ಸದಸ್ಯ:Asidhara1212/ನನ್ನ ಪ್ರಯೋಗಪುಟ
ಶರಭ ಶಾಸ್ತ್ರಿ
[ಬದಲಾಯಿಸಿ]ಶ್ರೀ ಶರಭ ಶಾಸ್ತ್ರಿ (೧೮೭೨-೧೯೦೪) ದಕ್ಷಿಣ ಭಾರತದ ಕೊಳಲು ವಾದಕರು ಆಗಿದ್ದರು[೧]. ಇವರ ಸಮಯದವರೆಗೆ ಕೊಳಲು ಜನಪದೀಯ ವಾದ್ಯವಾಗಿತ್ತು, ಇದನ್ನು ಮುಖ್ಯವಾಹಿನಿಗೆ ಮತ‍್ತು ಕರ್ಣಾಟಕೀ ಸಂಗೀತ ಕಛೇರಿಗಳಿಗೆ ಉಪಯೋಗಿಸುವ ಕೆಲಸವನ್ನು ಶ್ರೀ ಶರಭ ಶಾಸ್ತ್ರಿಗಳು ಮಾಡಿದರು. ಕಛೇರಿಗಳಲ್ಲಿ ಕೊಳಲು ಮುಖ್ಯ ವಾದನ ಆಗುವಂತೆ ಮಾಡಿದರು. ಅವರು ಮೊದಲ ಪ್ರಖ್ಯಾತ ಬ್ರಾಹ್ಮಣ ಕೊಳಲು ವಾದಕ[೨] ಎಂದು ಹೆಸರು ಪಡೆದಿದ್ದರು.
ಹುಟ್ಟು ಮತ್ತು ಬಾಲ್ಯ
[ಬದಲಾಯಿಸಿ]ಶ್ರೀ ಶರಭ ಶಾಸ್ತ್ರಿ ೧೮೭೨ರಲ್ಲಿ ವಿಶ್ವನಾಥ ಶಾಸ್ತ್ರಿ ಹಾಗು ಶ್ರಿಮತಿ ಧರ್ಮಾಂಬಾಳ್ ದಂಪತಿಗಳಿಗೆ ಜನಿಸಿದರು. ಅವರ ತಾಯಿಯು ತಿರುವಯ್ಯಾರ್ ಬಳಿ ತಿರುವಡಿ ಎಂಬ ಸ್ಥಳದವರು, ಅವರ ಪಕ್ಕದ ಮನೆ ತ್ಯಾಗರಾಜರದೇ ಆಗಿತ್ತು. ಶರಭ ಶಾಸ್ತ್ರಿ ಮತ್ತು ಅವರ ಸಹೊದರ (ರಾವ್ ಬಹದ್ದೂರ್) ಶಿವಕುಮಾರ ಶಾಸ್ತ್ರಿ[೩] ತಮ್ಮ ತಂದೆಯನ್ನು ಸಣ್ಣ ವಯಸ್ಸಿನಲ್ಲೆ ಕಳೆದುಕೊಂಡರು. ಶರಭ ಶಾಸ್ತ್ರಿಗಳು ಚಿಕ್ಕ ಪ್ರಾಯದಲ್ಲಿ ಕಣ್ಣು ಕಳೆದುಕೊಳ್ಳುವ ದುರ್ಭಾಗ್ಯವು ಒದಗಿತು. ಶರಭ ಶಾಸ್ತ್ರಿಗಳು ತಮ್ಮ ಸೊದರಮಾವ ತಿರುವಡಿಯ ಶ್ರೀ ಕುಪ್ಪುಸ್ವಾಮಿ ಶಾಸ್ತ್ರಿ ಅವರ ಬಳಿ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು, ನಂತರ ತ್ಯಾಗರಾಜರ ಶಿಷ್ಯರಾದ ಮಾನಂಬುಚಾವಡಿ ಶ್ರೀವೇಂಕಟಸುಬ್ಬ ಐಯ್ಯರ್ ಅವರ ಬಳಿ ಕಲಿಕೆಯನ್ನು ಮುಂದುವರಿಸಿದರು. ಮುಂದೆ ಶ್ರೀ ಗೊವಿಂದ ನಯನಕ್ಕರ್ ಅವರು ಕೊಳಲಿನ ಗುರುಗಳಾಗಿ ಅದರ ಪರಿಣತೆಯನ್ನು ತಿಳಿಯಪಡಿಸಿದರು. ಶ್ರೀ ಶರಭ ಶಾಸ್ತ್ರಿಗಳು ಅಂಬು ಅಮ್ಮಾಳ್ ಅವರನ್ನು ವರಿಸಿ ಕುಂಭಕೊಣಮ್ ಊರಿನ ಸೊಲಿಯಪ್ಪ ಮುದಲಿ ಬೀದಿಯಲ್ಲಿ ವಾಸಿಸಿದರು.
ಎರಹರಮ್ ಅಲ್ಲಿ ಹರಕೆ
[ಬದಲಾಯಿಸಿ]ಶಾಸ್ತ್ರಿಗಳು ಎರಹರಮ್ ಎಂಬಲ್ಲಿ ಇರುವ ಶ್ರಿ ಶಂಕರಿ ಸಮೇತ ಸ್ಕಂದನಾಥ ಸ್ವಾಮಿ ದೇವಸ್ಥಾನದಲ್ಲಿ ಕಾವಟಿ/ಕಾವಡಿಯ ಹರಕೆಯನ್ನು ಹೊತ್ತು ಪೂಜೆಯನ್ನು ನೆರವೇರಿಸಿ ತಮಗೂ ಮತ್ತು ಸ್ಥಳೀಯ ಜನರಿಗೂ ನೆಮ್ಮದಿಯನ್ನು ತಂದರು, ಹಾಗು ದೇವಸ್ಥಾನಕ್ಕೆ ಹೆಸರು ತಂದರು. ಮುಂದೆ ಅವರು "ಶರಭ ಕಾವಡಿ", "ಮಚ್ಛ ಕಾವಡಿ" ಇತ್ಯಾದಿ ಕಾವಡಿಗಳನ್ನು ಸಂಘಟಿಸಿದರು.
ಸಾಧನೆಗಳು
[ಬದಲಾಯಿಸಿ]ಶರಭ ಶಾಸ್ತ್ರಿಯವರಿಗೆ ತಮ್ಮ ಬಾಲ್ಯದಿಂದ ಬಂದ ಕುರುಡುತನ ಅವರ ಪ್ರತಿಭೆಯನ್ನು ಕುಂಟಿತಗೊಳಿಸದೆ ಇನ್ನೂ ಹೆಚ್ಚುಗೊಳಿಸಿತು. ಕೊಳಲಿನೊಂದಿಗೆ ಪ್ರಯೋಗಗಳನ್ನು ಮಾಡುತ್ತ ಬೆರಳಿನ ಅಭ್ಯಾಸದಿಂದ ಭಾರತೀಯ ಸಂಗೀತದ ಸಂಪೂರ್ಣ ಸ್ವರಶ್ರೇಣಿಯನ್ನು ಹೊರಗೆ ತಂದರು.
ಶ್ರಿ ಶರಭ ಶಾಸ್ತ್ರಿಗಳು ೫೦೦ಕ್ಕೂ ಅಧಿಕ ನವನ್ಮಾರ್ ಚರಿತಂ ಸಾಹಿತ್ಯಗಳನ್ನು ರಚಿಸಿದರು.
ಶ್ರಿ ಶರಭ ಶಾಸ್ತ್ರಿಗಳು ವಿಶಿಷ್ಟವಾದ ಕೊಳಲುವಾದನ ತಂತ್ರವನ್ನು (ತು-ತು ಕಾರಗಳು) ಬಳಕೆಗೆ ತಂದರು. ಕೊಳಲಿನೊಂದಿಗೆ ತಾನಂ ಹೊಸದಾಗಿ ನುಡಿಸಿದರು. ಅವರಿಗೆ ಒಮ್ಮೆ ಕೇಳಿದರೆ ಅದರನ್ನು ಗ್ರಹಿಸುವ ಪ್ರತಿಭೆ ಇದ್ದುದರಿಂದ "ಏಕ ಚಂದ್ರಗ್ರಾಹಿ" ಎಂಬ ಬಿರುದು ಬಂದಿತ್ತು. ಪಲ್ಲಡಂ ಸಂಜೀವ ರಾವ್ ಅವರು ಶಾಸ್ತ್ರಿಗಳ ನೇರ ಶಿಷ್ಯರಾಗಿದ್ದರು. ಪಲ್ಲಡಂ ತಮ್ಮ ಸಂಗೀತ ಜ್ಞಾನವನ್ನು ಎಚ್.ರಾಮಚಂದ್ರ ಶಾಸ್ತ್ರಿಯವರಿಗೆ ಧಾರೆಯೆರೆದರು. ಈ ರೀತಿಯ ಕಲಾಪ್ರಕಾರವಅನನು ಜಿ.ಸ್.ರಾಜನ್, ಲುಡ್ವಿಗ್ ಪೆಸ್ಚ್ ಮತ್ತು ಟಿ.ಶಶಿಧರ್ ಅವರುಗಳು ಪ್ರಖ್ಯಾತಗೊಳಿಸಿದರು.
ಶಾಸ್ತ್ರಿಗಳನ್ನು ಆಗಿನ ಮ್ಯಸೂರಿನ ಮಹಾರಾಜರು 'ಆಸ್ಥಾನ ವಿದ್ವಾಂಸ'ರ ಸ್ಥಾನಕ್ಕೆ ಬರಮಾಡಿಕೊಂಡರು, ಆದರೆ ಶಾಸ್ತ್ರಿಗಳು ಈ ಆಮಂತ್ರಣವನ್ನು ಪ್ರೀತಿಯಿಂದಲೆ ನಿರಾಕರಿಸಿದರು. ಅವರು ಸಂಗೀತ ಕಲೆಯನ್ನು ವ್ಯಾಣಿಜ್ಯೀಕರಣಗೊಳಿಸುವುದರ ವಿರುದ್ದ ಇದ್ದರು.
ಕರ್ಣಾಟಕೀ ಕೊಳಲಿನ ಮೂಲ
[ಬದಲಾಯಿಸಿ]ಅಆಇಈ
ಸಂಸ್ಕ್ರತ ವಿದ್ವಾಂಸ
[ಬದಲಾಯಿಸಿ]ಅಆಇಈ
ಮರಣ
[ಬದಲಾಯಿಸಿ]ಅಆಇಈ
ಶಾಸ್ತ್ರಿಯವರ ಕೊಳಲು
[ಬದಲಾಯಿಸಿ]ಅಆಇಈ
ವೇಣುಗಾನಮ್ ಶ್ರೀ ಶರಭ ಶಾಸ್ತ್ರಿಗಳ್ ಸ್ಮಾರಕ ಸಂಸ್ಥೆ
[ಬದಲಾಯಿಸಿ]ಅಆಇಈ
ಶ್ರೀ ರಾಮ ಭಜನೈ ಸಭಾ
[ಬದಲಾಯಿಸಿ]ಅಆಇಈ
ಉಲ್ಲೇಖಗಳು
[ಬದಲಾಯಿಸಿ]- ↑ ಪಿ, ಸಾಂಬಮೂರ್ತಿ (1966–69). South Indian music (7th ed., rev. and enl ed.). Madras: Indian Music Pub. House. p. 42.
{{cite book}}
: CS1 maint: date format (link) - ↑ Arnold, Alison (1999). South Asia : The Indian Subcontinent (Garland Encyclopedia of World Music, Volume 5). Routledge. p. 389. ISBN 978-0-8240-4946-1.
- ↑ https://www.imsc.res.in/~rao/ramanujan/newnow/viswaindex.htm