ವಿಷಯಕ್ಕೆ ಹೋಗು

ಸದಸ್ಯ:Afseenakela/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಶಿಪಟ್ಣ ಎನ್ನುವುದು ಕರ್ನಾಟಕ ರಾಜ್ಯದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಗ್ರಾಮ. ಕಾಶಿಪಟ್ಣ ಒಂದು ಪರಿಸರ ಸ್ನೇಹಿ ಗ್ರಾಮ. ಕಾಶಿಪಟ್ಣ ಗ್ರಾಮದಲ್ಲಿ ವಾಸಿಸುವ ಜನರು ಹೆಚ್ಛಾಗಿ ಮಣ್ಣಿನ [೧]ಜೊತೆ ಒಡನಾಟವನ್ನು ಹೊಂದಿದ್ದಾರೆ.ಕಾಶಿಪಟ್ಣ ಗ್ರಾಮ ಒಂದು ಹಚ್ಛಹಸಿರಿನಿಂದ ಕೂಡಿರುವ ಪ್ರದೇಶ ಮತ್ತು ಸ್ವಚ್ಛತೆಯಿಂದ ಇರುವ ಪರಿಸರ.ಇಲ್ಲಿ ಒಂದೆರಡು ಕೆರೆ ಮೂಲಗಳಿವೆ.ಕಾಶಿಪಟ್ಣ ಗ್ರಾಮದಲ್ಲಿ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳಿವೆ ಅವುಗಳು ಯಾವುದೆಂದರೆ :ಪಂಚಲಿಂಗೇಶ್ವರ ದೇವಸ್ಥಾನ,ಆದಿಶಕ್ತಿ ದೆವಸ್ಥಾನ,ಮುಹಮ್ಮದೀಯ ಜುಮ್ಮಾ ಮಸ್ಜಿದ್ ತೆರೆಬೀದಿ ಮತ್ತು ಕಾಶಿಪಟ್ಣ.ಕಾಶಿಪಟ್ಣದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ ಇಲ್ಲಿ ಒಟ್ಟು ೪ ಶಿಕ್ಷಣ ಕೇಂದ್ರಗಳಿವೆ ಮೊದಲನೆಯದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಳದಪೇಟೆ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಶಿಪಟ್ಣ,ಸರಕಾರಿ ಕಾಶಿಪಟ್ಣ ದಾರುನ್ನೂರ್ ಎಂಬ ಶಾಲೆ.ಕಾಶಿಪಟ್ಣ ಗ್ರಾಮವು ಪಂಚಾಯತ್ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಬರುತ್ತದೆ.ಪ್ರಸ್ತುತ ೨೦೨೩ ನಲ್ಲಿ ಪಂಚಾಯತ್ ಅಧ್ಯಕ್ಷರಾಗಿ ಶ್ರೀ|ಸತೀಶ್ ಕುಮರ್ ಹಾಗು ಉಪಾಧ್ಯಕ್ಷರಾಗಿ ಶ್ರೀಮತಿ ಶುಭವಿ ಮನೋಜ್ ಕೋಟ್ಯಾನ್ ಅವರು ಅವಿರೊಧವಾಗಿ ಆಯ್ಕೆ ಆಗಿದ್ದಾರೆ.‍‌ಕಾಶಿಪಟ್ಣ ಗ್ರಾಮದಲ್ಲಿಅಭಿವೃದ್ಧಿ ಕಾರ್ಯಗಳು ಬಹಳ ವೇಗದಿಂದ ನಡೆಯುತ್ತಿದೆ. ಇಲ್ಲಿಆದ ಅಭಿವೃದ್ಧಿಗಳು:

  • ಹೊಸ ತರಗತಿಗಳು
  • ಶಾಲೆಗಳಿಗೆ ಹೊಸ ಶೌಚಾಲಯಗಳು
  • ಧಾರ್ಮಿಕ ಸಂಸ್ಠೆಗಳ ಅಭಿವೃದ್ಧಿ
  • ಶಾಲೆಗಳ ಅಭಿವೃದ್ಧಿ


ಉಲ್ಲೇಖ[ಬದಲಾಯಿಸಿ]

  1. ಉದಯವಾಣಿ. ಉದಯವಾಣಿ https://www.udayavani.com/. Retrieved 23 September 2023. {{cite web}}: Missing or empty |title= (help)