕಾಶ ಸಿಕ್ಕು.
ಮುಂದಿನ ಓದು
[ಬದಲಾಯಿಸಿ]ನಾನು ಯಾವತ್ತೂ ಜೀವನದಲ್ಲಿ ಗುರಿ ಇಟ್ಟವನಲ್ಲ ಆದರೆ ಬದುಕಿನಲ್ಲಿ ಸಾಧನೆ ಮಾಡಲು ಹಾಗೂ ಬದುಕನ್ನು ನಡೆಸಲು ಗುರಿ ಬಹಳ ಮುಖ್ಯ ಎಂದು ನನಗೆ ತಿಳಿದಿದೆ. ಆದ್ದರಿಂದ ನಾನು ನನ್ನ ಬಿ.ಕಾಂ ಮುಗಿಸಿದ ನಂತರ ಎಂಬಿಎ ಅಥವ ಸಿ.ಎಸ್ ಮಾಡುವುದು ನನ್ನ ಆಸೆಯಾಗಿದೆ. ಆದರೆ ಎಂಬಿಎ ಮುಗಿಸಿ ಗುರಿ ಸಾಧಿಸುವುದು ಸುಲಭ ಕೆಲಸ ಅಲ್ಲ. ಇದಕ್ಕೆ ಕ್ರೈಸ್ಟ್ ಯೂನಿವರ್ಸಿಟಿ ನನಗೆ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನನಗೆ ಇದೆ. ನಾನು ಕೂಡ ನನ್ನ ಗುರಿ ಸಾಧಿಸಲು ಕಷ್ಟ ಪಡಬೇಕು ಇಲ್ಲ ಅಂದರೆ ಅದು ಸಾಧ್ಯವಿಲ್ಲ.
ಆಸಕ್ತಿಗಳು
[ಬದಲಾಯಿಸಿ]ನನಗೆ ತುಂಬಾ ಕಡೆಗಳಲ್ಲಿ ಆಸಕ್ತಿ ಇದೆ, ಅದರಲ್ಲಿ ಕ್ರಿಕೆಟ್ ಒಂದು. ನಾನು ಚಿಕ್ಕ ವಯಸ್ಸಿನಿಂದ ಲೇ ಕ್ರಿಕೆಟ್ ಆಡುತ್ತಿದ್ದೇನೆ. ಸಚಿನ್ ತೆಂಡುಲ್ಕರ್ ನನ್ನ ಆದರ್ಶ ವ್ಯಕ್ತಿ, ಅವನ ಆಟದಲ್ಲಿ ಇರುವ ಕಲೆ ಬೇರೆ ಯಾವ ಆಟಗಾರನ್ನಲ್ಲೂ ಕಾಣಿಸುವುದಿಲ್ಲ, ಅವನು ಕ್ರಿಕೆಟ್ ಜಗತ್ತಿನಲ್ಲಿ ಮಾಡಿರುವ ಕಾಣಿಕೆಗಳು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಕ್ರಿಕೆಟ್ ಬಿಟ್ಟರೆ ನನಗೆ ಕಂಪ್ಯೂಟರ್ ಗೇಮಿಂಗ್ ಎಂದರೆ ತುಂಬಾ ಇಷ್ಟ. ಈಗಿನ ಕಾಲದಲ್ಲಿ ಕಂಪ್ಯೂಟರ್ ಇಲ್ಲದ ಬದುಕು ಕಷ್ಟ. ಈ ಎರಡು ಆಸಕ್ತಿ ಬಿಟ್ಟರೆ ನನಗೆ ಪುಸ್ತಕ ಓದುವುದು, ಕ್ರಿಕೆಟ್ ಪೋಸ್ಟರ್ ಸಂಗ್ರಹಿಸುವುದು, ದೂರದರ್ಶನ ನೋಡುವುದು, ದೂರದರ್ಶನ ಕಾರ್ಯಕ್ರಮ ನೋಡುವುದು, ಹಾಡು ಕೇಳುವುದು ಹಾಗೂ ಕ್ರೀಡೆ ಆಡಲು ಬಹಳ ಇಷ್ಟ. ಕ್ರಿಕೆಟ್ ಹಾಗೂ ಕಂಪ್ಯೂಟರ್ ಭಾಗದಲ್ಲಿ ನನಗೆ ತುಂಬಾ ಅನುಭವ ಇದೆ. ಪಿಯುಸಿಯಲ್ಲಿ ನಾನು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿತಿದ್ದೇನೆ ಇದು ನನಗೆ ಸಹಾಯ ಮಾಡುತ್ತದೆ ಆದ್ದರಿಂದ ಪ್ರೋಗ್ರಾಮಿಂಗ್ ಕಲಿತಿದ್ದು ಅನುಕೂಲವಾಯಿತು ಎಂಬುದು ನನ್ನ ಅಭಿಪ್ರಾಯ. ನನಗೆ ಸಿನೆಮಾಗಳಲ್ಲಿ ತುಂಬಾ ಬಯಕೆ ಇದೆ. ಕನ್ನಡ, ತಮಿಳು, ಹಿಂದಿ, ಇಂಗ್ಲೀಷ್ ಭಾಷೆಯ ಸಿನೆಮಾ ನಾನು ತುಂಬಾ ನೋಡುತ್ತೇನೆ.
This user is a member of WikiProject Education in India |