ಸದಸ್ಯ:1810147dhananjaya.S
ಧನಂಜಯ.ಎಸ್ | |
---|---|
ಜನನ | ದರ್ಶನ್ 28/5/2000 ಕುಣಿಗಲ್ |
ವಿದ್ಯಾಭ್ಯಾಸ | Christ university Bcom |
ವೃತ್ತಿ | Student |
ಜನನ: lಅಂದು ನನ್ನ ತಂದೆ ತಾಯಿಯ ೨ನೇ ವರ್ಷದ ಮದುವೆ ವಾರ್ಷಿಕೋತ್ಸವದ ದಿನ ಆದರೆ ಸಂಭ್ರಮವಿರಲಿಲ್ಲ.ಕಾರಣ ಹಳ್ಳಿಗಾಡಿನ ಪ್ರದೇಶದಲ್ಲಿ ಮದುವೆ ವಾರ್ಷಿಕೋತ್ಸವದ ಆಚರಣೆ ರೂಢಿಯಲ್ಲಿರಲಿಲ್ಲ .ಆದರೆ ಅದೇ ದಿನದಂದು ಅಂದರೆ ಮೇ ೨೮ ೨೦೦೦ ರಂದು ಈ ಪುಟ್ಟ ಪ್ರಪಂಚಕ್ಕೆ ನನ್ನ ಆಗಮನವಾಯಿತು.ತಂದೆ ಶ್ರೀನಿವಾಸ್,ತಾಯಿ ಜಯಲಕ್ಷ್ಮಿ, ನಾನು ಹುಟ್ಟಿದ್ದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ೨೮ ಕುಟುಂಬವುಳ್ಳ ಅಯ್ಯನಕಟ್ಟೆ ಎಂಬ ಪುಟ್ಟ ಗ್ರಾಮ. ತಂದೆ ವೃತ್ತಿಯಲ್ಲಿ ರೈತರು
ಬಾಲ್ಯ: ನನಗೆ ಬಾಲ್ಯದಿಂದಲೂ ಅಮ್ಮನೆಂದರೆ ಅಚ್ಚುಮೆಚ್ಚು.ಅಪ್ಪನೆಂದರೆ ಅಷ್ಟಕಷ್ಟೆ ,ಆದರೆ ನನಗಿಂತ ಎರಡು ವರ್ಷ ಕಿರಿಯವಳಾದ ನನ್ನ ತಂಗಿಗೆ ಅಪ್ಪನೆಂದರೆ ಪಂಚ ಪ್ರಾಣ.ನನಗೆ ಬಾಲ್ಯದಿಂದಲೂ ಕನ್ನಡ ಮಾತೃಭಾಷೆ ಪ್ರೇಮ ಅದು ಇಂದಿಗೂ ಕಡಿಮೆ ಆಗಿಲ್ಲ
ಶಿಕ್ಷಣ: ನನ್ನ ಪ್ರಾಥಮಿಕ ಶಿಕ್ಷಣ ನಮ್ಮ ಹಳ್ಳಿ ಪಕ್ಕದ ಗಂಟಕಾನಹಳ್ಳಿ ಎಂಬ ಪುಟ್ಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾಯಿತು.ಊರಿನಲ್ಲಿ ವಿದ್ಯಾವಂತರ ಕೊರತೆ ಇದ್ದ ಕಾರಣ ನನ್ನ ವಿದ್ಯಾಭ್ಯಾಸವನ್ನು ಯಾರೂ ಉತ್ತೇಜಿಸಲಿಲ್ಲ.ಮುಂದಿನ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣಕ್ಕಾಗಿ ಮೂರು ಮೈಲಿ ದೂರದ ಸರ್ಕಾರಿ ಶಾಲೆಗೆ ಸೇರಿದೆ.ನನಗೆ ಬಾಲ್ಯದಿಂದಲೂ ಕನ್ನಡ ಮಾತೃಭಾಷೆ ಪ್ರೇಮ ಅದು ಇಂದಿಗೂ ಕಡಿಮೆಯಾಗಿಲ್ಲ.ನನಗೆ ಶಾಲಾ ದಿನಗಳಿಂದಲೂ ಓದಿಗಿಂತ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಶಾಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಬಹುಮಾನ ಸಂದವು.ಪ್ರೌಢಶಾಲೆಯಲ್ಲಿ ಸಮಾಜ ಶಿಕ್ಷಕಿಯಾದ ಸುಜಾತ ಮೇಡಂ ನನ್ನ ಜೀವನದ ಅತಿಮುಖ್ಯ ವ್ಯಕ್ತಿಗಳಲೊಬ್ಬರು.ಓದಿನಲ್ಲಿ ಆಸಕ್ತಿ ಇಲ್ಲದ ನನಗೆ ಓದಿನಲ್ಲಿ ಹೊಸ ಹುರುಪನ್ನು ತುಂಬಿದರು.ಚರ್ಚೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಇವರಿಂದ ಪ್ರೇರಣೆಯಾಗಿ ಹಲವಾರು ಚರ್ಚಾಸ್ಪರ್ದೆಗಳಲ್ಲಿ ಭಾಗವಹಿಸಿದೆನು.ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದ ಕಾರಣ ನನ್ನ ೧೦ ನೇ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ನಂತರ ಪದವಿ ಶಿಕ್ಷಣಕ್ಕಾಗಿ ಕುಣಿಗಲ್ ತಾಲ್ಲೂಕಿನ ಪ್ರತಿಷ್ಠಿತ ಕಾಲೇಜು ಜ್ಞಾನ ಭಾರತಿ ಕಾಲೇಜಿನ ಮೆಟ್ಟಲೇರಿದೆನು. ಬಾಲ್ಯದಿಂದಲೂ ಕನ್ನಡ ಮಾಧ್ಯಮದಲ್ಲಿ ಓದಿದ್ದ ನನಗೆ ಆಂಗ್ಲ ಮಾದ್ಯಮ ತುಸು ಕಷ್ಟವೆನಿಸಿತು .ದ್ವಿತೀಯ ಪಿಯುಸಿ ಯಲ್ಲಿ ಕಾಲೇಜು ಹತ್ತಿರದ ಸರ್ಕಾರಿ ವಸತಿ ನಿಲಯವನ್ನು ಸೇರಿದೆ. ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಕಾಲೇಜಿನಲ್ಲಿ ಜೈಲಿನ ಅನುಭವ ಉಂಟಾಯಿತು.ಅಪ್ಪ ಅಮ್ಮನ ಪ್ರೀತಿ ತೊರೆದು ಹಾಸ್ಟೆಲ್ ಸೇರಿದ ನನಗೆ ಜೀವನದ ಸುಖ-ದುಃಖ,ಜೀವನದ ಮಹತ್ವ ಅರಿಯಿತು.ಕಾಲೇಜಿನಲ್ಲಿ ಉತ್ತಮ ಸ್ನೇಹಿತರೊಂದಿಗೆ ಬೆರೆತ ನನಗೆ ಕಾಲೇಜಿನ ಜೀವನ ನನ್ನ ಜೀವನದ ಅವಿಸ್ಮರಣೀಯ ದಿನಗಳು.ಪದವಿ ಶಿಕ್ಷಣವನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿದ ನನಗೆ ಮುಂದಿನ ಹಂತದ ಶಿಕ್ಷಣಕ್ಕಾಗಿ ರಾಜಧಾನಿ ಬೆಂಗಳೂರಿಗೆ ಬರಬೇಕಾಯಿತು .ಹಳ್ಳಿಯಲ್ಲಿದ್ದ ನನಗೆ ಪಟ್ಟಣಕ್ಕೆ ಹೊಂದಿಕೊಳ್ಳಲೇ ಬೇಕಾದ ಪರಿಸ್ಥಿತಿ ಉಂಟಾಯಿತು.ಬೆಂಗಳೂರಿನ ಹೆಸರಾಂತ ಕಾಲೇಜು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ನೊಂದಣಿ ಆದೆನು.ಅದರೆ ಕನ್ನಡದ ಕಂಪಿಲ್ಲದ ಕಾಲೇಜು ನನಗೆ ವಿಚಿತ್ರ ಭಾಸವಾಯಿತು .ಆದರೆ ಹೊಸ ಪದ್ದತಿಗೆ ಹೊಂದಾಣಿಕೆಯಾಗುವುದು ಬಹಳ ಕಷ್ಟವಾಯಿತು. ಆದರೂ ಅಂಕಾಸುರನಾಗದೆ ವೈಯಕ್ತಿಕ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದೆ ಸಾಗುತ್ತಿದ್ದೇನೆ.
ಆಸಕ್ತಿ ಕ್ಷೇತ್ರಗಳು : ಚಿಕ್ಕಂದಿನಿಂದಲೂ ಕನ್ನಡ ಭಾಷಾ ಪ್ರೇಮಿಯಾಗಿದ್ದ ನನಗೆ ಹಲವು ಕನ್ನಡ ಸಂಘಟನಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದೆ .ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ನನಗೆ ಆಟ ಎಂದರೆ ಬಲು ಹುಚ್ಚು .ರಾಜಕೀಯ ಕ್ಷೇತ್ರದಲ್ಲಿನ ನನ್ನ ಆಸಕ್ತಿ ಇಂದಿಗೂ ಹಲವಾರು ರಾಜಕೀಯ ಚಟುವಟಿಕೆಯಲ್ಲಿ ಬಾಗವಹಿಸುತ್ತಿದ್ದೇನೆ.
ಸಾಧನೆಗಳು:ಶಾಲಾ ದಿನಗಳಿಂದಲೂ ನನ್ನ ಸಾಧನೆ ಅಪಾರ .೭ನೆ ತರಗತಿಯಲ್ಲಿ ಉದ್ದ ಜಿಗಿತ ,ಎತ್ತರ ಜಿಗಿತ,೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸಿದೆ.10ನೆ ತರಗತಿಯಲ್ಲಿ ನಾಟಕ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದೇನು.ಎಲ್ಲವನ್ನೂ ಸಮರ್ಥವಾಗಿ ಎದುರಿಸುತ್ತಿದ್ದ ನನಗೆ ನನ್ನ ಶಿಕ್ಷಕರಿಂದ ಸಮರ್ಥ ಎಂಬ ಹೆಸರು ದಕ್ಕಿತು.
ಹವ್ಯಾಸಗಳು :ಪ್ರತಿನಿತ್ಯ ದಿನಪತ್ರಿಕೆ ಓದುವುದು ನನ್ನ ಮೊದಲ ಆದ್ಯತೆ ,ಜೊತೆಗೆ ಕ್ರೀಡೆಯಲ್ಲಿ ಬಾಗವಹಿಸುವುದು,ಸಂಗೀತವನ್ನು ಕೇಳುವುದು ,ಚಕ್ರವರ್ತಿ ಸುಲಿಬೆಲೆಯವರ ಭಾಷಣವನ್ನು ಕೇಳುವುದು ,ವಾರ್ತೆಗಳನ್ನು ವೀಕ್ಷಿಸುವುದು ಜೊತೆಗೆ ಹತ್ತಾರು ಧನಾತ್ಮಕ ಹವ್ಯಾಸಗಳನ್ನು ಅಳವಡಿಸಿಕೊಂಡಿದ್ದೇನೆ .