ಸದಸ್ಯ:1840470 Pavithra S M

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



" ನನ‍್ನ ಕಿರು ಪರಿಚಯ"

ಪರಿಚಯ

ನನ್ನ ಹೆಸರು ಪವಿತ್ರ.ಎಸ್.ಎಮ್. ೭ ಡಿಸೆಂಬರ್ ೧೯೯೯ ನನ್ನ ಜನ‍್ಮದಿನ. ನನ್ನ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಳವಳ್ಳಿ ಗ್ರಾಮ. ನನ್ನ ತಂದೆಯ ಹೆಸರು ಶೇಖರಪ್ಪ.ಎಮ್. ನನ್ನ ತಂದೆ ಬಸವಣಗುಡಿಯಲ್ಲಿರುವ 'ರೇನ್ಬೊ ಎಲೆಕ್ಟ್ರಿಕಲ್ಸ ಮತ್ತು ಎಂಜಿನಿಯರ್ಸ' ಎಂಬ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರಯಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ತಾಯಿಯ ಹೆಸರು ಪುಷ್ಪ ಶೇಖರ್. ನನ್ನ ತಾಯಿ ಗೃಹಿಣಿ. ನನಗೆ ಒಬ್ಬ ಸಹೋದರ ಇದ್ದಾನೆ. ಅವನ ಹೆಸರು ಪವನ.ಎಸ್.ಎಮ್. ನನ್ನ ಅಣ್ಣ ಈಗ ವಿದ್ಯಾಭ್ಯಾಸವನ್ನು ಮುಗಿಸಿ, ಒಂದು ವಿಮೆಯ ವ್ಯವಹಾರ ನಡೆಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ವಿದ್ಯಾಭ್ಯಾಸ

ನನ್ನ ತಂದೆ ೩೦ ವರ್ಷದ ಹಿಂದೆಯೆ ಕೆಲಸವನ್ನು ಹುಡುಕುತ್ತ ಬೆಂಗಳೂರಿಗೆ ಬಂದರು. ಆದ್ದರಿಂದ ನನ್ನ ವಿದ್ಯಾಭ್ಯಾಸವೆಲ್ಲವು ಬೆಂಗಳೂರಿನಲ್ಲಿಯೆ ನಡೆಯಿತು. ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಆಡುಗೋಡಿಯಲ್ಲಿರುವ ವಿವೇಕಾನಂದ ಇಂಟರ್ನ್ಯಾಷನಲ್ ಪಬ್ಲಿಕ್ ಹೈ ಸ್ಕೂಲನಲ್ಲಿ ನಡೆಯಿತು. ನನ್ನ ಶಾಲಾ ದಿನಗಳು ನನ್ನ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡ ಬೇಕಾದ ದಿನಗಳು. ೧೦ ವರ್ಷಗಳ ಕಾಲ ನನ್ನ ಪಾಲಿಗೆ ಏರಡನೇಯ ಮನೆ. ನಮ್ಮ ಶಿಕ್ಷಕರು ನಮ್ಮ ಜೊತೆ ಮನೆಮಂದಿಗಳಂತೆ ಭಾಂದವ್ಯ ಹೊಂದ್ದಿದ್ದರು. ನನ್ನ ಸ್ನೇಹಿತರು ನನ್ನ ಇನೊಂದು ಕುಟುಂಬ. ನಾನು ಶಾಲೆಯಲ್ಲಿ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಒಮ್ಮೆ ನಮ್ಮ ಜಾನಪದ ಕಲೆಗಳಲ್ಲಿ ಒಂದಾದ ಯಕ್ಷಗಾನವನ್ನು ಸಹ ಮಾಡಿದ್ದೇನೆ. ಶೈಕ್ಷಣಿಕ ಪ್ರವಾಸಗಳು, ಶಾಲಾ ವಾರ್ಷಿಕೋತ್ಸವ ಎಲ್ಲವು ಅದ್ಭುತ ಕ್ಷಣಗಳು. ನನ್ನ ಶಾಲಾ ದಿನಗಳನ್ನು ನಾನು ತುಂಬ ನೆನೆಸುಕ್ಕೊಳುತ್ತೇನೆ. ನಮ್ಮ ಶಾಲೆಯಲ್ಲಿ ಪ್ರತಿ ಶನಿವಾರ ಸರಸ್ವತಿ ಪೊಜೆ ನಡೆಯುತ್ತಿತ್ತು. ಒಂದೆರಡು ಗಂಟೆಗಳ ಕಾಲ ಎಲ್ಲಾ ತರಗತಿಯ ಮಕ್ಕಳು ಸೇರಿ ಸರಸ್ವತಿ ಪೂಜೆ ಮಾಡುತ್ತಿದ್ದೇವು. ಆಗ ಆಯಾ ವಾರದಲ್ಲಿ ನಡಿದ ಪ್ರಮುಕ ಘಟನೆಗಳ ಬಗ್ಗೆ ಭಾಷಣ ಮಾಡುತ್ತಿದ್ದೇವು. ನಂತರ ಕೊನೆಯಲ್ಲಿ ನಮ್ಮ ಶಾಲಾ ಪ್ರಾಂಚುಪಾಲರು ಒಂದು ನೀತಿ ಕಥೆ ಹೇಳಿ ನಮಗೆ ಜೀವನದ ಪಾಠವನ್ನು ಕಲಿಸುತ್ತಿದ್ದರು. ನಾನು ೯೭.೧೨% ಅಂಕವನ್ನು ಪಡೆದು ಉತ್ತೀರ್ಣವಾಗಿದ್ದು ನನಗೆ ಬಹಳ ಖುಷಿ ತಂದ ವಿಚಾರ.

ನಂತರ ನಾನು ಕ್ರೈಸ್ಟ ಜೂನಿಯರ್ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪಿ.ಸಿ.ಎಮ್.ಬಿ ಕೋರ್ಸ ತೆಗೆದುಕೊಂಡೆ. ದ್ವಿತೀಯ ಪಿಯುಸಿಯಲ್ಲಿ ೯೨.೧೨% ಪಡೆದು ಉತ್ತೀರ್ಣವಾದೆ. ನನಗೆ ವಿಜ್ಙಾನ ಕ‍್ಷೇತ್ರದಲ್ಲಿ ಮುಂದುವರೆಯ ಬೇಕೆಂಬ ಹಂಬಲದಿಂದ ನಾನು ಬಿ.ಎಸ್ಸಿ ಪಿ.ಸಿ.ಮ ಕೋರ್ಸ ತೆಗೆದುಕೊಂಡಿದ್ದೇನೆ. ಈಗ ನಾನು ಕ್ರೈಸ್ಟ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ನಾನು ದ್ವಿತೀಯ ಪಿಯುಸಿಯನ್ನು ಕ್ರೈಸ್ಟ ಜೂನಿಯರ್ ಕಾಲೇಜಿನಲ್ಲಿ ಮಾಡಿದ್ದರಿಂದ ನನಗೆ ಈ ಕ್ಯಾಂಪಸ್ ಚಿರ ಪರಿಚಯ. ಇಲ್ಲಿನ ಹಸಿರು ಗಿಡ-ಮರಗಳು, ಇಲ್ಲಿ ನಡೆಯುವ ಸಾಂಸ್ಕ್ರತಿಕ ಉತ್ಸವಗಳು ನನಗೆ ತುಂಬ ಇಷ್ಟ . ಇಲ್ಲಿ ನಡೆಯುವ ಕಾರ್ಯಕ್ರಮಗಳು ನಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಮಾಡಿ ಕೊಡುತ್ತವೆ ಹಾಗೂ ಸಮಗ್ರ ವಿಕಾನನೆಗೆ ಸಹಕಾರಿ.

ಹವ್ಯಾಸ

ಚಿಕ್ಕ ವಯಸ್ಸಿನಿಂದಲು ನನಗೆ ಓದುವುದೆಂದರೆ ತುಂಬ ಇಷ್ಟ. ನನ್ನ ಬಿಡುವಿನ ಸಮಯದಲ್ಲಿ ನಾನು ನೃತ್ಯ, ಹಾಡು ಹಾಡುತ್ತ ಕಳೆಯುತ್ತೇನೆ. ನಟನೆಯಲ್ಲಿ ನನಗೆ ಆಸಕ್ತಿ ಇರುವುದರಿಂದ ನಮ್ಮ ಕಾಲ್ಲೇಜಿನಲ್ಲಿ ಒಂದು ನಾಟಕ ತಂಡವನ್ನು ಸೇರಿಕೊಂಡಿದ್ದೇನೆ. ಭಾಷೋತ್ಸವ ಕಾರ್ಯಕ್ರಮದಲ್ಲಿ " ಮೂರು ಕೋತಿ ಕಥೆ " ಎಂಬ ನಾಟಕ ಮಾಡಿದೆವು. ಇದು ನನ್ನ ಮೊದಲ ನಾಟಕ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ನಾಟಕಗಳನ್ನು ಮಾಡಿ ಒಂದು ಒಳ್ಳೆಯ ವಿಚಾರವನ್ನು ಜನರಿಗೆ ತಲುಪಿಸುವ ಕಲಸ ಮಾಡುತ್ತೇನೆ.

ಇಷ್ಟವಾದ ಹಾಡು,ಪುಸ್ತಕ

ನನಗೆ ಇಷ್ಟವಾದ ಹಾಡು ' ಎನಾಗಲಿ ಮುಂದೆ ಸಾಗು ನೀ ' ಮತ್ತು ' ಅರಳುವ ಹುವುಗಳೆ ' . ಈ ಹಾಡುಗಳು ನನಗೆ ಖುಷಿ ನೀಡುವುದರ ಜೊತೆಗೆ ಪ್ರೆರೇಪಣೆ ಕೂಡ ನೀಡುತ್ತವೆ. ಹಾಡು, ವಚನ ಕೇಳುವುದು ನನ್ನ ಅಭ್ಯಾಸ. ನಾನು ಬಸವಣ್ಣನವರ ವಚನವನ್ನು ತುಂಬ ಓದುತೇನೆ. ನನಗೆ ಬಹಳ ಇಷ್ಟವಾದ ಪುಸ್ತಕವೆಂದರೆ ಹ್ಯಾರಿ ಪಾಟರ್ ಸರಣಿ. ಇದನ್ನು ಬರೆದ ಜೆ.ಕೆ.ರೌಲಿಂಗ್ ನನ್ನ ಮೆಚ್ಚಿನ ಕವಯತ್ರಿ. ಈ ಸರಣಿಯಲ್ಲಿ ಬರುವ ಒಂದೊಂದು ಪಾತ್ರವು ನನಗೆ ಒಂದೊಂದು ಪಾಠವನ್ನು ಕಲಿಸಿವೆ.

ಜೀವನದ ಗುರಿ

ನನಗೆ ಉಪನ್ಯಾಸಕಿ ಆಗಬೇಕೆಂಬ ಆಸೆ ಇದೆ. ಶಿಕ್ಷಣದಿಂದ ಸಮಾಜವನ್ನು ಬದಲಾಯಿಸ ಬೇಕೆಂಬ ಹಂಬಲವಿದೆ. ಅನಕ್ಷರಸ್ಥರಿಲ್ಲದ ಭಾರತವನ್ನು ಕಾಣುವ ಇಚ್ಛೆ ನನ್ನದು. ಎ.ಪಿ.ಜೆ.ಅಬ್ದುಲ್ ಕಲಾಂ ನಡೆದ ಹಾದಿಯಲ್ಲಿ ನಡೆದು ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನು ಮಾಡುವ ಪ್ರಯತ್ನ ಮಾಡುತ್ತೇನೆ.