ಸದಸ್ಯ:AVINASH PONNAPPA/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ಕರ್ನಾಟಕದ ತಿನಿಸುಗಳು[ಬದಲಾಯಿಸಿ]

ಉತ್ತರ ಕರ್ನಾಟಕದ ತಿನಿಸುಗಳು

ಎಲ್ಲರಿಗೂ ಅವರ ದಿನ ನಿತ್ಯ ಊಟದ ಶೈಲಿಗಿಂತ ಬೇರೆ ಶೈಲಿ ಇಷ್ಟವಾಗುವುದು ಸಹಜ.ಹಾಗೆಯೇ  ದಕ್ಷಿಣ ಕರ್ನಾಟಕದವರಿಗೆ ಉತ್ತರ ಕರ್ನಾಟಕದ ಊಟ ತುಂಬ ಇಷ್ಟ ವಾಗುವುತ್ತದೆ.ನನ್ನ ಅಪ್ಪ ಪೊಲೀಸ್ ಸೇವೆಯಲ್ಲಿದುದರ ಕಾರಣದಿಂದ ಕೆಲಸದ ಮೇಲೆ ಉತ್ತರ ಕರ್ನಾಟಕದ ಪ್ರದೇಶಕ್ಕೆ ಹೋಗುತ್ತಿದ್ದರು.ಅಲ್ಲಿಗೆ ಹೋದಾಗ  ಅಲ್ಲಿನ ತಿನಿಸುಗಳನ್ನು ತಂದು ನನಗೆ ತಿನ್ನಿಸುತ್ತಿದ್ದರು.ನನಗೆ ವಯಕ್ತಿಕವಾಗಿ ಇಷ್ಟವಾಗುವ ಉತ್ತರ ಕರ್ನಾಟಕದ ತಿಂಡಿ ಎಂದರೆ ಕಡಕ್ ರೊಟ್ಟಿ ಮತ್ತು ಖಾರ ಚಟ್ನಿ ಮತ್ತು ಸಿಹಿ ತಿಂಡಿಗಳಲ್ಲಿ ಕುಂದ ಮತ್ತು ಧಾರವಾಡ ಪೇಡ.

ಉತ್ತರ ಕರ್ನಾಟಕದ ತಿಂಡಿ, ಊಟಗಳ ಬಗ್ಗೆ ಮಾತನಾಡುವುದಾದರೆ:

ಜೋಳದ ರೊಟ್ಟಿ :[ಬದಲಾಯಿಸಿ]

ಉತ್ತರ ಕರ್ನಾಟಕದ ಊಟ ಎಂದರೆ ನಮಗೆ ಮೊದಲು ತಲೆಗೆ ಬರುವ ಊಟ ಜೋಳದ ರೊಟ್ಟಿ.ಇದನ್ನು ಜೋಳದ ಹೀಟ್ಟಿನಿಂದ ಮಾಡಲಾಗುತ್ತದೆ.ಈ ರೊಟ್ಟಿ ಬದನೆಕಾಯಿ ಎಣ್ಣೆಗಾಯಿ ಜೊತೆ ಚನ್ನಾಗಿ ಹೋಲುತ್ತದೆ.ವಾರದಲ್ಲಿ ೨-೩ ಬಾರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಜೋಳದಲ್ಲಿ ಕಾರ್ಬೋಹೈಡ್ರಾಟ್ಸ್ ಅಂಶ ಹೆಚ್ಚು ಇರುವುದರಿಂದ ತಿಂದ ಕೂಡಲೇ ಶಕ್ತಿ ಬರುತ್ತದೆ. ಜೋಳದಲ್ಲಿ ನಾರಿನ ಅಂಶ ಕೂಡ ಅಧಿಕವಾಗಿರುವುದರಿಂದ ಬೇಗ ಜೀರ್ಣವಾಗುತ್ತದೆ.  ಜೋಳದ ರೋಟಿಗೆ ಎಣ್ಣೆಗಾಯಿ, ಶೇಂಗಾ ಚಟ್ನಿ, ಬೆಳ್ಳುಳ್ಳಿ ಚಟ್ನಿ ಮುಂತಾದವುಗಳ ಜೊತೆ ಬಹಳ ಚೆನ್ನಾಗಿರುತ್ತದೆ.

ಮಂಡಕ್ಕಿ:[ಬದಲಾಯಿಸಿ]

ಮಂಡಕ್ಕಿ ಉತ್ತರ ಕರ್ನಾಟಕದ ಸಂಜೆಯ ಚಾಯಿ ವೇಳೆಯ ತಿಂಡಿಯಾಗಿರುತದೆ. ಇದನ್ನು ಕಡಲೆ ಪುರಿ ಇಂದ ಮಾಡಲಾಗುತ್ತದೆ. ಮಂಡಕ್ಕಿಯಿಂದ ವಿವಿಧ ರೀತಿಯ ಉಪಹಾರಗಳನ್ನು ಮಾಡುತ್ತಾರೆ. ಮಂಡಕ್ಕಿಯಿಂದ ಬೇಲ್ ಮಾಡುತ್ತಾರೆ. ಮಂಡಕ್ಕಿಗೆ ಒಗ್ಗರಣೆ ಹಾಕಿದರೆ ಬಹಳ ರುಚಿಕರವಾಗಿರುತ್ತದೆ.

ಚಟ್ನಿ ಪುಡಿ:[ಬದಲಾಯಿಸಿ]

ಹೆಸರೇ ಹೇಳುವಂತೆ ಚಟ್ನಿ ಯನ್ನು ಪುಡಿಯ ರೂಪ ದಲ್ಲಿ ಮಾಡಲಾಗುತ್ತದೆ.ಈ ಚಟ್ನಿ ಪುಡಿ ಎಲ್ಲಾ ಊಟದ ಜೊತೆಗೂ ಹೊಂದಿಕೊಳ್ಳುತ್ತದೆ. ಇದನ್ನು ಕಡಲೆ ಕಾಯಿ,ಕರದ ಪುಡಿ,ಬೆಲ್ಲ, ಇತ್ಯಾದಿ ಪದಾರ್ಥಗಳಿಂದ ಮಾಡಲಾಗುತ್ತದೆ. ಈ ಪುಡಿ ತಿನ್ನಲು ಖಡಕ್ ರೋಟಿ ಜೊತೆ ಬಹಳ ಸ್ವಾದಿಷ್ಟವಾಗಿರುತ್ತದೆ.

ಎಣ್ಣೆಗಾಯಿ:[ಬದಲಾಯಿಸಿ]

ಎಣ್ಣೆಗಾಯಿ ಜೋಳದ ರೊಟ್ಟಿ ಬಾಯಲ್ಲಿ ಕರಗುವುದನ್ನು ನೆನೆದರೆ ಎಂತವರ ಬಾಯಲ್ಲೂ ನೀರು ಸೋರುವುದು ಕಚಿತ.ಎಣ್ಣೆಗಾಯಿಯ ಮುಕ್ಯ ಪದಾರ್ಥ ಬದನೆಕಾಯಿ.

ಇದ್ದನ್ನು ದಕ್ಷಿಣ ಕರ್ನಾಟಕದಲ್ಲಿ ರೊಟ್ಟಿ ಮತ್ತು ಚಪಾತಿ ಜೊತೆ ತಿನ್ನುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಜೊತೆ ಸವಿಯುತ್ತಾರೆ. ಅದರ ರುಚಿ ವರ್ಣಿಸಲಾರದು. ಉತ್ತರ ಕರ್ನಾಟಕದ ಯಾವುದೇ ಹೋಟೆಲುಗಳಿಗೆ ಹೋದರು ಅವರ ಊಟದ ಪಟ್ಟಿಯಲ್ಲಿ ಜೋಳದ ರೋಟ್ಟಿ, ಎಣ್ಣೆಗಾಯಿ ಇದ್ದೆ ಇರುತ್ತದೆ.

ಗಿರ್ಮಿಟ್:[ಬದಲಾಯಿಸಿ]

ಮಂಡಕ್ಕಿಯಂತೆ ಇದ್ದನ್ನು ಹಲವು ದಿನಗಳ ಕಾಲ ಇರಿಸಲು ಆಗುವುದಿಲ್ಲ. ಗಿರ್ಮಿಟ್ ಮಾಡಲು ಮೊದಲಿಗೆ  ಈರುಳ್ಳಿ, ಟೊಮ್ಯಾಟೋ, ಉಪ್ಪು, ಹುಳಿ, ಖಾರ ಎಲ್ಲ ಸೇರಿಸಿ ಗೊಜ್ಜು ತಯಾರಿಸಿಕೊಂಡು ಅದಕ್ಕೆ ಮಂಡಕ್ಕಿ ಹಾಕಿ ಕಲಸಿ, ಮೆಣಸಿನ ಬಜ್ಜಿಯೊಂದಿಗೆ ಸವಿದರೆ ತುಂಬಾ ರುಚಿಯಾಗಿರುತ್ತದೆ. ಇದನ್ನು ಕೆಲವರು ಮೊಸರಿನೊಂದಿಗೆ ಕೂಡ ಸವಿಯುತ್ತಾರೆ.

ಬುತ್ತಿ:[ಬದಲಾಯಿಸಿ]

ಇದು ನೋಡಲು ಮೊಸರನ್ನ ತರ ಕಂಡರು, ಇದನ್ನು ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಬುತ್ತಿಗೆ ಮುಖ್ಯವಾಗಿ ಬೆಳ್ಳುಳ್ಳಿ, ಈರುಳ್ಳಿ, ಮತ್ತು ಹಸಿ ಮೆಣಸಿನಕಾಯಿ ಹಾಕಿ ಮಾಡುತ್ತಾರೆ. ಇದನ್ನು ಖಾರ ಚಟ್ನಿ ಅಥವಾ ಚಟ್ನಿ ಪುಡಿ ಜೊತೆ ಸೇವಿಸುತ್ತಾರೆ.

ಕರಿಂಡಿ:[ಬದಲಾಯಿಸಿ]

ಇದು ಒಂದು ಬಗೆಯ ಚಟ್ನಿ ಪುಡಿ. ಇದನ್ನು ಶುಂಠಿ, ಮೆಂತ್ಯೆ ಕಾಲು, ಹಸಿ ಮೆಣಸಿನ ಕಾಯಿ, ಮತ್ತು ನೀರನ್ನು ಬೆರೆಸಿ ಮಾಡುತ್ತಾರೆ.


ಇಷ್ಟಲ್ಲದೆ, ಬೇಸನ್ ಲಾಡೂ, ಮಾದ್ಲಿ, ಜೋಳದ ದೋಸೆ, ರಂಜಕ,  ಶೇಂಗಾ ಹೋಳಿಗೆ, ಬೆಳಗಾಂ ಕುಂಡ, ಪಾಲಕ್ ಪಲ್ಲೆ,  ಮೆಂತೆ ಕಡುಬು, ಹಿಟ್ಟಿನ ವಡೆ, ದಾವಣಗೆರೆ ಬೆಣ್ಣೆ ದೋಸೆ, ಮೆಂತೆ ಪಲ್ಲೆ, ಮೆಂತ್ಯೆ ಸೋಪ್ಪಿನ ಚಪಾತಿ, ಝುನ್ಕಾ ವಡೆ ಮುಂತಾದವು ಬಹಳ ಪ್ರಸಿದ್ಧ, ರುಚಿಕರ ಹಾಗೂ ತುಂಬಾ ಆರೋಗ್ಯಕರ.

ಅಂತ್ಯದಲ್ಲಿ,ನಮ್ಮ ಈ ಫಾಸ್ಟ್ ಫುಡ್ ಜೀವನ ಶೈಲಿಯಲ್ಲಿ ನಮ್ಮ ಜೀವನದಲ್ಲಿ ಅಪರೂಪಕ್ಕೆ ಇಂತಹ ಉತ್ತರ ಕರ್ನಾಟಕದ ಊಟ ನಮ್ಮ ಬಾಯಿಗೆ ತಗಲುವುದು ಬಹಳ ವಿಶೇಷವಾದ ಸಂಗತಿಯಾಗಿರುತ್ತದೆ. ಉತ್ತರ ಕರ್ನಾಟಕದ ತಿನಿಸುಗಳು ರುಚಿಗೆ ಮಾತ್ರ ಪ್ರಸಿದ್ಧ ಅಲ್ಲ ಆದರೆ ಬಹಳ ಆರೋಗ್ಯಕಾರಿಯೂ ಹೌದು. ಉತ್ತರ ಕರ್ನಾಟಕ ಈ ತಿನಿಸುಗಳಿಂದ ಅಲ್ಲಿ ವಾಸಿಸುವ ಜನರು ಬಹಳ ಶಕ್ತಿಶಾಲಿಗಳು ಹಾಗೂ ಆರೋಗ್ಯವಂತರು ಆಗಿರುತ್ತಾರೆ.

ಉಲ್ಲೇಖ[ಬದಲಾಯಿಸಿ]

<r> https://www.crazymasalafood.com/20-best-north-karnataka-dishes/ </r>

<r> http://vegrecipesofkarnataka.com/north-karnataka-recipes.php </r>