ಸದಸ್ಯ:1910375varshini.s/ನನ್ನ ಪ್ರಯೋಗಪುಟ
ಬೆಂಗಳೂರು ಬ್ರಿಗೇಡ್
[ಬದಲಾಯಿಸಿ]ಬೆಂಗಳೂರು ಬ್ರಿಗೇಡ್ ಬ್ರಿಟಿಷ್ ಭಾರತೀಯ ಸೇನೆಯ ಒಂದು ಭಾಗವಾಗಿತು. ಇದು ೧೯೦೪ ಅಲ್ಲಿ ಲಾರ್ಡ್ ಕಿಚೆನೆರ್ ಅವರ ಸುಧಾರಣೆಯ ಕಾರಣವಾಗಿ ರೂಪಿಸಲಾಯಿತು.ಈ ಬೆಂಗಳೂರು ಬ್ರಿಗೇಡ್ ಜರ್ಮನ್ ಈಸ್ಟ್ ಆಫ್ರಿಕಾದ ಟಾಂಗಾ ಮೇಲೆ ಯುದ್ಧ ಮಾಡಲು ಮುಖ್ಯವಾಗಿ ರೂಪಿಸಲಾಯಿತು.
ಬ್ರಿಟಿಷ್ ಭಾರತ ಸೇನೆ
[ಬದಲಾಯಿಸಿ]೧೮೫೬ ಇಂದ ೧೯೦೪ರ ವರೆಗೆ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಇತು. ಈ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಬ್ರಿಟಿಷ್ ಭಾರತೀಯ ಸೈನ್ಯ ಅಥವಾ ಭಾರತೀಯ ಸೈನ್ಯವು ಮುಖ್ಯ ಭಾಗವಾಗಿತು. ಬ್ರಿಟಿಷ್ ಭಾರತೀಯ ಸೀನೆಯು ಭದ್ರತೆ ಪಡೆಯಾಗಿ ಕಾರ್ಯ ನಿರ್ವಹಿಸಿದರು ಮತ್ತು ಮಹಾ ಯುದ್ಧ ೧ ಮತ್ತು ೨ರಲ್ಲಿ ಭಾಗವಹಿಸಿತು. ಆರಂಭದಲ್ಲಿ ಭಾರತೀಯ ಸೀನೆಯು ಬೆಂಗಾಲ್ ಸೇನೆ, ಮದ್ರಾಸ್ ಸೇನೆ ಹಾಗೂ ಬಾಂಬೆ ಸೇನೆ ಎಂದು ಮೂರು ಅಧ್ಯಕ್ಷತೆಯ ಸೇನೆಗಳು ಒಳಗೊಂಡಿದೆ. ಆದರೆ ೧೯೦೩ ಇಂದ ೧೯೪೭ರ ವರೆಗೆ ಭಾರತೀಯ ಸೇನೆಯು ಎರಡು ಭಾಗಗಳನ್ನು ಹೊಂದಿತು ಮುಖ್ಯವಾಗಿ ಭಾರತೀಯ ಸೇನೆ ಪಡೆಗಳು ಹಾಗು ಬ್ರಿಟಿಷ್ ಸೇನೆ ಪಡೆಗಳು. ಮೊದಲ ಮಹಾ ಯುದ್ಧದಲ್ಲಿ ಪ್ರಧಾನಿ ಹರ್ಬಾಟ್ ಲಾರ್ಡ್ ಕಿಚೆನೆರನ್ನು ಯುದ್ಧದ ಕಾರ್ಯದರ್ಶಿಯಾಗಿ ನೇಮಿಸಿದರು.ಜರ್ಮನ್ ದಾಳೆಯಿಂದ ಭಾರತವನ್ನು ರಕ್ಷಿಸಲು ಲಾರ್ಡ್ ಕಿಚೆನೆರ್ ಗೆ ಸೇನೆಯನ್ನು ರೂಪಿಸುವ ಕೆಲಸ ನೀಡಲಾಯಿತು. ೧೯೦೨ರಲ್ಲಿ ಲಾರ್ಡ್ ಕಿಚೆನೆರ್ರನ್ನು ಭಾರತದ ಕಮಾಂಡರ್ ಇನ್-ಚೀಫ್ ಆಗಿ ನೇಮಿಸಲಾಯಿತು. ನಾರ್ತ್ ವೆಸ್ಟರ್ನ್ ಫ್ರಾಂಟಿಯರಲ್ಲಿ ರಷ್ಯಾದ ವಿದೇಶಿ ಆಕ್ರಮಣದಿಂದ ರಕ್ಷಿಸಿಕೊಳ್ಳಳು ಲಾರ್ಡ್ ಕಿಚೆನೆರವರು ಅಧ್ಯಕ್ಷತೆಯ ಸೇನೆ, ಪಂಜಾಬ್ ಸೇನೆ ಹಾಗು ಹೈದೆರಾಬಾದ್ ಸೇನೆಯನ್ನು ಓಟುಗೂಡಿಸಿ ಭಾರತ ಸೇನೆಯನ್ನು ರೂಪಿಸಿದರು.
೧ನೇ ಬೆಂಗಳೂರು ಬ್ರಿಗೇಡ್
[ಬದಲಾಯಿಸಿ]ಡಿಸೆಂಬರ್ ೧೯೦೪ರಲ್ಲಿ ಲಾರ್ಡ್ ಕಿಚನರ ಸುಧಾರಣೆಯ ಮೂಲಕ ಮೊದಲ ಬೆಂಗಳೂರು ಬ್ರಿಗೇಡ್ ರಚಿಸಲಾಯಿತು. ಈ ಪಡೆ ಭಾರತೀಯ ಸೇನೆಯ ೯ ನೇ ವಿಭಾಗವಾಗಿದೆ (ಸಿಕಂದರಾಬಾದ್). ಜನವರಿ ೧೯೧೪ರಲ್ಲಿ ೯ನೇ ವಿಭಾಗ ( ಬೆಂಗಳೂರು ಬ್ರಿಗೇಡ್) ಮತ್ತೆ ಸುಧಾರಣೆಯಾಯಿತು. ಈ ಪಡೆ ಮಹಾಯುದ್ಧದ ಕೊನೆಯವರೆಗು ಭಾರತದ ಭದ್ರತಾ ಪಡೆಯಾಗಿ ನಿರ್ವಹಿಸಿಕೊಂಡು ಉಳಿಯಿತು. ಯುದ್ಧದ ಕೊನೆಯ ವರ್ಷದಲ್ಲಿ ಭಾರತದ ಸೇನೆಯಲ್ಲಿ ಹೊಸ ಘಟಗಳು ಸೇರಿಸಲಾಗಿದೆ. ಅದ್ಧುದರಿಂದ ಈ ಮೊದಲ ಬೆಂಗಳೂರು ಬ್ರಿಗೇಡ್ ವಿಭಾಗ ೧೯೨೬ರಲ್ಲಿ ವಿಸರ್ಜಿಸಲಾಯಿತು.
೨ನೇ ಬೆಂಗಳೂರು ಬ್ರಿಗೇಡ್
[ಬದಲಾಯಿಸಿ]ಎರಡನೇ ಬೆಂಗಳೂರು ಬ್ರಿಗೇಡ್ ಕೂಡಾ ಡಿಸೆಂಬರ್ ೧೯೦೪ರಲ್ಲಿ ರೂಪಗೊಂಡಿತು. ಮೇಜರ್ ಜನರಲ್ ಜಾನ್ ನಿಕ್ಸನ್ರವರು ಬೆಂಗಳೂರು ಜಿಲ್ಲೆಯ ಕಮಾಂಡರಾಗಿ ಚಾರ್ಜ್ ತೆಗೆದುಕೊಂಡರು. ೧೯೦೬ರಲ್ಲಿ 2ನೆಯ ಬೆಂಗಳೂರ್ ಬ್ರಿಗೇಡ್ ಬೆಂಗಳೂರು ಅಶ್ವದಳ ಬ್ರಿಗೇಡ್ ಎಂದು ಮರುನಾಮಕರಣ ಮಾಡಲಾಯಿತು. ೧ನೆಯ ಬೆಂಗಳೂರು ಬ್ರಿಗೇಡನ್ನು ಸ್ವತಃ ಬೆಂಗಳೂರು ಬ್ರಿಗೇಡ್ ಇಂದೇ ಕರೆಯಲಾಯಿತು. ಈ 2ನೇಯ ಬೆಂಗಳೂರು ಬ್ರಿಗೇಡ್ ೧೯೧೧ರಲ್ಲಿ ವಿಸರ್ಜಿಸಲಾಯಿತು.
೨ನೆಯ ಬೆಂಗಳೂರು ಬ್ರಿಗೇಡ್ನ ಕಮಾಂಡರ್ಗಳು :-
• ಮೇ ೧೯೦೩ರಲ್ಲಿ , ಮೇಜರ್ ಜನರಲ್ J. E. ನಿಕ್ಸನ್.
• ಆಗಸ್ಟ್ ೧೯೦೬ರಲ್ಲಿ , ಬ್ರಿಗೇಡಿಯರ್ ಜನರಲ್ ಎಫ್. ಜಿ. ಅಟ್ಕಿನ್ಸನ್.
• ಆಗಸ್ಟ್ ೧೯೦೯ರಲ್ಲಿ , ಜಿ. ಎ. ಕುಕ್ಸನ್.
೨೭ನೇ ಬೆಂಗಳೂರು ಬ್ರಿಗೇಡ್
[ಬದಲಾಯಿಸಿ]ಆಗಸ್ಟ್ ೧೯೧೪ರಲ್ಲಿ ಭಾರತದ ಸೇನೆಯ ಪಡೆ B ಜರ್ಮನ್ ಪೂರ್ವ ಆಫ್ರಿಕಾದ ಡೇರ್ ಇ ಸಲಾಮ್ ಮೇಲೆ ದಾಳಿ ಮಾಡಲು ೧೬ನೇ ವಿಭಾಗದ ಪೂನಾ ಬ್ರಿಗೇಡ್ಡನ್ನು ನೇಮಿಸಿದರು. ಆದರೆ ೧೬ನೇ ವಿಭಾಗದ ಪೂನಾ ಬ್ರಿಗೇಡ್ಡನ್ನು ಮತ್ತು ೬ನೇ ವಿಭಾಗದ ಪೂನಾ ಬ್ರಿಗೇಡ್ಡನ್ನು ಒಟ್ಟಿಗೆ ಮೆಸಪೊಟೋಮಿಯಾಗೆ ಕಳುಹಿಸಲಾಯಿತು. ಆಗಾಗಿ ಸೆಪ್ಟೆಂಬರ್ ೧೯೧೪ರಲ್ಲಿ ಬೆಂಗಳೂರು ಬ್ರಿಗೇಡ್ ಹಾಗು ಇಂಪೀರಿಯಲ್ ಸೇವೆ ಕಾಲಾಳುಪಡೆಯು ೨೭ನೇ ಬೆಂಗಳೂರು ಬ್ರಿಗೇಡಾಗಿ ವಿಲೀನಗೊಂಡಿತು. ಈ ಪಡೆಯನ್ನು ಜರ್ಮನ್ ಪೂರ್ವ ಆಫ್ರಿಕಾದ ಡೇರ್ ಇ ಸಲಾಮ್ ಮೇಲೆ ದಾಳಿ ಮಾಡಲು ತಯಾರುಪಡಿಸಿ ಕಳುಹಿಸಿದರು. ಅಕ್ಟೋಬರ್ ೧೬ರಂದು ಟೋಂಗಾ ಮೇಲೆ ದಾಳಿ ಮಾಡಲು ೨೭ನೇ ಬೆಂಗಳೂರು ಬ್ರಿಗೇಡ್ ಬಾಂಬೆ ಇಂದ ಹೊರಟಿತು. ಆದರೆ ಯುದ್ಧದಲ್ಲಿ ಬೆಂಗಳೂರು ಪಡೆ ಸೋತು ಮೋಮ್ಬಸ್ಸದಿಂದ ಹೊರಟ್ಟು ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೇರಿಕೊಂಡಿತು. ಆ ಯುದ್ಧದ ಸೋಲಿನ ನಂತರ ೨೭ನೇ ಬೆಂಗಳೂರು ಬ್ರಿಗೇಡ್ ಮುಕ್ತಯಗೊಂಡಿತು.