ಸದಸ್ಯ:Donald Pereira/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡೊನಾಲ್ಡ್ ಪಿರೇರಾ

ನನ್ನ ಹೆಸರು ಡೊನಾಲ್ಡ್ ಪಿರೇರಾ. ನನ್ನ ಊರು ಬೆಳ್ತಂಗಡಿ. ಬೆಳ್ತಂಗಡಿಯು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಆಗಿದ್ದು ಅಲ್ಲಿಂದ ಮುಂದುವರಿದರೆ ಒಂದು ದಿಕ್ಕಿಗೆ ಹಾಸನ ಜಿಲ್ಲೆ ಮತ್ತು ಇನ್ನೊಂದು ದಿಕ್ಕಿನಿಂದ ಚಿಕ್ಕಮಗಳೂರಿಗೆ ಸಂಪರ್ಕ ಸಿಗುತ್ತದೆ.

ಕರ್ನಾಟಕ ರಾಜ್ಯದ ಅತಿ ಸಂಪದ್ಭರಿತ ನೈಸರ್ಗಿಕ ಸಂಪತ್ತು ಪಶ್ಚಿಮ ಘಟ್ಟದಲ್ಲಿದ್ದು ನಮ್ಮ ಬೆಳ್ತಂಗಡಿ ತಾಲೂಕಿನಲ್ಲಿ ಈ [ಘಟ್ಟ] ಹಾದು ಹೋಗುತ್ತದೆ. ಅತ್ಯಂದ ರಮಣೀಯವಾದ ಚಾರ್ಮಾಡಿ ಘಾಟಿಯು ಬೆಳ್ತಂಗಡಿಯಿಂದ ಕೆಲವೇ ಅಂತರದಲ್ಲಿದೆ.

ನಾನು ಓರ್ವ ಲೇಖಕನಾಗಿದ್ದು ಕನ್ನಡ, ಇಂಗ್ಲಿಷ್ ಮತ್ತು ಕೊಂಕಣಿಯಲ್ಲಿ ಬರೆಯುತ್ತೇನೆ.

ನಾನು ಕನ್ನಡ ಸಾಹಿತ್ಯವನ್ನು ಓದುತ್ತೇನೆ. ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದೇನೆ. ನಾನು ನನ್ನ ಮಾತೃಭಾಷೆಯಾದ ಕೊಂಕಣಿ ಸೇರಿದಂತೆ ಕನ್ನಡ, ಇಂಗ್ಲಿಷ್ ಮತ್ತು ತುಳು ಭಾಷೆಗಳಲ್ಲಿಯೂ ಬರಹಗಳನ್ನು ಬರೆದಿದ್ದೇನೆ. ಹಲವು ಪತ್ರಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ ನಾನು ಕೆಲವು ಕತೆಗಳನ್ನೂ ಬರೆದಿದ್ದು ಕೊಂಕಣಿ ಮತ್ತು ಕನ್ನಡ ಪತ್ತಿಕೆಗಳಲ್ಲಿ ಬೆಳಕು ಕಂಡಿವೆ.

ನಾನು ನನ್ನದೇ ಆದ ಇಲೆಕ್ಟ್ರಾನಿಕ್ ಮಾಧ್ಯಮವನ್ನು ಹೊಂದಿದ್ದೇನೆ. ನಾನು ಕಳೆದ ಹತ್ತು ವರ್ಷಗಳಿಂದ www.Budkulo.com ಎಂಬ website ಅನ್ನು ಪ್ರಕಟಿಸುತ್ತಿದ್ದೇನೆ. ಇದರಲ್ಲಿ ನಾಲ್ಕು ಭಾಷೆಗಳಲ್ಲಿ ಬಹಳಷ್ಟು ವಿಚಾರಗಳ ಮೇಲೆ ಬರಹಗಳು ಪ್ರಕಟವಾಗಿವೆ.

ನಾನು ಹಲವಾರು ಸಾಹಿತಿಗಳ ಕಾದಂಬರಿಗಳನ್ನು ಓದಿದ್ದೇನೆ. ಅವುಗಳಲ್ಲಿ ನನಗೆ ತುಂಬಾ ಇಷ್ಟವಾದ ಸಾಹಿತಿಗಳು ಈ ಕೆಳಗಿನಂತಿದ್ದಾರೆ.

ಕಾದಂಬರಿಕಾರರು[ಬದಲಾಯಿಸಿ]

ಕನ್ನಡ[ಬದಲಾಯಿಸಿ]

  • ಕೆ.ಪಿ. ಪೂರ್ಣಚಂದ್ರ ತೇಜಸ್ವಿ
  • ಯಂಡಮೂರಿ ವೀರೇಂದ್ರನಾಥ್
    • ದುಡ್ಡು ಟು ದ ಪವರ್ ಆಫ್ ದುಡ್ಡು
  • ಕುವೆಂಪು
  • ಶಿವರಾಮ ಕಾರಂತ
  • ನಾ. ಡಿಸೋಜ

ಕೊಂಕಣಿ[ಬದಲಾಯಿಸಿ]

  • ವಿ.ಜೆ.ಪಿ. ಸಲ್ಡಾನ್ಹ
  • ಎ.ಟಿ. ಲೋಬೊ

ಇಂಗ್ಲಿಷ್[ಬದಲಾಯಿಸಿ]

  • ವಿಲಿಯಂ ಶೇಕ್ಸ್'ಪಿಯರ್
  • ರೊಅಲ್ಡ್ ದಾಹ್ಲ್


ಕಾದಂಬರಿಗಳು[ಬದಲಾಯಿಸಿ]

  1. ಕರ್ವಾಲೋ
  2. ಮಲೆಗಳಲ್ಲಿ ಮದುಮಗಳು
  3. ಗಾಂಧಿ ಬಂದ
  4. ತುಳಸಿ
  5. ಇಗರ್ಜಿ ಸುತ್ತಲಿನ ಹತ್ತು ಮನೆಗಳು
  6. ದೆವಾಚೆ ಕುರ್ಪೆನ್
  7. ವೇಳ್-ಘಡಿ
  8. ಮ್ಹಜೆಂ ಅಂತಸ್ಕರ್ನ್ ವಿಸರ್ಚೆಂ ನಾ

ಕರ್ನಾಟಕದ ನನ್ನಿಷ್ಟದ ಪ್ರವಾಸಿಧಾಮಗಳು[ಬದಲಾಯಿಸಿ]

ಜೋಗ ಜಲಪಾತ

ಹಂಪಿ

ಪಶ್ಚಿಮ ಘಟ್ಟ

ಸಮುದ್ರ ಕರಾವಳಿ

ಮೈಸೂರು

ಶ್ರೀರಂಗಪಟ್ಟಣ

ದಾಂಡೇಲಿ

ಕೊಪ್ಪದ ಕಾಫಿ ತೋಟಗಳು

ಕೊಡಗಿನ ಪರಿಸರ

ನೆಚ್ಚಿನ ಕ್ರೀಡೆಗಳು[ಬದಲಾಯಿಸಿ]

  • ಫುಟ್ಬಾಲ್
  • ಟೆನ್ನಿಸ್
  • ಅಥ್ಲೆಟಿಕ್ಸ್
  • ಈಜು
  • ವಾಲಿಬಾಲ್
  • ಬಿಲ್ಗಾರಿಕೆ
  • ಹಾಕಿ

ವಿಶ್ವ ದಾಖಲೆಗಳು[ಬದಲಾಯಿಸಿ]

ಒಲಿಂಪಿಕ್ಸಿನಲ್ಲಿ ಅತೀ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿದ ವಿಶ್ವ ದಾಖಲೆ ಅಮೆರಿಕನ್ ಈಜುಗಾರ ಮೈಕಲ್ ಫೆಲ್ಪ್ಸ್ ಹೆಸರಿನಲ್ಲಿದೆ.[೧] ಆತ ಒಟ್ಟು ೨೩ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಒಲಿಂಪಿಕ್ಸ್ ಕೂಟಗಳಲ್ಲಿ ಇತ್ತೀಚೆಗೆ ಸತತ ಮೂರು ಕೂಟಗಳಲ್ಲಿ ಸತತವಾಗಿ ಅತೀ ವೇಗದ ಓಟಗಾರನೆಂಬ ದಾಖಲೆ ನಿರ್ಮಿಸಿದ್ದು ಜಮೈಕಾದ ಉಸೈನ್ ಬೋಲ್ಟ್.[೨]


ಕರ್ನಾಟಕವು ಅತ್ಯಂತ ಸುಂದರ ನಾಡು. ಇಲ್ಲಿ ಪ್ರಾಕೃತಿಕ ಸಂಪತ್ತಿನಿಂದ ಕೂಡಿದ ಬಹಳಷ್ಟು ಪ್ರದೇಶಗಳಿವೆ. ಒಂದೆಡೆ ಸಮುದ್ರ ಕರಾವಳಿಯಿದ್ದು, ಪಶ್ಚಿಮ ಘಟ್ಟಗಳ ಅತ್ಯದ್ಭುತ ಪರ್ವತ ಶ್ರೇಣಿಗಳು ಕನ್ನಡ ನಾಡಿನ ನಿಸರ್ಗ ಸಂಪತ್ತನ್ನು ಶ್ರೀಮಂತಗೊಳಿಸಿವೆ.

  1. https://en.wikipedia.org/wiki/Michael_Phelps
  2. ದಾಖಲೆಗಳು, ಒಲಿಂಫಿಕ್. "ಉಸೈನ್ ಬೋಲ್ಟ್ ದಾಖಲೆಗಳು".