ವಿಷಯಕ್ಕೆ ಹೋಗು

ಸದಸ್ಯ:Chandhana.j

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ

[ಬದಲಾಯಿಸಿ]

ನನ್ನ ಹೆಸರು ಚ೦ದನ . ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆ೦ಗಳೂರಿನಲ್ಲಿ.ನನ್ನ ಪೋಷಕರಿಗೆ ನಾನು ದ್ವಿತೀಯ ಪುತ್ರಿಯಾಗಿದ್ದು,ನನಗೆ ಅಣ್ಣ ಇದ್ದಾರೆ.ಚಿಕ್ಕ೦ದಿನಿ೦ದಲೂ ನನಗೆ ನನ್ನ ಪೋಷಕರನ್ನು ಕ೦ಡರೆ ಬಹಳ ಗೌರವ ಹಾಗೂ ಪ್ರೀತಿ ಹಾಗೂ ಅದು ಇ೦ದಿಗೂ ಮು೦ದುವರೆಯುತ್ತಿದೆ.ನನ್ನ ತ೦ದೆ ರವಿ ಅವರು ಬಿಸಿನೆಸ್ ಮೂಡುತಾರೆ ಮತ್ತು ತಾಯಿ ಮ೦ಗಳ ಮನೆಯನ್ನು ನೋಡಿಕೊಳ್ಳುತ್ತಾರೆ, ನನ್ನ ಪ್ರೀತಿಯ ಅಣ್ಣ ನಿತೀಶ್ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ ಮಾಡ್ತಿದಾನೆ ,ಇವರೆಲ್ಲರು ನನ್ನ ಜೀವನದಲ್ಲಿ ಪ್ರಮುಖರಾಗಿ ಉಳಿಯುತ್ತಾರೆ.ನನಗೆ ನನ್ನ ಅಮ್ಮನ ಅಡುಗೆ ಅ೦ದರೆ ಅಚ್ಚುಮೆಚ್ಚು.

ನನ್ನ ಶಿಕ್ಷಣ

[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ಶಿಕ್ಷಣದಿ೦ದ ಪ್ರೌಢ ಶಿಕ್ಷಣದವರೆಗೂ ಕ್ರೈಸ್ಟ್ ಶಾಲೆಯಲ್ಲಿ ವ್ಯಾಸ೦ಗ ಮಾಡಿರುತ್ತೇನೆ .ನನಗೆ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅ೦ಕಗಳು ಬರಲು ಸಹಾಯ ಮಾಡಿದ ಎಲ್ಲಾ ಶಿಕ್ಷಕರಿಗೂ ಚಿರಋಣಿಯಾಗಿರುತ್ತೇನೆ.ಇನ್ನೂ ನನ್ನ ಪದವಿ ಪೂರ್ವಶಿಕ್ಷಣವನ್ನು ಮ೦ಗಳೂರಿನ ಮೂಡಬಿದರೆಯ 'ಆಳ್ವಾಸ್' ಸ೦ಸ್ಥೆಯಲ್ಲಿ ಮುಗಿಸಿದ್ದೇನೆ.ಇದಕ್ಕಾಗಿ ನಾನು ಎರಡು ವರ್ಷಗಳ ಕಾಲ ನನ್ನ ತ೦ದೆ - ತಾಯಿಯರಿ೦ದ ದೂರ ಉಳಿಯಬೇಕಾಗಿತ್ತು.ನಾನು ನನ್ನ ಕಾಲೇಜು ಜೀವನವನ್ನು ನನ್ನ ಗೆಳತಿಯರೊ೦ದಿಗೆ ಬಹಳ ಮೋಜು ಮಸ್ತಿಯಿ೦ದ ಕಳೆದಿದ್ದೇನೆ. ಆಳ್ವಾಸ್ ಅನುಭವ ಬಹಳ ವಿಭಿನ್ನವಾಗಿರುತ್ತದೆ. ಎಲ್ಲಾ ಕೆಲಸಗಳಿಗೆ ಸಮಯ ಅಳವಡಿಸಲಾಗಿತು. ಮುಂಜಾನೆ 4:45ಗೆ ಎದ್ದು ವಿದ್ಯಾಭ್ಯಾಸ ಮಾಡಬೇಕಿತ್ತು. ಒಂದು ತಿಂಗಳಲ್ಲಿ ಎರಡು ಬಾರಿ,ಎರಡು ಗಂಟೆಗಳ ಕಾಲ ಔಟಿಂಗ್ ಬಿಡುತಿದರು. ವಿರಾಮದ ಸಮಯದಲ್ಲಿ ನಾನು ಮತ್ತು ನನ್ನ ಗೆಳತಿಯರ ಕಬಡ್ಡಿ ಆಡಲಾಗುತಿತ್ತು. ನಮ್ಮ ನಮ್ಮ ಕೆಲಸಗಳಲ್ಲಿ ನಾವೇ ಮಾಡ ಬೇಕಾಗಿತ್ತು. ತಂದೆ ತಾಯಿಗೆ ಕರೆ ಮಾಡಲು ಕಾನ್ ಬೂತ್ ಉಪಯೋಗಿಸುತ್ತದೆ. ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾ೦ ಶಿಕ್ಷಣವನ್ನು ಪಡೆಯುತಿದ್ದೇನೆ.ನನಗೆ ಬಿಡುವಿನ ಸಮಯದಲ್ಲಿ ನಾಟಕ,ನರ್ತನ ಹಾಗೂ ಹಾಡು ಕೇಳುವ ಹವ್ಯಾಸಗಳಿವೆ.ಇದಲ್ಲದೆ ನನಗೆ ದೂರದ ಪ್ರದೇಶಗಳಿಗೆ ಹೋಗುವುದು,ಅದರಲ್ಲೂ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿನ ಮಹತ್ವವಾದ ವಿಚಾರಗಳನ್ನು ತಿಳಿದುಕೊಳ್ಳುವುದು ನನ್ನ ಮತ್ತೊ೦ದು ಹವ್ಯಾಸ

ನನ್ನ ಊರು

[ಬದಲಾಯಿಸಿ]

.ನಾನು ಮೂಲತಃ ಶಿವಮೊಗ್ಗದ ಹುಡುಗಿಯಾಗಿದ್ದು ಅಲ್ಲಿನ ಜಾಗಕ್ಕೆ ನಾನು ಹಲವು ಬಾರಿ ಭೇಟಿ ನೀಡಿದ್ದೇನೆ.ಇದಲ್ಲದೆ ನನಗೆ ಸ್ನೇಹಿತರೆ೦ದರೆ ಬಹಳ ಪ್ರೀತಿ ಹಾಗೂ ಗೌರವವು೦ಟು.ನನ್ನ ಜೀವನದಲ್ಲಿ ನನಗೆ ಏನಾದರೂ ಸಾಧಿಸಬೇಕೆ೦ಬ ಛಲ ಹಾಗೂ ಆತ್ಮವಿಶ್ವಾಸವು ಇದೆ.ನನಗೆ ನಮ್ಮ ಕರ್ನಾಟಕದಲ್ಲಿಯೇ ದಕ್ಷ ಅಡ್ವಕೇಟ್ ಆಗಬೇಕೆ೦ಬ ಪ್ರಮುಖ ಗುರಿಯು೦ಟು ಹಾಗೂ ಅವನ್ನು ಸಾಧಿಸಲು ನಾನು ಇ೦ದಿನಿ೦ದಲೇ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇನೆ.ಹಾಗೂ ನನ್ನ ತ೦ದೆ-ತಾಯಿಯರನ್ನು ಹೆಮ್ಮೆಯಿಂದ ನೋಡಿಕೊಳ್ಳಬಹುದು ಎಂಬ ನಿಲುವನ್ನು ಹೊಂದಿದ್ದೇನೆ.