ಸದಸ್ಯ:Chondamma AJ/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

'ಕೊಡವ ವಸ್ತ್ರ'

ಭಾರತದ ಸ್ಕಾಟ್‍ಲ್ಯಾಂಡ್ ಎಂದೇ ಪ್ರಖ್ಯಾತವಾದ ಕೊಡಗಿನ ನಿವಾಸಿಗಳಲ್ಲಿ ವಿಶ್ವ ವಿಖ್ಯಾತ ಜನಾಂಗವಾದ ಕೊಡವರ ಸಂಸ್ಕøತಿ ಮತ್ತು ಉಡುಪುಗಳೂ ಅಷ್ಟೇ ಪ್ರಸಿದ್ಧ. [೧] ಕೊಡವ ಸೀರೆಯ ಸಹ ಉಡುಪಾಗಿಯೇ ಗುರುತಿಸಿಕೊಂಡಿರುವ ವಸ್ತ್ರದ ವಿಶೇಷತೆ ಇರುವುದು ಅದನ್ನು ಧರಿಸುವ ರೀತಿಯಲ್ಲಿ.

ವಸ್ತ್ರವು ಕೊಡವರ ಪದ್ದತಿಯಲ್ಲಿ ಹಿಂದಿನಿಂದಲೂ ಬೆಳೆದುಬಂದಿರುವಂತದ್ದು. ಹೆಂಗಸರು ಮನೆಕೆಲಸದಲ್ಲಿ ತೊಡಗಿರುವಾಗ, ಅಡುಗೆ ತಯಾರಿ ಹಾಗು ಊಟಕ್ಕೆ ಬಡಿಸುವಾಗ ತಲೆಗೂದಲು ಬೀಳದಂತೆ ಮತ್ತು ಸ್ವಚ್ಛತೆ ಕಾಪಾಡುವ ಸಲುವಾಗಿ ಸದಾ ತಲೆಗೆ ಕಟ್ಟಿರುತ್ತಿದ್ದ ಬಟ್ಟೆಯಿದು.

ಕೊಡವ ವಸ್ತ್ರ

ಆಯತಾಕಾರದ ಕೆಂಪು ಬಟ್ಟೆಯ ಮೇಲೆ ಹಣೆಪಟ್ಟಿಯಂತೆ ಚಿನ್ನದ ಬಣ್ಣದ ದಾರದಲ್ಲಿ ಕಸೂತಿ ಮಾಡಲಾಗಿರುವ ವಸ್ತ್ರಕ್ಕೆ ಜಡೆ ಸೇರಿಸಿ ಕಿವಿಯ ಮೇಲೆ ಬಿಗಿದು ಕಟ್ಟಬಹುದಾದ ಒಂದು ಉಡುಪಿನ ಭಾಗ ಕೊಡವ ವಸ್ತ್ರ. ಸಾಂಪ್ರದಾಯಿಕವಾಗಿ ಕೆಂಪು ಬಣ್ಣದ ಆಯತಾಕಾರದ ಬಟ್ಟೆಗೆ ಲಕ್ಷಣವಾದ ಅಲಂಕಾರಿಕ ಕಸೂತಿಯನ್ನು ಮಾಡಲಾಗಿರುತದತದೆ. ಎಲ್ಲಾ ಶುಭ ಕಾರ್ಯಗಳಿಗೆ ಮತ್ತು ಮುಖ್ಯವಾಗಿ ಮದುವೆ ಮತ್ತು ಪೂಜೆಗಳಿಗೆ ಕೊಡವ ವಸ್ತ್ರ ಧರಿಸುವುದು ವಾಡಿಕೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸೀರೆಯ ಬಣ್ಣಕ್ಕೆ ಸರಿ ಹೊಂದುವಂತೆ ಬಣ್ಣ ಬಣ್ಣದ ವಸ್ತ್ರಗಳು ಬಳಕೆಗೆ ಬಂದಿದೆ. ವಸ್ತ್ರದ ಮುಂಭಾಗದಲ್ಲಿ ಕಸೂತಿ, ಕಲಂಕಾರಿ, ಕುಂದನ್ ಕೆಲಸದ ಕೈ ಚಳಕ ಬಹಳ ಬೇಡಿಕೆಯಲ್ಲಿದೆ. ಡಿಸೈನರ್ ವಸ್ತ್ರಗಳ ಮಳಿಗೆಗಳು ಒಳ್ಳೆಯ ಆದಾಯಗಳಿಸುತ್ತವೆ. ಕೊಡವ ವಸ್ತ್ರವು ಕೊಡವ ಹೆಣ್ಣು ಮಕ್ಕಳು ಉಳಿಸಿಕೊಂಡು ಬಂದಿರುವ ಒಂದು ಪರಂಪರೆಯ ಭಾಗ. ಶತಮಾನಗಳಿಂದ ಹಲವಾರು ಬದಲಾವಣೆಗಳಿಗೆ ಒಳಗಾದರೂ ಕೊಡವ ಸಂಪ್ರದಾಯದ ಬಹು ಮುಖ್ಯ ಭಾಗವಾಗಿ ಇದು ಉಳಿದಿದೆ.

ಕೊಡವ ಸೀರೆಯೊಂದಿಗೆ ಧರಿಸುವ ಕೊಡವ ವಸ್ತ್ರವನ್ನು ಉಮ್ಮತ್ತಾಟ್ ನೃತ್ಯಕ್ಕೆ ಹೆಣ್ಣು ಮಕ್ಕಳು ಧರಿಸುತ್ತಾರೆ. ಕಾವೇರಿಮಾತೆಯನ್ನು ಕೊಂಡಾಡಿ ಹಾಡುತ್ತಾ ನೃತ್ಯ ಮಾಡುವ ಉಮ್ಮತ್ತಾಟ್‍ಗೆ ಕೊಡವ ವಸ್ತ್ರ ಬಹುಮುಖ್ಯ. ಹಿಂದಿನಿಂದಲೂ ಎಲ್ಲಾ ಶುಭ ಕಾರ್ಯಗಳಿಗೆ ಕೊಡವ ವಸ್ತ್ರವು ಅನಿವಾರ್ಯ. ಭಕ್ತಿ ಪೂರ್ವಕವಾಗಿ ಹೆಂಗಸರು ವಸ್ತ್ರ ಧರಿಸಿ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಂತೆಯೇ ಮದುವೆ ಸಮಾರಂಭದಲ್ಲಿ ಹಿರಿಯರು ಮತ್ತು ವಧು ವರರಿಗೆ ಆಶೀರ್ವಾದಿಸುವ ಅಲ್ಲರೂ ಸಾಂಪ್ರದಾಯಿಕ ಉಡುಗೆ ಮತ್ತು ವಸ್ತ್ರ ಧರಿಸಿ ದೇವರ ಸಮ್ಮುಖದಲ್ಲಿ ನಿಲ್ಲಬೇಕು. ತಲೆಗೆ ವಸ್ತ್ರ ಧರಿಸದ ಹೆಂಗಸರು ಆಕ್ಷತೆ ಹಿಡಿಯುವಂತಿಲ್ಲ. ಭಕ್ತಿಯ ಸಂಕೇತವಾಗಿಯು ಈ ವಸ್ತ್ರ ಕೊಡವರ ಹಿರಿಮೆಯ ಭಾಗವಾಗಿದೆ.

ಚೆಕ್ಕ್ ವಸ್ತ್ರ

ಕೊಡವ ವಸ್ತ್ರಗಳಲ್ಲಿ ವಿವಿಧ ಬಗೆಗಳಿವೆ. ಸಂದರ್ಭ ಮತ್ತು ಬಳಕೆಗೆ ಸರಿ ಹೊಂದುವಂತೆ ಬೇರೆ ಬೇರೆ ರೀತಿಯ ವಸ್ತ್ರಗಳು ಬಳಕೆಯಲ್ಲಿವೆ. ಸಾಂಪ್ರದಾಯಿಕವಾಗಿ ಬಳಸುತ್ತಾ ಬಂದಿರುವ ವಸ್ತ್ರ ಕೆಂಪು ಬಿಳಿ ಬಣ್ಣದ ಚೆಕ್ಸ್ ಇರುವ ಚೌಕ ಆಕಾರದ ಬಟ್ಟೆಯನ್ನು ಧರಿಸುತ್ತಿದ್ದರು. ಇದನ್ನು ಗಂಡಸರು ಹಾಗು ಹೆಂಗಸರು ಇಂದಿಗೂ ಧರಿಸುತ್ತಾರೆ. ಮದುವೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಧರಿಸಲೆಂದು ಇದಕ್ಕೆ ನಿರ್ಧಿಷ್ಟ ಆಕಾರವೊಂದನ್ನು ನೀಡಲಾಗಿದೆ. ಈ ವಸ್ತ್ರ ಧರಿಸಲು ಹೆಂಗಸರಿಗೆ ಕಟ್ಟುಪಾಡುಗಳಿಲ್ಲ. ಯಾವುದೇ ವಯಸ್ಸಿನವರು, ವಿವಾಹಿತ, ಅವಿವಾಹಿತರು, ಮುತೈದೆ, ವಿಧವೆಯರೂ ಇದನ್ನು ಧರಿಸಬಹುದು. ಗಂಡಸರು ಕೊಡವ ಪೇಟ (ಮಂಡೆ ತುಣಿ) ಬದಲಿಗೆ ಪ್ರತಿ ದಿನ ಧರಿಸಲು ಚೆಕ್ ವಸ್ತ್ರ ಬಳಸುತ್ತಾರೆ. ಚೌಕ ಆಕಾರದ ಚೆಕ್ ವಸ್ತ್ರವನ್ನು ತ್ರಿಕೋನದಂತೆ ಮಡಚಿ ಹಣೆಯ ಮೇಲೆ ಇಟ್ಟು ಕಿವಿಯ ಮೇಲಿನಿಂದ ಸುತ್ತಿ ಕಟ್ಟುವುದು ಕ್ರಮ.

ಮುಸ್ಕೋಲಿ

ಮದುಮಗಳ ಶೃಂಗಾರದ ಮುಖ್ಯ ಭಾಗವಾದ ವಸ್ತ್ರ ಮುಸ್ಕೋಲಿ. ಕೊಡವ ವಸ್ತ್ರದ ಒಂದು ರೂಪವಿದು. ಮದುಮಗಳು ಸೀರೆಯ ಜೊತೆಗೆ ತೆಲೆಗೆ ಧರಿಸಿ, ತೋಳಿನ ಹಿಂದಿನಿಂದ ತಂದು ಸೊಂಟಕ್ಕೆ ಸಿಕ್ಕಿಸುವ ವಿಭಿನ್ನ ರೀತಿಯ ವಸ್ತ್ರವಿದು. ಉತ್ತಮ ಕಸೂತಿ, ಕುಂದನ್ ಕಲ್ಲುಗಳು, ಮುತ್ತು, ಹರಳುಗಳನ್ನು ಪೋಣಿಸಿ ತಯಾರಿಸುವ ಈ ವಸ್ತ್ರ ಒಂದು ಕುಟುಂಬಕ್ಕೆ ಮೀಸಲಾಗಿರುತ್ತದೆ. ವಧು ವರರಿಗೆ ಹಾಕುವ ಎಲ್ಲಾ ಒಡವೆಗಳ ಜೊತೆಗೆ ಮುಸ್ಕೋಲಿಯೂ ಇರುತ್ತದೆ. ಆ ಕುಟುಂಬದಲ್ಲಿ ಯಾವ ಹುಡುಗಿಯ ಮದುವೆಯಾದರೂ ಅದನ್ನು ಉಪಯೋಗಿಸುತ್ತಾರೆ. ಮದುಮಗಳಿಗೆ ಇಷ್ಟವಾದಂತೆ ಸ್ವಂತವಾಗಿ ಹೊಸದೊಂದು ಮುಸ್ಕೋಲಿಯನ್ನು ತಯಾರಿಸಿಕೊಳ್ಳುವ ಆಚರಣೆ ಚಾಲ್ತಿಯಲ್ಲಿದೆ.[೨]. ದಂಪತಿ ಮುಹೂರ್ತಕ್ಕೆ ಕೂರುವ ವಧು ವರರು ತಲೆಗೆ ಧರಿಸುವ ವಸ್ತ್ರ ಮುಸ್ಕೋಲಿ. ಅಕ್ಷತೆ ಹಾಕುವಾಗ ಧರಿಸಿರುವ ಮುಸ್ಕೋಲಿಯನ್ನು ಮತ್ತೆ ಧರಿಸುವಂತಿಲ್ಲ. ಆ ಕುಟುಂಬದ ಬೇರೆ ವಧು ವರರಿಗೆ ಮಾತ್ರ ಮುಸ್ಕೋಲಿ ಮೀಸಲಾಗಿರುತ್ತದೆ. ಕೊಡವರ ಪದ್ಧತಿಯ ಪ್ರಕಾರ ಮದುವೆಯ ದಿನ ವಧು ವರರು ಹಳೆಯ ಸೀರೆ, ಕುಪ್ಯ ಧರಿಸಬೇಕು. ಅದರ ಜೊತೆಗೆ ಮುಸ್ಕೋಲಿಯು ಸಹ ಕಟುಂಬದಲ್ಲಿ ಮೊದಲು ಧರಿಸಿರುವಂತದ್ದೇ ಆಗಿರಬೇಕು ಎಂಬುದು ವಾಡಿಕೆ.

ಕೊಡವರ ತಲೆ ವಸ್ತ್ರದ ಬಗೆಗಳು ಶತಮಾನಗಳಿಂದ ಹಲವಾರು ಬದಲಾವಣೆಗಳಿಗೆ ಒಳಗಾಗಿವೆ. ಸಂಸ್ಕøತಿಯ ಭಾಗವಾಗಿ ವಸ್ತ್ರವನ್ನು ಕೊಡವರು ನೋಡುತ್ತಾರೆ. ಯಾವುದೇ ಕೆಲಸದ ಆರಂಭ, ಮದುವೆ, ಒಲೆ ಪೂಜೆ, ಹೊಸ ಮನೆ ಸೇರುವ ಸಂದರ್ಭ ವಸ್ತ್ರ ಹಾಕಿಕೊಂಡು ಕೆಲಸ ಮಾಡುವುದು, ಮನೆಯೊಳಗೆ ಬರುವುದು ಶಭಕರ ಎಂದು ನಂಬುತ್ತಾರೆ.  ಕೊಡವರ ಹೆಮ್ಮೆಯ ಹಾಕಿ ಪಂದ್ಯಾಟದ ಆರಂಭದ ಸಂಭ್ರಮದಲ್ಲೂ ವಸ್ತ್ರದ ಪ್ರಾಮುಖ್ಯತೆ ಎದ್ದು ಕಾಣುತ್ತದೆ.

ಉಲ್ಲೇಖಗಳು[ಬದಲಾಯಿಸಿ]

   
  1. http://www.coorgexperiences.orangecounty.in/the-kodava-costume/#.WrYjLN-WbIU
  2. http://www.coorgjewellery.in/wedding.html