ಸದಸ್ಯ:Chandhana.j/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾಮೇರು ಪಂಚಮುಖ ಗಣೇಶ ದೇವಸ್ಥಾನ:[ಬದಲಾಯಿಸಿ]

ಗಣೇಶನನ್ನು ಶಿಕ್ಷಣ, ಬುದ್ಧಿವಂತಿಕೆ ಮತ್ತು ಸಂಪತ್ತಿನ ದೇವರಾಗಿ ಪೂಜಿಸಲಾಗುತ್ತರೆ.
ಗಣೇಶ ಆನೆ ಮುಖದ ಹಿಂದೂ ದೇವರು.

ಶಿವ ಮತ್ತು ಪಾರ್ವತಿಯ ಮಗ, ಮಡಕೆ ಹೊಟ್ಟೆಯ ಆನೆ ದೇವರು ಗಣೇಶನು ಯಶಸ್ಸು, ಜ್ಞಾನ ಮತ್ತು ಸಂಪತ್ತಿನ ಅಧಿಪತಿ. ಗಣೇಶನನ್ನು ಹಿಂದೂ ಧರ್ಮದ ಎಲ್ಲಾ ಪಂಗಡಗಳು ಪೂಜಿಸುತ್ತಾರೆ, ಅವರನ್ನು ಬಹುಶಃ ಹಿಂದೂ ದೇವರುಗಳಲ್ಲಿ ಪ್ರಮುಖರನ್ನಾಗಿ ಮಾಡುತ್ತಾರೆ. ಅವರನ್ನು ಸಾಮಾನ್ಯವಾಗಿ ಇಲಿ ಸವಾರಿ ಎಂದು ಚಿತ್ರಿಸಲಾಗಿದೆ, ಅವರು ಯಾವುದೇ ಪ್ರಯತ್ನಗಳಿದ್ದರೂ ಯಶಸ್ಸಿನ ಅಡೆತಡೆಗಳನ್ನು ತೆಗೆದುಹಾಕುವಲ್ಲಿ ದೇವತೆಗೆ ಸಹಾಯ ಮಾಡುತ್ತಾರೆ.ಮಹಾಮೇರು ಪಂಚಮುಖ ಗಣಪತಿ ದೇವಸ್ಥಾನ: ಬೆಂಗಳೂರಿನ ಕೆಂಗೇರಿ ಬಳಿ ಸ್ಥಾಪಿತವಾಗಿರುವ ಈ ಪಂಚಮುಖ ಹಾಗೂ ಪಂಚ ಶರೀರವುಳ್ಳ ದೇವಾಲಯವು ಕೆಂಗೇರಿ ಬಸ್ಸು ನಿಲ್ದಾಣದಿಂದ ಕೇವಲ ಎರಡು ಕಿ.ಮೀ ಮೈಸೂರಿನೆಡೆ ಸಾಗುವ ರಸ್ತೆಯಲ್ಲಿ ಸಾಗುವಾಗ ದೊರೆಯುತ್ತದೆ.ನೈಸ್ ರಸ್ತೆಯ ಬಳಿ ಕೆಂಗೇರಿಯಿಂದ ಮೈಸೂರಿನೆಡೆ ಸಾಗುವಾಗ ಎಡಗಡೆಗೆ ದೊಡ್ಡದಾದ ಸ್ವಾಗತ ಕಮಾನ ಒಂದ್ದಿದ್ದು ಅದೆ ನಿಮಗೆ ಪಂಚಮುಖ ಗಣೇಶನ ದೇವಾಲಯಕ್ಕೆ ಸ್ವಾಗತ ಕೋರುತ್ತದೆ. ಇಲ್ಲಿರುವ ಗಣೇಶನ ವಿಶೇಷತೆ ಏನೆಂದರೆ ಈ ಗಣೇಶನು ಪಂಚಮುಖ ಮಾತ್ರವಲ್ಲ ಪಂಚಶರೀರವನ್ನೂ ಸಹ ಹೊಂದಿದ್ದಾನೆ. ಹಾಗಾಗಿಯೆ ಪಂಚಗಣಪತಿ ಎಂದು ಕರೆಯಲ್ಪಡುತ್ತಾರೆ.

ಸ್ಥಳದ ವೈಶಿಷ್ಟ್ಯಗಳು[ಬದಲಾಯಿಸಿ]

ಬೆಂಗಳೂರಿನಲ್ಲಿರುವ ಕೆಲವು ಪುರಾತನ ದೇವಾಲಯಗಳಲ್ಲಿ ಇದೂ ಒಂದಾಗಿದೆ. ದೂರದಿಂದೆಲೆ ಈ ಗಣಪನ ದೇವಾಲಯವು ಸಾಕಷ್ಟು ಆಕರ್ಷಕವಾಗಿ ಕಂಡುಬರುತ್ತದೆ. ಸುವರ್ಣ ಬಣ್ಣ ಲೇಪಿತ ಐದು ಶರೀರವುಳ್ಳ ಈ ಗಣೇಶನು ದೇವಾಲಯದ ಗೋಪುರವಾಗಿದ್ದು ಫಳ ಫಳನೆ ಹೊಳೆಯುತ್ತ ಎಲ್ಲರ ಗಮನ ತನ್ನೆಡೆ ಸೆಳೆಯುವ ದೇವಾಲಯವಾಗಿದೆ. ಈ ದೇವಾಲಯ ಇರುವ ಪ್ರದೇಶದ ಅಕ್ಕ ಪಕ್ಕದಲ್ಲಿರುವ ರಸ್ತೆಗಳಲ್ಲಿ ಸಾಗುವಾಗ ಯಾರಿಗಾದರೂ ಸರಿ ಒಂದು ಕ್ಷಣ ಕುತೂಹಲ ಹುಟ್ಟಿಸುವಂತೆ ಮಾಡುತ್ತದೆ ಈ ದೇವಾಲಯ ಹಾಗೂ ಇದು ವಿಶಿಷ್ಟವಾಗಿ ನಿರ್ಮಿಸಲ್ಪಟ್ಟಿರುವ ಪರಿ. ಕರ್ನಾಟಕದ ರಾಜಧಾನಿ ನಗರ ಬೆಂಗಳೂರಿನಲ್ಲಿಯೆ ಈ ಸುಂದರ ದೇವಾಲಯವಾಗಿದ್ದು ಭಕ್ತರ ಹಾಗೂ ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣವಾಗಿದೆ.

ದೇವಾಲಯದ ವಿಶೇಷತೆಗಳು[ಬದಲಾಯಿಸಿ]

ಗಣೇಶನ ತಲೆ ಆತ್ಮವನ್ನು ಸಂಕೇತಿಸುತ್ತದೆ.
ಗಣೇಶನನ್ನು ಶಿಕ್ಷಣ ಬುದ್ಧಿವಂತಿಕೆ ಮತ್ತು ಸಂಪತ್ತಿನ ದೇವರಾಗಿ ಪೂಜಿಸಲಾಗುತ್ತದೆ.

ಪಂಚಮುಖ ದೇವಾಲಯದ ವಿನ್ಯಾಸವೆ ವಿಶಿಷ್ಟವಾಗಿದ್ದು ಇದನ್ನು ನೀವು ನೋಡಿದಾಗಲೆ ತಿಳಿಯುತ್ತದೆ. ಈ ವಿನ್ಯಾಸಕ್ಕೆ ವಿಶೇಷವಾದ ಅರ್ಥವೂ ಇದೆ. ಆ ಪ್ರಕಾರವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು ಇಲ್ಲಿ ವಿಘ್ನೇಶ್ವರನನ್ನು ಹರಸಿಕೊಂಡು ಬರುವವರ ಬಯಕೆಗಳು ಶೀಘ್ರದಲ್ಲಿ ಈಡೇರಿಸಲ್ಪಡುವಂತೆ ಈ ವಿನ್ಯಾಸ ಸಹಕಾರಿಯಾಗಿದೆ ಎಂದು ನಂಬಲಾಗುತ್ತದೆ. ಮೇರು ಯಂತ್ರ ಶ್ರೀಚಕ್ರವು ಒಂದು ದಿವ್ಯ ಶಕ್ತಿಯ ತೇಜಸ್ಸಾಗಿದ್ದು ಧನಾತ್ಮಕತೆಯ ಕಂಪನಗಳನ್ನು ಪಸರಿಸುತ್ತದೆ. ಮೇರು ಚಕ್ರವು ಜಗತ್ತಿನ ಧನಾತ್ಮಕ ಶಕ್ತಿಯನ್ನು ಪ್ರತಿನಿಧಿಸುವ ವಿನ್ಯಾಸವಾಗಿದ್ದು ಪಿರಮಿಡ್ ಆಕಾರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಒಂದು ಶಕ್ತಿ ಕೇಂದ್ರವೆಂದೆ ಹೇಳಬಹುದು. ಸಾಮಾನ್ಯವಾಗಿ ಸನಾತನ ಧರ್ಮದಲ್ಲಿ, ಪುರಾಣಗಳಲ್ಲಿ ಉಲ್ಲೇಖಿಸಲಾಗಿರುವಂತೆ ಶ್ರೀಚಕ್ರಗಳು ಒಂದೆಡೆ ಶಕ್ತಿಯು ಕ್ರೋಢೀಕರಣಗೊಳ್ಳುವ ಕೇಂದ್ರಗಳು ಅಥವಾ ವಿನ್ಯಾಸಗಳು. ಇವು ಇದ್ದೆಡೆ ಶಕ್ತಿಯ ಪ್ರವಾಹವಿರುತ್ತದೆ. ಹಾಗಾಗಿ ಹಲವಾರು ಪ್ರಸಿದ್ಧ ದೇವಾಲಯಗಳಲ್ಲಿ ಶ್ರೀಚಕ್ರಗಳನ್ನು ಸ್ಥಾಪಿಸಲಾಗಿರುವುದನ್ನು ನೋಡಬಹುದು. ಅದೆ ರೀತಿಯಾಗಿ ಮೇರು ಚಕ್ರವು ಒಂದು ವಿಶೇಷವಾದ ವಿನ್ಯಾಸವಾಗಿದ್ದು ಚೂಪಾದ ಪರ್ವತದ ಹಾಗೆ ಇದು ಕಂಡುಬರುತ್ತದೆ. ಇದೆ ವಿನ್ಯಾಸದಲ್ಲಿ ಈ ದೇವಾಲಯವನ್ನು ರಚಿಸಲಾಗಿರುವುದರಿಂದ ಈ ಗಣಪತಿ ದೇವಾಲಯವು ವಿಶೇಷ ಎನಿಸಿಕೊಂಡಿದೆ. ಅಲ್ಲದೆ ದೇವಾಲಯ ನಿರ್ಮಿತವಾದ ಪ್ರದೇಶ ಬೆಂಗಳೂರಿನ ಸದ್ದು ಗದ್ದಲಿನ ಪ್ರದೇಶದಿಂದ ಸಾಕಷ್ಟು ದೂರವಿದ್ದು ಒಂದು ಪ್ರಶಾಂತಮಯವಾದ ವಾತಾವರಣದಲ್ಲಿ ಸ್ಥಿತವಿರುವುದರಿಂದ ಬೆಂಗಳೂರಿಗರಿಗೆ ಈ ದೇವಾಲಯ ಭೇಟಿ ಸಾಕಷ್ಟು ಸಂತಸ ಹಾಗೂ ನೆಮ್ಮದಿ ನೀಡಬಲ್ಲುದು. ಮೇರು ವಿನ್ಯಾಸದಲ್ಲಿ ದೇವಾಲಯವು ರಚಿತವಾಗಿರುವುದರಿಂದ ಇದನ್ನು ಮಹಾಮೇರು ಗಣೇಶ ದೇವಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಲ್ಲಿ ಗುರುಗಳ ಆಶ್ರಮವೂ ಸಹ ಇದ್ದು ಆಗಾಗ ಭಜನೆಗಳು ಹಾಗೂ ಪ್ರವಚಾನದಿಗಳು ನಡೆಯುತ್ತಿರುತ್ತವೆ ದೇವಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಭವ್ಯವಾದ ಹಾಗೂ ಆಕರ್ಷಕವಾಗಿ ನಿರ್ಮಿಸಲಾದ ಅಂಗಳವು ನಿಮ್ಮ ಮೈಮನಗಳನ್ನು ಪುಲಕಿತಗೊಳಿಸುತ್ತದೆ. ಸುಂದರವಾದ ಕೊಳ, ಸ್ವಚ್ಛವಾಗಿ ನಿರ್ವಹಿಸಲಾದ ಪಾದಚಾರಿ ಮಾರ್ಗಗಳು ಮನಸಿಗೆ ಮುದ ನೀಡುತ್ತವೆ.ಇನ್ನೂ ದೇವಾಲಯದ ಮುಖ್ಯ ಆವರಣದಲ್ಲಿ ಕಪ್ಪು ಶಿಲೆಯಲ್ಲಿ ನಿರ್ಮಿಸಲಾದ ಪಂಚಮುಖ ಗಣಪನನ್ನು ದರ್ಶಿಸಬಹುದು. ಈ ಗಣಪನ ನಾಲ್ಕು ಮುಖಗಳು ನಾಲ್ಕು ದಿಕ್ಕುಗಳನ್ನು ಸೂಚಿಸಿದರೆ ಐದನೇಯ ಮುಖವು ಆ ನಾಲ್ಕೂ ಮುಖಗಳ ಮೇಲೆ ಸ್ಥಿತವಾಗಿದೆ. ದೇವಾಲಯದ ಅರ್ಚಕರು ಹೇಳುವಂತೆ, ಎಲ್ಲ ದಿಕ್ಕುಗಳಲ್ಲಿಯೂ ಗಣೇಶನ ದರ್ಶನವಾಗಿ ಆ ಎಲ್ಲ ದಿಕ್ಕುಗಳಲ್ಲಿರುವ ಎಲ್ಲರಿಗೂ ಎಲ್ಲ ರೀತಿಯ ಅನುಕೂಲಗಳು ಉಂಟಾಗಲಿ ಎಂಬುದಾಗಿದೆ. ಇನ್ನೊಂದು ವಿಶೇಷವೇನೆಂದರೆ ಪಂಚಗಣಪನ ಸುತ್ತಲೂ ಹಲವಾರು ರೂಪಗಳ ಗಣೇಶನ ಪ್ರತಿಮೆಗಳನ್ನು ಕಾಣಬಹುದಾಗಿದೆ. ಇದೇನು ಇಷ್ಟೊಂದು ಗಣಪತಿಗಳು ಎಂದೊಮ್ಮೆ ಆಶ್ಚರ್ಯವಾಗಬಹುದು.

ಗಣೇಶನ ಅವತಾರ[ಬದಲಾಯಿಸಿ]

ಆದರೆ ಇಲ್ಲಿ ಒಟ್ಟು ೩೨ ಗಣೇಶನ ಪ್ರತಿಮೆಗಳಿದ್ದು ಅವು ಗಣೇಶನ ೩೨ ವಿವಿಧ ಅವತಾರಗಳನ್ನು ರೂಪಗಳನ್ನು ಪ್ರತಿನಿಧಿಸುತ್ತದೆ. ಗಣೇಶನ ವಾಹನ ಹಾಗೂ ಪ್ರೀತಿಯ ಗೆಳೆಯ ಮೂಷಕ ಅಂದರೆ ಇಲಿಯನ್ನೂ ಸಹ ಬಹು ಆಕರ್ಷಕವಾಗಿ ಇಲ್ಲಿ ಕೆತ್ತಲಾಗಿದೆ . ದೇವಾಲಯದ ವಿಶಾಲವಾದ ಪ್ರಾಂಗಣದಲ್ಲಿ ನೀರಿನ ಕೊಳಗಳನ್ನು ನಿರ್ಮಿಸಲಾಗಿದ್ದು ಅಲ್ಲಿ ಆಕರ್ಷಕ ಮೀನುಗಳನ್ನು ಕಾಣಬಹುದು. ಪ್ರತಿ ವರ್ಷ ಜುಲೈ-ಅಗಸ್ಟ್ ಸಂದರ್ಭದಲ್ಲಿ ಬರುವ ಗುರು ಪೂರ್ಣಿಮೆ ಹಾಗೂ  ದೇವಾದೇವಾಲಯ ವಾರ್ಷಿಕ ಉತ್ಸವವನ್ನು ಒಟ್ಟಾರೆಯಾಗಿ ಬಲು ಅದ್ದೂರಿಯಿಂದ ಇಲ್ಲಿ ಆಚರಿಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ಸಾಕಷ್ಟು ಸುಂದರವಾಗಿ ದೇವಾಲಯವನ್ನು ಅಲಂಕರಿಸಲಾಗುತ್ತದೆ.  ದೇವಾಲಯ ವಾರ್ಷಿಕ ಉತ್ಸವವನ್ನು ಒಟ್ಟಾರೆಯಾಗಿ ಬಲು ಅದ್ದೂರಿಯಿಂದ ಇಲ್ಲಿ ಆಚರಿಸಲಾಗುತ್ತದೆ. ಉತ್ಸವದ ಸಂದರ್ಭದಲ್ಲಿ ಸಾಕಷ್ಟು ಸುಂದರವಾಗಿ ದೇವಾಲಯವನ್ನು ಅಲಂಕರಿಸಲಾಗುತ್ತದೆ.ಆಚರಿಸಲಾಗುವ ಮುಖ್ಯ ಹಬ್ಬಗಳು ಗುರು ಪೂರ್ಣಿಮಾ - ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಹಿಂದೂಗಳು, ಬೌದ್ಧರು ಮತ್ತು ಜೈನರು ತಮ್ಮ ಶಿಕ್ಷಕರನ್ನು ಪೂಜಿಸಲು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಹಬ್ಬವನ್ನು ಹಿಂದೂ ತಿಂಗಳ ಆಶಾಧಾ (ಜೂನ್-ಜುಲೈ) ಹುಣ್ಣಿಮೆಯ ದಿನ (ಪೂರ್ಣಿಮಾ) ಆಚರಿಸಲಾಗುತ್ತದೆ . ಸಂಕಷ್ಟಿ ಚತುರ್ಥಿ - ಗಣೇಶನಿಗೆ ಅರ್ಪಿತವಾದ ಶುಭ ದಿನ. ಇದನ್ನು ಹಿಂದೂ ಕ್ಯಾಲೆಂಡರ್‌ನ ಪ್ರತಿ ಚಂದ್ರ ತಿಂಗಳಲ್ಲಿ ಕೃಷ್ಣ ಪಕ್ಷದ 4 ನೇ ದಿನದಂದು (ಕ್ಷೀಣಿಸುತ್ತಿರುವ ಹಂತ) ಆಚರಿಸಲಾಗುತ್ತದೆ . ಗಣೇಶ ಚತುರ್ಥಿ ಗಣೇಶನ ಜನ್ಮವನ್ನು ಆಚರಿಸುವ ಹಿಂದೂ ಹಬ್ಬ. ಇದು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳುಗಳಲ್ಲಿ ಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

<r>https://isharethese.com/panchamukhi-ganesha-temple-kengeri-timings/</r>

<r>https://www.nativeplanet.com/travel-guide/mahameru-panchamukha-ganesha-in-temple-bengaluru-bangalore-002428.html</r>