ಸದಸ್ಯ:2230272jyestavardhan/sandbox
ಚಲನಚಿತ್ರದ ಇತಿಹಾಸ
[ಬದಲಾಯಿಸಿ]ಸಿನಿಮಾ ಇತಿಹಾಸ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಕಂಡುಹಿಡಿದ ಚಲನಚಿತ್ರ ತಂತ್ರಜ್ಞಾನಗಳಿಂದ ಹೇಗೆ ಒಂದು ದೃಶ್ಯಕಲಾ ಪ್ರಕಾರವು ಬೆಳೆಯಿತೆಂಬುದನ್ನು ದಾಖಲಿಸಿದೆ. ಒಂದು ಕಲಾತ್ಮಕ ಮಾಧ್ಯಮವಾಗಿ ಎಂದು ಸಿನಿಮಾದ ಉಗಮವಾಯಿತೆಂಬುದು ನಿಖರವಾಗಿ ಗೊತ್ತು ಮಾಡಲ್ಪಟ್ಟಿಲ್ಲ. ಆದರೆ ೨೮ನೇ ಡಿಸೆಂಬರ್, ೧೮೯೫ರ ಲ್ಯೂಮಿಯೇರ್ ಸೋದರರ ಹತ್ತು ಚಿತ್ರಗಳ ಸಾರ್ವಜನಿಕ ಪ್ರದರ್ಶನ ಚಲನಚಿತ್ರಗಳ ಬೆಳವಣಿಗೆಯಲ್ಲಿನ ಮಹತ್ವದ ತಿರುವೆಂದು ತಿಳಿಯಬಹುದು. ಇದಕ್ಕೂ ಮುನ್ನ ಕೆಲವರು, ಮುಖ್ಯವಾಗಿ ಸ್ಕ್ಲಡಾನೋವ್ಸ್ಕಿ ಸೋದರರು ದುಡ್ಡು ಕೊಟ್ಟ ಪ್ರೇಕ್ಷಕರಿಗೆ ತಾವೇ ತಯಾರಿಸಿದ ಬಯೋಸ್ಕೋಪಿನ ಮೂಲಕ ನವಂಬರ್ ೧, ೧೮೯೫ರಂದು ತೋರಿಸಿದ ಮೊದಲ ಚಲನಚಿತ್ರವೂ ಸೇರಿದಂತೆ, ಛಾಯಾಗ್ರಹಣದ ಫಲಿತಾಂಶಗಳು ಅಲ್ಲಲ್ಲಿ ಪ್ರದರ್ಶಿಸಲ್ಪಟ್ಟಿದ್ದವು. ಆದರೆ, ಅವರಾರಿಗೂ ಲ್ಯೂಮಿಯೇರ್ ಸೋದರರು ಪ್ರಪಂಚದಾದ್ಯಂತ ಮನೆಮಾತಾಗುವಂತೆ ಮಾಡಿದ ಅಗತ್ಯವಿದ್ದ ಗುಣಮಟ್ಟವಾಗಲಿ, ಹಣಕಾಸಿನ ಬೆಂಬಲ, ಸಾಮರ್ಥ್ಯ ಅಥವಾ ಅದೃಷ್ಟವಾಗಲೀ ಇರಲಿಲ್ಲ. ಅಂದಿನ ಸಿನಿಮಾಗಳು ಕಪ್ಪು-ಬಿಳುಪಲ್ಲಿ, ಮುದ್ರಿತವಾದ ಧ್ವನಿಯಿಲ್ಲದೆ, ಸ್ಥಿರವಾದ ಕ್ಯಾಮೆರಾದಲ್ಲಿ ತೆಗೆದ ಒಂದು ನಿಮಿಷ್ಟಕ್ಕೂ ಕಡಿಮೆ ಅವಧಿಯ ಚಿತ್ರಗಳಾಗಿದ್ದವು. ಚಲನಚಿತ್ರಗಳ ಮೊದಲ ದಶಕದಲ್ಲಿ ಸಿನಿಮಾ, ಒಂದು ನವೀನ ವಸ್ತುವಿನಿಂದ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ಹಾಗೂ ಸ್ಟುಡಿಯೋಗಳ ಸ್ಥಾಪನೆಯೊಂದಿಗೆ ಒಂದು ಸಾಮೂಹಿಕ ಮನರಂಜನಾ ಉದ್ಯಮವಾಗಿ ಬೆಳೆಯಿತು. ಒಂದು ಸಾರ್ವತ್ರಿಕ ಸಿನಿಮಾ ಭಾಷೆಯೆಡೆಗಿನ ರೀತಿ-ನೀತಿ, ಸಂಪ್ರದಾಯಗಳು ಬೆಳೆದು ಬಂದವು. ಕ್ಯಾಮೆರಾ ಚಲನೆಗಳ ಎಡಿಟಿಂಗ್ ಹಾಗೂ ಇನ್ನಿತರ ಸಿನಿಮೀಯ ತಂತ್ರಗಳೂ ಚಲನಚಿತ್ರಗಳ ಕಥನ ನಿರೂಪಣೆಯಲ್ಲಿ ತಮ್ಮದೇ ನಿರ್ದಿಷ್ಟ ಪಾತ್ರಗಳ ಕೊಡುಗೆ ನೀಡಿದವು.
೧೯೫೦ ದಶಕದಲ್ಲಿ ಬಂದ ಸಿನಿಮಾಗಳುಗಳು ಮತ್ತು ಅದರ ಸುಧಾರಣೆಗಳು
[ಬದಲಾಯಿಸಿ]೧೯೫೦ರ ದಶಕದಿಂದಲೂ ಮುಖ್ಯವಾಹಿನಿಯಲ್ಲಿರುವ ಟೆಲಿವಿಷನ್, ೧೯೮೦ರ ದಶಕದಿಂದ ಪ್ರವರ್ಧಮಾನಕ್ಕೆ ಬಂದ ಹೋಂ ವಿಡಿಯೋಗಳು ಹಾಗೂ ೧೯೯೦ರ ಮೊದಲಾರ್ಧದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಆರ್ಥಿಕವಾಗಿಯೂ ಯಶಸ್ವಿಯಾದಂತಹ ಸ್ವತಂತ್ರ ಸಿನಿಮಾದ ಬೆಳವಣಿಗೆ ಚೆನ್ನಾಗಿ ನಡೆಯಿತು. 'ಟರ್ಮಿನೇಟರ್ ೨: ಜಡ್ಜ್ಮೆಂಟ್ ಡೇ' (೧೯೯೧), 'ಜುರಾಸಿಕ್ ಪಾರ್ಕ್' (೧೯೯೩) ಮತ್ತು ೨೦೦9ರಲ್ಲಿ ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ 'ಅವತಾರ್' ಬರುವವರೆಗೂ ಅಂದಿನ ಕಾಲದ ಅತ್ಯಧಿಕ ಗಳಿಕೆಯ ಚಿತ್ರವಾದ 'ಟೈಟಾನಿಕ್'ನಂತಹ ಸ್ಪೆಷಲ್ ಎಫೆಕ್ಟ್ಸ್ ಗಳಿಂದ ತುಂಬಿದ್ದ ಚಲನಚಿತ್ರಗಳ ಪ್ರಾಬಲ್ಯ ಹೆಚ್ಚುತ್ತಾ ಬಂದರೂ ಸ್ವತಂತ್ರ ಚಲನಚಿತ್ರಗಳಾದ ಸ್ಟೀವನ್ ಸೋಡರ್ ಬರ್ಗ್ ನ 'ಸೆಕ್ಸ್, ಲೈಸ್ ಅಂಡ್ ವಿಡಿಯೋಟೇಪ್' (೧೯೮೯) ಮತ್ತು ಕ್ವೆಂಟಿನ್ ಟರಾಂಟಿನೋನ 'ರಿಸರ್ವಾಯರ್ ಡಾಗ್ಸ್' (೧೯೯೨) ಕೂಡ ಸಿನಿಮಾ ಮಂದಿರಗಳಲ್ಲಿ ಸಾಕಷ್ಟು ಹಣಕಾಸಿನ ಯಶಸ್ಸು ಕಂಡಿದ್ದವು. ಡೇನಿಷ್ ಸಿನಿಮಾ ಆಂದೋಲನ ಡಾಗ್ಮೆ ೯೫ಕ್ಕೆ ಸೇರಿದ ಕೆಲವು ಚಿತ್ರೋದ್ಯಮಿಗಳು ಸಿನಿಮಾ ನಿರ್ಮಾಣವನ್ನು ಶುದ್ಧಗೊಳಿಸಲೆಂದು ಪ್ರಣಾಳಿಕೆಯೊಂದನ್ನು ಹೊರ ತಂದರು. ಅದರಡಿಯಲ್ಲಿ ಮೊದಲ ಕೆಲವು ಚಿತ್ರಗಳು ಜಗತ್ತಿನಾದ್ಯಂತ ವಿಮರ್ಶಾತ್ಮಕ ಮೆಚ್ಚುಗೆಗೆ ಪಾತ್ರವಾದರೂ, ಈ ಚಳುವಳಿ ನಿಧಾನವಾಗಿ ಮರೆಯಾಯಿತು. ಸ್ಕೋರ್ಸೇಸ್ ನ 'ಗುಡ್ ಫೆಲ್ಲಾಸ್' ೧೯೯೦ರಲ್ಲಿ ಬಿಡುಗಡೆ ಆಯಿತು. ಇಂದಿಗೂ ಬಹಳಷ್ಟು ಮಂದಿ ಈ ಚಿತ್ರವನ್ನು ಅದರಲ್ಲೂ ಗ್ಯಾಂಗ್ಸ್ಟರ್ ಪ್ರಕಾರದ ಶ್ರೇಷ್ಠ ಚಿತ್ರಗಳಲ್ಲೊಂದೆಂದು ಪರಿಗಣಿಸುತ್ತಾರೆ. ಸ್ಕೋರ್ಸೇಸ್ ನ ವೃತ್ತಿ ಪತಾಕೆಗಳಲ್ಲೊಂದಾಗಿದೆ 'ಗುಡ್ ಫೆಲ್ಲಾಸ್'.
೧೯೯೫ ದಶಕದಲ್ಲಿ ಬಂದ ಸಿನಿಮಾಗಳು ಗಳು ಮತ್ತು ಅದರ ಸುಧಾರಣೆಗಳು
[ಬದಲಾಯಿಸಿ]೧೯೯೫ರ ಸಿನಿಮಾ ಸ್ಮರಣೆಗಳು ಅಮೆರಿಕದ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆಗಳು ಹಣಕಾಸಿನ ವ್ಯವಸ್ಥೆ ಮಾಡಿ ಮುಖ್ಯವಾಹಿನಿಗೆ ಸೇರದ ಚಿತ್ರಗಳನ್ನು ಮಾಡಲು ತಮ್ಮದೇ 'ಸ್ವತಂತ್ರ' ನಿರ್ಮಾಣ ಸಂಸ್ಥೆಗಳನ್ನು ಹುಟ್ಟುಹಾಕಲು ಶುರು ಮಾಡಿದವು. ೧೯೯೦ರ ದಶಕದ ಅತ್ಯಂತ ಯಶಸ್ವೀ ಸ್ವತಂತ್ರ ಸಂಸ್ಥೆಗಳಲ್ಲಿ ಒಂದಾದ ಮಿರಾಮ್ಯಾಕ್ಸ್ ಫಿಲಂಸ್ ಅನ್ನು ಡಿಸ್ನಿ ಕಂಪನಿ ಟರಾಂಟಿನೋನ ಸೂಪರ್ ಹಿಟ್ ಚಿತ್ರ 'ಪಲ್ಪ್ ಫಿಕ್ಷನ್' ೧೯೯೪ರಲ್ಲಿ ಬಿಡುಗಡೆಯಾಗುವ ಒಂದು ವರ್ಷದ ಮೊದಲು ಖರೀದಿಸಿತು. ಅದೇ ವರ್ಷದಲ್ಲಿ ಆನ್ಲೈನ್ನಲ್ಲಿ ಸಿನಿಮಾ ಮತ್ತು ವಿಡಿಯೋ ವಿತರಣೆ ಆರಂಭವಾಯಿತು. ಡಿಸ್ನಿಯ 'ಬ್ಯೂಟಿ ಅಂಡ್ ದ ಬೀಸ್ಟ್' (೧೯೯೧), ಅಲಾದೀನ್ (೧೯೯೨) ಮತ್ತು 'ದಿ ಲಯನ್ ಕಿಂಗ್'ನಂತಹ ಕುಟುಂಬದ ಮಂದಿಯೆಲ್ಲಾ ನೋಡಬಯಸುವಂತಹ ಗುರಿಯುಳ್ಳ ಅನಿಮೇಟೆಡ್ ಚಿತ್ರಗಳೂ ಜನಪ್ರಿಯತೆಯನ್ನು ಮತ್ತೆ ಗಳಿಸಿಕೊಂಡವು. ೧೯೯೫ರಲ್ಲಿ ಫೀಚರ್ ಫಿಲಂನಷ್ಟು ಉದ್ದದ ಮೊದಲ ಕಂಪ್ಯೂಟರ್ ಅನಿಮೇಟೆಡ್ ಚಿತ್ರ 'ಟಾಯ್ ಸ್ಟೋರಿ'ಯನ್ನು ಪಿಕ್ಸಾರ್ ಅನಿಮೇಷನ್ ಸ್ಟುಡಿಯೋಸ್ ನಿರ್ಮಿಸಿದರೆ ಡಿಸ್ನಿ ಅದನ್ನು ಬಿಡುಗಡೆ ಮಾಡಿತು. 'ಟಾಯ್ ಸ್ಟೋರಿ'ಯ ಯಶಸ್ಸಿನ ನಂತರ ಕಂಪ್ಯೂಟರ್ ಅನಿಮೇಷನ್ ಫೀಚರ್ ಫಿಲ್ಮ್ ಉದ್ದದ ಅನಿಮೇಷನ್ನಿನ ಅತ್ಯಂತ ಪ್ರಬಲ ತಂತ್ರವಾಗಿ ಬೆಳೆದು, ಸಿನಿಮಾ ಕಂಪನಿಗಳಾದ ಡ್ರೀಂವರ್ಕ್ಸ್, ಟ್ವೆಂಟಿಯೆತ್ ಸೆಂಚುರಿ ಫಾಕ್ಸ್ ಮತ್ತು ವಾರ್ನರ್ ಬ್ರದರ್ಸ್ ಮುಂತಾದವು ತಮ್ಮದೇ ಯಶಸ್ವಿ ಚಿತ್ರಗಳ ಮೂಲಕ ಡಿಸ್ನಿಯ ಎದುರು ಸಮರ್ಥವಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು.
೧೯೯೦ ದಶಕದಲ್ಲಿ ಬಂದ ಸಿನಿಮಾಗಳುಗಳು ಮತ್ತು ಅದರ ಸುಧಾರಣೆಗಳು
[ಬದಲಾಯಿಸಿ]೧೯೯೦ರ ದಶಕದ ಉತ್ತರಾರ್ಧದಲ್ಲಿ ಮತ್ತೊಂದು ಸಿನಿಮೀಯ ಬದಲಾವಣೆ ಪ್ರಾರಂಭವಾಯಿತು. ನಿಜವಾದ ಫಿಲ್ಮ್ ಸರಕಿನ ಸಂಗ್ರಹದಿಂದ ಹಿಡಿದು ಡಿಜಿಟಲ್ ಸಿನಿಮಾ ತಂತ್ರಜ್ಞಾನದವರೆಗೂ. ಈ ನಡುವೆ ವಿಹೆಚ್ಎಸ್ ಟೇಪುಗಳ ಬದಲಿಗೆ ಡಿವಿಡಿಗಳು ಗ್ರಾಹಕರ ವಿಡಿಯೋ ಅಭಿರುಚಿಯ ನೂತನ ಮಾನದಂಡದ ಸ್ಥಾನ ಪಡೆದುಕೊಂಡವು. ೧೯೯೦ರ ದಶಕದಿಂದ ಮುಂಚೂಣಿಗೆ ಬಂದ ಅಂತರಜಾಲ ಮೊದಲಾದ ಜನಪ್ರಿಯ ಹೊಸ ಮಾಧ್ಯಮಗಳು ಸಿನಿಮಾಗಳ ವಿತರಣೆ ಮತ್ತು ಬಳಕೆಯ ಮೇಲೆ ತಮ್ಮ ಪ್ರಭಾವ ಬೀರಿವೆ. ಸಿನಿಮಾ ನಿರ್ಮಾಣ ಸಂಸ್ಥೆಗಳು ಸಾಧಾರಣವಾಗಿ ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವ ಚಲನಚಿತ್ರಗಳು ಜನರನ್ನು ಮತ್ತಷ್ಟು ಆಕರ್ಷಿಸಲು, ಹೊಸ ಮಾಧ್ಯಮಗಳಿಗೆ ಹೊಂದುವಂತಹ ವಿಷಯಗಳು ಹಾಗೂ ೧೯೫೦ರ ದಶಕದಿಂದ ಜನಪ್ರಿಯವಾದ ವೈಡ್ ಸ್ಕ್ರೀನ್, ಥ್ರೀಡಿ ಹಾಗೂ ಫೋರ್ ಡಿ ಮುಂತಾದ ತಾಂತ್ರಿಕ ಆವಿಷ್ಕಾರಗಳನ್ನು ಬಳಸಿ ಸೊಗಸಾದ ಚಲನಚಿತ್ರಗಳನ್ನು ತಯಾರಿಸಿದವು. ಸ್ಮಾರ್ಟ್ ಫೋನ್ ಮತ್ತು ೮ ಎಂ.ಎಂ ಫಿಲ್ಮ್ ಮೊದಲಾದ ಕಡಿಮೆ ಬೆಲೆಯ ಹಾಗೂ ಸುಲಭವಾಗಿ ಬಳಸಬಹುದಾದ ತಾಂತ್ರಿಕ ವ್ಯವಸ್ಥೆಗಳು ಹೆಚ್ಚು ಹೆಚ್ಚು ಜನರಿಗೆ ಹೋಂ ಮೂವೀಸ್, ವಿಡಿಯೋ ಆರ್ಟ್ ತರಹದ ಯಾವುದೇ ಉದ್ದೇಶಕ್ಕಾದರೂ, ಭಿನ್ನ ಭಿನ್ನ ಗುಣಮಟ್ಟದ ಚಿತ್ರಗಳನ್ನು ಮಾಡಲು ಅವಕಾಶ ಕಲ್ಪಿಸಿದವು. ವೃತ್ತಿಪರವಾಗಿ ತೆಗೆದ ಚಿತ್ರಗಳ ಗುಣಮಟ್ಟಕ್ಕಿಂತ ಕಡಿಮೆಯಾದರೂ ಡಿಜಿಟಲ್ ವಿಡಿಯೋ ಮತ್ತು ಕೈಗೆಟಕುವ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದ ಡಿಜಿಟಲ್ ಕ್ಯಾಮೆರಾಗಳು ದೊರೆಯಲಾರಂಭಿಸಿ, ಈ ಚಿತ್ರಗಳ ತಾಂತ್ರಿಕ ಗುಣಮಟ್ಟವನ್ನು ಸುಧಾರಿಸಿದವು. ಕ್ರಮೇಣ, ಡಿಜಿಟಲ್ ನಿರ್ಮಾಣ ವಿಧಾನಗಳು ೧೯೯೦ರ ದಶಕದಲ್ಲಿ ಹೆಚ್ಚು ಜನಪ್ರಿಯವಾಗುತ್ತಾ ಬಂದವು. ಇದರ ಪರಿಣಾಮ, ನೈಜತೆಗೆ ಹತ್ತಿರವಾದ ವಿಶುಯಲ್ ಎಫೆಕ್ಟ್ಸ್ ಮತ್ತು ಜನಪ್ರಿಯ ಚಲನಚಿತ್ರಗಳಿಗೆ ಸರಿಸಮನಾಗಿ ಕಂಪ್ಯೂಟರ್ ಅನಿಮೇಷನ್ಗಳು ಚಲಾವಣೆಗೆ ಬಂದವು. ವಿಧವಿಧವಾದ ಸಿನಿಮಾ ಪ್ರಕಾರಗಳು ಹೊಮ್ಮಿ ಕಾಲಾಂತರದಲ್ಲಿ ವಿವಿಧ ಮಟ್ಟದ ಯಶಸ್ಸು ಕಾಣತೊಡಗಿದವು. ಅದರಲ್ಲೂ ಹಾರರ್ ಜಾನರ್ ನ ಸಿನಿಮಾಗಳ ಯಶಸ್ಸು ಹಾಗೂ ವ್ಯತ್ಯಾಸಗಳು ಎದ್ದು ಕಾಣುವಂತಿದ್ದವು.
೨೦೦೦ ದಶಕದಲ್ಲಿ ಬಂದ ಸಿನಿಮಾಗಳುಗಳು ಮತ್ತು ಅದರ ಸುಧಾರಣೆಗಳು
[ಬದಲಾಯಿಸಿ]೨೦೦೦ರ ದಶಕದ ಕೊನೆಗೆ ಯೂಟ್ಯೂಬ್ ನಂತಹ ಸ್ಟ್ರೀಮಿಂಗ್ ಮಾಧ್ಯಮ ವೇದಿಕೆಗಳು ಕ್ಯಾಮೆರಾ (ಹೊಂದಿದ್ದ ಸ್ಮಾರ್ಟ್ ಫೋನ್) ಮತ್ತು ಅಂತರಜಾಲಕ್ಕೆ ಸಂಪರ್ಕ ಹೊಂದಿದ್ದ ಯಾರೇ ಆಗಲಿ ಇಡೀ ಪ್ರಪಂಚಕ್ಕೆ ತಮ್ಮ ವಿಡಿಯೋಗಳನ್ನು ಪ್ರದರ್ಶಿಸಲು ಸೌಕರ್ಯ ಮಾಡಿಕೊಟ್ಟವು. ವಿಡಿಯೋ ಗೇಮ್ಸ್ ಹಾಗೂ ಇನ್ನಿತರ ಗೃಹ ಮನರಂಜನಾ ಪ್ರಕಾರಗಳ ಹೆಚ್ಚುತ್ತಿದ್ದ ಜನಪ್ರಿಯತೆಯೊಂದಿಗೆ ಸ್ಪರ್ಧಿಸುತ್ತಾ ಹೊಸ ಥ್ರೀಡಿ ತಂತ್ರಜ್ಞಾನಗಳು ಮತ್ತು ಮಹಾನ್ (ಫ್ಯಾಂಟಸಿ ಮತ್ತು ಸೂಪರ್ ಹೀರೋ) ಚಿತ್ರಗಳನ್ನು ಆಧಾರವಾಗಿ ಮಾಡಿಕೊಂಡು ಮತ್ತೊಮ್ಮೆ ಚಲನಚಿತ್ರ ಉದ್ಯಮವು ಥಿಯೇಟರಿನತ್ತ ಜನರನ್ನು ಸೆಳೆಯಲಾರಂಭಿಸಿತು. 'ಗ್ಲೇಡಿಯೇಟರ್' ನ ಯಶಸ್ಸು ಮಹಾಕಾವ್ಯ ಆಧಾರಿತ ಸಿನಿಮಾ ಕುರಿತಾದ ಆಸಕ್ತಿಯನ್ನು ಮತ್ತೆ ಹುಟ್ಟು ಹಾಕಿದರೆ 'ಮೂಲಾನ್ ರೌಜ್' ಸಂಗೀತಮಯ ಸಿನಿಮಾದೆಡೆಗಿನ ಒಲವನ್ನು ಹೆಚ್ಚಿಸಿತು. ಹೋಂ ಥಿಯೇಟರ್ ಸಿಸ್ಟಂಗಳು ಮತ್ತು ಕೆಲವು ಸ್ಪೆಷಲ್ ಎಡಿಷನ್ ಡಿವಿಡಿಗಳು ಹೆಚ್ಚು ಹೆಚ್ಚು ಅತ್ಯಾಧುನಿಕವೂ ಸಂಕೀರ್ಣವೂ ಆದವು. 'ದಿ ಲಾರ್ಡ್ ಆಫ್ ದಿ ರಿಂಗ್ಸ್' ಟ್ರಿಲಜಿಯ ಥಿಯೇಟರ್ ಆವೃತ್ತಿ ಹಾಗೂ ವಿಶೇಷ ವಿಸ್ತ್ರತ ಆವೃತ್ತಿಗಳೆರಡೂ ಮನೆಯಲ್ಲಿ ನೋಡುವ ಪ್ರೇಕ್ಷಕರಿಗೆಂದು ಡಿವಿಡಿಗಳಲ್ಲಿ ಲಭ್ಯವಾದವು. ೨೦೦೧ರಲ್ಲಿ ಶುರುವಾದ ಹ್ಯಾರಿ ಪಾಟರ್ ಚಲನಚಿತ್ರ ಸರಣಿಯು ೨೦೧೧ರಲ್ಲಿ ಮುಗಿಯುವ ವೇಳೆಗೆ ಸಾರ್ವಕಾಲಿಕ ಅತ್ಯಧಿಕ ಗಳಿಕೆಯ ಸರಣಿಯಾಗಿದ್ದು, ಆ ದಾಖಲೆಯನ್ನು ೨೦೧೫ರಲ್ಲಿ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ ಮುರಿಯಿತು. 'ದಿ ಡಾರ್ಕ್ ನೈಟ್' ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಭಾಗಶಃ ತಯಾರಾದ ಮೊಟ್ಟಮೊದಲ ಚಲನಚಿತ್ರವಾಯಿತು. ೨೦೦೩ರಲ್ಲಿ ಥ್ರೀಡಿ ಸಿನಿಮಾಗಳ ಜನಪ್ರಿಯತೆ ಮರುಹುಟ್ಟು ಪಡೆದವು. ಜೇಮ್ಸ್ ಕ್ಯಾಮೆರಾನ್ ನ 'ಘೋಸ್ಟ್ ಆಫ್ ದಿ ಅಬಿಸ್' ರಿಯಾಲಿಟಿ ಕ್ಯಾಮೆರಾ ಸಿಸ್ಟಂ ಬಳಸಿ ಬಿಡುಗಡೆಯಾದ ಮೊಟ್ಟಮೊದಲ ಪೂರ್ಣ ಪ್ರಮಾಣದ ಥ್ರೀಡಿ. ಐಮ್ಯಾಕ್ಸ್ ಚಲನಚಿತ್ರವೆನಿಸಿಕೊಂಡಿತು. ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಿನಿಮಾ ಛಾಯಾಗ್ರಾಹಕ ವಿನ್ಸ್ ಪೇಸ್, ನಿರ್ದೇಶಕ ಕ್ಯಾಮೆರಾನ್ ಗಾಗಿ, ಆತನ ಅಗತ್ಯಗಳಿಗೆ ತಕ್ಕಂತೆ ನಿರ್ಮಿಸಿ ಕೊಟ್ಟ ಈ ಕ್ಯಾಮೆರಾ ವ್ಯವಸ್ಥೆಯಲ್ಲಿ ಫಿಲ್ಮ್ ಬದಲು ಅತ್ಯಾಧುನಿಕ ಹೆಚ್ ಡಿ ವಿಡಿಯೋ ಕ್ಯಾಮೆರಾಗಳು ಬಳಕೆಯಾದವು. ಇದೇ ವ್ಯವಸ್ಥೆ ಬಳಸಿ 'ಸ್ಪೈ ಕಿಡ್ಸ್ ಥ್ರೀಡಿ: ಗೇಮ್ ಓವರ್' (೨೦೦೩), 'ಏಲಿಯನ್ಸ್ ಆಫ್ ದಿ ಡೀಪ್ ಐಮ್ಯಾಕ್ಸ್' (೨೦೦೫) ಮತ್ತು 'ದ ಅಡ್ವೆಂಚರ್ಸ್ ಆಫ್ ಶಾರ್ಕ್ ಬಾಯ್ ಅಂಡ್ ಲಾವಾಗರ್ಲ್ ಇನ್ ಥ್ರೀಡಿ' (೨೦೦೫) ನಿರ್ಮಾಣವಾದವು. ಜೇಮ್ಸ್ ಕ್ಯಾಮೆರಾನ್ ನ 'ಅವತಾರ್' ಎಲ್ಲ ಕಾಲಕ್ಕೂ ಅತ್ಯಧಿಕ ಗಳಿಕೆಯ ಚಲನಚಿತ್ರವೆಂದು ಗೊತ್ತಾದ ಬಳಿಕ, ಸ್ವಲ್ಪ ಕಾಲ ಥ್ರೀಡಿ ಚಲನಚಿತ್ರಗಳು ಜನಪ್ರಿಯವಾಗಿ ಇದೇ ತರಹದ ಹಲವಾರು ಚಲನಚಿತ್ರಗಳು ಬಿಡುಗಡೆಯಾದವು. ಅದರಲ್ಲಿ ವಿಮರ್ಶಾತ್ಮಕವಾಗಿ ಹಾಗೂ ಆರ್ಥಿಕವಾಗಿ ಯಶಸ್ವಿಯಾದ ಚಲನಚಿತ್ರಗಳೆಂದರೆ ಯೂನಿವರ್ಸಲ್ ಪಿಕ್ಚರ್ಸ್/ ಇಲ್ಯೂಮಿನೇಷನ್ ಎಂಟರ್ಟೈನ್ಮೆಂಟ್ ನ 'ಡೆಸ್ಪಿಕಬಲ್ ಮಿ' ಮತ್ತು ಡ್ರೀಂವರ್ಕ್ಸ್ ಅನಿಮೇಷನ್ ನ 'ಹೌ ಟು ಟ್ರೇನ್ ಯುವರ್ ಡ್ರಾಗನ್', 'ಶ್ರೆಕ್ ಫಾರೆವರ್ ಆಫ್ಟರ್' ಮತ್ತು 'ಮೆಗಾಮೈಂಡ್'. ಮೊಟ್ಟಮೊದಲ ಬಾರಿಗೆ ಅತಿಸೂಕ್ಷ್ಮವಾದ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದ ಬಳಕೆ ಹಾಗೂ 'ರೈಸ್ ಆಫ್ ದಿ ಪ್ಲಾನೆಟ್ ಆಫ್ ಏಪ್ಸ್'ನಂತಹ ಚಿತ್ರಗಳ ಮೇಲೆ ತನ್ನ ಪ್ರಭಾವ ಬೀರಿದುದಕ್ಕಾಗಿ 'ಅವತಾರ್' ಗುರುತಾಗಿದೆ. ಹಾಲಿವುಡ್ ನಲ್ಲಿ ಸೂಪರ್ ಹೀರೋ ಮೇಲಿನ ಚಿತ್ರಗಳು ಬಹಳಷ್ಟು ಜನಪ್ರಿಯತೆ ಹಾಗೂ ಯಶಸ್ಸನ್ನು ಕಂಡು, ಇಂದಿಗೂ ನಿಯಮಿತವಾಗಿ ಪ್ರತಿ ವರ್ಷ ಮಾರ್ವೆಲ್ ಮತ್ತು ಡಿಸಿ ಕಾಮಿಕ್ಸ್ ಆಧಾರಿತ ಚಿತ್ರಗಳು ಬಿಡುಗಡೆಯಾಗುತ್ತಿವೆ. ೨೦೧೯ರವರೆಗೆ ಬಾಕ್ಸ್ ಆಫೀಸ್ ಗಳಿಕೆ ನೋಡಿ ಹೇಳುವುದಾದರೆ ಸೂಪರ್ ಹೀರೋ ಜಾನರ್ ನ ಚಿತ್ರಗಳು ಮೇಲುಗೈ ಸಾಧಿಸಿವೆ. ಆ ವರ್ಷದ ಸೂಪರ್ ಹೀರೋ ಚಿತ್ರ 'ಅವೆಂಜರ್ಸ್: ಎಂಡ್ಗೇಮ್' ಎಲ್ಲಾ ಕಾಲಕ್ಕೂ ಬಾಕ್ಸ್ ಆಫೀಸಿನಲ್ಲಿ ಅತಿ ಹೆಚ್ಚು ಯಶಸ್ಸು ಕಂಡ ಚಿತ್ರವೆನಿಸಿತು.[೧]
ಅಪೂರ್ವ ಪ್ರತಿಭೆಯ ವಿಜಯ್ ಸೇತುಪತಿ
[ಬದಲಾಯಿಸಿ]ವಿಜಯ್ ಗುರುನಾಥ ಸೇತುಪತಿ (ಜನನ: ೧೬ ಜನವರಿ ೧೯೭೮) ಒಬ್ಬ ಭಾರತೀಯ ಚಲನಚಿತ್ರ ನಟರು ಮತ್ತು ನಿರ್ಮಾಪಕರು, ಇವರು ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ಕಾರ್ಯನಿರತರಾಗಿದ್ದಾರೆ. ಅವರಿಗೆ ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿ, ಎರಡು ಬಾರಿ ಫಿಲ್ಮ್ (ದಕ್ಷಿಣ) ಮತ್ತು ಎರಡು ಬಾರಿ ತಮಿಳು ನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಸೇರಿದ ಹಾಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅವರು ಹಿಂದಿ, ಮಲಯಾಳಂ, ತೆಲುಗು ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ಚಲನಚಿತ್ರ ರಂಗವನ್ನು ಪ್ರವೇಶಿಸುವ ಮುಂಚೆ ಸೇತುಪತಿಯವರು ದುಬೈಯಲ್ಲಿ ಒಬ್ಬ ಎನ್‌ಆರ್‌ಐ ಅಕೌಂಟೆAಟ್ ಆಗಿದ್ದರು ಎನ್ನುವುದು ಸ್ವಾರಸ್ಯಕರ ಸಂಗತಿ. ಅವರು ತಮ್ಮ ಚಲನಚಿತ್ರ ವೃತ್ತಿಯನ್ನು ಆರಂಭಿಸಿದಾಗಲೂ ಹಿನ್ನೆಲೆಯ ಒಬ್ಬ ನಟನಾಗಿದ್ದರು. ಮತ್ತು ತೆನ್ಮರೆಕ್ಕು ಪರುವಕಾಟ್ರು ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ಅಭಿನಯಿಸುವ ಮುನ್ನ ಅವರು ಹಲವು ಚಿತ್ರಗಳಲ್ಲಿ ಚಿಕ್ಕ ಚಿಕ್ಕ ಪೋಷಕ ಪಾತ್ರಗಳನ್ನು ಮಾಡಿದರು. ೨೦೧೨ರಲ್ಲಿ, ಸುಂದರಪಾಡಿಯನ್, ಪಿe಼Á್ಜ ಮತ್ತು ನಡುವುಳ ಕೊಂಜಮ್ ಪಕ್ಕತ ಕಾಣೋಮ್ ಚಿತ್ರಗಳ ಮೂಲಕ ಪ್ರಸಿದ್ದಿಗೆ ಬಂದರು.
ಆಗಸ್ಟ್ ಮೂರು, ೨೦೧೪ರಲ್ಲಿ ಚೆನ್ನೈ ಮೆಯೋಪಥಿ ಇನ್ಸ್ಟಿಟ್ಯೂಟ್ ಆಫ್ ಮಸ್ಕ್ಯುಲರ್ ಡಿಸ್ಟ್ರಫಿ ಅಂಡ್ ರಿಸರ್ಚ್ ಸೆಂಟರ್ ಮರಿನಾ ಬೀಚಿನಲ್ಲಿ ಸ್ನಾಯು ಕ್ಷಯ ಕುರಿತು ಜಾಗೃತಿ ಮೂಡಿಸಲು ರಾಲಿಯೊಂದನ್ನು ಆಯೋಜಿಸಿತ್ತು. ಆ ರಾಲಿಯಲ್ಲಿ ಕಲಾವಿದೆಯರಾದ ಗಾಯತ್ರಿ ಹಾಗೂ ವರಲಕ್ಷ್ಮೀ ಶರತ್ಕುಮಾರ್ ಅವರೊಂದಿಗೆ ಸೇತುಪತಿ ಕೂಡ ಭಾಗವಹಿಸಿದ್ದರು. ೧೫ ಜ್ಯೂನ್, ೨೦೨೧ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿದ ಸೇತುಪತಿ ಕೊರೋನ ಪರಿಹಾರ ನಿಧಿಗೆ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು.
ಚಿತ್ರಕಥೆ
[ಬದಲಾಯಿಸಿ]ಸೇತುಪತಿ ಅವರಿಗೆ ಒಬ್ಬ ಅಣ್ಣ, ಒಬ್ಬ ತಮ್ಮ ಹಾಗೂ ಒಬ್ಬ ತಂಗಿ ಇದ್ದಾರೆ. ದುಬೈನಿಂದ ೨೦೦೩ರಲ್ಲಿ ಹಿಂದಿರುಗಿದ ಸೇತುಪತಿ ಆನ್ಲೈನ್ ನಲ್ಲಿ ಪರಿಚಯವಾದ ಗೆಳತಿ ಜೆಸ್ಸಿಯನ್ನು ವಿವಾಹವಾದರು. ಅವರಿಬ್ಬರಿಗೂ ಸೂರ್ಯ ಮತ್ತು ಶ್ರೀಜಾ ಎಂಬೆರಡು ಮಕ್ಕಳಿದ್ದಾರೆ. ಶಾಲಾ ದಿನಗಳಲ್ಲಿ ತೀರಿಕೊಂಡ ತನ್ನ ಸ್ನೇಹಿತನ ನೆನಪಿನಲ್ಲಿ ಸೇತುಪತಿ ತಮ್ಮ ಮಗನಿಗೆ ಸೂರ್ಯ ಎಂಬ ಹೆಸರಿಟ್ಟರು. ಸೂರ್ಯ ೨೦೧೫ರಲ್ಲಿ ಬಿಡುಗಡೆಯಾದ ನಾನುಂ ರೌಡಿ ಧಾನ್ ಚಿತ್ರದಲ್ಲಿ ಬಾಲಕ ಸೇತುಪತಿಯ ಪಾತ್ರ ಮಾಡುವ ಮೂಲಕ ಸಿನಿಮಾರಂಗ ಪ್ರವೇಶಿಸಿದನು. ೨೦೧೯ರಲ್ಲಿ ಬಿಡುಗಡೆಯಾದ ಸಿಂದುಬಾದ್ ಚಿತ್ರದಲ್ಲಿ ಮತ್ತೆ ಅಪ್ಪನೊಂದಿಗೆ ನಟಿಸಿದ್ದಾನೆ.
ಚಿತ್ರಕಥೆಸೇತುಪತಿಯವರು ಸೂಡು ಕವ, ಇದರ್ಕುದಾನೆ ಆಸೈಪಟ್ಟ ಬಾಲಕುಮಾರ, ಪಣ್ಣೆಯಾರುಮ್ ಪದ್ಮಿನಿಯುಮ್, ಕಾದಲುಮ್ ಕಡಂದು ಪೋಗುಮ್. ಇರೈವಿ, ವಿಕ್ರಮ್ ವೇಧಾ, ‘೯೬’, ಚೆಕ್ಕ ಚಿವಂದ ವಾನಮ್, ಪೇಟ್ಟೆ, ಮಾಸ್ಟರ್ ಅಂಡ್ ವಿಕ್ರಮ್ ಮುಂತಾದ ಚಿತ್ರಗಳ ಮೂಲಕ ಅವರು ಒಬ್ಬ ಉತ್ತಮ ನಟರಾಗಿ ನೆಲೆಯೂರಿದರು. ಸೂಪರ್ ಡೀಲಕ್ಸ್ ಎಂಬ ಚಿತ್ರದಲ್ಲಿ ಅಭಿನಯಿಸಿದ ಟ್ರಾಯನ್ಸ್-ಮಹಿಳೆಯ ಪಾತ್ರಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟ ರಾಷ್ಟಿಯ ಚಲನಚಿತ್ರ ಪ್ರಶಸ್ತಿ ಲಭಿಸಿತು. ಅವರು ಹಿಂದಿ ಭಾಷೆಯ ಎಂದ ಸರಣಿಯಲ್ಲಿ ಮತ್ತು ಪ್ರಖ್ಯಾತ್ ಜವಾನ್ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
ಅವರು ಚೆನ್ನೆನ ಕೂದು ಪಿ ಪಟ್ಟರೈ ರಂಗಭೂಮಿ ತಂಡದಲ್ಲಿ ಒಬ್ಬ ಅಕೌಂಟೆAಟ್ ಮತ್ತು ನಟನಾಗಿ ಸೇರಿಕೊಂಡಿದ್ದರು. ಅಲ್ಲಿ ಅವರು ನಟರುಗಳನ್ನು ಹತ್ತಿರದಿಂದ ನೋಡಿದರು. ಹೀಗೇ ಮಾಡುತ್ತಾ ಕೆಲವು ಚಿತ್ರಗಳಲ್ಲಿ ಅವರು ನಾಯಕ ನಟನ ಸ್ನೇಹಿತನಂಥ ಪೋಷಕ ಪಾತ್ರಗಳಲ್ಲಿ ಅಭಿಯನ ಲೋಕದಲ್ಲಿ ತಮ್ಮ ಮೊದಲ ಹೆಜ್ಜೆಯನ್ನಿಟ್ಟರು. ಅವರು ಸುಪ್ರಸಿದ್ದ ಪೆಣ್ ಚಿತ್ರವೂ ಸೇರಿದ ಹಾಗೆ ಕೆಲವು ಟಿಲಿವಿಷನ್ ಸೀರಿಯಲ್‌ಗಳಲ್ಲಿ, ಕಲೈಂಗಾರ್ ಟಿವಿಯ ನಾಳಯ ಇಯಕುನರ್ ಕಾರ್ಯಕ್ರಮದ ಭಾಗವಾಗಿ ಹಲವು ಕಿರುಚಿತ್ರಗಳಲ್ಲಿ ಅಭಿನಯಿಸಿದರು. ಕಿರುಚಿತ್ರಗಳಲ್ಲಿ ನಟಿಸುವ ಒಂದು ಫಲಕಾರಿ ಅವಧಿಯು ಕಾರ್ತಿಕ್ ಸುಬ್ಬರಾಜ್ ಜೊತೆಯಲ್ಲಿ ಮುಂದುವರೆಯಿತು. ಇದರಿಂದಾಗಿ ನಾರ್ವೇ ತಮಿಳು ಫಿಲ್ಮ್ ಸ್ಟಿವಲ್‌ನ ಕಿರು ಚಿತ್ರ ಸ್ಪರ್ಧೆಯಲ್ಲಿ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಲಭಿಸಿತು. ಇವರ ಕೌಶಲವನ್ನು ಗುರುತಿಸಿದ ಕಾರ್ತಿಕ್ ಸುಬ್ಬರಾಜ್‌ಅವರು ಇವರನ್ನು ತಮ್ಮ ಮೊದಲ ಕಥಾಚಿತ್ರದಲ್ಲಿ ಹಾಕಿಕೊಂಡರು,
ನಿರ್ದೇಶಕ ಸೆಲ್ವರಾಘವನ್‌ಅವರು ಒಂದು ಸ್ಟುಡಿಯೋದಲ್ಲಿ ತಮ್ಮ ಗ್ಯಾಂಗ್‌ಸ್ಟರ್ ಫಿಲ್ಮ್ ಪುದುಪೇಟ್ಟೆöಗಾಗಿ ನಟರುಗಳ ಆಡಿಷನ್ ಮಾಡುವವರಿದ್ದರು. ಅದಕ್ಕಾಗಿ ಕೆಲವು ಕಲಾವಿದರು ಹೊರಟಿದ್ದರು, ಸೇತುಪತಿಯೂ ಅವರೊಂದಿಗೆ ಸೇರಿಕೊಂಡರು. ಆ ಚಿತ್ರದಲ್ಲಿ ಧನುಶ್‌ಅವರ ಸ್ನೇಹಿತನ ಪಾತ್ರಕ್ಕೆ ಸೇತುಪತಿ ಆಯ್ಕೆಯಾದರು. ಪ್ರಭು ಸೋಲೊಮನ್‌ರ ಲೀ ಚಿತ್ರದಲ್ಲಿ ಅಭಿನಯಿಸ ನಂತರ ಅವರನ್ನು ನಿರ್ದೇಶಕ ಸುಸೀಂದಿರನ್‌ಅವರು, ವೆನ್ನಿಲ ಕಬಡಿ ಕುಳು ಮತ್ತು ನಾನ್ ಮಹಾನ್ ಅಲ್ಲೆ ಎಂಬ ತಮ್ಮ ಮೊದಲ ಎರಡು ಚಿತ್ರಗಳಲ್ಲಿ ಚಿಕ್ಕ ಪೋಷಕ ಪಾತ್ರಗಳಲ್ಲಿ ಅವಕಾಶ ಕೊಟ್ಟರು. ಮುಂದೆ ಸೇತುಪತಿ ತಮಗೆ “ತಮ್ಮ ಬಹುದಿನಗಳ ಕನಸನ್ನು ಸಾಕಾರಗೊಳಿಸಿಕೊಳ್ಳುವುದಕ್ಕಾಗಿ ಮುಖ್ಯವಾದ ಪಾತ್ರವನ್ನು ಕೊಟ್ಟ” ಕೀರ್ತಿಯನ್ನು ಸುಸೀಂದಿರನ್‌ಅವರಿಗೆ ನೀಡುತ್ತಾರೆ.
ಸೇತುಪತಿ, ಅಖಾಡ ಎನ್ನುವ ತಮಿಳು-ಕನ್ನಡ ದ್ವಿಭಾಷಿ ಚಿತ್ರದಲ್ಲಿ ಕೆಲಸ ಮಾಡಿದರು. ಸ್ವಾರಸ್ಯಕರ ಸಂಗತಿಯೆದರೆ ತಮಿಳು ಆವೃತ್ತಿಯಲ್ಲಿ ಅವರನ್ನು ನಾಯಕ ಪಾತ್ರಕ್ಕೆ ಆಯ್ಕೆ ಮಾಡಿದ್ದ ನಿರ್ದೇಶಕರು ಅದರ ಕನ್ನಡ ಆವೃತ್ತಿಯಲ್ಲಿ ಅವರಿಗೆ ಪ್ರತಿನಾಯಕನ ಪಾತ್ರವನ್ನು ನೀಡಿದ್ದರು. ಅದು ಹೇಗೋ ಈ ಚಿತ್ರ ಥಿಯೇಟರುಗಳಲ್ಲಿ ಬಿಡುಗಡೆ ಕಾಣಲೇ ಇಲ್ಲ. ನಿರ್ದೇಶಕ ಸೀನು ರಾಮಸಾಮಿ ಒಂದು ಆಡಿಷನ್‌ನಲ್ಲಿ ಸೇತುಪತಿಯವರ ಪ್ರತಿಭೆಯನ್ನು ಗುರುತಿಸಿದರು. ಇದರಿಂದಾಗಿ ಅವರಿಗೆ ರಾಮಸಾಮಿಯವರ ತೆನ್ಮರೆಕ್ಕು ಪರುವಕಾಟ್ರು ಚಿತ್ರದಲ್ಲಿ ನಾಯಕ ಪಾತ್ರವನ್ನು ಅಭಿನಯಿಸುವ ಅವಕಾಶ ದೊರೆಯಿತು. ಸೇತುಪತಿಯವರದು ಇದರಲ್ಲಿ ಅವರು ಒಬ್ಬ ಕುರುಬನ ಪಾತ್ರ. ವರ್ಣವ್ಯವಸ್ಥೆಯ ಸಮಾಜದ ಕೆಳ ಜಾತಿಯ ವ್ಯಕ್ತಿಯ ಈ ಪಾತ್ರವನ್ನು ಅವರು ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದರು. ಈ ಚಿತ್ರವು ಆ ವರ್ಷದ ಅತ್ಯುತ್ತಮ ತಮಿಳು ಕಥಾ ಚಿತ್ರ ಎನ್ನುವುದನ್ನೂ ಒಳಗೊಂಡAತೆ ಮೂರು ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿತು.
ಸೇತುಪತಿಯವರ ವೃತ್ತಿ ಬದುಕಿನಲ್ಲಿ ೨೦೧೨ರ ವರ್ಷವು ಮಹತ್ವದ ತಿರುವನ್ನು ತಂದಿತು; ಆ ವರ್ಷ ಬಿಡುಗಡೆಯಾದ ಅವರ ಮೂರೂ ಚಿತ್ರಗಳು ವಾಣಿಜ್ಯದ ದೃಷ್ಟಿಯಿಂದ ಯಶಸ್ವಿಯಾಗಿದ್ದಷ್ಟೇ ಅಲ್ಲ, ವಿಮರ್ಶಕರ ಮೆಚ್ಚುಗೆಯನ್ನೂ, ಪ್ರೇಕ್ಷಕರಲ್ಲಿ ಜನಪ್ರಿಯತೆಯನ್ನೂ ಗಳಿಸಿತು. ಎಂ. ಸಸಿಕುಮಾರ್ ನಾಯಕ ಪಾತ್ರದಲ್ಲಿದ್ದ ಸುಂದರಪಾಡಿಯನ್ ಎಂಬ ಚಿತ್ರದಲ್ಲಿ ಸೇತುಪತಿ ಮೊದಲ ಸಲ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡರು, ನಂತರ, ಕಾರ್ತಿಕ್ ಸುಬ್ಬರಾಜ್‌ಅವರ ಪಿಜ್ಜಾ ಎಂಬ ಥ್ರಿಲರ್ ಚಿತ್ರದಲ್ಲಿ ಅವರು ಡೆಲಿವರಿ ಬಾಯ್, ಮೈಕಲ್ ಪಾತ್ರವನ್ನು ಮಾಡಿದ್ದರು. ಮತ್ತು ಬಾಲಾಜಿ ತರಾನಿದರನ್, ಕಾಮೆಡಿ ಚಿತ್ರ ನಡುವುಳ ಕೊಂಜಮ್ ಪಕ್ಕತ ಕಾಣೊಮ್ ಚಿತ್ರಗಳಲ್ಲಿ ನಾಯಕ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಮೆರೆದರು. ಇದರಲ್ಲಿ ತನ್ನ ಮದುವೆಗೆ ಎರಡು ದಿನ ಮುಂಚೆ ತನ್ನ ನೆನಪನ್ನು ಕಳೆದುಕೊಳ್ಳುವ, ಪ್ರೇಮ್ ಪಾತ್ರವನ್ನು ಮಾಡಿದ್ದರು. ಎರಡೂ ಚಿತ್ರಗಳಲ್ಲಿನ ಪಾತ್ರಗಳು ವಿಮರ್ಶಕರ ಭಾರಿ ಮೆಚ್ಚುಗೆಗೆ ಪಾತ್ರವಾದುವು. ಪಿಜ್ಜಾ ಅವರ ಅಭಿನಯವು ಅತ್ಯುತ್ತಮ ನಟ - ತಮಿಳು, ಫಿಲ್ಮ್ ನಾಮಿನೇಷನ್ನಿನ ಅರ್ಹತೆಯನ್ನು ಪಡೆಯಿತು. ದ ಟೈಮ್ಸ್ ಆಫ್ ಇಂಡಿಯಾ ವಿಮರ್ಶಕರಾದ ಎಂ.ಸುಗAತ್‌ಅವರ ಪ್ರಕಾರ ಸೇತುಪತಿಯವರು “ಪಿಜ್ಜಾ ಚಿತ್ರದ ಅದ್ಭುತ ಅಭಿನಯವನ್ನೇ ಮುಂದುವರಿಸಿ ಪ್ರೇಮ್ ಪಾತ್ರದ ಸಂಕೀರ್ಣ ಮನಸ್ಥಿತಿಯನ್ನು ತಮ್ಮ ಖಾಲಿಖಾಲಿ ನೋಟದಿಂದ ಮತ್ತು ಮಾತಿನ ಸಾಲುಗಳ ನಡುವೆ ನೀಡುವ ಅರ್ಥಗರ್ಭಿತವಾದ ಪಾತ್ರಗಳಿಂದ ಅನನ್ಯಗೊಳಿಸುತ್ತಾರೆ. ಅಲ್ಲದೇ, ಅವರು ಆ ಪಾತ್ರವು ಪುನರಾವರ್ತಿಸುವ ಸಂಭಾಷಣೆಯನ್ನು ತಮ್ಮ ವಿಶಿಷ್ಟವಾದ ಟೈಮಿಂಗ್‌ನಿAದಾಗಿ ಪ್ರೇಕ್ಷಕರಿಗೆ ಕಿರಿಕಿರಿಯಾಗದಂತೆ ನಿರ್ವಹಿಸುತ್ತಾರೆ.” ಬಿಬಿಸಿ ತಮಿಳ್ ಪ್ರಕಟಿಸಿದ ಒಂದು ಸಮೀಕ್ಷೆಯ ಪ್ರಕಾರ ಪಿಜ್ಜಾ ಮತ್ತು ನಡುವುಳ ಕೊಂಜಮ್ ಪಕ್ಕತ ಕಾಣೊಮ್ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡವು. ಎರಡೂ ಚಿತ್ರಗಳು ೨೦೧೩ರ ನಾರ್ವೆ ತಮಿಳು ಫಿಲ್ಮ್ ಸ್ಟಿವಲ್‌ನಲ್ಲಿ ಸ್ಪರ್ಧಿಸಿದ್ದವು. ಎಡಿಸನ್ ಅವಾರ್ಡ್ಸ್ ಮತ್ತು ಬಿಗ್ ಎಎಂ ತಮಿಳು ಎಂಟರ್‌ಟೇನ್‌ಮೆoಟ್ ಅವಾರ್ಡ್ಸ್ನಲ್ಲಿ ಸೇತುಪತಿ ಎರಡೂ ಚಿತ್ರಗಳಿಗಾಗಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು
ಇoಡಿಯಾಗ್ಲಿಜ್.ಕಾಮ್ ಸೇತುಪತಿಯವರನ್ನು ೨೦೧೨ರ ಅತ್ಯುತ್ತಮ ತಮಿಳು ನಟನೆಂದು ಘೋಷಿಸುತ್ತಾ, ಅವರನ್ನು “ಕೊಲ್ಲಿವುಡ್‌ನ ಉದಯೋನ್ಮುಖ ತಾರೆ” ಎಂದು ಪ್ರಶಂಸಿಸಿತು. ಚಲನಚಿತ್ರ ವಿಮರ್ಶಕರಾದ ಭರದ್ವಾಜ್ ರಂಗನ್‌ಅವರು, “ಸೇತುಪತಿಯವರು ತಮಿಳು ಸಿನಿಮಾ ಕ್ಷೇತ್ರದಿಂದ ಮೊಟ್ಟಮೊದಲ ಬಾರಿಗೆ ಇಂಡೀ ಸ್ಟಾರ್ ಆಗಿದ್ದಾರೆ.” ಎಂದರು.
ಫಿಲ್ಮ್ ಕಂಪ್ಯಾನಿಯನ್, ಆಂಡವನ್ ಕಾಟ್ಟಲೈ ಮತ್ತು ಸೂಪರ್ ಡೀಲಕ್ಸ್ ಚಿತ್ರಗಳಲ್ಲಿನ ಸೇತುಪತಿಯವರ ಅಭಿನಯವನ್ನು ದಶಕದ ೧೦೦ ಅತಿ ಶ್ರೇಷ್ಠ ಅಭಿನಯಗಳಲ್ಲಿ ಒಂದು ಎಂದರು. ಸೂಪರ್ ಡೀಲಕ್ಸ್ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಷ್ಟಿಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತು. ೨೦೨೦ರಲ್ಲಿ ಅವರು ಕಾ ಪೆ ರಣಸಿಂಗಮ್ ಚಿತ್ರದಲ್ಲಿ ಐಶ್ವರ್ಯ ರಾಜೇಶ್ ಜೊತೆಯಲ್ಲಿ ಅಭಿನಯಿಸಿದರು. ಅಕ್ಟೋಬರ್ ೨೦೨೦ರಲ್ಲಿ, ಸೇತುಪತಿಯವರು ಶ್ರೀ ಲಂಕಾದ ಕ್ರಿಕಿಟ್ ತಾರೆ ಮುತ್ತೆ ಮುರುಳಿದರನ್‌ರ ಬಯೋಪಿಕ್, ‘೮೦೦’ರಲ್ಲಿ ಪ್ರಮುಖ ಪಾತ್ರವನ್ನು ವಹಿಸುವರು ಎಂದು ಘೋಷಿಸಲಾಯಿತು. ಆ ಪಾತ್ರದ ಕುರಿತು ರಾಜಕೀಯ ವಿವಾದ ಉಂಟಾದ ಕಾರಣಕ್ಕಾಗಿ ಸೇತುಪತಿ ನಂತರ ಮುರಲಿಧರನ್‌ಅವರ ವಿನಂತಿ ಮೇರೆಗೆ ತಾವು ಆ ಚಿತ್ರದ ಯೋಜನೆಯಿಂದ ಹೊರಬರುತ್ತಿರುವುದಾಗಿ ಪ್ರಕಟಿಸಿದರು.
೨೦೨೧ರಲ್ಲಿ ಸೇತುಪತಿಯವರು ಲೋಕೇಶ್ ಕನಕರಾಜ್‌ಅವರ ಮಾಸ್ಟರ್ ಚಿತ್ರದಲ್ಲಿ ವಿಜಯ್‌ಅವರ ಜೊತೆಯಲ್ಲಿ ಅಭಿನಯಿಸಿದರು. ನಂತರ ಅವರು ಬುಚ್ಚಿ ಬಾಬು ಸನಾಅವರು ಬರೆದು, ನಿರ್ದೇಶಿಸಿದ ಉಪ್ಪೆನ ಎಂಬ ತೆಲುಗು ಚಿತ್ರದಲ್ಲಿ ಅಭಿನಯಿಸಿದರು. ಇದರ ನಂತರ ಸೇತುಪತಿಯವರು ಲಾಬಮ್, ತುಘಲಕ್ ದರ್ಬಾರ್ ಮತ್ತು ಅನಬೆಲ್ ಸೇದುಪತಿ ಚಿತ್ರಗಳಲ್ಲಿ ನಟಿಸಿದರು. ಅವರ ಮಗಳು ಮೊದಲ ಬಾರಿಗೆ ನಟಿಸಿದ ಮುಗಿಳ್ ಚಿತ್ರದಲ್ಲಿಯೂ ಇವರು ಇದ್ದರು. ಸೇತುಪತಿಯವರು ವೆಟ್ರಿಮಾರನ್‌ರ ವಿಡುದಲೈ ತಮಿಳು ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.
೨೦೨೨ರಲ್ಲಿ ವಿಘ್ನೇಶ್ ಸಿವನ್‌ರ ರೋಮ್ಯಾಂಟಿಕ್ ಕಾಮೆಡಿ ಕಾತುವಾಕಲೆ ರೆಂಡ್ ಕಾದಲ್ ಚಿತ್ರದಲ್ಲಿ ನಯನ್‌ತಾರ ಮತ್ತು ಸಮಂತಾಅವರ ಜೊತೆಯಲ್ಲಿ ನಟಿಸಿದ ನಂತರ ವಿಜಯ್ ಸೇತುಪತಿಯವರು ಕಡೈಸಿ ವ್ಯವಸಾಯಿ ಎಂಬ ಚಿತ್ರದಲ್ಲಿ ನಟಿಸಿದರು. ಮಾಸ್ಟರ್ ಚಿತ್ರದ ನಂತರ ಲೋಕೇಶ್ ಕನಕರಾಜ್ ನಿರ್ದೇಶನದ, ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿರುವ ವಿಕ್ರಮ್ ಚಿತ್ರದಲ್ಲಿ ವಿಜಯ್ ಸೇತುಪತಿಯವರಿಗೆ ಖಳನಾಯಕನ ಪಾತ್ರವನ್ನು ಅಭಿನಯಿಸುವ ಅವಕಾಶ ಸಿಕ್ಕಿತು. ಈ ಚಿತ್ರದಲ್ಲಿ ಅವರದು ಒಬ್ಬ ಡ್ರಗ್ ಡೀಲರ್ ಪಾತ್ರವಾಗಿತ್ತು. ವಿಕ್ರಮ್ ಚಿತ್ರವು ಹಲವು ಬಾಕ್ಸ್ ಆಫಿಸ್ ದಾಖಲೆಗಳನ್ನು ಮುರಿಯಿತು ಮತ್ತು ಅಧಿಕೃತವಾಗಿ ತಮಿಳು ನಾಡುವಿನಲ್ಲಿ ಅತ್ಯಧಿಕ ಗಳಿಸಿದ ಚಿತ್ರಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರವಾಯಿತು. ವಿಜಯ್ ಸೇತುಪತಿ ಮತ್ತು ಅವರ ಆಪ್ತ ಮಾರ್ಗದರ್ಶಕರಾದ ಸೀನು ರಾಮಸಾಮಿಯವರು ನಾಲ್ಕನೆಯ ಬಾರಿ ಒಂದುಗೂಡಿ ಕೌಟುಂಬಿಕ ಭಾವನೆಗಳಿಂದ ತುಂಬಿದ ಮಾಮಣಿದನ್ ಚಿತ್ರವನ್ನು ನೀಡಿದರು. ವಿಜಯ್ ಸೇತುಪತಿ, ‘೧೯’ ಎಂಬ ಮಲಯಾಳಂ ಚಿತ್ರದಲ್ಲಿ ನಿತ್ಯಾ ಮೆನನ್‌ಅವರೊಂದಿಗೆ ನಟಿಸಿದರು. ಅವರ ಆ್ಯಕ್ಷನ್ ಕಾಮಿಡಿ ಡಿಎಸ್‌ಪಿ ಚಿತ್ರವು ನಕಾರಾತ್ಮಕ ವಿಮರ್ಶೆಯನ್ನು ಪಡೆಯಿತು. ವಿಜಯ್ ಸೇತುಪತಿ, ಶಾರುಖ್ ಖಾನ್ ಮತ್ತು ನಯನ್‌ತಾರಾ ಅಭಿನಯದ ಪ್ರಖ್ಯಾತ ಜವಾನ್ ಚಿತ್ರದಲ್ಲಿ ಶಸ್ತಾçಸ್ತç ವ್ಯಾಪಾರಿಯ ಪಾತ್ರವನ್ನು ಮಾಡಿದ್ದಾರೆ, ಈ ಪಾತ್ರವು ಪ್ರೇಕ್ಷಕರು ಮತ್ತು ವಿಮರ್ಶಕರು ಇಬ್ಬರಿಂದಲೂ ಗಮನಾರ್ಹ ಪ್ರಶಂಸೆಯನ್ನು ಗಳಿಸಿತು.
ಉಲ್ಲೇಖಗಳು
[ಬದಲಾಯಿಸಿ]- [೨] https://saylordotorg.github.io/text_understanding-media-and-culture-an-introduction-to-mass-communication/s11-01-the-history-of-movies.html
2.[೩] https://en.wikipedia.org/wiki/Film
3.[೨] https://www.scienceandmediamuseum.org.uk/objects-and-stories/very-short-history-of-cinema
- ↑ https://en.wikipedia.org/wiki/History_of_film#1990s
- ↑ ೨.೦ ೨.೧ https://saylordotorg.github.io/text_understanding-media-and-culture-an-introduction-to-mass-communication/s11-01-the-history-of-movies.html
- ↑ https://en.wikipedia.org/wiki/Film
- https://en.wikipedia.org/wiki/Vijay_Sethupathi
- https://www.imdb.com/name/nm4043111/
- https://en-m-wikipedia-org.translate.goog/wiki/Vijay_Sethupathi_filmography?_x_tr_sl=en&_x_tr_tl=ta&_x_tr_hl=ta&_x_tr_pto=tc
- https://www.tring.co.in/popular-celebrities/vijay-sethupathi
- https://starsunfolded.com/vijay-sethupathi/