ವಿಷಯಕ್ಕೆ ಹೋಗು

ಸದಸ್ಯ:ARLAPADAVU

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹುಮುಖ ಪ್ರತಿಭೆಗಳ ಗಡಿನಾಡಿನ ಸಾಧಕ ಡಾ|| ಹಾಜಿ ಯಸ್ ಅಬೂಬಕ್ಕರ್ ಆರ‍್ಲಪದವು ( DR.HAJI.S.ABUBACKER ARLAPADAVU

[ಬದಲಾಯಿಸಿ]

                                   

[ಬದಲಾಯಿಸಿ]

ತನ್ನ ಸಂಘಟನೆ ,ಕ್ರಿಯಾ ಶೀಲತೆ, ಸಾಮಾಜಿಕ ಕಳಕಳಿ, ನಾಡು ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ ,ಪತ್ರಿಕೋಧ್ಯಮದ ಬಗ್ಗೆ ಅಪಾರ ಕಳಕಳಿ ಇರುವ, ಈಗಾಗಲೇ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿರುವ ಗಡಿನಾಡಿನ ಬಗ್ಗೆ ಅಪಾರ ಕಾಳಜಿಯಿಂದ ಕರ‍್ಯನಿರ್ವಹಿಸುವ ಕನ್ನಡದ ಕಟ್ಟಾಳು ಬಹುಮುಖ ಪ್ರತಿಭೆಗಳ ಸಂಗಮ, ಯುವ ಸಾಧಕ ನಮ್ಮ ಗಡಿನಾಡು ಪ್ರದೇಶದ ಪುತ್ತೂರಿನ ಪಾಣಾಜೆಯ ಆರ‍್ಲಪದವಿನಲ್ಲಿದ್ದಾರೆ. ಅವರು ತನ್ನ ಹೆಸರಿನ ಜತೆಗೆ ತನ್ನೂರಿನ ಹೆಸರನ್ನೂ ಹತ್ತೂರಿಗೂ ತಲುಪುವಂತೆ ಮಾಡಿದ್ದಾರೆ ಅವರೇ ಗಡಿನಾಡ ಧ್ವನಿ ಕನ್ನಡ ಮಾಸ ಪತ್ರಿಕೆಯ ಪ್ರಕಾಶಕರೂ, ಸಂಪಾದಕರೂ, ಹತ್ತು ಹಲವು ಜನಪರ ಕೆಲಸ ಕರ‍್ಯಗಳಲ್ಲಿ ಸಕ್ರಿಯರಾಗಿರುವ ಗೌರವ ಡಾಕ್ಟರೇಟ್ ಬಿರುದಾಂಕಿತ, ಭಾರತ ವಿಕಾಸ ರತ್ನ, ಕರ್ನಾಟಕ ಜ್ಯೋತಿ, ಕರ್ನಾಟಕ ರತ್ನ, ಸುವರ್ಣ ಕರ್ನಾಟಕ ಪುರಸ್ಕೃತ , ಪುತ್ತೂರಿನ ಹೆಮ್ಮೆಯ “ಯುವ ಪುತ್ರ” ಬಿರುದಾಂಕಿತ ಡಾ ಹಾಜಿ ಯಸ್ ಅಬೂಬಕ್ಕರ್ ಆರ‍್ಲಪದವು.  ತಂದೆ ಯಸ್ ಮುಹಮ್ಮದ್ ಹಾಜಿ, ತಾಯಿ ಯಸ್ ಬೀಪಾತುಮ್ಮ ಹಜ್ಜುಮ್ಮ ಇವರ ಆಶೀರ್ವಾದದ ಬಲದಿಂದ ಇಂದು ಯುವ ಸಂಘಟನೆಗಳಲ್ಲಿ ಸಮಾಜಮುಖೀ ಚಿಂತನೆಗಳಲ್ಲಿ “ಸೈ” ಎನಿಸಿಕೊಂಡಿರುವ ಡಾ||ಹಾಜಿ ಯಸ್ ಅಬೂಬಕ್ಕರ್ ಆರ‍್ಲಪದವು ಅವರ ಸಾಧನೆಗೆ ದೊರೆತ ಪ್ರಶಸ್ತಿ ಬಹುಮಾನ.ಅಭಿನಂದನಾ ಪತ್ರ ಸನ್ಮಾನಗಳು ಸುಮಾರು ೧೬೫ ಕ್ಕಿಂತಲೂ ಮಿಕ್ಕಿದೆ. ಸಾಮಾಜಿಕ ಕಳಕಳಿಯುಳ್ಳ ಅಬೂಬಕ್ಕರ್ ರ‍್ಲಪದವು ಇವರು ಪರಿಸರ,ಶೈಕ್ಷಣಿಕ ವೈಜ್ಞಾನಿಕ ಸಾಹಿತ್ಯ ರಂಗದಲ್ಲೂ ಸದಾ ಗುರುತಿಸಿಕೊಂಡವರು. ಸರ್ವ ಧರ್ಮ ಸಮನ್ವಯತೆಗೆ ಒತ್ತು ಕೊಟ್ಟು , ನೆಲ ಜಲ ಭಾಷೆಯ ಬಗ್ಗೆ ಕರ‍್ಯ ಪ್ರವೃತ್ತರಾಗಿರುವ ಇವರು ಸದಾ ಗಡಿನಾಡಿನ ಬಗ್ಗೆ ಧ್ವನಿ ಎಬ್ಬಿಸುತ್ತಾ ಬರುತ್ತಿದ್ದಾರೆ. ತನ್ನ ಜೀವನದ ಮುಕ್ಕಾಲು ಭಾಗ ಸಮಯವನ್ನು ಸಮಾಜಕ್ಕೆ ಅರ್ಪಿಸುತ್ತಾ ಇರುವ ಇವರು ಗಡಿನಾಡಿನ ನೆಲ ಜಲ ಭಾಷೆ ಸಂಸ್ಕೃತಿ  ಉಳಿವಿಗಾಗಿ ಜಾಗ್ರತಿ  ಹಾಗೂ ಸಮಜ ಸೇವೆಯನ್ನು ಮಾಡುತ್ತಾ ಬರುವವರಾಗಿರುವರು. ಅಲ್ಲದೆ ಶೈಕ್ಷಣಿಕ ರಂಗದಲ್ಲಿ, ವೈಜ್ಞಾನಿಕ ರಂಗದಲ್ಲೂ ತನ್ನನ್ನು ತಾನು ತೊಡಗಿಸಿ ಕೊಂಡವರಾಗಿರುವರು. ಗಡಿನಾಡ ಪ್ರಗತಿ ಯುವಕ ಮಂಡಲವನ್ನು ಸ್ಥಾಪಿಸುವುದರ ಮೂಲಕ ಗಡಿನಾಡ ಸಮಸ್ಯೆಗಳಿಗೆ ಸರಕಾರದ ಮನಮುಟ್ಟಿಸುವ ಕೆಲಸಗಳನ್ನು ಮಾಡುತ್ತಾ , ತದನಂತರ ಇದರಿಂದ ಸ್ಫೂರ್ತಿಗೊಂಡ ಇವರು ಗಡಿನಡ ಧ್ವನಿ ಎಂಬ ಪತ್ರಿಕೆಯನ್ನು ೨೦೦೯ ಏಪ್ರಿಲ್ ೧೨ ತನ್ನ ಮಗಳ ಹುಟ್ಟು ಹಬ್ಬದಂದು ಗಡಿನಡ ಹೋರಾಟಗಾರ ನಾಡೋಜ ಡಾ| ಕಯ್ಯಾರ ಕಿಂಞಣ್ಣ ರೈ ಇವರ ದಿವ್ಯ ಹಸ್ತದಲ್ಲಿ ಬದಿಯಡ್ಕ ಕವಿತಾ ಕುಟೀರದಲ್ಲಿ ಲೋಕಾರ್ಪಣೆ ಗೊಳಿಸಿ ತನ್ಮೂಲಕ ಗಡಿನಾಡ ಧ್ವನಿಯನ್ನು ಮೊಳಗಿಸುತ್ತಲೇ ಬಂದಿರುವ ಎಲ್ಲಾ ರಂಗದಲ್ಲೂ ಕಾಣ ಸಿಗುವ , ವೃತ್ತಿ-ಪ್ರವೃತ್ತಿಗಳೆರಡನ್ನೂ ಕನ್ನಡಮ್ಮನ ಸೇವೆಗೆ ಮುಡಿಪಾಗಿಟ್ಟುಕೊಂಡು ದಣಿವರಿಯದೆ ದುಡಿಯುತ್ತಿರುವ ಗಡಿನಾಡಿನ ಓರ್ವ ಬಹು ಮುಖ ಪ್ರತಿಭೆ ಡಾ||ಹಾಜಿ ಯಸ್ ಅಬೂಬಕ್ಕರ್ ಆರ‍್ಲಪದವು . ಇವರು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳನ್ನು ಆಶಿಸದೆ ಸ್ವಯಂಸ್ಪೂರ್ತಿ ಸಹಜತೆಗಳಿಂದ ಪರಿಸರ, ಕನ್ನಡ ಪರಿಚಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು ಸರಳತೆ, ವಿನಯ ಸಂಪನ್ನತೆ ಮತ್ತು ಸ್ನೇಹ ಶೀಲ ವ್ಯಕ್ತಿತ್ವಗಳಿಂದಾಗಿ ಹಿರಿಯರನ್ನು , ಕಿರಿಯರನ್ನು ಮತ್ತು ಸಮವಯಸ್ಕರನ್ನು ಏಕ ಪ್ರಕಾರವಾಗಿ ಒಲಿಸಿಕೊಂಡು ತನ್ನ ವಾಕ್ಚಾತರ‍್ಯದಲ್ಲೂ ಸರ್ವರ ಮನಸೂರೆಗೊಂಡವರಾಗಿರುವರು. ಗಡಿನಾಡಿನ ಸೇವೆಗಾಗಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ನ್ನು ಗಡಿನಾಡಿನಲ್ಲಿ ನೋಂದಾವಣೆಗೊಳಿಸಿ, ಗಡಿನಾಡ ಧ್ವನಿ ಪತ್ರಿಕೆಯ ಮೂಲಕ ಕರ್ನಾಟಕ ಗಡಿನಾಡ ಸಮ್ಮೇಳನವನ್ನು ಪ್ರಥಮವಾಗಿ ಕಾಸರಗೋಡಿನಲ್ಲಿ ಆಯೋಜಿಸಿ ದೇಶದ ಮೂಲೆ ಮೂಲೆಗಳಲ್ಲಿರುವ ಸಾಹಿತ್ಯಾಸಕ್ತರನ್ನು. ಹೋರಾಟಗಾರರನ್ನು ಒಟ್ಟುಗೂಡಿಸಿ ಮಹಾಸಮ್ಮೇಳನವನ್ನು ಏರ್ಪಡಿಸಿದ ಖ್ಯಾತಿ ಇವರದು. ಅದರಂತೆ ಪತ್ರಿಕೆಯ ವಾರ್ಷಿಕೋತ್ಸವದ ಸವಿನೆನಪಿಗಾಗಿ ಎಂಬAತೆ ದ್ವಿತೀಯ ಸಮ್ಮೇಳನ ದೇರಳಕಟ್ಟೆ ವಿದ್ಯಾರತ್ನ ವಿದ್ಯಾಲಯದಲ್ಲಿ , ಮೂರನೇ ಸಮಏಳನ ಬಾಳೆಕೋಡಿಯ ಶ್ರೀ ಶಿಲಾಂಜನ ಕ್ಷೇತ್ರದಲ್ಲಿ, ನಾಲ್ಕನೇ ಸಮ್ಮೇಳನ ಗಾಳಿಮುಖ ಖಲೀಲ್ ಸಲಾಹ್ ವಿದ್ಯಾಸಂಸ್ಥೆಯಲ್ಲಿ, ಐದನೇ ಮಹಾಸಮ್ಮೇಳನ ಪುತ್ತೂರಿನ ಪ್ರತಿಷ್ಟಿತ ಬಂಟರ ಭವನದಲ್ಲಿ , ಸರಕಾರದ ಯಾವುದೇ ಅನುದಾನಗಳಿಲ್ಲದೆ ಯಶಸ್ವಿ ಸಮ್ಮೇಳನವನ್ನು ಏರ್ಪಡಿಸಿ ಸದಾ ಕನ್ನಡದ ಕೈಂರ‍್ಯದಲ್ಲೇ ತೊಡಗಿರುವರು. ಇವರ ಕರ‍್ಯ ವೈಖರಿಗಳನ್ನು ಮನಗಂಡು ಒಲಿದು ಬಂದ ಪ್ರಶಸ್ತಿ ಸನ್ಮಾನಗಳು ಅಪರ. ಅದರಲ್ಲಿ ಚುಟುಕು ವಿವರಗಳನ್ನು ಮಾತ್ರ ದಾಖಲಿಸುತ್ತೇವೆ.

ಭಾರತ ಸರಕಾರದ ನೀತಿ ಆಯೋಗದ ಅಡಿಯಲ್ಲಿರುವ ಸಂಸ್ಥೆಯಿAದ ಧಾರವಾಡ ಯುನಿವರ್ಸಿಟಿಯಲ್ಲಿ ಕೊಡಮಾಡಿದ ಪ್ರತಿಷ್ಟಿತ ಗೌರವ ಡಾಕ್ಟರೇಟ್ (ಗಡಿನಾಡ ಸೇವೆ ಹಾಗೂ ಸಾಮಾಜಿಕ ಕಳಕಳಿ ಮತ್ತು ಶೈಕ್ಷಣಿಕ ರಂಗದ ಸೇವೆಗಾಗಿ), ಭಾರತ ವಿಕಾಸ ರತ್ನ ರಾಷ್ಟç ಪ್ರಶಸ್ತಿ -ನವದೆಹಲಿ, ಡಾ||ಬಿ.ಆರ್ ಅಂಬೇಡ್ಕರ್ ನ್ಯಾಷನಲ್ ಫೆಲೋಶಿಫ್ ಆವಾರ್ಡ್-ನವ ದೆಹಲಿ, ಕನ್ನಡ ಶ್ರೀ ರಾಷ್ಟç ಪ್ರಶಸ್ತಿ ಮೈಸೂರು (ಕನ್ನಡದ ನೆಲ,ಜಲ,ಭಾಷೆಯ ಸೇವೆಗಾಗಿ),ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಚಿತ್ರದುರ್ಗಾ, ರ‍್ಯಭಟ ಪ್ರಶಸ್ತಿ, ಕರ್ನಾಟಕ ಜ್ಞಾನ ಚಕ್ರವರ್ತಿ ಪ್ರಶಸ್ತಿ , ಶ್ರೀ ಗುರುದೇವದತ್ತ ಸಂಸ್ತಾನಮ್ ಒಡಿಯೂರು ವಿಜಯ ರಜತ ಸಂಭ್ರಮ-ಮಹಾ ಕುಂಭಾಬಿಷೇಕ-ರಥೋತ್ಸವದ ಸುಸಂದರ್ಭದಲ್ಲಿ ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಸನ್ಮಾನ, ಅಮೋಘ ವರ್ಷ ಪ್ರಶಸ್ತಿ ಬೆಂಗಳೂರು, ಡಾ||ಕೆ.ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ ಬೆಂಗಳೂರು, ಡಾ||ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ (ಗಡಿನಾಡ ಸಮಾಜ ಸೇವೆಗಾಗಿ), ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕೇರಳ ರಾಜ್ಯ ಪ್ರಶಸ್ತಿ, ೪೯ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇ ಗೌಡ ಪ್ರಶಸ್ತಿ, ಕುಂದಾಪುರ ಎ.ಎಸ್.ಎನ್.ಹೆಬ್ಬಾರ್ ಪ್ರತಿಷ್ಠಾನ (ರಾಜ್ಯ) ಯುವ ಜನ ಪ್ರಶಸ್ತಿ, ಭಾರತ ಸರಕಾರ ಯುವ ಕರ‍್ಯ-ಕ್ರೀಡಾ ಸಚಿವಾಲಯದಿಂದ ದ.ಕ ಜಿಲ್ಲಾ ಅತ್ಯುತ್ತಮ ಯುವಕ ಪ್ರಶಸ್ತಿ, ವಿಧ್ವತ್ ಸೇವಾ ರತ್ನ ಪ್ರಶಸ್ತಿ,  ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ ಬೆಂಗಳೂರು, ಸಮಾಜ ಸೇವೆಗಾಗಿ ನಾಟ್ಯ ಕುಸುಮಾಂಜಲಿ-ಆದರ್ಶ ಶೃಂಗ ಪ್ರಶಸ್ತಿ, ಪತ್ರಿಕೋಧ್ಯಮ,ಶಿಕ್ಷಣ,ಸಾಹಿತ್ಯ ಕ್ಷೇತ್ರಕ್ಕೆ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ಪುತ್ತೂರು ಸಹಾಯಕ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಯವರಿಂದ ಪುತ್ತೂರಿನ ಹೆಮ್ಮೆಯ “ಯುವ ಪುತ್ರ” ಎಂಬ ಬಿರುದಿನೊಂದಿಗೆ ಅಭಿನಂದನೆ. ಬಹು ಮುಖ ಪ್ರತಿಭೆಗೆ ಸುಮ ಸೌರಭ ರಾಜ್ಯ ಪ್ರಶಸ್ತಿ, ನಾಡ ಭೂಷಣ ರಾಜ್ಯ ಪ್ರಶಸ್ತಿ, ಎಂ.ಪಿ.ಎA.ವಿದ್ಯಾಲಯದಿAದ ಎಂ.ಪಿ.ಎA.ಆವಾರ್ಡ್-೨೦೧೪ ಸನ್ಮಾನ, ಕನ್ನಡ ಸಾಹಿತ್ಯ ಪರಿಷತ್ತು ಆಂಧ್ರ ಗಡಿನಾಡ ಘಟಕ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ-೨೦೧೧ ಅಮರಾಪುರ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ-೨೦೧೪ ಈಶ್ವರ ಮಂಗಿಲದ  ಹನುಮಗಿರಿಯಲ್ಲಿ , ಹೊರನಾಡ ಕನ್ನಡಿಗರಿಂದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಸನ್ಮಾನ, ದುಬೈ ಕರ್ನಾಟಕ ಇಸ್ಲಾಮಿಕ್ ಸೆಂಟರ್ ವತಿಯಿಂದ ಸನ್ಮಾನ, ಅಬುಧಾಬಿಯಲ್ಲಿ ಸನ್ಮಾನ, ಶಾರ್ಜಾ ಕರ್ನಾಟಕ ಗೆಳೆಯರ ಬಳಗದಿಂದ ಸನ್ಮಾನ, ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಬಸವಶ್ರೀ ರಾಜ್ಯ ಪ್ರಶಸ್ತಿ (ಬಿಜಾಪುರ), ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮಾಧ್ಯಮ ಪ್ರಶಸ್ತಿ ಕಾಸರಗೋಡು, ಬೆಂಗಳೂರು ಮರಾಠ ಮಹಾಸಭಾ ಕರ್ನಾಟಕ ಛತ್ರಪತಿ ಶಿವಾಜಿ ಪ್ರಶಂಸನಾ ಪತ್ರ, ವಿಶ್ವ ಮಾನವ ಸಂದೇಶ ಪ್ರಶಸ್ತಿ , ೨೦೧೫ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ೨೦ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸನ್ಮಾನ. ಹೀಗೆ ಸುಮಾರು ೧೬೦ ಕ್ಕಿಂತಲೂ   ೨ ಮಿಕ್ಕಿದ ಪ್ರಶಸ್ತಿಗಳು ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲೂ ತನ್ನ ಸೇವೆಯಲ್ಲಿ ತೊಡಗಿರುವ ಇವರ ಸೇವೆಯನ್ನು ಕಂಡು ಪ್ರತಿಷ್ಟಿತ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ಬೆಂಗಳೂರು ಇವರು ನೀಡಲ್ಪಡುವ  “ ಕರ್ನಾಟಕ ರತ್ನ ‘” ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಡಾ||ಹಾಜಿ ಯಸ್ ಅಬೂಬಕ್ಕರ್ ರ‍್ಲಪದವು ಇವರು ಪ್ರತಿಷ್ಟಿತ ಗಾಳಿಮುಖ ಖಲೀಲ್ ಸಲಾಹ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿ ,ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಕಾನೂನು ಸೇವಾ ಪ್ರಾಧಿಕಾರದ ಪ್ಯಾರಾ ಲೀಗಲ್ ವಾಲೆಂಟಿಯರ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷರಾಗಿ, ಪಾಣಾಜೆ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ, ಸುಬೋಧ ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಸೇರಿದಂತೆ ಹಲವಾರು ಸಂಘ ಸಂಸ್ಥೆ ಹಾಗೂ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ತಾನು ಬರೆದ ಲೇಖನ ಪ್ರಬಂಧಗಳಿಗೆ ದೊರೆತ ಬಹುಮಾನ ಸನ್ಮಾನಗಳು ಅಪರ. ಬೆಂಗಳೂರು ದೂರ ದರ್ಶನದಲ್ಲಿ ಮುಖ್ಯಮಂತ್ರಿಗಳೊAದಿಗೆ ಸಂವಾದ, ಮಂಗಳೂರು ಆಕಾಶವಾಣಿಯಲ್ಲಿ ಯುವ ವಾಣಿ ಕರ‍್ಯಕ್ರಮದಲ್ಲಿ ಭಾಷಣ, ಹಲವಾರು ಕನ್ನಡ ಪರ , ಸಮಾಜ ಪರ, ಪರಿಸರ, ಸಾಮಾಜಿಕ, ಧಾರ್ಮಿಕ, ಮಹಾಸಮ್ಮೇಳನ ಸಮಾರಂಭಗಳಲ್ಲಿ ಅತಿಥಿಯಾಗಿ ಉದ್ಘಾಟಕರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ ಅನುಭವ. ಹಲವಾರು ದಿನಪತ್ರಿಕೆಗಳಲ್ಲಿ ವಾರ ಪತ್ರಿಕೆ, ಮಾಸ ಪತ್ರಿಕೆ, ವಿಶೇಷ ಪುರವಣಿ, ಸೇರಿದಂತೆ ನಾಡಿನ ಮಾಧ್ಯಮಗಳಲ್ಲಿ ಲೇಖನ ವರದಿಗಳು ಪ್ರಕಟ. ನಾಡೋಜ ಪಾಟೀಲ ಪುಟ್ಟಪ್ಪನವರ ನೇತ್ರತ್ವದಲ್ಲಿ ನಡೆಯುವ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಮಹಾಮೇಳ ಧಾರವಾಡ, ಮುಂಬೈ, ವಾರಣಾಸಿ, ಕಾಶೀ, ಗುಜರಾತ್ ಬರೋಡಾ, ದಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೆ ಕಾರಣಕರ್ತರಾಗಿರುವರು. ಕೇರಳ ರಾಜ್ಯ ಕನ್ನಡ ಸಮ್ಮೇಳನದಲ್ಲಿ , ಕೇರಳ-ಕರ್ನಾಟಕ ಉತ್ಸವ, ಚುಟುಕು ಸಾಹಿತ್ಯ ಸಮ್ಮೇಳನ, ಸಾಹಿತ್ಯ ಸಮ್ಮೇಳನ ಇತ್ಯಾದಿಗಳಲ್ಲಿ ಸಂಪೂರ್ಣ ಭಾಗವಹಿಸಿ ಕನ್ನಡ ಕೈಂರ‍್ಯದಲ್ಲಿ ತೊಡಗಿಸಿದ್ದು, ವಿವಿಧ ರೀತಿಯ ಸಮಾಜ ಸೇವೆಯಲ್ಲಿ ತೊಡಗಿ ಸಮಾಜದಲ್ಲಿ ಗುರುತಿಸಿಕೊಂಡಿರುವರು. ತನ್ನ ಗಟ್ಟಿ ನಿಲುವು, ದೃಢ ಸಂಕಲ್ಪ, ಆತ್ಮೀಯತೆ, ಗುರು ಹಿರಿಯರೊಂದಿಗೆ ವಿವಿಧ ಇಲಾಖಾ ಅಧಿಕಾರಿ ಸಿಬ್ಬಂದಿಗಳೊAದಿಗೆ ಹೊಂದಿರುವ ಸಂಪರ್ಕ,ಸAಘ ಸಂಸ್ಥೆಗಳೊAದಿಗಿನ ಬಾಂಧವ್ಯ ಇವರ ಕರ‍್ಯ ಕ್ಷೇತ್ರವನ್ನು ವಿಸ್ತಾರಗೊಳಿಸಿದೆ. ಪ್ರಸಕ್ತ ಹಲವಾರು ವೈಜ್ಞಾನಿಕ ಅರಿವು ಹಾಗೂ ಜಾಗೃತಿ ಸಮಾರಂಭ ವನ್ನು ಏರ್ಪಡಿಸುತ್ತಿರುವುದು ವೈಜ್ಞಾನಿಕ ರಂಗದ ಸೇವೆಗೆ ಸಾಕ್ಷಿ ಅದರಂತೆ ಕಾನೂನು ಸೇವೆಗಳನ್ನು ತಿಳಿಯ ಪಡಿಸುವ ಉದ್ದೇಶದೊಂದಿಗೆ ಪ್ರಮುಖ ನ್ಯಾಯಾಧೀಶರೊಂದಿಗೆ ಯಶಸ್ವೀ ಕರ‍್ಯಕ್ರಮ ಮಾಡಿರುವುದು ಜನಸಾಮಾನ್ಯರಿಗೆ ಕಾನೂನು ಅರಿವು ನಾಡಿನ ಮೂಲೆ ಮೂಲೆಗೆ ತಲುಪಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.  ಡಾ||ಹಾಜಿ ಯಸ್ ಅಬೂಬಕ್ಕರ್ ಆರ‍್ಲಪದವು ಇವರ ಕರ‍್ಯ ಕ್ಷೇತ್ರವನ್ನು ಗಮನಿಸಿದಾಗ ಅಭಿಮಾನ ಉಂಟಾಗುತ್ತದೆ.’ ಯುವಕರೆಂದರೆ ಹೀಗಿರಬೇಕು “ ಎಂಬ ಭಾವನೆ ಎಲ್ಲರಲ್ಲೂ ಮೂಡುವುದರಲ್ಲಿ ಸಂಶಯವಿಲ್ಲ.

ಡಾ||ಹಾಜಿ ಯಸ್ ಅಬೂಬಕ್ಕರ್ ರ‍್ಲಪದವು ಇವರ ಪ್ರಕೃತ ಕರ‍್ಯಕ್ಷೇತ್ರಗಳ ಬಗ್ಗೆ ಕಣ್ಣೋಡಿಸಿದಾಗ :-

ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ.ಕ.ಜಿಲ್ಳಾ ಸಮಿತಿ, ಜಿಲ್ಲಾಧ್ಯಕ್ಷರು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.) ದ.ಕ.ಜಿಲ್ಲೆ,  ಪ್ಯಾರಾ ಲೀಗಲ್ ವ್ಯಾಲೆಂಟಿಯರ್ ಕಾನೂನು ಪ್ರಾಧಿಕಾರ , ವ್ಯವಸ್ಥಾಪಕ ಸಂಪಾದಕರು ಗಡಿನಾಡ ಧ್ವನಿ ಕನ್ನಡ ಮಾಸ ಪತ್ರಿಕೆ, ಅಧ್ಯಕ್ಷರು ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ (ರಿ.), ಆಜೀವ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಆಜೀವ ಸದಸ್ಯರು ಕರ್ನಾಟಕ ಸಂಘ (ರಿ.) ನವದೆಹಲಿ, ಆಜೀವ ಸದಸ್ಯರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ, ಆಜೀವ ಸದಸ್ಯರು ಜಮೀಯ್ಯತುಲ್ ಫಲಾಹ್ (ರಿ.), ಸ್ಥಾಪಕರು ಗಡಿನಾಡ ಪ್ರಗತಿ ಯುವಕ ಮಂಡಲ (ರಿ.), ಪ್ರಕಾಶಕರು ಗಡಿನಾಡ ಧ್ವನಿ ಪ್ರಕಾಶನ,  ೩ ಉಪಾಧ್ಯಕ್ಷರು ಮರ್ಕಝ್ ಲಿತಹ್‌ಲೀಮಿಲ್ ಇಸ್ಲಾಮಿ ಪುದಿಯವಳಪ್ಪು, ಜಿಲ್ಲಾ ಕರ‍್ಯದರ್ಶಿಗಳು ದ.ಕ.ಜಿಲ್ಲಾ ವಿಎಲ್‌ಇ ಸೊಸೈಟಿ (ರಿ.),  ಆಡಳಿತಾಧಿಕಾರಿ ಖಲೀಲ್ ಸ್ವಲಾಹ್ ಎಜ್ಯುಕೇಶನ್ ಟ್ರಸ್ಟ್ ಗಾಳಿಮುಖ, ಲೆಕ್ಕ ಪರಿಶೋಧಕರು ಬಿಜೆಎಂ ರ‍್ಲಪದವು, ಕರ‍್ಯಕಾರೀ ಸಮಿತಿ ಸದಸ್ಯರು ಸೀರತ್ ಕಮಿಟಿ (ರಿ.) ಪುತ್ತೂರು, ಪ್ರಧಾನ ಕರ‍್ಯದರ್ಶಿ ಕರ್ನಾಟಕ ರಕ್ಷಣಾ ವೇದಿಕೆ ದ.ಕ.ಜಿಲ್ಲಾ ಸಮಿತಿ, ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ, ಅಧ್ಯಕ್ಷರು ಶಿಕ್ಷಕ ರಕ್ಷಕ ಸಂಘ ಸುಬೋಧ ಪ್ರೌಢ ಶಾಲೆ ಪಾಣಾಜೆ  ಜಿಲ್ಲಾ ಸಂಯೋಜಕರು ಮತ್ತು ಪ್ರಮೋರ‍್ಸ್ ಜ್ಞಾನ ಮಂದಾರ ಶಿಕ್ಷಣ ಸಂಸ್ಥೆ (ರಿ.) ದ ಕ .ಜಿಲ್ಲೆ, ಉಪಾಧ್ಯಕ್ಷರು ಜ್ಞಾನ ವಿಜ್ಞಾನ ಸಮಿತಿ ದ.ಕ ಜಿಲ್ಲೆ, ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಮಿಟಿ ಪುತ್ತೂರು ತಾಲೂಕು, ಪ್ರಧಾನ ಕರ‍್ಯದರ್ಶಿ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ತಾಲೂಕು ಸಮಿತಿ,  ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ತನ್ನೆಲ್ಲಾ ಕಲ್ಪನೆ-ಕನಸು-ಜಾಗೃತಿ  ಸಮಾಜಮುಖೀ ಕೆಲಸ ಕರ‍್ಯಗಳಿಗೆ ಒಂದು ಸುಂದರ ರೂಪ ಕೊಡಲು “ಗಡಿನಾಡ ಧ್ವನಿ” ಎಂಬ ಅರ್ಥ ಪೂರ್ಣ ಹೆಸರಿನ ಕನ್ನಡ ಮಾಸ ಪತ್ರಿಕೆಯನ್ನು ಗಡಿನಾಡ ಪ್ರಧೇಶದಲ್ಲಿ ಬೆಳಕಿಗೆ ತಂದು , ಈಗಾಗಲೇ ಎಲ್ಲರ ಅಭಿಮಾನಕ್ಕೆ ಪಾತ್ರವಾಗುವ ಹಾಗೆ ಮಾಡಿರುವ ಡಾ||ಹಾಜಿ ಯಸ್ ಅಬೂಬಕ್ಕರ್ ಆರ‍್ಲಪದವು ಅವರ ಪತ್ರಿಕಾ ಪ್ರೇಮ, ಸಾಹಸ, ನೆಲ ಜಲ ಭಾಷೆಯೊಂದಿಗೆ ಗಡಿನಾಡ ಸೇವೆ ಅಭಿನಂದನೀಯ. ಇವರ ಕಛೇರಿ ಮನೆಗಳಲ್ಲಿ ಅದೆಷ್ಟೋ ಜನರು ತನ್ನ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿದ್ದು ಅದಕ್ಕೆ ಸೂಕ್ತ ಸಲಹೆ ಮಾರ್ಗ ದರ್ಶನಗಳನ್ನು ನೀಡಿ ಆ ಕುಟುಂಬದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಕರ‍್ಯಪ್ರವೃತ್ತರಾಗುವ ಇವರು ಕೌಟುಂಬಿಕ ಕಲಹಗಳಿಂದ ಬಲಳುತ್ತಿರುವರಿಗೆ ಕೌನ್ಸಿಲಿಂಗ್ ಮಾಡುವುದರ ಮೂಲಕ ಸೂಕ್ತ ಮಾರ್ಗ ದರ್ಶನ ನೀಡಿ ಕುಟುಂಬಗಳು ಒಂದಾಗುವAತೆ ಮಾಡುವುದರಲ್ಲಿ ಎತ್ತಿದ ಕೈ ಇವರದು. ಸದಾ ದಣಿವಿಲ್ಲದ ಹಸನ್ಮುಖಿಯಾಗಿ, ಸರ್ವರೊಂದಿಗೆ ಬೆರೆತು ಕರ‍್ಯ ಪ್ರವೃತ್ತರಾಗುವರು.

ಮುಗಿಸುವ ಮುನ್ನ : ಡಾ||ಹಾಜಿ ಯಸ್ ಅಬೂಬಕ್ಕರ್ ಆರ‍್ಲಪದವು ಅವರದು ದಣಿವರಿಯದ ಕ್ರಿಯಾಶೀಲ ಬದುಕು. ದೇಶ-ವಿದೇಶ ತುಂಬಾ ಓಡಾಡಿ, ಸಾಹಿತ್ಯಿಕ, ಸಾಮಾಜಿಕ,ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸದಾ ತುಡಿಯುವ ಇವರ ಕೆಲಸ ಕರ‍್ಯಗಳಿಗೆ ಇವರ “ ಅಮ್ಮ “ ನ ಆಶೀರ್ವಾದದೊಂದಿಗೆ ಪತ್ನಿ ಶ್ರೀಮತಿ ಫಾತಿಮತ್ ಜುಹುರ, ಮಕ್ಕಳಾದ ಆಯಿಷತ್ ಬುಶ್ರಾ, ಫಾತಿಮತ್ ಸಂಶೀರ, ಮುಹಮ್ಮದ್ ಸಿಂಸಾರುಲ್ ಹಖ್, ಖದೀಜತ್ ಸಫರ, ಮತ್ತು ಸಹೋದರರು ಸಾಥ್ ನೀಡುತ್ತಾರೆ. ಈ ಗಡಿನಾಡ ಸಾಧಕನ ಕನಸುಗಳೆಲ್ಲಾ ನನಸಾಗಲಿ. ಇನ್ನೂ ಹೆಚ್ಚಿನ ಕರ‍್ಯಮಾಡುವ ಚೈತನ್ಯ ಮೂಡಿ ಬರಲಿ ಎಂದು ಹೃದಯ ತುಂಬಿ ಹಾರೈಸೋಣ.. ...