ವಿಷಯಕ್ಕೆ ಹೋಗು

ಸದಸ್ಯ:Amogha.tagadur.nagendra/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ ಸರಸ್ವತಿ

[ಬದಲಾಯಿಸಿ]

ಲಲಿತ ಕಲೆಗಳ ನಡುವೆ ಉತ್ತಮವಾದ ಸಂಪರ್ಕವಿದೆ. ನೃತ್ಯ, ಹಲವಾರು ಕಲೆಗಳಾದ ಸಂಗೀತ, ಸಾಹಿತ್ಯ, ಕೆತ್ತನೆ ಹಾಗು ಚಿತ್ರಕಲೆಯ ಮಿಶ್ರಣವಾಗಿದೆ. ಒಬ್ಬ ಒಳ್ಳೆಯ ನರ್ತಕ/ನರ್ತಕಿಯಾಗಲು ಇವುಗಳೆಲ್ಲದರ ಜ್ಞಾನವಿರಬೆಕು. ಬಾಲ ಸರಸ್ವತಿ[] ಇಂತಹ ನರ್ತಕಿಯಾಗಿದ್ದರು.

ಕುಟುಂಬ ಪರಿಚಯ

[ಬದಲಾಯಿಸಿ]

೧೮ನೆ ಶತಮಾನದ ಕೊನೆಯಲ್ಲಿ, ತಂಜಾವೂರಿನಲ್ಲಿ[], ಪಾಪಮ್ಮಲ್ ಎಂಬುವರು ರಾಜ ಸಭೆಯಲ್ಲಿ ಮುಖ್ಯ ಗಾಯಕಿ ಹಾಗು ನರ್ತಕಿಯಾಗಿದ್ದರು. ಅವರ ಮಗಳಾದ ರುಕ್ಮಿಣಿಯವರು ತಂಜಾವೂರಿನ ರಾಜ ಸಭೆಯಲ್ಲಿ ಸಂಗೀತ ವಿದ್ವಾಂಸರಾಗಿದ್ದರು.ರುಕ್ಮಿಣಿಯವರ ಮಗಳಾದ ಕಾಮಾಕ್ಷಿಯವರು ಅತ್ಯಂತ ಪ್ರಸಿದ್ದರಾದ ಗುರು ಶ್ರೀ ಗಣಪತಿ ಶಾಸ್ತ್ರಿಯವರಿಂದ ನೃತ್ಯ ಕಲಿಯುತ್ತಿದ್ದರು. ಇವರು ೭೫ ವರ್ಷಗಲ ಕಲ ಅದೇ ರಾಜ ಸಭೆಯಲ್ಲಿ ನರ್ತಕಿಯಾಗಿದ್ದರು. ಇವರಿಗೆ ಅಪ್ಪಕಣ್ಣು ಮತ್ತು ಸುಂದರಂಬಲ್ ಎಂಬ ಇಬ್ಬರು ಮಕ್ಕಳಿದ್ದರು. ಇವರಿಬ್ಬರು ಖ್ಯಾತ ಸಂಯೊಜಕ ಹಾಗು ಸಂಗೀತಗಾರರಾದ ಶ್ಯಾಮ ಶಸ್ತ್ರಿಯವರ ಮಗನಾದ ಸುಬ್ಬರಾಯ ಶಾಸ್ತ್ರಿಯವರಿಂದ ಸಂಗೀತವನ್ನು ಕಲಿತರು. ಸುಂದರಂಬಲ್ ರವರ ಮಗಳಾದ ಧನಂ ಅವರಿಗೆ ಅವರ ಸೋದರ ಮಾವ ಪೊನ್ನು ಸ್ವಾಮಿಯವರಿಂದ ವೀಣೆ ಕಲಿಯಲು ಆಸಕ್ತಿ ಮೂಡಿತು. ಧನಂ ಅವರು ಈ ಸಂಗೀತ ವಾದ್ಯದಲ್ಲಿ ಪ್ರತಿಪಾದಕರು ಹಾಗು ಉತ್ತಮ ಮಟ್ಟದ ಗಾಯಕರಾಗಿದ್ದರೌ. ಅಲ್ಲದೆ, ಅವರ ಸಹೋದರಿಯಾದ ರೂಪವತಿಯೊಂದಿಗೆ ನೃತ್ಯಾಭ್ಯಾಸ ಹಾಗು ಪ್ರದರ್ಶನ ಮಾಡುತಿದ್ದರು. ಇವರ ಮಗಳಾದ ಜಯಮ್ಮನವರು, ಕುಟುಂಬದ ಸಂಪ್ರದಾಯವನ್ನು, ಪಟ್ಟನಮ್ ಸುಬ್ಬರಾಯರವರಿಂದ ಸಂಗೀತ ಕಲಿಯುವುದರ ಮೂಲಕ ಮುಂದುವರಿಸಿದರು. ಸಂಗೀತ ಮತ್ತು ನೃತ್ಯ ಅವಲಂಬಿಸಿಕೊಂಡಿದ್ದ ಈ ಕುಟುಂಬದಲ್ಲಿ, ೧೩ ಮೆ, ೧೯೧೮ರಂದು ಜಯಮ್ಮನವರಿಗೆ ಬಾಲ ಸರಸ್ವತಿ ಜನಿಸಿದರು.

ಭರತನಾಟ್ಯದಲ್ಲಿ ಹೆಜ್ಜೆಗಳು

[ಬದಲಾಯಿಸಿ]

ಬಾಲ ಸರಸ್ವತಿಯವರಿಗೆ ನೃತ್ಯದಲ್ಲಿ ಔಪಚಾರಿಕ ತರಬೇತಿ ಮೃತ ಕಂದಪ್ಪನವರಿಂದ ಶುರುವಾಯಿತು. ಈ ತರಬೇತಿಯನ್ನು ಇವರು ೪ ವರ್ಷದವರಾಗಿದ್ದಾಗಿ ಪ್ರಾರಂಭಿಸಿದರು. ಬಾಲ ಸರಸ್ವತಿಯವರ ಗುರು, ಕಂದಪ್ಪನವರ ಬಗ್ಗೆ ಕೆಲವು ಮಾತುಗಳನ್ನು ಹೇಳುವುದು ಮುಖ್ಯ. ಕಂದಪ್ಪನವರು ಮಹಾನ್ ಸಂಪ್ರದಾಯದ ಉತ್ತರಾಧಿಕಾರಿಯಾಗಿದ್ದರು. ಕಂದಪ್ಪನವರು ತಂಜಾವೂರ್ ಕ್ವಾರ್ಟೆಟ್ ನಲ್ಲಿ, ೪ ಸಹೋದರರಲ್ಲಿ ಹಿರಿಯವರಾದ ಚಿನ್ನಯ್ಯನವರ ಮಗಳ ಮೊಮ್ಮಗ. ಇವರು ಒಬ್ಬ ತಜ್ಞ ಶಿಕ್ಷಕ ಹಾಗು ಕಷ್ಟಕಾರ್ಯ ನಿರ್ವಾಹಕರಾಗಿದ್ದರು. ಅವರು ೪೨ರ ವಯಸ್ಸಿನಲ್ಲಿ ಅಕಾಲಿಕವಾಗಿ ಮರಣ ಹೊಂದಿದರು. ಆದರೆ ೨೦ನೇ ಶತಮಾನದ ಭರತನಾಟ್ಯ ನರ್ತಕಿಗೆ ತರಬೇತಿ ನೀಡಿದ ಖಾತರಿ ಕಂದಪ್ಪನವರಿಗೆ ಕೊಡಲಾಗುತ್ತದೆ.

ಬಾಲ ಸರಸ್ವತಿಯವರು ೭ನೇ ವಯಸ್ಸಿನವರಾಗಿದ್ದಾಗ ಕಾಂಚಿಪುರಂ[] ಮೀನಕ್ಷಿ ಅಮ್ಮಾಲ್ ದೇವಸ್ಥಾನದಲ್ಲಿ ರಂಗ ಪ್ರವೇಶ/ ಅರಂಗೇಟ್ರಮ್ ಮಾಡಿದರು. ಮಹಾನ್ ವಿದೂಶಿಯಾದ ಧನಂರವರ ಮೊಮ್ಮಗಳು ಪ್ರದರ್ಶನ ಮಾಡುತ್ತಿರುವುದು ಜನರಿಗೆ ತಿಳಿದಿತ್ತು. ಹೀಗಾಗಿ ದೇವಾಲಯವು ಸಂಪೂರ್ಣವಾಗಿ ತುಂಬಿತ್ತು. ಅತ್ಯಂತ ಪ್ರಸಿದ್ದರಾದ ನಯನ ಪಿಲ್ಲೈ ಅವರು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಈ ಏಳು ವರುಷದ ಹುಡುಗಿ, ಬಾಲ ಸರಸ್ವತಿ, ಯಾವುದೇ ಭಯ, ಆತಂಕವಿಲ್ಲದೆ, ತಾಳವನ್ನು ತಪ್ಪದೆ, ಪರಿಪೂರ್ಣ ಲಯ ಹಾಗು ನಿಖರ ಚಲನೆಗಳಿಂದ ಅದ್ಭುತ ಪ್ರದರ್ಶನ ನೀಡಿದರು. ಅವರ ಪ್ರದರ್ಶನವು ಎಲ್ಲರ ಮನ ಮುಟ್ಟಿತಲ್ಲದೆ ನಯನ ಪಿಲ್ಲೈ ಅವರು ಬಾಲ ಸರಸ್ವತಿಯವರನ್ನು ಬಹಳಷ್ಟು ಹೊಗಳಿದರು.

ಬಾಲ ಸರಸ್ವತಿಯವರು ಅವರ ಗುರುಗಳ ಅನುಮತಿಯನ್ನು ತೆಗೆದುಕೊಂಡು ಗೌರಿ ಅಮ್ಮಾಲ್ ಹಾಗು ಚಿನ್ನಯ್ಯ ನೈಡು ಎಂಬ ವಿದ್ವಾಂಸರಿಂದ ಅಭಿನಯವನ್ನು ಕಲಿತರು. ನಂತರ ವೇದಾಂತಂ ಲಕ್ಷ್ಮಿ ನಾರಾಯಣ ಶಾಸ್ತ್ರಿಯವರಿಂದ ಕುಚ್ಚುಪುಡಿಯನ್ನು ಕಲಿತರು.

ಬಾಲ ಸರಸ್ವತಿಯವರ ವೃತ್ತಿಪರ ಪ್ರದರ್ಶನ ಮದ್ರಾಸಿನಲ್ಲಿ[] ಪ್ರಾರಂಭವಾಯಿತು. ಅಂದು ಅರಿಯಕ್ಕುಡಿ ರಾಮಾನುಜ ಅಯ್ಯಂಗಾರ್, ಕೊನಕೊಲ್ ವಿದ್ವಾನ್ ಪಕ್ಕಿರಿಯ ಪಿಲ್ಲೈ, ತಂಜಾವೂರ್ ವೈದ್ಯನಾಥ ಅಯ್ಯೆರ್, ಮರುಂಗಪುರಿ ಗೊಪಾಲಕೃಷ್ಣ ಅಯ್ಯೆರ್, ಮುಂತಾದ ದೊಡ್ಡ ಸಂಗೀತಗಾರರು ಅಲ್ಲಿಗೆ ಬಂದಿದ್ದರು. ಬಾಲ ಸರಸ್ವತಿ ಅಲಾರಿಪುಯಿಂದ ಪ್ರಾರಂಭಿಸಿ ತಿಲ್ಲಾನದವರೆಗೆ ಥಳಥಳಿಸುವ ಪ್ರದರ್ಶನವನ್ನು ನೀಡಿ, ಅಲ್ಲಿದ್ದ ವಿದ್ವಾಂಸರಿಂದ ಮಹಾನ್ ಕಲಾವಿದೆ ಎಂದು ಹೊಗಳಿಸಿಕೊಂಡರು.

ಈ ಮೇಲಿನ ಪ್ರದರ್ಶನವಾದಮೆಲೆ, ಬಾಲ ಸರಸ್ವತಿಯವರು ತನ್ನನ್ನು ಒಬ್ಬ ಪ್ರಸಿದ್ಧ ನರ್ತಕಿ ಎಂದು ಸ್ಥಾಪಿಸಿಕೊಂಡರು. ನಂತರ ಅವರಿಗೆ ಪ್ರದರ್ಶಕರಾಗಿ ಬಹಳ ಬೇಡಿಕೆ ಇತ್ತು. ಬ್ರಿಟೀಷರು ೧೯೩೦ರಲ್ಲಿ ನೃತ್ಯವನ್ನು ಅಸಭ್ಯವೆಂದು ಕರೆದು "ದೇವದಾಸಿ ಬಿಲ್" ಪರಿಚಯಿಸಿದರು ಈ ಸಮಯದಲ್ಲಿ ಬಾಲ ಸರಸ್ವತಿಯವರು ಬಹಳ ಸಂಕಷ್ಟವನ್ನು ಎದುರಿಸಬೇಕಾಯಿತು. ಹಲವಾರು ಶ್ರೆಷ್ಠ ಜನರು ಬಾಲ ಸರಸ್ವತಿಯವರಿಗೆ ನೃತ್ಯವನ್ನು ನಿಲ್ಲಿಸಲು ಸಲಹೆ ನೀಡಿದರು. ಆದರೆ ಬಾಲ ಸರಸ್ವತಿಯವರು ಅವರ ತಾಯಿ ಜಯ್ಯಮ್ಮ ಹಾಗು ಗುರು ಕಂದಪ್ಪನವರ ಸಹಾಯದಿಂದ ನರ್ತಕಿಯಾಗಿ ಗೆಲುವಿನ ಮೇಲೆ ಗೆಲುವುಗಳನ್ನು ಕಂಡರು. ಹೀಗೆಯ ಅವರು ದಿಗ್ವಿಜಯಿಯಾದರು.

ಬಾಲ ಸರಸ್ವತಿಯವರ ಪಾಂಡಿತ್ಯಪೂರ್ಣ ಕಲೆಯನ್ನು ಕಂಡು ಮದ್ರಾಸ್ ಅಕಾಡೆಮಿಯವರು ಅವರ ಸಂಸ್ಥೆಯಲ್ಲಿ ಒಂದು ಕಾರ್ಯಕ್ರಮವನ್ನು ಏರ್ಪಾಡಿಸಿದರು. ಇದರಿಂದ ನೃತ್ಯಕ್ಕೆ ಅಂಟಿದ್ದ ಕಳಂಕವು ಸಂಪೂರ್ಣವಾಗಿ ತೊಲಗಿ ಹೋಯಿತು. ಬಾಲ ಸರಸ್ವತಿಯವರು ೧೯೬೧ರ ವರೆಗೆ ಭಾರತದೆಲ್ಲೆಡೆ ಕಾರ್ಯಕ್ರಮಗಳನ್ನು ಕೊಟ್ಟು, ೧೯೬೨ರಲ್ಲಿ ಅಮೇರಿಕಾದಲ್ಲಿ ಪ್ರದರ್ಶನವನ್ನು ನೀಡಿದರು. ಹಾಗೆಯೆ ಅಮೇರಿಕಾದಲ್ಲಿ ಉಪನ್ಯಾಸಕ ಪ್ರದರ್ಶನಗಳನ್ನು ಕೊಟ್ಟು ಅಲ್ಲಿ ಬಹಳಷ್ಟು ವಿದ್ಯಾರ್ಥಿಗಳಿಗೆ ಕಲಿಸಿದರು.

ಬಾಲ ಸರಸ್ವತಿಯವರ ನೃತ್ಯ ಕಾರ್ಯಕ್ರಮಗಳಲ್ಲಿ ಅತಿ ಗುಣಮಟ್ಟದ ಜತೆಪರಿಕರ ವಿಸೇಷವಾಗಿತ್ತು. ಅವರ ತಾಯಿಯವರ ಇಂಪಾದ ಧ್ವನಿ ಗಾಯನ ಬೆಂಬಲವಾಗಿ, ಗುರು ಕಂದಪ್ಪನವರ ನಿಖರ ನಟುವಂಗದೊಡನೆ, ಬಾಲ ಸರಸ್ವತಿಯವರು ಸರಿಯಾದ ತಾಳ, ಲಯ ಹಾಗು ಅಭಿನಯದೊಡನೆ ನರ್ತಿಸುತಿದ್ದರು. ಭರತನಾಟ್ಯಕ್ಕೆ ಒಂದು ಗೌರವಾಂನ್ಮಿತ ಸ್ಥಾನವನ್ನು ಕೊಡಿಸಲು ಬಾಲ ಸರಸ್ವತಿಯವರು ಮಾಡಿದ ಸೇವೆಯನ್ನು ಭಾರತ ಸರ್ಕಾರ ಗುರುತಿಸಿ ಅವರಿಗೆ ಪದ್ಮಭೂಷಣ[] ಪ್ರಶಸ್ತಿಯನ್ನು ನೀಡಿದರು. ಭಾರತವು, ಭರತನಾಟ್ಯದಲ್ಲಿ ಪ್ರಮುಖ ಬೆಳಕಾದ ಬಾಲ ಸರಸ್ವತಿಯವರನ್ನು ೧೯೮೪ರಲ್ಲಿ ಕಳೆದುಕೊಂಡಿತು.

ಭರತನಾಟ್ಯವು ದೇವಾಲಯಗಳು ಹಾಗು ಮದುವೆ ಮಂಟಪಗಳಿಗೆ ಸೀಮಿತಗೊಂಡಿದ್ದ ಸಮಯದಲ್ಲಿ, ಅದನ್ನು ಒಂದು ಉತ್ತಮ ಸ್ಥಾನಕ್ಕೇರಿಸಿ, ಮಹಾನ್ ವಿದ್ವಾಂಸರು ಹಾಗು ಸಾಮಾನ್ಯ ಜನರು ಹೊಗಳಲಾರಂಬಿಸುವ ಹಾಗೆ ಮಾಡಿ, ಹಾಗು, ಭರತನಾಟ್ಯವು ಕೆಳಮಟ್ಟದ ಮನೋರಂಜನೆ ಎಂದು ಭಾವಿಸಿದ್ದಾಗ ಅದನ್ನು ಒಂದು ಆಧ್ಯಾತ್ಮಿಕ ಮಟ್ಟಕ್ಕೆ ಏರಿಸಿದ ಖಾತರಿಯನ್ನು ಈ ಕ್ಷೇತ್ರದಲ್ಲಿ ನಿಪುಣರಾದ ಬಾಲ ಸರಸ್ವತಿ ಹಾಗು ಮತ್ತಿತರಿಗೆ ನೀಡಾಲಾಗುತ್ತದೆ.

ಉಲ್ಲೇಖನೆಗಳು

[ಬದಲಾಯಿಸಿ]