ಸದಸ್ಯ:Bharathraj.karthadka/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೇಡಿಯಾಪು ಕೃಷ್ಣಭಟ್ಟರು[ಬದಲಾಯಿಸಿ]

ಬಾಲ್ಯ[ಬದಲಾಯಿಸಿ]

ಸೇಡಿಯಾಪು ಕೃಷ್ಣಭಟ್ಟರು ಪುತ್ತೂರು ತಾಲೂಕಿನ ವಿಟ್ಲ ಪೇಟೆಗೆ ಹತ್ತಿರದ ಸೇಡಿಯಾಪು (ಈಗ ಬಂಟ್ವಾಳ) ಎಂಬ ಹಳ್ಳಿಯಲ್ಲಿ, ಜೂನ್ 8,1902ರಲ್ಲಿ ಜನಿಸುತ್ತಾರೆ. ಅವರ ತಂದೆ ರಾಮಭಟ್ಟರು, ತಾಯಿ ಮೂಕಾಂಬಿಕೆ ಅಮ್ಮ. ಹಳ್ಳಿ ಶಾಲೆಯಲ್ಲಿ ಕಾಗುಣಿತವನ್ನು ಕಲಿತು, ಪುತ್ತೂರು ಬೋರ್ಡ್ ಹೈಸ್ಕೂಲಲ್ಲಿ ಒಂಬತ್ತನೆಯ ತರಗತಿಯ ತನಕ ಓದಿದರು. ಆನಂತರ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಮುಂದಾದರು.ಗಾಂಧೀಜಿಗೆ ಪ್ರಿಯವಾಗಿದ್ದ ವಿಧಾಯಕ ಕಾರ್ಯಗಳಲ್ಲಿ ನಿರತರಾದರು. ಜತೆಗೆ ಮನೆಯಲ್ಲೇ ಓದನ್ನು ಮುಂದುವರಿಸಿದರು. ಹಳ್ಳಿ ಶಾಲೆಯಲ್ಲಿ ಮಾಸ್ತರಿಕೆಯನ್ನು ಮಾಡಿದರು. ಈ ಮೂರರೊಂದಿಗೆ ಆಯುರ್ವೇದ ವೈದ್ಯ ಪದ್ಧತಿಯನ್ನು ಚೆನ್ನಾಗಿ ಅರಿತುಕೊಂಡರು. 1920ನೆಯ ದಶಕದ ಕೊನೆಯಲ್ಲಿ ಅವರು ಮಂಗಳೂರಿನಲ್ಲಿ ಸೇರಿ ಅಲ್ಲೊಂದು ದವಾಖಾನೆಯನ್ನು ತೆರೆದರು. ಅಲ್ಲಿ ಅವರಿಗೆ ಮಹಾಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಸಾಮಿಪ್ಯವೂ, ತರುಣ ಕವಿ ಕಡೆಂಗೋಡ್ಲು ಶಂಕರ ಭಟ್ಟರ ಸಹಚಾರ್ಯವೂ ಒದಗಿದವು. ಮದ್ದಿನಂಗಡಯಲ್ಲಿ ಕುಳಿತೇ ಕನ್ನಡ, ಸಂಸ್ಕೃತಗಳಲ್ಲಿ ಪ್ರಭುತ್ವವನ್ನು ಪಡೆದ ಕೃಷ್ಣಭಟ್ಟರು ಮದರಾಸು ಸರಕಾರದ ನಡೆಯಿಸತ್ತಿದ್ದ ‘ವಿದ್ವಾನ್’ ಪರೀಕ್ಷಾ ಪಾರಂಗತರಾದರು. ಆ ಪದವಿಯ ಬಲದಿಂದ ಅವರಿಗೆ ಮಂಗಳೂರು ಸೆಂಟ್ ಅಲೋಸಿಯಸ್ ಹೈಸ್ಕೂಲಲ್ಲಿ ಅಧ್ಯಾಪಕ ವೃತ್ತಿ ಲಭಿಸಿತು. ಸುಮಾರು ಇಪ್ಪತ್ತು ವರ್ಷಗಳಲ್ಲಿ ಕನ್ನಡ ಪಂಡಿತರಾಗಿದ್ದ ಕೃಷ್ಣಭಟ್ಟರು 1950ರಲ್ಲಿ ಅಲೋಸಿಯಸ್ ಕಾಲೇಜಿನಲ್ಲಿ ಕನ್ನಡ ‘ಟ್ಯೂಟರ್’ ಆಗಿ ನಿಯುಕ್ತರಾದರು.

  • ಸೇಡಿಯಾಪು ಕೃಷ್ಣಭಟ್ಟರ ಒಂದು ಲೇಖನಸೂತ್ರ ಇದೆ. ಇದನ್ನು ಅವರೇ ಪದ್ಯರೂಪದಲ್ಲಿ ಹೀಗೆ ಹೇಳಿದ್ದಾರೆ.

ಹೆಚ್ಚು ಬರೆದವನಲ್ಲ

ನಿಚ್ಚ ಬರೆವವನಲ್ಲ

ಮೆಚ್ಚಿಸಲು ಬರೆಯುವಭ್ಯಾಸವಿಲ್ಲ

ಇಚ್ಛೆಗೆದೆಯೊಪ್ಪಿ ಬಗೆ

ಬಿಚ್ಚಿದರೆ, ಕಣ್ಗೆ ಮಯ್

ವಿಚ್ಚುವಂದದಿ ತೀಡಿ ತಿದ್ದಿ ಬರೆವೆ.

ಸಮ್ಮೇಳನಾಧ್ಯಕ್ಷರಾಗಿ ಕೃಷ್ಣಭಟ್ಟರು[ಬದಲಾಯಿಸಿ]

1932ರಲ್ಲಿ ಮಡಿಕೇರಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಉನ್ನತ ವೇದಿಕೆಯಲ್ಲಿ. ಧೀಮಂತ ಡಿ.ವಿ.ಗುಂಡಪ್ಪನವರ ಅಧ್ಯಕ್ಷತೆಯಲ್ಲಿ ಜರಗಿದ ಆ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಕೃಷ್ಣಭಟ್ಟರು ‘ಕನ್ನಡ ಛಂದಸ್ಸು’ ಎಂಬ ದೀರ್ಘ ಪ್ರಬಂಧವನ್ನು ಓದಿದರು.

ಪತ್ರಿಕಾ ಬರಹಗಳು[ಬದಲಾಯಿಸಿ]

ಕೃಷ್ಣಭಟ್ಟರು ತೊಂಭತ್ತೈದು ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಸುಮಾರು ಇಪ್ಪತ್ತು ವರ್ಷ ಸಾಹಿತ್ಯ ಕೃಷಿ ಮಾಡಿದರು. ಆಮೇಲೆ ಕೃಷ್ಣಭಟ್ಟರು ಲೇಕಕನಾಗಿ ಕನ್ನಡಿಗರಿಗೆ ಕಾಣಿಸಿದ್ದು ಕನ್ನಡಕುಲ ಪುರೋಹಿತ ಆಲೂರು ವೆಂಕಟರಾಯರ ‘ಜಯಕರ್ನಾಟಕ’ದಲ್ಲಿ ಅವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಬರೆದ ‘ಕರ್ನಾಟಕ ಕವಿತಾ ಪ್ರಪಂಚ’ವೆಂಬ ಲೇಖನ ಅಚ್ಚಾಯಿತು. ಹದಿನಾಲ್ಕು ವರ್ಷಗಳ ಅನಂತರ 1994ರಲ್ಲಿ, ‘ಪ್ರಬುದ್ದ ಕರ್ಣಾಟಕ’ದ ದೀಪಾವಳಿ ಸಂಚಿಕೆಯಲ್ಲಿ ಕೃಷ್ಣಭಟ್ಟರ ‘ಪಂಚಮೀ ವಿಭಕ್ತಿ’ ಎಂಬ ಲೇಖನ ಪ್ರಚಾರವಾಯಿತು. 1950ರ ಅವಧಿಯಲ್ಲಿ ಕೃಷ್ಣಭಟ್ಟರು ಮಾಡಿದ ಮೂರು ಉಪನ್ಯಾಸಗಳು ‘ಕನ್ನಡ ವರ್ಣಗಳು’ ಎಂಬ ಶೀರ್ಷಿಕೆಯಲ್ಲಿ ಮುದ್ರಿತವಾಯಿತು. ಸೇಡಿಯಾಪು ಕೃಷ್ಣಭಟ್ಟರು ಒಬ್ಬ ತಜ್ಞ ವೈಯಾಕರಣ, ಛಂದಶ್ಯಾಸ್ತ್ರಜ್ಞ ಮಾತ್ರವಲ್ಲ ಅವರೊಬ್ಬರು ಸರಸಕವಿ ಮತ್ತು ಕಥನಕುಶಲಿ ಎಂಬುದನ್ನು ನಿದರ್ಶಿಸುವಂತೆ ಅವರ ಕೆಲವು ಕಾವ್ಯಗಳೂ ಕತೆಗಳೂ 1930 ಮತ್ತು 40ರ ದಶಕದಲ್ಲಿ ಪ್ರಕಟವಾದುವು.

ಕವನಗಳು[ಬದಲಾಯಿಸಿ]

1949ರಲ್ಲಿ ‘ಕೆಲವು ಸಣ್ಣ ಕಾವ್ಯಗಳು’ ಎಂಬ ಹೆಸರಲ್ಲಿ ಮಾತ್ರ ಸಂಗ್ರಹಗೊಂಡು ಪ್ರಕಟವಾದುವು. ಇಪ್ಪತ್ತು ವರ್ಷಗಳ ಅನಂತರ ಈ ನಾಲ್ಕು ನೀಳ್ಗವನಗಳೊಂದಿಗೆ ಕೃಷ್ಣಭಟ್ಟರು ಯತಾವತ್ತಾಗಿ ಬರೆದ ಹದಿನೆಂಟು ಬಿಡಿಕವಿತೆಗಳನ್ನು ಸೇರಿಸಿ, ‘ಚಂದ್ರಖಂಡ’ವೆಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಮುಂದೆ 1985ರಲ್ಲಿ ವಿಶ್ವಸಾಹಿತ್ಯ ಕನ್ನಡ ಸಮ್ಮೇಳನದ ಅಂಗವಾಗಿ ಅದು ಪುನರ್ಮುದ್ರಣಗೊಂಡಿತು. ಮತ್ತೆ 1994ರಲ್ಲಿ ಅದು ಪರಿವರ್ಧಿತವೂ ಅನುಬಂಧಿತವೂ ಆಗಿ ಅಚ್ಚಾಯಿತು. ಬೆಳಗಿನ ತಂಗಾಳಿ, ನೌಕೆಯಲೆನ್ನ ಕಾಳ್ಳಿರಿಸು, ತಣ್ಣನೆ ಹೊಯ್ಯಮ್ಮ ದೀಪಕ್ಕೆ, ತುಳುನಾಡ ಹಾಡು, ಜಯ ಭಾರತಪುತ್ರನೇ ಮೊದಲಾದ ಹತ್ತಾರು ಭಾವಬಂಧುರ ಕವಿತೆಗಳನ್ನು ಈ ಸಂಕಲನದಲ್ಲಿ ಕಾಣುತ್ತೇವೆ.ಸೇಡಿಯಾಪು ಕೃಷ್ಣಭಟ್ಟರು ರೋಚಕವಾದ ಕತೆಗಳನ್ನು ಬರೆಯಬಲ್ಲರೆಂಬುದನ್ನು ಅವರ ‘ಪಳಮೆಗಳು ಎಂಬ ಸಂಗ್ರಹವು ಪುಷ್ಟೀಕರಿಸುತ್ತದೆ. ನಾಲ್ಕು ಕತೆಗಳು

ಚಿನ್ನದ ಚೇಳು

ಚೆನ್ನಮಣೆ

ಧರ್ಮಮ್ಮ

ನಾಗರಬೆತ್ತ

ಗ್ರಂಥಗಳು[ಬದಲಾಯಿಸಿ]

1975ರಲ್ಲಿ ಕೃಷ್ಣಭಟ್ಟರ ಕೆಲವು ದೇಶನಾಮಗಳು ಎಂಬ ಗ್ರಂಥ ಪ್ರಕಟವಾಯಿತು. ಅದರಲ್ಲಿ ಅವರು ಬಹುಕಾಲದಿಂದ ಬಹುವಿಧದ ವ್ಯಾಖ್ಯಾನ-ವಿವರಣೆಗಳಿಗೆ ಒಳಗಾದ ‘ತುಳು’ ಎಂಬ ಶಬ್ದಾರ್ಥ ವಿವೇಚನೆಯನ್ನು ಚೇರ, ಕೊಂಕಣ ಮತ್ತು ಪಾಂಡ್ಯ ಎಂಬ ದೇಶವಾಚಕಗಳ ನಿಷ್ಪತ್ತಿ ನಿರೂಪಣೆಯನ್ನು ನಿಸ್ಸಂದಿಗ್ಧವಾಗಿ ಮಾಡಿದ್ದಾರೆ. ಆ ಕುರಿತು ಅನೇಕ ವಿದ್ವಾಂಸರು ಮಾಡಿದ ತರ್ಕ, ಮುಟ್ಟಿದ ನಿಗಮಗಳನ್ನು ಸಮಗ್ರವಾಗಿ ವಿಶ್ಲೇಷಿಸಿ ಸಾಧಾರಣವಾಗಿ ತಿರಸ್ಕರಿಸಿದ್ದಾರೆ. ಅವರದು ವಸ್ತುನಿಷ್ಠವಾದ ಕಥೈಕ ದೃಷ್ಟಿಯಲ್ಲದೆ ಅಭಿಮಾನ, ವ್ಯಕ್ತಿದ್ವೇಷ, ಪೂರ್ವಗ್ರಹಗಳಲ್ಲಿ. ಸೇಡಿಯಾಪು ಕೃಷ್ಣಭಟ್ಟರ ಅಗಾಧವಾದ ಶಾಸ್ತ್ರಜ್ಞಾನ, ನಿಶಿತವಾದ ಚಿಕಿತ್ಸಕ ಬುದ್ಧಿ, ನಿರ್ಮಮವಾದ ಕರ್ತವ್ಯ ದೃಷ್ಟಿ ಮತ್ತು ವಿನೂತನ ಮಾರ್ಗ ಕ್ರಮೇಣಗಳಿಗೆ ಸೂನ್ನತವಾದ ಉದಾಹರಣೆಯೆಂದರೆ 1985ರಲ್ಲಿ ಪ್ರಕಟಗೊಂಡ ‘ಛಂದೋಗತಿ’ ಯೆಂಬ ಗ್ರಂಥ. ‘ಛಂದೋಗತಿ’ ಪ್ರಕಟವಾದ ನಾಲ್ಕುವರ್ಷ ಅನಂತರ ಮುದ್ರಿತವಾದದ್ದು ‘ಕನ್ನಡ ಛಂದಸ್ಸು’ ಎಂಬ ಗ್ರಂಥ. 1932ರಲ್ಲಿ ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಕೃಷ್ಣಭಟ್ಟರು ಬರೆದ ಅದೇ ಹೆಸರಿನ ನಿಬಂಧದ ಪರಿಷ್ಕೃತವಾಗಿ ನಾಲ್ಕು ಪರಿಶಿಷ್ಟ, ನಾಲ್ಕು ಅನುಬಂಧ ಮತ್ತೊಂದು ಅವಶಿಷ್ಟ ಸಹಿತವಾಗಿ ನೂರ ಐವತ್ತೇಳು ಪುಟಗಳಷ್ಟು ಪುಟ ವಿಸ್ತರವಾಗಿದೆ. ‘ಈಶ್ವರ ಸಂಕಲ್ಪ ಅಥವಾ ದೈವಲೀಲೆ’ ಯೆಂಬ ಪುಸ್ತಕವನ್ನು ರಚಿಸಿದ್ದಾರೆ.

ಪ್ರಶಸ್ತಿ[ಬದಲಾಯಿಸಿ]

ಕೃಷ್ಣಭಟ್ಟರು ತಮ್ಮ ‘ವಿಚಾರ ಪ್ರಪಂಚ’ ನಿಮಿತ್ತವಾಗಿ ಕರ್ನಾಟಕ ಸರಕಾರದ ಸರ್ವೋಚ್ಛ ಪ್ರಶಸ್ತಿ- ಪಂಪ ಪ್ರಶಸ್ತಿ- ಪಂಪ ಪ್ರಶಸ್ತಿಯಿಂದ ಸನ್ಮಾನಿತರಾಗಿದ್ದಾರೆ.

ನಿಧನ[ಬದಲಾಯಿಸಿ]

ಅದು ಜೂನ್ 8, 1996ರಂದು ಪೂರೈಸಿದರು. ಅಂದೇ ಅವರ ತೊಂಬತ್ತೈದನೆಯ ಜನ್ಮದಿನವೂ ಆಗಿತ್ತು. ಕೃಷ್ಣಭಟ್ಟರ ಸನ್ಮಿತ್ರ ಡಾ. ಶಿವರಾಮ ಕಾರಂತರು ಆ ಅನುವಾದವನ್ನು ಅನಾವರಣಗೊಳಿಸಿ, ಕೃಷ್ಣಭಟ್ಟರ ಕೈಗೊಪ್ಪಿಸಿದರು. ಅವರು ಪುಸ್ತಕದ ಪುಟಗಳ ಮೇಲೆ ಕೈಯ್ಯಾಡಿಸಿ ಸಂತೋಷಪಟ್ಟರು. ಅಂದೇ ಮಧ್ಯರಾತ್ರಿ ಅವರ ಸಾರ್ಥಕ ಜೀವ ದುರ್ಬಲ ಶರೀರವನ್ನು ತ್ಯಜಿಸಿ, ಪರಲೋಕವನ್ನು ಸೇರಿತು.