ಸದಸ್ಯ:Anita Hegde/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


                                                      ಅಪ್ಸರಕೊಂಡ

ಅಪ್ಸರಕೊಂಡ ಎಂಬುದು ಒಂದು ಪ್ರವಾಸಿತಾಣವಾಗಿದೆ.ಕರ್ನಾಟಕದ ಪಶ್ಚಿಮ ಕರಾವಳಿಯ ಒಂದು ಪ್ರದೇಶವಾದ ಉತ್ತರಕನ್ನಡ ಜಿಲ್ಲೆಹೊನ್ನಾವರ ತಾಲ್ಲೂಕಿನಲ್ಲಿದೆ.ಹೊನ್ನಾವರದಿಂದ ೮ ಕಿ.ಮೀ ದೂರ ಕ್ರಯಿಸಿದರೆ ಸಿಗುವುದೇ ಅಪ್ಸರಕೊಂಡ.[೧]

ವಿಶೇಷತೆಗಳು[ಬದಲಾಯಿಸಿ]

* ಜಲಪಾತ
* ಉಗ್ರನರಸಿಂಹ ದೇವಸ್ಥಾನ
* ಉದ್ಭವ ಗಣಪತಿ ಮೂರ್ತಿ
* ರಾಮಚಂದ್ರ ಮಠ  
* ಉದ್ಯಾನವನ
* ದೇವಿ ದೇಗುಲ
                 

ಮಾರ್ಗ ಪರಿಚಯ[ಬದಲಾಯಿಸಿ]

ಹೊನ್ನಾವರ ಬಸ್ ನಿಲ್ದಾಣದಿಂದ ೮ಕಿ.ಮೀ ಹೆದ್ದಾರಿಯಲ್ಲಿ ಚಲಿಸಿ, ಮುಂದೆ ೫೦ಮೀ ಮಣ್ಣು ಹಾದಿಯಲ್ಲಿ ಸಾಗಿದರೆ ಉಗ್ರನರಸಿಂಹ ದೇವಸ್ತಾನವು ಎದುರಾಗುತ್ತದೆ. ದೇವಸ್ತಾನದ ಹಿಂಬದಿಯಿಂದ ಸಾಗಿದರೆ ನೋಡಬೇಕಾದ ಸ್ಥಳಗಳು ಕಾಣಸಿಗುತ್ತವೆ. ಉಳಿದುಕೊಳ್ಳಲು ಹೋಟೇಲಿನ ವ್ಯವಸ್ಥೆಯಿದೆ. ಅಕ್ಟೋಬರ್ ನಿಂದ ಮಾರ್ಚವರೆಗೆ ಜಲಪಾತದಲ್ಲಿ ನೀರಿರುತ್ತದೆ. ಉದ್ಯಾನವನಕ್ಕೆ ಭೇಟಿಕೊಡಲು ಬೆಳಿಗ್ಗೆ ೮ ರಿಂದ ಸಂಜೆ ೪ರ ವರೆಗೆ ಅವಕಾಶವಿದೆ. ವಾರದ ಎಲ್ಲಾ ದಿನವೂ ತೆರೆದಿರುತ್ತದೆ.


ಜಲಪಾತ[ಬದಲಾಯಿಸಿ]

ದೇವಸ್ತಾನದ ಹಿಂಬದಿಯಿಂದ ಸಾಗಿ ಮೆಟ್ಟಿಲುಗಳನ್ನು ಇಳಿದರೆ ಜಲಪಾತ ಕಾಣುತ್ತದೆ. ಚಿಕ್ಕದಾಗಿ ಒಂದೇ ಧಾರೆಯಲ್ಲಿ ನೀರು ಹರಿಯುತ್ತಿರುತ್ತದೆ. ಈ ಜಲಪಾತವು ೮-೧೦ ಮೀಟರ್ ಎತ್ತರದಿಂದ ಧುಮುಕುತ್ತದೆ. ನೀರಿನ ಭರದಿಂದಾಗಿ ಕೆಳಗೆ ಚಿಕ್ಕದಾದ ಒಂದು ಕೆರೆ ನಿ ರ್ಮಾಣವಾಗಿದೆ. ಇದರ ಹತ್ತಿರ ನೈಸರ್ಗಿಕವಾಗಿ ರೂಪುಗೊಂಡ ಹಸಿರಿನಿಂದ ಆವ್ರತ್ತವಾದ ಗುಹೆಯಿದೆ. ಅಪ್ಸರಕೊಂಡಕ್ಕೆಈ ಹೆಸರು ಬರಲು ಕಾರಣ ಅಲ್ಲಿರುವ ಕೆರೆ. ಹಿಂದೆ ದೇವಲೋಕದ ಅಪ್ಸರೆಯರು ಈ ಕೊಳದಲ್ಲಿ ಜಲಕ್ರೀಡೆ ಆಡುತ್ತಿದ್ದರೆಂಬ ಪ್ರತೀತಿಯಿದೆ.[೨] ಆದ್ದರಿಂದ, ಅಪ್ಸರೆಯರು ಮಿಂದ ಹೊಂಡ 'ಅಪ್ಸರಕೊಂಡ'[೩]ಎಂದು ಹೆಸರಾಯಿತು. ಇಲ್ಲಿರುವ ಗುಹೆಗಳಿಗೆ' ಪಾಂಡವರ ಗುಹೆ'[೪] ಎಂದು ಕರೆಯಲಾಗುತ್ತದೆ. ಹಿಂದೆ ಮಹಾಭಾರತದ ಕಾಲದಲ್ಲಿ ಪಾಂಡವರನ್ನು ವನವಾಸಕ್ಕೆ ಅಟ್ಟಿದಾಗ ಅವರು ಈ ಗುಹೆಯಲ್ಲಿ ವಾಸವಿದ್ದರು ಎನ್ನಲಾಗುತ್ತದೆ ಇಲ್ಲಿಂದ ಹಿಂದೆ ಬಂದು ಮತ್ತೆ ಮೆಟ್ಟಿಲುಗಳನ್ನು ಹತ್ತಿದರೆ ಉದ್ಯಾನವನ ಸಿಗುತ್ತದೆ.


ಉದ್ಯಾನವನ[ಬದಲಾಯಿಸಿ]

ಉದ್ಯಾನವನಕ್ಕೆ ಹೋಗಲು ಎರಡು ಮಾರ್ಗಗಳಿವೆ. ದೇವಸ್ತಾನದ ಮೂಲಕ ಹಾಗೇಯೇ ರಸ್ತೆಯ ಮೂಲಕ. ಉದ್ಯಾನವನದಲ್ಲಿ ಹಲವಾರು ರೀತಿಯ ಗಿಡಗಳಿವೆ. ದೋಣಿಸಂಚಾರ ಮಾಡಲು ಅವಕಾಶವಿದೆ. ಇದು ಬೆಟ್ಟದ ತುದಿಯಲ್ಲಿದೆ. ಸೂರ್ಯಾಸ್ತ ಮತ್ತು ಸೂರ್ಯೋದಯ ಆನಂದಿಸಬಹುದು. ಉಪಹಾರ ಗೃಹಗಳಿವೆ.ಮೆಟ್ಟಿಲುಗಳನ್ನು ಹಿಡಿದು ಕೆಳಗಿಳಿದು ಹೋದರೆ ಬೀಚ್ ಸಿಗುತ್ತದೆ. ಉದ್ಯಾನವನದ ಬೆಂಚುಗಳನ್ನು ಚಿಪ್ಪುಗಳಿಂದ ಅಲಂಕರಿಸಲಾಗಿದೆ. ಕಾಡುಪ್ರಾಣಿಗಳ ಆಕೃತಿಗಳನ್ನು ಮಾಡಲಾಗಿದೆ. ಉದ್ಯಾನವನದ ವೀಕ್ಷಣೆಗೆ ಶುಲ್ಕವಿದೆ. ಮಕ್ಕಳಿಗಾಗಿ ಬೇರೆ ಬೇರೆ ನಮೂನೆಯ ಜೋಕಾಲಿಗಳಿವೆ.

ಉಲ್ಲೇಖಗಳು[ಬದಲಾಯಿಸಿ]

<Reference />

  1. www.travelingbeats.com/blog/apsara-konda-falls-park-sea-beach
  2. 5visitors.in/apsarakonda.html
  3. https://www.youtube.com/watch?v=X0haoua8B64
  4. https://www.trawell.in/karnataka/murudeshwar/apsara-konda-falls