ಸದಸ್ಯ:Deepikagreddy/ನನ್ನ ಪ್ರಯೋಗಪುಟ/2 digilocker

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                        ಡಿಜಿಲಾಕರ್ (Digilocker) 
ಡಿಜಿಲಾಕರ್

ಡ್ರೈವಿಂಗ್ ಲೈಸೆನ್ಸ್ ಅಥವಾ ವಾಹನ ಒಡೆತನದ ಪೇಪರ್ಸ್ನಂತಹ ಮೂಲ ದಾಖಲೆಗಳನ್ನು ಕೊಂಡೊಯ್ಯಲು ಮರೆತರೆ ಅಪರಾಧವು ಮುಂದಿನ ಹಂತಕ್ಕೆ ಹೆಚ್ಚಾಗಿ ಬಿಸಿ ಸಮಾಲೋಚನೆಯಲ್ಲಿ ಅಂತ್ಯಗೊಳ್ಳುತ್ತದೆ. ಇನ್ನು ಮುಂದೆ, ಕಾನೂನು ಪಾಲಿಸುವ ಪ್ರಜೆಗಳಿಗೆ ಒಂದು ಪ್ರಮಾಣೀಕೃತ ಡಿಜಿಟಲ್ ಲಾಕರ್ ಅಥವಾ ಅಪ್ಲಿಕೇಶನನ್ನು ಮೊಬೈಲ್ ಫೋನ್ನಲ್ಲಿ ಡೌನ್ಲೋಡ್ ಮಾಡಲು ಅನುಮತಿಸಿದ ಕೇಂದ್ರವು, ಅಂತಹ ದಾಖಲೆಗಳನ್ನು ಅದರಲ್ಲಿ ಸಂಗ್ರಹಿಸಿಡಲು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಡ್ರೈವಿಂಗ್ ಪರವಾನಗಿ ಪರೀಕ್ಷಿಸಲು ಬಯಸುತ್ತಿರುವ ಟ್ರಾಫಿಕ್ ಪೋಲೀಸಿಗೆ ಡಿಜಿಲಾಕರ್ನಲ್ಲಿನ ನಿಮ್ಮ ಪರವಾನಗಿಯ ನಕಲನ್ನು ತೋರಿಸಬಹುದು.

ಏನಿದು ಡಿಜಿಲಾಕರ್? ಬಳಕೆ ಹೇಗೆ?[ಬದಲಾಯಿಸಿ]

ಜುಲೈ 1ರಂದು ಡಿಜಿಟಲ್ ಸಪ್ತಾಹಕ್ಕೆ ಚಾಲನೆ ನೀಡಿರುವ ಕೇಂದ್ರ ಸರ್ಕಾರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಡಿಜಿಲಾಕರನ್ನು ಜನರಿಗೆ ಪರಿಚಯಿಸಿದೆ. ನಮ್ಮ ಬೆಲೆಬಾಳುವ ವಸ್ತುಗಳು, ದುಡ್ಡು, ಬಂಗಾರ, ದಾಖಲೆ ಪತ್ರಗಳನ್ನು ಬ್ಯಾಂಕ್ ಲಾಕರ್ನಲ್ಲಿ ಸುರಕ್ಷಿತವಾಗಿಡುವಂತೆ ನಾವು, ನಮ್ಮ ಈ ದಾಖಲೆಪತ್ರಗಳನ್ನು ಡಿಜಿಲಾಕರ್ನಲ್ಲಿ ಸುರಕ್ಷಿತವಾಗಿ ಇಡಬಹುದು.[೧]

==ಡಿಜಿಟಲ್ ಲಾಕರ್ ವ್ಯವಸ್ಥೆಯು ಕೆಳಗಿನ ಉದ್ದೇಶಗಳನ್ನು ಹೊಂದಿದೆ == ೧.ಡಿಜಿಟಲ್ ಲಾಕರನ್ನು ಕ್ಲೌಡ್ನಲ್ಲಿ ಒದಗಿಸುವ ಮೂಲಕ ನಿವಾಸಿಗಳ ಡಿಜಿಟಲ್ ಸಬಲೀಕರಣವನ್ನು ಸಕ್ರಿಯಗೊಳಿಸಿದೆ. ೨.ದಾಖಲೆಗಲನ್ನು ಇ-ಸೈನ್ ಮಾಡುವುದರಿಂದ ಅವುಗಳನ್ನು ವಿದ್ಯುನ್ಮಾನವಾಗಿ ಮತ್ತು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಿ ಭೌತಿಕ ದಾಖಲೆಗಳ ಬಳಕೆಯನ್ನು ಕಡಿಮೆಗೊಳಿಸಲುಸಹಕರಿಸುತ್ತದೆ. ೩.ಇ-ದಾಖಲೆಗಳ ದೃಢೀಕರಣವನ್ನು ಖಚಿತಪಡಿಸುತ್ತದೆ ಮತ್ತು ನಕಲಿ ದಾಖಲೆಗಳ ಬಳಕೆಯನ್ನು ತಡೆಯುತ್ತದೆ.[೨]

ಡಿಜಿ ಲಾಕರ್ ಹೇಗೆ ಕಾರ್ಯವೆಸಗುತ್ತದೆ?[ಬದಲಾಯಿಸಿ]

ಇ-ಪರವಾನಗಿ

https://digitallocker.gov.in/ ಎಂಬ ವೆಬ್ಸೈಟ್ನಲ್ಲಿ ಆಧಾರಕಾರ್ಡ್ ಸಂಖ್ಯೆ ಹೊಂದಿರುವ ಯಾರು ಬೇಕಾದರೂ ಡಿಜಿಲಾಕರ್ ಖಾತೆ ತೆರೆಯಬಹುದಾಗಿದೆ. ಇದಕ್ಕೆ ಬೇಕಾಗಿರುವುದು ಇಂಟರ್ನೆಟ್ ಮತ್ತು ಆಧಾರ್ ಕಾರ್ಡ್ ಸಂಖ್ಯೆ ಮಾತ್ರ. ಇದು ಉಚಿತ ಸೇವೆಯಾಗಿದೆ. ವೆಬ್ಸೈಟ್ ತೆರೆದ ಕೂಡಲೇ ಈಗ ನೋಂದಣಿ ಮಾಡಿ(https://digitallocker.gov.in/Register.aspx) ಎಂಬ ಸಂಪರ್ಕ ಕೊಂಡಿ ಕಾಣುತ್ತದೆ. ಅದರಲ್ಲಿ ಕ್ಲಿಕ್ ಮಾಡಿದಾಗ ಡಿಜಿಲಾಕರ್ಗಾಗಿ ನೋಂದಾಯಿಸಿ ಎಂಬ ಆಯ್ಕೆ ಸಿಗುತ್ತದೆ. ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ. ಆಧಾರ್ ಸಂಖ್ಯೆ ನಮೂದಿಸಿದಾಗ ಕೆಳಗೆ ಹಸಿರು ಬಣ್ಣದಲ್ಲಿ ಎರಡು ಗುಂಡಿಗಳು ನೀವು ಕಾಣಬಹುದು. ಅದರಲ್ಲಿ ಒಂದು OTP ಬಳಸಿ (ಒಂದು ಬಾರಿ ಪಾಸ್ವರ್ಡ್) ಮತ್ತು ಬೆರಳು ಮುದ್ರಣವನ್ನು ಬಳಸಿ.

ಒಟಿಪಿ ಬಳಸಿ ಎಂಬ ಆಯ್ಕೆ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ಗೆ ಒಂದು ಬಾರಿ ಪಾಸ್ವರ್ಡ್ ಬರುತ್ತದೆ. ಈ ಪಾಸ್ವರ್ಡ್ನ್ನು ನೀವು ಅಲ್ಲಿ ನಮೂದಿಸಿದರೆ ಡಿಜಿ ಲಾಕರ್ ಖಾತೆಗೆ ಪ್ರವೇಶ ಪಡೆಯಬಹುದು. ಇಲ್ಲವೇ ನೀವು ಬೆರಳು ಮುದ್ರಣವನ್ನು ಬಳಸಿ ಎಂಬ ಆಯ್ಕೆ ಕ್ಲಿಕ್ ಮಾಡುವುದಾದರೆ ಬೆರಳಚ್ಚು ಸ್ಕ್ಯಾನ್ ಮಾಡಬೇಕಾಗುತ್ತದೆ. ಇದಾದ ನಂತರ ಬಳಕೆದಾರರ ಹೆಸರು ಮತ್ತು ಪಾಸ್ವೊರ್ಡನ್ನು ನಾವು ಕ್ರಿಯೇಟ್ ಮಾಡಬೇಕಾಗುತ್ತದೆ. ಬಳಕೆದಾರ ಹೆಸರು ಜಾಗದಲ್ಲಿ ನಿಮ್ಮ ಹೆಸರು ನಮೂದಿಸಿದರೆ ಸಾಕು. ಪಾಸ್ವರ್ಡ್ ಜಾಗದಲ್ಲಿ ಅಕ್ಷರಗಳು, ಸಂಖ್ಯೆ ಮತ್ತು ಚಿಹ್ನೆಗಳನ್ನು ಬಳಸಿ ಪಾಸ್ವರ್ಡ್ ಕ್ರಿಯೇಟ್ ಮಾಡಬಹುದು. ಇಷ್ಟೆಲ್ಲಾ ಆದರೆ ನಿಮಗೆ ನಿಮ್ಮದೇ ಆದ ಲಾಕರ್ ಲಭ್ಯವಾಗುವುದು. ನಿಮ್ಮ ಲಾಕರ್ನ ಶೇಖರಣೆ ಸಾಮರ್ಥ್ಯ 10 ಮೆಗಾಬೈಟ್ಸ್ (MB) ಆಗಿರುತ್ತದೆ. ನಿಮ್ಮ ಆಧಾರಕಾರ್ಡನ್ನು ಡಿಜಿಲಾಕರ್ನಲ್ಲಿ ಸಂರಕ್ಷಿಸಿಡಬಹುದು. ಇದಕ್ಕಾಗಿ ಇ-ಆಧಾರ್ ಡೌನ್ಲೋಡ್ ಮಾಡಲಿರುವ ಆಯ್ಕೆಗಕಳು ಲಾಕರ್ನಲ್ಲಿವೆ. ಇ-ಆಧಾರ್ ಡೌನ್ಲೋಡ್ ಮಾಡಲು ಬೇಕಾದ ನಿರ್ದೇಶನಗಳನ್ನು ಕೊಂಡಿಯಲ್ಲಿ ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ನಮ್ಮ ಡಿಜಿಲಾಕರನ್ನು ನಮ್ಮ ಫೇಸ್ಬುಕ್ ಖಾತೆ ಮತ್ತು ಜಿ-ಮೇಲ್ ಖಾತೆಯ ಜತೆ ಸಂಪರ್ಕ ಮಾಡಬಹುದಾಗಿದೆ. ಇದನ್ನು ಸಂಪರ್ಕ ಮಾಡುವ ಬಗ್ಗೆಯೂ ಅಲ್ಲಿ ಮಾರ್ಗಧಶನ ನೀಡಲಾಗಿದೆ.[೩]


ಡಿಜಿಲಾಕರಿನ ಅಗತ್ಯವೇನು?[ಬದಲಾಯಿಸಿ]

ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನೆಲ್ಲಾ ಡಿಜಿಟಲೈಸ್ ಮಾಡುವಾಗ ನಮಗೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಇದು ಸಹಾಯವಾಗುತ್ತದೆ. ಮಾತ್ರವಲ್ಲದೆ ನಮ್ಮ ಗುರುತುಚೀಟಿ, ಸರ್ಟಿಫಿಕೇಟ್ಗಳನ್ನು ಸಂಬಂಧಿಸಿದ ಕಚೇರಿ ಜತೆ ಶೇರ್ ಮಾಡಲು ಇದು ಸುಲಭ ವಿಧಾನವಾಗಿದೆ.

ಡಿಜಿಲಾಕರ್ನಲ್ಲಿ ಏನೆಲ್ಲಾ ಇಡಬಹುದು?[ಬದಲಾಯಿಸಿ]

ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್, ಡಿಗ್ರಿ ಸರ್ಟಿಫಿಕೇಟ್, ದಾಖಲೆ ಪತ್ರ ಮೊದಲಾದವುಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಲಾಕರ್ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ. ಡಿಜಿಟಲ್ ಲಾಕರ್ನಲ್ಲಿ ನಮ್ಮ ದಾಖಲೆ ಪತ್ರಗಳು ಸುರಕ್ಷಿತವಾಗಿರುತ್ತವೆ. ಕ್ಲೌಡ್ ಸರ್ವರ್ ತಂತ್ರಜ್ಞಾನದ ಮೂಲಕ ಈ ದಾಖಲೆಗಳೆಲ್ಲಾ ಇಲ್ಲಿ ಸೇವ್ ಆಗಿದ್ದು, ಅಗತ್ಯ ಬಂದಾಗ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://digilocker.gov.in/about.php
  2. https://www.india.gov.in/spotlight/digilocker-online-document-storage-facility
  3. https://yourstory.com/2016/09/digilocker/