ಸದಸ್ಯ:Divya131097/ನನ್ನ ಪ್ರಯೋಗಪುಟ/1
ಮೇ ಸಿಂಕ್ಲೇರ್
[ಬದಲಾಯಿಸಿ]ಮೇ ಸಿಂಕ್ಲೇರ್ ಎಂಬ ಕಾವ್ಯನಾಮದಿಂದ ಪ್ರಸಿದ್ದರಾಗಿರುವ ಮೇರಿ ಅಮೆಲಿಯಾ ಸೇಂಟ್ ಕ್ಲೇರವರು ಪ್ರಸಿದ್ದ ಬ್ರಿಟಿಷ್ ಬರಹಗಾರರಾಗಿದ್ದರು. ಅವರು ಸುಮಾರು ಎರಡು ಡಜನ್ ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಕವಿತೆಗಳನ್ನು ಬರೆದಿದ್ದಾರೆ. ಅವರು ಜನಪ್ರಿಯ ಮತ್ತು ಅತ್ಯಂತ ಸಮೃದ್ಧರಾಗಿದ್ದು, ಹತ್ತೊಂಬತ್ತನೇ ಶತಮಾನದ ಅಂತ್ಯದ ಮತ್ತು ಇಪ್ಪತ್ತನೆಯ ಶತಮಾನದ ಆರಂಭದ ಅವಧಿಯಲ್ಲಿ ಇಪ್ಪತ್ತಮೂರು ಕಾದಂಬರಿಗಳು, ಮೂವತ್ತೊಂಬತ್ತು ಸಣ್ಣ ಕಥೆಗಳು ಹಾಗೂ ಹಲವಾರು ಕವನ ಸಂಗ್ರಹಗಳನ್ನು ಬರೆದ್ದಿದ್ದಾರೆ. ಅವರು ಮತದಾನದ ಹಕ್ಕು ಎಲ್ಲರಿಗೂ ಸಮಾನವಾಗಿ ಸಿಗಬೇಕೆಂದು ಹೋರಾಡಿದರು ಮತ್ತು 'ವುಮನ್ ರೈಟರ್ಸ್ ಸಫ್ರಿಜ್ ಲೀಗ್'ನಲ್ಲಿ ಸದಸ್ಯರಾಗಿದ್ದರು. ಮೇ ಸಿಂಕ್ಲೇರ್ ಆಧುನಿಕ ಕವಿತೆ ಮತ್ತು ಗದ್ಯೆಗಳ ವಿಮರ್ಶಕರಾಗಿದ್ದರು. ಒಬ್ಬ ವಿಮರ್ಶಕರಾಗಿ ಅವರು ಎಜ್ರಾ ಪೌಂಡ್ ಮತ್ತು ಇಮ್ಯಾಜಿಸ್ಟ್ ಕವಿಗಳ ಕೆಲಸಗಳನ್ನು ಮತ್ತು ಕಾದಂಬರಿಕಾರರು ಡೊರೊಥಿ ರಿಚರ್ಡ್ಸನ್ರನ್ನು ಇತರರಲ್ಲಿ ಉತ್ತೇಜಿಸಿದರು. ಡೊರೊಥಿ ರಿಚರ್ಡ್ಸನವರ ಕಾದಂಬರಿ ಅನುಕ್ರಮದ 'ಪಿಲ್ಗ್ರಿಮೇಜ್‌ನ' (1915-67) ಮೊದಲ ಸಂಪುಟಗಳನ್ನು ವಿಮರ್ಶಿಸುವಾಗ, ಸಾಹಿತ್ಯಕ ಸನ್ನಿವೇಶದಲ್ಲಿ 'ಸ್ಟ್ರೀಮ್ ಆಫ್ ಕಾನ್ಷಿಯಸ್‍ನಸ್' ಶಬ್ದದವನ್ನು ಮೊದಲು ಬಳಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಜೀವನ
[ಬದಲಾಯಿಸಿ]1863 ರ ಆಗಸ್ಟ್ 24 ರಂದು ಮೇರಿ ಅಮೆಲಿಯಾ ಸೇಂಟ್ ಕ್ಲೇರ್ ಸಿಂಕ್ಲೇರ್, ವಿಲಿಯಂ ಮತ್ತು ಅಮೇಲಿಯಾ ಸಿಂಕ್ಲೇರ್ ದಂಪತಿಯ ಪುತ್ರಿಯಾಗಿ ರಾಕ್ ಫೆರ್ರಿ, ಜನಿಸಿದರು. ಮೇ ಸಿಂಕ್ಲೇರವರ ತಾಯಿ ಅಮೆಲಿಯಾ ಸಿಂಕ್ಲೇರ್ ಒಂದು ಕಲ್ಪನಾತೀತ ಮತ್ತು ದೃಢ-ಸಂಕಲ್ಪದ ಮಹಿಳೆಯಾಗಿದ್ದರು. ಧಾರ್ಮಿಕ ಮತ್ತು ಪ್ರಾಮಾಣಿಕತೆಯ ಮೇಲಿನ ಅವರ ಕಟ್ಟುನಿಟ್ಟಾದ ಅಭಿಪ್ರಾಯಗಳು ಮನೆಯಲ್ಲಿ ಒಂದು ರೀತಿಯ ದಮನಶೀಲ ವಾತಾವರಣವನ್ನು ಮಾಡಿದವು. ಅವರ ತಂದೆ ವಿಲಿಯಮ್ ಸಿಂಕ್ಲೇರ್ ಹಡಗು ವ್ಯವಹಾರದ ಸಹ-ಮಾಲೀಕರಾಗಿದ್ದರು. ಸಿಂಕ್ಲೇರ್ ಕುಟುಂಬವು ಲಿವರ್‍ಪೂಲ್‌ನ ಮೀಪವಿರುವ ಹೈಯರ್ ಬೆಬಿಂಗ್ಟನ್ ರಾಕ್ ಪಾರ್ಕ್ನ ಥಾರ್ನ್ಕೋಟ್ನಲ್ಲಿ ವಾಸಿಸುತ್ತಿದ್ದರು. ಸಿಂಕ್ಲೇರ್ ಕುಟುಂಬವು 1860 ರ ದಶಕದ ಅಂತ್ಯದವರೆಗೂ ದೊಡ್ಡ ಮನೆ, ಉದ್ಯಾನ ಮತ್ತು ಹಲವಾರು ಸೇವಕರೊಂದಿಗೆ ಒಂದು ನೆಮ್ಮದಿಯಾದ ಹಾಗೂ ಆರಾಮದಾಯಕ ಮಧ್ಯಮ ವರ್ಗದ ಜೀವನವನ್ನು ನಡೆಸುತ್ತಿದ್ದರು.
ಸಿಂಕ್ಲೇರವರಿಗೆ ಸುಮಾರು ಏಳು ವರ್ಷ ವಯಸ್ಸಿರುವಾಗ ಅವರ ತಂದೆಯ ವ್ಯವಹಾರದಲ್ಲಿ ನಷ್ಟವಾಯಿತು. ಈ ಕಾರಣದಿಂದ ಅವರ ಕುಟುಂಬವು ತಮ್ಮ ಉಳಿದಿರುವ ಆಸ್ತಿಯೊಂದಿಗೆ ದೇಶದ ಸುತ್ತಲೂ ತಿರುಗುತ್ತಿದ್ದರು. ಈ ವೇಳೆಯಲ್ಲಿ ಸಿಂಕ್ಲೇರವರ ತಂದೆ ವಿಲಿಯಂ ಮದ್ಯಪಾನಕ್ಕೆ ವ್ಯಸನಿಯಾಗಿ, ಅದರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿ ಮರಣ ಹೊಂದರು. 1872 ರಲ್ಲಿ ಈ ಕುಟುಂಬ ಲಂಡನ್ನ ಹೊರವಲಯದಲ್ಲಿರುವ ಇಲ್ಫಾರ್ಡ್ಗೆ ಸ್ಥಳಾಂತರಗೊಂಡಿತು. 1881 ರಲ್ಲಿ ಸಿಂಕ್ಲೇರವರು 18 ವರ್ಷದವರಾಗಿದ್ದಾಗ ಚೆಲ್ಟೆನ್ಹ್ಯಾಮ್ ಲೇಡೀಸ್ ಕಾಲೇಜಿಗೆ ಕಳುಹಿಸಲಾಯಿತು. ಚೆಲ್ಟೆನ್ಹ್ಯಾಮ್ ಲೇಡೀಸ್ ಕಾಲೇಜಿನಲ್ಲಿ ಒಂದು ವರ್ಷದ ನಂತರ, ತಮ್ಮ ಐದು ಸಹೋದರರಲ್ಲಿ ನಾಲ್ವರು ಮಾರಣಾಂತಿಕ ಹೃದಯ ರೋಗದಿಂದ ಬಳಲುತ್ತಿದ್ದರಿಂದ ಅವರನ್ನು ನೋಡಿಕೊಳ್ಳಲು ತೀರ್ಮಾನಿಸಿದರು.
ವೃತ್ತಿಜೀವನ
[ಬದಲಾಯಿಸಿ]1896 ರಿಂದ ಸಿಂಕ್ಲೇರವರ ತಾಯಿ ಹೃದಯಾಘಾತದಿಂದ ಬಳಲುತ್ತಿದ್ದರಿಂದ ತಮ್ಮ ತಾಯಿ ಹಾಗೂ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಲು ಸಾಹಿತ್ಯ ಕೃತಿಗಳನ್ನು ರಚಿಸುವುದನ್ನು ವೃತ್ತಿಯಾಗಿ ತೆಗೆದುಕೊಂಡರು. ಒಬ್ಬ ಧೈರ್ಯ ಸ್ತ್ರೀವಾದಿಯಾದ ಸಿಂಕ್ಲೇರ್ ಮಹಿಳಾ ಹಕ್ಕು ಮತ್ತು ವಿವಾಹದಲ್ಲಿ ಅವರ ಹಕ್ಕು ಹಾಗೂ ಆಯ್ಕೆಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಅವರು ಕೃತಿಗಳಲ್ಲಿ ಬರೆದ್ದಿದ್ದಾರೆ. 1904 ರಲ್ಲಿ ಮೇ ಸಿಂಕ್ಲೇರ್ 'ದಿ ಡಿವೈನ್ ಫೈರ್' ಎಂಬ ಪುಸ್ತಕವನ್ನು ಪ್ರಕಟಿಸಿದರು. ಈ ಪುಸ್ತಕ ಅವರನ್ನು ಜನಪ್ರಿಯಗೊಳಿಸಿತು. ಇದು ವಿಶೇಷವಾಗಿ ಅಮೇರಿಕಾದಲ್ಲಿ ಚೆನ್ನಾಗಿ ಸ್ವೀಕರಿಸಲ್ಪಟ್ಟಿತು. ಪ್ರಕಟಣೆಯ ಒಂದು ವರ್ಷದ ನಂತರ, ಈ ಕಾದಂಬರಿಯು ಬಹಳ ಪ್ರಸಿದ್ಧವಾಗಿ ಸಿಂಕ್ಲೇರ್ ಈಸ್ಟ್ ಕೋಸ್ಟ್‌ನ 'ವಿಜಯೋತ್ಸವದ ಪ್ರವಾಸ' ಕೈಗೊಂಡರು. ಈ ಪ್ರವಾಸದ ವೇಳೆಯಲ್ಲಿ ರಾಲ್ಫ್ ವಾಲ್ಡೋ ಎಮರ್ಸನ್, ಚಾರ್ಲ್ಸ್ ಎಲಿಯಟ್ ನಾರ್ಟನ್, ವಿಲಿಯಂ ಜೇಮ್ಸ್, ಮಾರ್ಕ್ ಟ್ವೈನ್, ಆನೀ ಫೀಲ್ದ್ಸ್ ಮತ್ತು ಸಾರಾ ಓರ್ನೆ ಜುವೆಟ್ ಮುಂತಾದ ಸಾಹಿತ್ಯ ಕ್ಷೇತ್ರದ ಅನೇಕ ಗಣನೀಯ ವ್ಯಕ್ತಿಗಳನ್ನು ಸಂಧಿಸಿದರು.
ಅವರು ಇಮ್ಯಾಜಿಸಮ್ ಮತ್ತು ಕವಿ ಹಿಲ್ಡಾ ಡೂಲಿಟಲ್‍ರವರ ಬಗ್ಗೆ ತಮ್ಮ ಕೃತಿ 'ದಿ ಈಗೋಯಿಸ್ಟ್'ನಲ್ಲಿ ವಿಮರ್ಶೆ ಬರೆದಿದ್ದರು. ಅವರು ಟಿ.ಎಸ್. ಎಲಿಯಟ್ ಮತ್ತು ಡೊರೊಥಿ ರಿಚರ್ಡ್ಸನವರ ಕಾವ್ಯಗಳನ್ನೂ ವಿಮರ್ಶಿಸಿದ್ದಾರೆ. ಮೇ ಸಿಂಕ್ಲೇರ್ 'ದಿ ಈಗೋಯಿಸ್ಟ್'ನಲ್ಲಿ ಡೊರೊಥಿ ರಿಚರ್ಡ್ಸನ್ರ ಪಿಲಿಗ್ರಿಮೆಜ್ ಕೃತಿಯನ್ನು ವಿಮರ್ಶಿಸಿದ್ದಾರೆ. ತಮ್ಮ ವಿಮರ್ಶೆಯಲ್ಲಿ ರಿಚರ್ಡ್ಸನವರ ಕಾದಂಬರಿಗಳು ಹಾಗೂ ಅವರು ಜೀವನವನ್ನು ಚಿತ್ರಿಸುವ ರೀತಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸಿಂಕ್ಲೇರವರು 'ಅನ್ಕ್ಯಾನಿ ಸ್ಟೋರೀಸ್' (1923) ಮತ್ತು 'ದಿ ಇಂಟರ್ಸೆಸರ್ ಅಂಡ್ ಅದರ್ ಸ್ಟೋರೀಸ್' (1931) ಎಂಬ ಅತೀಂದ್ರಿಯ ಕಾದಂಬರಿಯ ಎರಡು ಸಂಪುಟಗಳನ್ನು ಬರೆದಿದ್ದಾರೆ. ಇ.ಎಫ್. ಬ್ಲೀಲರ್ ಸಿಂಕ್ಲೇರವರ ಅನ್ಕಾನ್ನಿ ಸ್ಟೋರೀಸ್ ಅನ್ನು "ಅತ್ಯುತ್ತಮ" ಎಂದು ವಿವರಿಸಿದರು. ಅವರ ಅತೀಂದ್ರಿಯ ಕಥೆಗಳು ಅಸಾಧಾರಣವಾದ ಅಂಶಗಳು ಮತ್ತು ನಿಖರತೆಗಳಿಂದ ಬರೆಯಲಾಗಿದೆ ಎಂದು ಬ್ರಿಯಾನ್ ಸ್ಟೇಬಲ್ಫೋರ್ಡ್ ಹೇಳಿದ್ದಾರೆ.
ನಿಧನ
[ಬದಲಾಯಿಸಿ]ಮೇ ಸಿಂಕ್ಲೇರ್ ತನ್ನ ಜೀವನದ ಕೊನೆಯ ವರ್ಷಗಳಲ್ಲಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಸಾರ್ವಜನಿಕ ದೃಷ್ಟಿಯಿಂದ ಕಣ್ಮರೆಯಾಗಿ ಬಾಳುತ್ತಿದ್ದರು. ಬಕಿಂಗ್ಹ್ಯಾಮ್ಷೈರ್‌ನಲ್ಲಿ ಅವರ ಸಂಗಾತಿ ಮತ್ತು ಸೇವಕಿ ಫ್ಲಾರೆನ್ಸ್ ಬರ್ಟ್ರೋಪ್ ಜೊತೆಯಲ್ಲಿ ಅವರು ವಾಸಿಸುತ್ತಿದ್ದರು. ಅವರ ಸ್ನೇಹಿತರೊಂದಿಗೆ ಸಂಪರ್ಕವನ್ನು ಕಳೆದುಕೊಂಡು ತಮ್ಮ ಕೊನೆಯ ಕಾಲಗಳನ್ನು ಏಕಾಂಗಿಯಾಗಿ ಕಳೆದರು. ಅಂತಿಮವಾಗಿ 1946 ರಲ್ಲಿ ನಿಧನರಾದರು. ಲಂಡನ್ನ ಸೇಂಟ್ ಜಾನ್-ಅಟ್-ಹ್ಯಾಂಪ್ಸ್ಟೆಡ್ ಚರ್ಚ್ ಅಂಗಳದಲ್ಲಿ ಅವರು ಸಮಾಧಿಯಾಗಿದ್ದರೆ.
ಕೃತಿಗಳು
[ಬದಲಾಯಿಸಿ]- ನಕಿಕೆಟಸ್ ಅಂಡ್ ಅದರ್ ಪೊಯಮ್ಸ್(1886)
- ಎಸ್ಸೇಸ್ ಇನ್ ವರ್ಸ್(1892)
- ಆಡ್ರೆ ಕ್ರಾವೆನ್(1897)
- ಮಿಸ್ಟರ್ ಅಂಡ್ ಮಿಸಸ್ ನೆವಿಲ್ ಟೈಸನ್ಸ್(1898)
- ಟೂ ಸೈಡ್ಸ್ ಆಫ್ ಅ ಕ್ವೆಸ್‍ಟಿನ್(1901)
- ದಿ ಡಿವೈನ್ ಫಯರ್(1904)
- ದಿ ಹೆಲ್ಪ್‌ಮೇಟ್(1907)
- ದಿ ಜಡ್ಜ್‌ಮೆಂಟ್ ಆಫ್ ಈವ್(1907)
- ದಿ ಇಮ್ಮಾರ್ಟಲ್ ಮೊಮೆಂಟ್(1908)
- ಕಿಟ್ಟಿ ಟೈಲೀರ್(1908)
- ದಿ ಕ್ರಿಯೇಟರ್ಸ್(1910)
- ಮಿಸ್ ಟರಂಟ್ಸ್ ಟೆಂಪರಮೆಂಟ್(1911)
- ದಿ ಫ್ಲಾ ಇನ್ ದಿ ಕ್ರಿಸ್ಟಲ್(1912)
- ದಿ ತ್ರೀ ಬ್ರೋಂಟ್ಸ್(1912)
- ಫೆಮಿನಿಸಮ್(1912)
- ದಿ ಕಂಬೈನ್ಡ್ ಮೇಝ್(1913)
- ದಿ ತ್ರೀ ಸಿಸ್ಟ್‌ರ್ಸ್(1914)
- ದಿ ರಿಟರ್ನ್ ಆಫ್ ದಿ ಪ್ರಾಡಿಗಲ್(1914)
- ಅ ಜರ್ನಲ್ ಆಫ್ ಇಂಪ್ರೆಷನ್ಸ್ ಇನ್ ಬೆಲ್ಜಿಯಮ್(1916)
- ದಿ ಬೆಲ್‌ಫ್ರೈ(1916)
- ಟಾಸ್ಕರ್ ಜೆವನ್ಸ್: ದಿ ರಿಯಲ್ ಸ್ಟೋರಿ(1916)
- ದಿ ಟ್ರೀ ಆಫ್ ಹೆವನ್(1917)
- ಅ ಡಿಫೆಂನ್ಸ್ ಆಫ್ ಐಡಿಯಲಿಸಮ್(1917)
- ಮೇರಿ ಒಲಿವರ್: ಅ ಲೈಫ್(1919)
- ದಿ ರೊಮ್ಯಾಂಟಿಕ್(1920)
- ಮಿಸ್ಟರ್ ವೆಡಿಂಗ್ಟನ್ ಆಫ್ ವಿಕ್ಕ್(1921)
- ಲೈಫ್ ಅಂಡ್ ಡೆತ್ ಆಫ್ ಹ್ಯಾರಿಯಟ್ ಫ್ರೀನ್(1922)
- ದಿ ನ್ಯೂ ಐಡಿಯಲಿಸಮ್(1922)
- ಅನ್ಕ್ಯಾನಿ ಸ್ಟೋರೀಸ್(1922)
- ಅ ಕ್ಯೂರ್ ಆಫ್ ಸೋಲ್ಸ್(1923)
- ದಿ ಡಾರ್ಕ್ ನೈಟ್(1924)
- ಅರ್ನಾಲ್ದ್ ವಾಟರ್ಲೋ(1924)
- ದಿ ರೆಕ್ಟರ್ ಆಫ್ ವಿಕ್ಕ್(1925)
- ಫಾರ್ ಎಂಡ್(1926)
- ದಿ ಅಲ್ಲಿಂಗಮ್ಸ್(1927)
- ಫೇಮ್(1929)
- ಟೇಲ್ಸ್ ಟೋಲ್ಡ್ ಬೈ ಸಿಂಪ್ಸನ್ಸ್(1930)
- ದಿ ಇಂಟರ್ಸೆಸ್ಸ್‌ರ್ ಆಂಡ್ ಅದರ್ ಸ್ಟೋರೀಸ್(1931)
ಉಲ್ಲೇಖಗಳು