ವಿಷಯಕ್ಕೆ ಹೋಗು

ಯಾನೈಮಲೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Acharya Manasa/ಯಾನೈಮಲೈ ಇಂದ ಪುನರ್ನಿರ್ದೇಶಿತ)
ಯಾನೈಮಲೈ ಸಮನಾರ್ ಬೆಟ್ಟಗಳ ಮೇಲಿನಿಂದ ಈ ರೀತಿ ಕಾಣುತ್ತದೆ.
ಯಾನೈಮಲೈ (ಆನೆ ಬೆಟ್ಟ)

ಯಾನೈಮಲೈ (ಎಲಿಫೆಂಟ್ ಹಿಲ್) ಭಾರತದ ತಮಿಳುನಾಡಿನ ಸಂರಕ್ಷಿತ ಸ್ಮಾರಕ ಮತ್ತು ಪ್ರವಾಸಿ ಆಕರ್ಷಣೆಯಾಗಿದೆ.ಇದು ಜೈನ ಶಿಲ್ಪಗಳು, ಶೈವ ದೇವಾಲಯ ಮತ್ತು ವೈಷ್ಣವ ದೇವಾಲಯ ನರಸಿಂಗಂ ಯೋಗ ನರಸಿಂಹ ಪೆರುಮಾಳ್ ದೇವಾಲಯ ಇದೆ.

ವ್ಯುತ್ಪತ್ತಿ

[ಬದಲಾಯಿಸಿ]

ಬೆಟ್ಟದ ಹೆಸರು ತಮಿಳು ಪದ ಯಾನೈ ಅಂದರೆ ಆನೆ ಮತ್ತು ಮಲೈ ಅಂದರೆ ಬೆಟ್ಟ ದಿಂದ ಬಂದಿದೆ. ಈ ಬೆಟ್ಟವು ಆನೆಯು ಕುಳಿತ ಭಂಗಿಯಲ್ಲಿರುವಂತೆ ಕಾಣುತ್ತದೆ. [] ಈ ಸ್ಥಳವು ೨೦೦೦ ವರ್ಷಗಳಿಂದ ಈ ಹೆಸರನ್ನು ಹೊಂದಿದೆ.

ಯಾನೈಮಲೈ ಭಾರತದ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿದೆ. ಇದು ಮಧುರೈ ಮಟ್ಟುತಾವನಿ ಬಸ್ ನಿಲ್ದಾಣದಿಂದ ೧೦ಕಿ.ಮೀ ದೂರದಲ್ಲಿದೆ. ಬೆಟ್ಟವು ೩ಕಿ.ಮೀ ಉದ್ದ ಮತ್ತು ೯೦ ಮೀ ಎತ್ತರ ಇದೆ. []

ಬಗ್ಗೆ

[ಬದಲಾಯಿಸಿ]
ಜೈನ ಶಿಲ್ಪ

ಯಾನೈಮಲೈ ಅನ್ನು ತಮಿಳು ಜೈನರು ಪವಿತ್ರ ಸ್ಥಳವೆಂದು ಪರಿಗಣಿಸಿದ್ದಾರೆ. [] ಪಾಂಡ್ಯ ರಾಜವಂಶದ ಅವಧಿಯಲ್ಲಿ ಜೈನ ಸನ್ಯಾಸಿಗಳು ಇಲ್ಲಿ ವಾಸಿಸುತ್ತಿದ್ದರು. ಬೆಟ್ಟದ ತುದಿಯಲ್ಲಿ ಮಹಾವೀರ, ಗೋಮಟೇಶ್ವರ ಮತ್ತು ಜೈನ ಸನ್ಯಾಸಿಗಳು ವಿನ್ಯಾಸಗೊಳಿಸಿದ ಇತರ ತೀರ್ಥಂಕರರ ಜೈನ ಬಾಸ್ ಉಬ್ಬು ಶಿಲ್ಪಗಳನ್ನು ಹೊಂದಿರುವ ಗುಹೆಗಳನ್ನು ಕಾಣಬಹುದು. ಸನ್ಯಾಸಿಗಳು ವಿಶ್ರಾಂತಿಗಾಗಿ ಬಳಸುತ್ತಿದ್ದ ಕಲ್ಲಿನ ಹಾಸಿಗೆಗಳೂ ಇವೆ. [] ಬೆಟ್ಟದ ಮೇಲೆ ತಮಿಳು-ಬ್ರಾಹ್ಮಿ ಮತ್ತು ವಟ್ಟೆಲೆಟ್ಟು ಶಾಸನಗಳನ್ನು ಕಾಣಬಹುದು. []

ಲಾಡನ್ ಗುಹೆ ದೇವಾಲಯ

ಎರಡು ಹಿಂದೂ ದೇವಾಲಯಗಳು ತಪ್ಪಲಿನಲ್ಲಿವೆ ಒಂದು ಲಾಡನ್ ಗುಹೆ ದೇವಾಲಯ (ಲಡಾನ್ ಕೊಯಿಲ್), ಮುರುಗನಿಗೆ ಸಮರ್ಪಿತವಾದ ಶೈವ ದೇವಾಲಯ ಮತ್ತು ಇನ್ನೊಂದು ಯೋಗ ನರಸಿಂಹ ದೇವಾಲಯ, ವಿಷ್ಣುವಿಗೆ ಸಮರ್ಪಿತವಾದ ವೈಷ್ಣವ ದೇವಾಲಯ. [] ಇವೆರಡೂ ೮ನೇ ಶತಮಾನಕ್ಕೆ ಸೇರಿದ ಪಾಂಡ್ಯರು ನಿರ್ಮಿಸಿದ ಬಂಡೆಯಿಂದ ಕತ್ತರಿಸಿದ ದೇವಾಲಯಗಳಾಗಿವೆ. ಉಗ್ರ ನರಸಿಂಹ ದೇವಾಲಯವಿರುವ ಸ್ಥಳವನ್ನು ನರಸಿಂಗಂ ಎಂದು ಕರೆಯಲಾಗುತ್ತದೆ. [] ದೇವಾಲಯಗಳಲ್ಲಿನ ತಮಿಳು-ಬ್ರಾಹ್ಮಿ ಮತ್ತು ವಟ್ಟೆಲೆಟ್ಟು ಶಾಸನಗಳು ಅವುಗಳ ಇತಿಹಾಸವನ್ನು ತೋರಿಸುತ್ತವೆ. [] [] ಜೈನ ದೇವಾಲಯವನ್ನು ಭಾರತೀಯ ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. [] []

ಬೆಟ್ಟವು ಗ್ರಾನೈಟ್‌ನಿಂದ ಸಮೃದ್ಧವಾಗಿದೆ ಮತ್ತು ಅಕ್ರಮ ಕಲ್ಲುಗಣಿಗಾರಿಕೆಯಿಂದ ಹಾನಿಯಾಗಿದೆ. [] ೨೦೧೦ ರಲ್ಲಿ ತಮಿಳುನಾಡು ಸರ್ಕಾರವು ಬೆಟ್ಟದ ಮೇಲೆ ಶಿಲ್ಪಕಲಾ ಉದ್ಯಾನವನ್ನು ಸ್ಥಾಪಿಸಲು ಪ್ರಯತ್ನಿಸಿತು ಆದರೆ ಸ್ಥಳೀಯರು ಮತ್ತು ಕಾರ್ಯಕರ್ತರು ಈ ಕಲ್ಪನೆಯನ್ನು ವಿರೋಧಿಸಿದ ನಂತರ ಈ ಕಾರ್ಯ ಸ್ಥಗಿತಗೊಂಡಿತು. [೧೦] [೧೧] [೧೨]

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Sculptor moves HC for setting up art city on Yanaimalai". The Times of India. 2 December 2011. Archived from the original on 2 February 2014. Retrieved 31 January 2014.
  2. "Tamil Nadu / Madurai News : PIL against proposed alterations to Yanaimalai". The Hindu. 11 February 2010. Archived from the original on 15 ಫೆಬ್ರವರಿ 2010. Retrieved 31 January 2014.. ದಿ ಹಿಂದೂ. 11 February 2010. Archived from the original Archived 2010-02-15 ವೇಬ್ಯಾಕ್ ಮೆಷಿನ್ ನಲ್ಲಿ. on 15 February 2010. Retrieved 31 January 2014.
  3. "Anaimalai". Jainheritagecentres.com. Archived from the original on 2 ಫೆಬ್ರವರಿ 2014. Retrieved 31 January 2014.
  4. ೪.೦ ೪.೧ "Metro Plus Madurai / Travel : Monumental mount". The Hindu. 5 February 2005. Archived from the original on 23 May 2005. Retrieved 31 January 2014.
  5. ೫.೦ ೫.೧ "Metro Plus Madurai / Travel : Of caves and temples inside". The Hindu. 3 May 2008. Archived from the original on 6 ಮೇ 2008. Retrieved 31 January 2014.. ದಿ ಹಿಂದೂ. 3 May 2008. Archived from the original Archived 2008-05-06 ವೇಬ್ಯಾಕ್ ಮೆಷಿನ್ ನಲ್ಲಿ. on 6 May 2008. Retrieved 31 January 2014.
  6. ೬.೦ ೬.೧ "The cave temple at Yanaimalai". The Hindu. 22 August 2003. Archived from the original on 17 January 2004. Retrieved 31 January 2014.
  7. "List of Ancient Monuments and Archaeological Sites and Remains of Arunachal Pradesh". Archaeological Survey of India. Retrieved 31 January 2014.
  8. "Monuments – Temples -Ladan Koil (Rock-Cut)- Anaimalai". Department of Archaeology, Government of Tamil Nadu. Retrieved 31 January 2014.
  9. Karthikeyan, D (23 December 2011). "Plea to keep Yanaimalai intact". The Hindu. Retrieved 31 January 2014.
  10. "Tamil Nadu / Madurai News : Proposed alterations to paanaialai irk activists". The Hindಉ. 9 February 2010. Archived from the original on 4 ಫೆಬ್ರವರಿ 2014. Retrieved 31 January 2014.. ದಿ ಹಿಂದೂ. 9 February 2010. Archived from the original Archived 2014-02-04 ವೇಬ್ಯಾಕ್ ಮೆಷಿನ್ ನಲ್ಲಿ. on 4 February 2014. Retrieved 31 January 2014.
  11. "No order issued to set up sculpture park". The Hindu. 12 February 2010. Retrieved 31 January 2014.
  12. "PIL to establish 'Art Sculpture City' in Yanaimalai dismissed". The Hindu. 4 April 2013. Retrieved 31 January 2014.
"https://kn.wikipedia.org/w/index.php?title=ಯಾನೈಮಲೈ&oldid=1138565" ಇಂದ ಪಡೆಯಲ್ಪಟ್ಟಿದೆ