ಸದಸ್ಯ:Chandana kv/ನನ್ನ ಪ್ರಯೋಗಪುಟ/2
ಗೋಚರ
=ಪೋರಿಫೆರಾ= ಆಕಶೇರುಕ ಪ್ರಾಣಿಗಳ ವರ್ಗೀಕರಣದಲ್ಲಿ ಮೊದಲನೆಯ ವಂಶವು ಪೋರಿಫೆರಾ. ಸ್ಪಂಜು ಪ್ರಾಣಿಗಲಳ ವಂಶವನ್ನು ಫೋರಿಫೆರಾ ಎಂಬುದಾಗಿ ಕರೆಯಲಾಗುತ್ತದೆ.ಸ್ಪಂಜು ಪ್ರಾಣಿಗಳ ದೇಹದ ಮೇಲಿರುವ ಆಸ್ಟಿಯಾ ಎಂಬ ಅಸಂಖ್ಯಾತ ರಂಧ್ರಗಳಿಂದಾಗಿ ಪೋರಿಫೆರಾ ಎಂಬ ಹೆಸರು ಬಂದಿದೆ.ಇವು ಜಲವಾಸಿಗಳಾಗಿವೆ.ಇವುಗಳಲ್ಲಿ ಹೆಚ್ಚಿನವು ಸಮುದ್ರವಾಸಿಗಳು ಮತ್ತು ಕೆಲವು ಸಿಹಿನೀರು ವಾಸಿಗಳಾಗಿದ್ದು ಬಂಡೆ ಚಿಪ್ಪು ಮತ್ತಿತರ ನೀರಿನಲ್ಲಿರುವ ವಸ್ತುಗಳಿಗೆ ಅಂಟಿಕೊಂಡು ಜೀವಿಸುವ ಪ್ರಾಣಿಗಳಾಗಿವೆ.ಈ ಪ್ರಾಣಿಗಳ ದೇಹವು ದುಂಡಗೆ ಹೂಜಿಯಾಕಾರ ಆಥವಾ ಕವಲೊಡೆದವುಗಳಾಗಿರುತ್ತವೆ.[೧]
ದೇಹದ ಭಿತ್ತಿಯು ಮೀಸೆಂಕೈಮಾದಿಂದ ಕೂಡೀದೆ.ಸ್ಪಂಜು ಪ್ರಾಣಿಯ ದೇಹದಲ್ಲಿ ಉಪಚರ್ಮಕೋಶಗಳು,ರಂಧ್ರಕೋಶಗಳು,ಕಶಾಂಗಕೋಶಗಳು ಮತ್ತು ಅಮೀಬಾ ರೀತಿಯ ಕೋಶಗಳು ಹಾಗೂ ಸ್ಪಿಕ್ಯೂಲಗಳನ್ನು ಉತ್ಪತ್ತಿ ಮಾಡುವ ಕೋಶಗಳಿದ್ದು, ಇವು ಪ್ರತಿಯೊಂದು ನಿರ್ದಿಷ್ಟಕಾರ್ಯವನ್ನು ಪರಸ್ಪರ ಸ್ವತಂತ್ರವಾಗಿ ನಿರ್ವಹಿಸುತ್ತವೆ.ಆದ್ದರಿಂದ ಸ್ಪಂಜು ಪ್ರಾಣಿಯು ಕೋಶೀಯ ಮಟ್ಟದ ವ್ಯವಸ್ಥೆಯನ್ನು ಹೊಂದಿದೆ.ದೇಹದ ಭಿತ್ತಿಯು ಒಂದು ಆದರ ಚೀಲದಂತಿದ್ದು ಆದರ ಒಳಾಂಗಣಕ್ಕೆ ಸ್ಪಾಂಜೋಸೀಲ್ ಎಂದು ಹೆಸರು.ಸ್ಪಾಂಜೋಸೀಲ್ ಒಳಗಿನ ಅವಕಾಶಕ್ಕೆ ಹಾಗೂ ಕೆಲವು ನಿರ್ದಿಷ್ಟಡೊಗರುಗಳಿಗೆ ಕಶಾಂಗ ಕಂಠ ಕೋಶಗಳ ಲೇಪನಾ ಪದರವಿದೆ.ದೇಹದಲ್ಲಿ ಕೇವಲ ರಂಧ್ರಗಳೇ ಅಲ್ಲದೇ ನಾಲೆ ಆಥವ ಕೋಣೆಗಳೂ ಕಂಡುಬರುತ್ತವೆ.ಹೊರಗಿನ ನೀರು ಈ ರಂಧ್ರಗಳ ಮೂಲಕ ಸ್ಪಾಂಜೋಸೀಲ್ ಗೆ ಸುಲಭವಾಗಿ ಹರಿಯಬಲ್ಲವು.ಆಸ್ಟಿಯಾಗಳೆಂಬ ರಂಧ್ರದ ಮೂಲಕ ಹೊರಬರುತ್ತದೆ.ದೇಹದಲ್ಲಿ ನೀರು ಸದಾ ಹರಿಯುತ್ತಿದ್ದು ಆಹಾರ ಮತ್ತು ಆಮ್ಲಜನಿಕವನ್ನು ಒದಗಿಸುತ್ತವೆ. ನೀರಿನ ಪ್ರವಾಹದಿಂದ ಪಡೆದ ಸೂಕ್ಪ್ಮ ಜೇವಿಗಳನ್ನು ದೇಹದ ಜೇವಕೋಶಗಳು ನುಂಗಿ ಜೇರ್ಣಿಸಿಕೊಳ್ಳುತ್ತವೆ. ಸ್ಪಂಜು ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಆಂತರ್ ಕಂಕಾಲ ವ್ಯವಸ್ಧೆಯು ಇದ್ದು ಆದು ಸ್ಪಿಕ್ಯೂಲ್ ಗಳೆಂಬ ವಿಶೇಷ ರಚನೆಗಳಿಂದಾಗಿದೆ.ಇವು ದೇಹಕ್ಕೆ ರಕ್ಷಣೆ ಮತ್ತು ಆಸರೆಯನ್ನು ಕೊಡುತ್ತವೆ.ಸ್ಪಿಕ್ಯೂಲ್ ಗಳು ಸಿಲಿಕಾನ್ ಆಥವಾ ಸ್ಪಾಂಜನ್ ತಂತುಗಳಿಂದ ಆಥವಾ ಕ್ಯಾಲ್ಸಿಯಂ ಕಾರ್ಬೊನೇಟ್ ನಿಂದ ಕೂಡಿರುತ್ತವೆ.ಸಂತಾನೋತ್ಪತ್ತಿಯು ನಿರ್ಲಿಂಗ ರೀತಿ ಮತ್ತು ಲಿಂಗರೀಯಿಂದ ನಡೆಯುತ್ತದೆ.ಸಿಹಿ ನೀರಿನಲ್ಲಿ ವಾಸಿಸುವ ಸ್ಪಂಜುಪ್ರಾಣಿಗಳಲ್ಲಿ ನಿರ್ಲಿಂಗ ರೀತಿಯ ಸಂತಾನೋತ್ಪತ್ತಿಯು ಜೆಮ್ಯೂಲ್ ಗಳು ಎಂಬ ರಚನೆಗಳ ಮೂಲಕ ಆಗುತ್ತದೆ.ಲೈಂಗಿಕ ಸಂತಾನೋತ್ಪತ್ತಿಯು ಪುರುಷಾಣು ಮತ್ತು ಅಂಡಾಣುಗಳ ಉತ್ಪತ್ತಿ ಮತ್ತು ನಿಶೇಚನದಿಂದ ನಡೆಯುತ್ತದೆ.
==ಸ್ಪಂಜುಪ್ರಾಣಿಗಳ ಆರ್ಥಕ ಪ್ರಾಮುಖ್ಯತೆ== * ಸ್ಪಂಜುಪ್ರಾಣಿಗಳ ನಾರಿನಂರಿರುವ ಆಸ್ಥಿಪಂಜರವನ್ನು ಸ್ನಾನಕ್ಕೆ ಹಾಗೂ ಶುಚಿಗೊಳಿಸುವ ಕೆಲಸಕ್ಕೆ ಬಳಸಲಾಗುತ್ತದೆ.[೨] *ವೀನಸ್ ಹೂ ಬುಟ್ಟಿಯಂತಹ ಕೆಲವು ರೀತಿಯ ಸ್ಪಂಜುಗಳ ಒಣ ಅಸ್ಥಿಪಂಜರವನ್ನು ಅಲಂಕಾರಕ್ಕಾಗಿ ಬಳಸುತ್ತಾರೆ.
ವಿವಿಧ ಸ್ಪಂಜುಪ್ರಾಣಿಗಳ ಉದಾಹರಣಿಗಳು *ಸೈಕಾನ್ *ಯೂಸ್ಪಾಂಜಿಯಾ(ಒರೆಸುವ ಸ್ಪಾಂಜು) *ಯೂಪ್ಲೆಕ್ಟಲ್ಲಾ *ಲ್ಯುಕೋಸೊಲೇನಿಯಾ *ಹ್ಯಾಲೋನೀಮಾ (ಗಾಜು ತಂತುಸ್ಪಂಜು)