ಸದಸ್ಯ:Deeksha.manjunath

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನನ್ನ ಜೀವನ ಪಯಣ.....[ಬದಲಾಯಿಸಿ]

ನನ್ನ ಬಾಲ್ಯದ ಜೀವನ.[ಬದಲಾಯಿಸಿ]

ನನ್ನ ಹೆಸರು ದೀಕ್ಷಾ ಮಂಜುನಾಥ್ . ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯ ಮೊದಲನೇ ವರ್ಷದ ಬಿಕಾಂ ವಿದ್ಯಾರ್ಥಿನಿ. ನಾನು ೯ನೇ ತಾರೀಕಿನ ಆಗಸ್ಟ್ ತಿಂಗಳಿನಲ್ಲಿ, ೨೦೦೧ನೇ ಇಸವಿಯಲ್ಲಿ ಜನಸಿದೆ. ಹುಟ್ಟಿ ಬೆಳೆದಿದ್ದು ಎಲ್ಲಾ ಮೈಸೂರು ನಗರದಲ್ಲಿಯೆ. ನಾನು ಹುಟ್ಟಿದ ಆಸ್ಪತ್ರೆಯ ಹೆಸರು ಕರುಣಾ ಆಸ್ಪತ್ರೆ. ಅದು ಮೈಸೂರಿನ ಕುವೆಂಪು ನಗರದಲ್ಲಿ ಇದೆ. ನನ್ನ ಪೋಷಕರಿಗೆ ನಾನು ದ್ವಿತೀಯ ಪುತ್ರಿಯಾಗಿದ್ದು, ನನಗೆ ಒಬ್ಬ ಅಕ್ಕ ಇದ್ದಾಳೆ. ನನ್ನ ತಾತ ಬಹಳ ಕಟ್ಟುನಿಟ್ಟನಲ್ಲಿ ನಮ್ಮನ್ನು ಬೆಳೆಸಿದ್ದಾರೆ. ನನ್ನ ಪೋಷಕರ ಮೇಲೆ ನನಗೆ ಅಪಾರವಾದ ಗೌರವವಿದೆ, ನನಗೆ ನಮ್ಮ ಪೋಷಕರು ಇಲ್ಲಿಯವರೆಗೂ ನನ್ನನ್ನು ಬಹಳ ಮುದ್ದು ಮಾಡಿ ಸಾಕಿದ್ದಾರೆ. ನಾನು ಇಲ್ಲಿಯವರಿಗೆ ಅವರನ್ನು ಬಿಟ್ಟು ಎಲ್ಲಿಯು ಹೋಗಿರಲಿಲ್ಲ. ಆದರೆ ಈಗ ಬೆಂಗಳೂರಿನಲ್ಲಿ ಓದಲು ಬಂದಿರುವೆ. ನನ್ನನ್ನು ನಮ್ಮ ತಂದೆ ಮತ್ತು ತಾಯಿಯವರು ಸಾಂಪ್ರದಾಯಿಕವಾಗಿ ಬೆಳೆಸಿದ್ದಾರೆ.


ನನ್ನ ಕುಟುಂಬ[ಬದಲಾಯಿಸಿ]

ನನ್ನ ತಂದೆಯ ಹೆಸರು ಮಂಜುನಾಥ್ ಹಾಗೂ ತಾಯಿ ಲತಾ ಮತ್ತು ನನ್ನ ಪ್ರೀತಿಯ ಅಕ್ಕನ ಹೆಸರು ಗ್ರೀಷ್ಮ. ನನ್ನ ತಂದೆ ಎಮ್.ಬಿ.ಬಿ.ಎಸ್ ಮಾಡಿದ್ದರೂ ಸಹ ಅದರಲ್ಲಿ ಆಸಕ್ತಿ ಇಲ್ಲದ ಕಾರಣ ವ್ಯವಹಾರದ ಉದ್ಯೋಗವನ್ನ ಆರಿಸಿಕೊಂಡರು. ಅವರು ಇಂಡೇನ್ ಗ್ಯಾಸ್ ಎಜಂಸಿ ನಡೆಸುತ್ತಿದ್ದಾರೆ. ಅಮ್ಮ ವೈದ್ಯ ವೃತ್ತಿಯಲ್ಲಿ ಬಹಳ ಸಾಧನೆ ಮಾಡಿರುವರು. ನನ್ನ ತಾಯಿ ಒಬ್ಬ ಪ್ರಸುತಿ ಹಾಗೂ ಸ್ತ್ರೀರೋಗ ತಜ್ಞರು. ನನಗೆ ನನ್ನ ಅಪ್ಪ ಮತ್ತು ಅಮ್ಮ ಎಂದರೆ ಬಹಳ ಇಷ್ಟ ಹಾಗೂ ನನ್ನ ಅಕ್ಕ ಅಂದರೆ ನನಗೆ ಇನ್ನೂ ಬಹಳ ಇಷ್ಟ. ನನ್ನ ಅಕ್ಕ ಇಂಜಿನಿಯರಿಂಗ್ ಓದುತೀದ್ದಾಳೆ. ಅದು ಮೈಸೂರಿನ ಜೆ. ಎಸ್. ಎಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಾ ಇದ್ದಾಳೆ. ಅವಳಿಗೂ ಮತ್ತು ನನಗೂ ಮೂರು ವರ್ಷ ವ್ಯತ್ಯಾಸವಿದೆ. ಅವಳು ನನಿಗೆ ದೇವರು ಕೊಟ್ಟಿರುವ ಒಂದು ಅದ್ಬುತವಾದ ಉಡುಗೊರೆ. ಅವಳು ನನಗೆ ಎಲ್ಲಾ ರೀತಿಯ ಸಹಾಯ ಮಾಡುವಳು. ನನ್ನ ಒಂದು ಒಳ್ಳೆಯ ಸ್ನೇಹಿತೆ, ಎರಡನೆಯ ತಾಯಿ, ಒಟ್ಟಿನಲ್ಲಿ ಎಲ್ಲಾ. ಅವಳೆಂದರೆ ನನಗೆ ತುಂಬಾ ಇಷ್ಟ. ನನಗೆ ಒಬ್ಬ ಅಜ್ಜಿ ಕೂಡ ಇದ್ದಾರೆ. ಅವರೆಂದರೂ ನನಗೆ ಪಂಚ ಪ್ರಾಣ. ಅವರು ನನ್ನ ಯೋಗ ಕ್ಷೇಮವನ್ನ ನೋಡಿಕೊಳ್ಳುತ್ತಿದ್ದರು. ನಾನು ಯಾವಾಗಲೂ ಅವರ ಬಳಿಯೇ ಹೆಚ್ಚು ಸಮಯವನ್ನು ಕಳೆದಿರುವೆ. ಅವರ ಹೆಸರು ಗೌರಮ್ಮ. ನಾನು ಮತ್ತು ನನ್ನ ಅಕ್ಕ ಇಬ್ಬರೂ ಆಗಾಗ ಸಣ್ಣಪುಟ್ಟ ವಿಷಯಕ್ಕೆ ಜಗಳವಾಡುತ್ತೇವೆ. ನನಗೆ ಒಂದಷ್ಟು ಅಡುಗೆಗಳು ಮಾಡಲು ಬರುತ್ತದೆ.

ನನ್ನ ಶಿಕ್ಷಣ ಜೀವನ.[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ವಿದ್ಯಾವರ್ಧಕ ಶಾಲೆಯಲ್ಲಿ ವ್ಯಾಸಾಂಗ ಮಾಡಿರುತ್ತೇನೆ ಹಾಗೆ ನಾನು SSLCಯಲ್ಲಿ ಉತ್ತೀರ್ಣ ಅಂಕ ಗಳಿಸಿದ್ದೇನೆ . ಇನ್ನೂ ನನ್ನ ಪದವಿಪೂರ್ವ ಶಿಕ್ಷಣವನ್ನು ಮೈಸೂರಿನ ಬಹಳ ವಿಖ್ಯಾತಿಯಾದ ವಿಜಯವಿಠ್ಠಲ ಸಂಸ್ಥೆಯಲ್ಲಿ ಮುಗಿಸಿದ್ದೇನೆ. ನನಗೆ ನನ್ನ ಪಿಯುಸಿ ವ್ಯಾಸಾಂಗದ ತನಕ ಬಹಳ ಹೆಚ್ಚು ಪ್ರೀತಿ ಮಮಕಾರದಿಂದ ನನ್ನ ಪೋಷಕರು ನನ್ನನ್ನು ಸಾಕಿ ಸಲಹಿದ್ದಾರೆ, ಹೇಳುವುದೇ ಆದರೆ ನಾನು ನಮ್ಮ ಅಪ್ಪ ,ಅಮ್ಮ, ಅಕ್ಕ ಇವರ ಜೊತೆ ಬಹಳ ಖುಷಿಯಾಗಿ ಇದ್ದೆ. ಆದರೆ ನನ್ನ ಪದವಿ ಶಿಕ್ಷಣವನ್ನ ಬೆಂಗಳೂರಿನಲ್ಲಿ ಮಾಡುತ್ತ ಇರುವುದರಿಂದ ನನ್ನ ಅಪ್ಪ ಮತ್ತು ಅಮ್ಮನಿಂದ ದೂರವಾಗಿರುವೆ. ಅಂದರೆ ಇಲ್ಲಿ ನಾನು ವಿದ್ಯಾರ್ಥಿ ನಿಲಯದಲ್ಲಿ ಇರುವೆ. ನಾನು ಹೆಚ್ಚಿಗೆ ಸ್ನೇಹಿತರನ್ನ ಮಾಡಿಕೊಂಡಿರಲಿಲ್ಲ, ನನ್ನ ಪ್ರಿಯ ಮಿತ್ರರು ಎಂದರೆ ಐಶ್ವರ್ಯ, ಶಿವಾನಿ, ಚಂದು, ಚಂದನ, ಹಿತ, ಪಾಲ್, ಪ್ರಣೀತ, ಸಹನ, ವಿಧಿ , ಮಧು, ನಯನ, ಮತ್ತು ಅಲೆಕ್ಸ್. ನನ್ನ ಶಾಲಾ ದಿನಗಳನ್ನು ನಾನು ಅತ್ಯಂತ ಸಂತೋಷದಿಂದ ಕಳೆದೆ. ನನ್ನ ಶಾಲೆಯು ನನಗೆ ಓದಲು, ಬರೆಯಲು ಕಲಿಸಿತು. ನನ್ನ ನಡುವಳಿಕೆಯನ್ನ ಸರಿಪಡಿಸಿದರು. ನಮ್ಮನ್ನ ಸರಿಯಾದ ಮಾರ್ಗದ ಕಡೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಾರೆ. ಶಾಲಾ ದಿನಗಳು ಜೀವನದಲ್ಲಿ ಬರುವ ಓಂದು ಸುಂದರವಾದ ದಿನಗಳು. ನನ್ನ ಶಾಲೆಯ ಅಂಗಳದಲ್ಲಿ ವಿಧ ವಿಧದ ಆಟಗಳು ಆಡಿದ್ದು ನೆನಪಿಗೆ ಬರುತ್ತಿದೆ. ನನ್ನ ಕಾಲೇಜಿನ ಜೀವನವನ್ನು ಬಹಳ ಸಂತೋಷದ ದಿನಗಳಾಗಿತ್ತು ಏಕೆಂದರೆ ನಾನು ನನ್ನ ಅಪ್ಪ ಮತ್ತು ಅಮ್ಮನ ಜೊತೆ ಇದ್ದೆ. ನನ್ನನ್ನು ವಿಜಯವಿಠ್ಠಲ ಕಾಲೇಜಿನ ವೈಸ್ ಪ್ರೆಸಿಡೆಂಟ್ ಆಗಿ ಆಯ್ಕೆ ಮಾಡಿದ್ದರು.

ನನ್ನ ಆಸಕ್ತಿಗಳು.[ಬದಲಾಯಿಸಿ]

ನನಗೆ ನೃತ್ಯದಲ್ಲಿ ಬಹಳ ಆಸಕ್ತಿ ಇತ್ತು, ಈಗಲೂ ಇದೆ. ನನ್ನ ಆರೋಗ್ಯ, ಪೂರ್ಣ ದೇಹ ನನಗೆ ನೃತ್ಯ ಮಾಡಲು ಬಹಳ ಸಹಾಯ ಮಾಡುತ್ತದೆ. ನನ್ನ ಶಾಲೆಯ ಗೆಳೆಯರು ಇಂದಿಗೂ ಸಹ ನನ್ನನ್ನು ನೆನಪು ಮಾಡಿಕೊಂಡು ಫೋನ್ ಮಾಡುತ್ತಾರೆ. ಅವರೆಲ್ಲರೊಡನೆ ನಾನು ಅವಿನಾಭಾವ ಸಂಬಂಧವಿಟುಕೊಂಡಿದ್ದೆ. ಶಾಲೆಯಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ ಇತ್ತು ಅದರಲ್ಲೂ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುವೆ. ನನ್ನ ಕಾಲೇಜಿನಲ್ಲಿಯು ಸಹ ನನ್ನ ನೃತ್ಯವನ್ನು ಮುಂದುವರೆಸಿದೆ. ಕಾಲೇಜಿನ ವಾರ್ಷಿಕೋತ್ಸವಕೆ ನೃತ್ಯವನ್ನು ಮಾಡಿದ್ದು ಇದೆ. ನಾನು ಮತ್ತು ನನ್ನ ಸ್ನೇಹಿತರು ಸೇರಿ ಆ ಕಾಲೇಜಿನಲ್ಲಿ ಕೆಲವು ಕಾರ್ಯಕ್ರಮಗಳನ್ನು ನಡೆಸಿದೆವು. ಅದರಲ್ಲಿ ಕೆಲವು ಕಾರ್ಯಕ್ರಮಗಳು ಎಂದರೆ ಫ್ರೆಷರ್ ದಿನ, ಜನಾಂಗೀಯ ದಿನ, ಕಾಲೇಜು ದಿನ. ಈ ಸಮಯದಲ್ಲಿ ಎಲ್ಲರನು ಹೇಗೆ ಸಂಬಾಳಿಸುವುದು. ನಾನು ಈಗ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಬಿಕಾಂ ಶಿಕ್ಷಣವನ್ನು ಪಡೆಯುತ್ತಿದ್ದೇನೆ. ಬಿಡುವಿನ ಸಮಯದಲ್ಲಿ ಚದುರಂಗ, ನಾವೆಲ್ಸ್, ಮ್ಯಾಗಜೀನ್ ಮತ್ತು ಆಟೋಬಯೋಗ್ರಫಿಗಳನ್ನು ಓದುತ್ತೇನೆ. ನನಗೆ ದೇಶ ಪರ್ಯಾಟನೆ ಮಾಡಲು ಬಹಳ ಇಷ್ಟ, ಒಂದಷ್ಟು ಜಾಗಗಳಿಗೆ ಹೋಗಿದ್ದೇನೆ. ಇತ್ತೀಚಿಗಷ್ಟೇ ನನ್ನ ಅಮ್ಮ ಮತ್ತು ಅಕ್ಕ ನನ್ನನ್ನು ಬಿಟ್ಟು ಜೈಪುರ್ ಗೆ ಹೋಗಿದ್ದಾರೆ. ನಾನು ,ಬಿಕಾಂ ಪರೀಕ್ಷೆ ಮುಗಿಸಿ ಮಾಲ್ಡೀವ್ಸ್ ಮತ್ತು ಬಾಲಿಗೆ ಹೋಗಬೇಕೆಂದು ಅಂದುಕೊಂಡಿದ್ದೇನೆ. ನಾನು ಮೂಲತಹ ಮೈಸೂರಿನವಳು.

ಪ್ರಸ್ತುತ ಜೀವನ ಮತ್ತು ಗುರಿ.[ಬದಲಾಯಿಸಿ]

ಜೀವನದಲ್ಲಿ ಗುರಿಯನ್ನು ಮುಟ್ಟಲೇ ಬೇಕೆಂಬ ಛಲವಿದೆ, ನನ್ನನ್ನು ಆಗಾಗ ನನ್ನ ಸೀನಿಯರ್ಗಳು ಮಾರ್ಗದರ್ಶನ ನೀಡುತ್ತಿರುತ್ತಾರೆ. ನಾನು ಮಾಸ್ಟರ್ಸನನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದಿನಲ್ಲಿ ಮಾಡಬೇಕೆಂದು ಬಹಳ ಆಸಕ್ತಿ. ಈ ಎಲ್ಲಾವನ್ನ ಮಾಡಿ ಹಾಗೂ ನಂಬಿದ ಪೋಷಕರಿಗೆ ಹೆಮ್ಮೆ ಪಡುವಂತ ಮಗಳು ಹಾಗೂ ಕ್ರೈಸ್ಟ್ ಯುನಿವರ್ಸಿಟಿಗೂ ಹೆಮ್ಮೆ ತರುವಂತಹ ವಿದ್ಯಾರ್ಥಿ ಆಗುತ್ತೇನೆ. ನಾನು ಈ ರೀತಿಯ ಹವ್ಯಸಗಳನ್ನ ಇಟ್ಟು ಕೊಂಡಿರುವೆ. ಹಾಗೆಯೆ ನನ್ನ ಗುರಿಯನ್ನು ಸಾಧಿಸುವ ಪ್ರಯತ್ನದ ಮೇಲೆ ಇರುವೆ. ನನ್ನ ಕೆಲವು ಆಸಕ್ತಿಗಳು ಏನೆಂದರೆ ನನಗೆ ಬಟ್ಟೆಯ ಮೇಲೆ ಆಸಕ್ತಿ ಹೆಚ್ಚಿರುತ್ತದೆ. ತಿಂಡಿ ತಿನಿಸುಗಳನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಅದರಲ್ಲೂ ಹೊರಗಡೆ ಸುತ್ತಾಡಲು ನನಗೆ ಪಂಚ ಪ್ರಾಣ. ನನಗೆ ವಿದೇಶಕ್ಕೆ ಹೋಗುವ ಆಸಕ್ತಿ ಕೂಡ ಇದೆ. ನನಗೆ ನನ್ನ ಪ್ರತೀ ದಿನ ಅತೀ ಸಂತೋಷದಿಂದ ಮತ್ತು ಉತ್ಸಾಹದಿಂದ ಕಳೆಯುತ್ತ ಇರಬೇಕೆಂಬುದು ನನ್ನ ಆಸೆ. ಹಾಗೆ ನನ್ನ ಜೀವನವನ್ನು ನನ್ನ ಆಸೆ ಮತ್ತು ಆಕಾಂಕ್ಷೆಗಳಂತೆ ಬದುಕಬೇಕು. ಇವೆಲ್ಲಾವು ಆಗಬೇಕೆಂದರೆ ನಾನು ಕಷ್ಟ ಪಟ್ಟು ಓದಿ ಒಂದು ಒಳ್ಳೆ ನೆಲೆಯನ್ನು ಕಂಡುಕೋಳ್ಳ ಬೇಕು .ನಾನು ಪ್ರತಿ ದಿನ ಸುದ್ದಿ ಪತ್ರಿಕೆಯನ್ನು ದಿನಾಲು ಓದಲು ನನ್ನ ತಂದೆಯವರು ನನಗೆ ಹೇಳುತ್ತಿದ್ದರು ಆದರೆ ಅದನ್ನು ನಾನು ಅಭ್ಯಾಸ ಮಾಡಿಕೊಳ್ಳಲಿಲ್ಲ, ಆದರೆ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಬಂದಮೇಲೆ ನನಗೆ ಅದರ ಬೆಲೆ ತಿಳಿಯಿತು. ಇಲ್ಲಿಗೆ ಬಂದಮೇಲೆ ಅಪ್ಪ, ಅಮ್ಮನ ಬಲೆ, ಊಟದ ಬೆಲೆ, ದುಡ್ಡಿನ ಬೆಲೆ ಎಲ್ಲವು ಚನ್ನಾಗಿ ತಿಳಿಸಿಕೊಡುತ್ತಿದೆ. ನಿಜವಾದ ಜೀವನ ಎಂದರೆ ಏನು ಎಂದು ತಿಳಿಸುತ್ತಿದೆ. ಎಲ್ಲದಕ್ಕೂ ಅಪ್ಪ ಅಮ್ಮನ ಸಹಾಯಕ್ಕೆ ಕಯೊಡ್ಡುತ್ತಿದ್ದೆ ಆದರೆ ಈಗ ಎಲ್ಲವನ್ನು ಒಬ್ಬಳೆ ನಿಭಾಯಿಸಲು ಕಷ್ಟವಾಗುತ್ತಿದೆ ಆದರೆ ಅದನ್ನು ಈ ಮೂರು ವರ್ಷದಲ್ಲಿ ಕಲಿಯುತ್ತೇನೆ. ಈ ರೀತಿ ನನ್ನ ಜೀವನವು ನಡೆಯುತ್ತಿರುವುದು. ಇದು ನನ್ನ ಬಗ್ಗೆ ಒಂದು ಚಿಕ್ಕ ಪರಿಚಯ.

ಧನ್ಯವಾದಗಳು.