ಸದಸ್ಯ:Dr.Shailaja.k/ನನ್ನ ಪ್ರಯೋಗಪುಟ
ಗೋಚರ
ಲಂಬಾಸ್, ಲಂಬ ಪುಷ್ಪ ಇದು ವರ್ಷವಿಡೀ ಹೂ ಬಿಡುತ್ತದೆ. ಈ ಹೂವು ಅಲ್ಲಮಂಡ ಕಥರ್ಟಿಕ ಜಾತಿಗೆ ಸೇರಿದೆ. ಗೋಲ್ಡನ್ ಟ್ರಂಫೆಟ್ ಎಂತಲೂ ಕರೆಯುತ್ತಾರೆ. ದೇವ ಕುಸುಮ, ಆಭರಣ ಪುಷ್ಪಗಳೆಂದೂ ಹೆಸರು ಪಡೆದಿದೆ. ಗಣಪತಿ ಪೂಜೆಗೆ ಶ್ರೇಷ್ಠವೆನ್ನುತ್ತಾರೆ. ಐದು ದಳವನ್ನು ಹೊಂದಿರುವ ಈ ಹೂವು ಮೇಲ್ನೋಟಕ್ಕೆ ಗಂಟೆಯಂತೆ ಕಾಣುತ್ತದೆ. ಈ ಬಗೆಯ ಹೂವಿನಲ್ಲಿ ಇರಿಡೋಯ್ಡ್ ಲ್ಯಾಕ್ಟೋನ್, ಪ್ಲುಮೆರೆಸಿನ್ ಎನ್ನುವ ರಾಸಾಯನಿಕ ಅಂಶವಿದೆ. ಲಿವರ್ ಟ್ಯುಮರ್, ಜಾಂಡೀಸ್, ಸ್ಪ್ಲೆನೋಮೆಗಾಲಿ ಮತ್ತು ಮಲೇರಿಯಾ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಕೆಯಾಗುತ್ತದೆ. ಹೂವುಗಳು ಕ್ಯಾರ್ಸಿನೋಮೋ ಕೋಶಗಳು ದ್ವಿಗುಣಗೊಳ್ಳದಂತೆ ತಡೆಯುತ್ತದೆ. ಹಳದಿ ಬಣ್ಣವಲ್ಲದೆ ಬಿಳಿ, ನೇರಳೆ, ಗುಲಾಬಿ, ಕೇಸರಿ ಬಣ್ಣದ ಹೂವುಗಳನ್ನು ನೋಡಬಹುದು. ಐದಕ್ಕಿಂತ ಹೆಚ್ಚು ದಳವಿರುವ ಮುದ್ದೆ ಹೂ ಕೂಡಾ ಇದೆ.