ಕ್ರೈಸ್ಟ್ ವಿಶ್ವವಿದ್ಯಾಲಯ ಕನ್ನಡ ಸಂಘ
You must add a |reason=
parameter to this Cleanup template - replace it with {{Cleanup|reason=<Fill reason here>}}
, or remove the Cleanup template.
ಕ್ರೈಸ್ಟ್ ಕಾಲೇಜ್ 'ಕನ್ನಡ ಸಂಘ'ವನ್ನು ಡಿಸೆಂಬರ್ ೧೯೭೨ ರಲ್ಲಿ ಸ್ಥಾಪಿಸಲಾಯಿತು . ಈ ಸಂಘದ ಉದ್ದೇಶವು " ಕವನ, ಪ್ರಬಂಧಗಳು, ಸಣ್ಣ ಕಥೆ , ಕಾದಂಬರಿ ಮತ್ತು ನಾಟಕ ಮುಂತಾದ ಸೃಜನಶೀಲ ಬರಹಗಳನ್ನು ಬರೆಯುವಂತೆ ಯುವ ಬರಹಗಾರರನ್ನು ಪ್ರೋತ್ಸಾಹಿಸುವುದು. ಆಗಿದೆ.
ಕ್ರೈಸ್ಟ್ ಕಾಲೇಜ್ ಕನ್ನಡ ಸಂಘಕ್ಕೆ ಬೆಂಗಳೂರು ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘದ ಆದರ್ಶಗಳೇ ಸ್ಪೂರ್ತಿ.
೧೯೭೩ರಲ್ಲಿ ಪ್ರಖ್ಯಾತ ಕಾದಂಬರಿಗಾರರಾದ ಆ.ನ.ಕೃ ಅವರ ನೆನಪಿನಲ್ಲಿ ಲೇಖನ ಸ್ಪರ್ದೆಯನ್ನು, ೧೯೮೧ರಲ್ಲಿ ವರಕವಿ ದ.ರಾ.ಭೇಂದ್ರೆಯವರ ಸ್ಮೃತಿಯಲ್ಲಿ ಕವನಸ್ಪರ್ದೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರಾರಂಭಿಸಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸ್ಪರ್ಧೆಗೆ ಕಳಿಸುವ ಲೇಖನಗಳನ್ನು ಮತ್ತು ಕವನಗಳನ್ನು ಖ್ಯಾತ ಬರಹರಾರರು ಅಥವಾ ವಿದ್ವಾಂಸರಿಂದ ಮೌಲ್ಯಮಾಪನ ಮಾಡಿಸಿ, ಆಯ್ಕೆಯಾದ 5 ಲೇಖನ ಮತ್ತು 20 ಕವನಗಳನ್ನು ಪುಸ್ತಿಕೆಯ ರೂಪದಲ್ಲಿ ಬೇರೆ ಬೇರೆಯಾಗಿ ಪ್ರಕಟಿಸುತ್ತಾ ಬಂದಿದೆ. ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನದ ಜೊತೆಗೆ ಪ್ರಕಟಗೊಂಡ ಪುಸ್ತಿಕೆಗಳ ಮೂವತ್ತು ಪ್ರತಿಗಳನ್ನು ಉಚಿತವಾಗಿ ನೀಡಲಾಗುವುದು. ಪುಸಕಗಳ ಬಿಡುಗಡೆ ಮತ್ತು ಬಹುಮಾನ ವಿತರಣಾ ಸಮಾರಂಭವು ಕೇವಲ ಕಾಲೇಜಿಗೆ ಸೀಮತಗೊಳ್ಳದೆ ದ.ರಾ.ಬೇಂದ್ರೆಯವರ ಹುಟ್ಟು ಹಬ್ಬದ ಸ್ಮಾರಕವಾಗಿ ಪ್ರತಿವರ್ಷ ಜನವರಿ ತಿಂಗಳಲ್ಲಿ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ. ನಾಡಿನ ಹಿರಿಯ ಬರಹಗಾರರಾದ ಶಿವರಾಮಕಾರಂತ, ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ.ಕೃ.ಗೋಕಾಕ, ಗೋಪಾಲಕೃಷ್ಣ ಅಡಿಗ ,ಪು.ತಿ.ನ. ರಾಶಿ ಮುಂತಾದವರ ಮನೆಗಳಲ್ಲೇ ಕಾರ್ಯಕ್ರಮಗಳು ನಡೆದಿದೆ.
ಈ ಸಮಾರಂಭಗಳ ಮೂಲಕ ಹಳೆಯ ಮತ್ತು ಹೊಸ ತಲೆಮಾರಿನ ಬರಹಗಾರರ ಸಮಾಗಮಕ್ಕೆ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಇಂದಿನ ಕೆಲವು ಬರಹಗಾರರು ಕನ್ನಡ ಸಂಘದ ಸ್ಪರ್ದೆಗಳಿಂದಲೇ ಸಾಹಿತ್ಯಾಭಿಮಾನಿಗಳ ಗಮನ ಸೆಳೆದರು. ಅವರುಗಳೆಂದರೆ ತೇಜಸ್ವಿನಿ ನಿರಂಜನ, ಅಬ್ದುಲ್ ರಶೀದ್, ಮೊಗಳ್ಳಿ ಗಣೇಶ್, ಹುಳಿಯಾರ್ ನಟರಾಜ್, ಕೆ.ಎಸ್. ಶ್ರೀನಿವಾಸಮೂರ್ತಿ, ಬಿ.ಎನ್.ಮೋಹನ, ಸಂಧ್ಯಾ, ಸಿ.ಪಿ.ರವಿಕುಮಾರ್,ರಾಧಾಕೃಷ್ಣ ಬೆಳ್ಳೂರು, ಮಮತಾ ಜಿ.ಸಾಗರ್, ಹೆಚ್.ಎನ್.ಆರತಿ, ಬಸವರಾಜ ವಕ್ಕುಂದ, ಚಿಂತಾಮಣಿ, ಕೊಡ್ಲೆಕೆರೆ ಅಮರೇಶ ನಾಗಡೋಣಿ, ಬಾಗೇಶ್ರೀ ಮುತ್ತಣ್ಣ ವಿ.ಎಂ.ಯಲ್ಲಪ್ಪ.ಟಿ ಕಮಲಾಕರ ಕಡವೆ ವಾಸುದೇವ ನಾಡಿಗ, ಭಗವಿ ಸುಧಾ ಶರ್ಮ ಚವತ್ತಿ, ರವೀಂದ್ರ ಭಟ್ ಗಳಗುಳಿ, ಗಾಯಿತ್ರಿ ಮುಂತಾದವರು.
ಹವ್ಯಾಸಿ ಪ್ರಕಾಶನ ಸಂಸ್ಥೆಯಾದ ಕನ್ನಡ ಸಂಘವು ಪುಸ್ತಕ ಮಾರಾಟಕ್ಕೆ ಸಂಬಂಧಪಟ್ಟಂತೆ ಲಾಭವೂ ಅಲ್ಲದ ನಷ್ಟವೂ ಅಲ್ಲದ ಉದ್ದೇಶವನ್ನು ಇಟ್ಟುಕೊಂಡಿದೆ. ಉತ್ತಮ ಗುಣಮಟ್ಟವನ್ನು ಕಾಪಾಡಿಕೊಇಂಡು ನೇರವಾಗಿ ಓದುಗರನ್ನು ತಲುಪುವಲ್ಲಿ ನಂಬಿಕೆಯಿಟ್ಟಿದೆ. ಪ್ರಕಟಿಸಿದ ಪುಸ್ತಕಗಳನ್ನು ಪುಸ್ತಕ ಅಂಗಡಿಗಳಲ್ಲಿ, ಪುಸ್ತಕ ಮೇಳಗಳಲ್ಲಿ ಇಡುವುದಲ್ಲದೇ ವಿಚಾರ ಸಂಕಿರಣಗಳಲ್ಲಿ ಸಾಹಿತ್ಯ ಸಮಾರಂಭಗಳಲ್ಲಿ ಪ್ರದರ್ಶನ ಹಾಗು ಮಾರಾಟ ವ್ಯವಸ್ಥೆಯನ್ನು ಮಾಡುತ್ತದೆ. ವಿಶೇಷವಾಗಿ ಕಾಲೇಜುಗಳಲ್ಲಿ ಪ್ರದರ್ಶನದ ವ್ಯವಸ್ಥೆ ಇರುತ್ತದೆ. ಕೊಂಡು ಓದು ಪುಸ್ತಕ ಪ್ರಿಯರಿಗೆ ಅತಿ ಹೆಚ್ಚಿನ ರಿಯಾಯಿತಿಯನ್ನು ನೀಡುವುದು, ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರಕಟಣಾ ಪೂರ್ವ ಪುಸ್ತಕ ಮಾರಾಟದ ಕೂಪನ್ ಗಳನ್ನು ರಿಯಾಯಿತಿ ದರದಲ್ಲಿ ಬಿಡುಗಡೆ ಮಾಡಲಾಗುವುದು. ಹಿರಿಯ ಸಾಹಿತಿಗಳ ಪುಸ್ತಕಗಳು ಪ್ರಕಟವಾದಾಗ ಕೆಲವು ಖಾಸಗಿ ವ್ಯಾಪಾರಿ ಮನೋಭಾವದ್ದಲ್ಲ. ಪುಸ್ತಕಗಳ ಬಳಿ ಓದುಗರೇ ಹೋಗಬೇಕು ಎನ್ನುವುದಕ್ಕಿಂಗ ಪುಸ್ತಕಗಳೇ ಓದುಗರ ಬಳಿಗೆ ಹೋಗಬೇಕು ಎನ್ನುವ ನಿಲುವು ಸಂಘದ್ದು. ಇಡೀ ಕರ್ನಾಟಕದಲ್ಲಿ ಮತ್ತು ಅದರಾಚೆ ಸದಭಿರುಚಿಯ ಓದುಗರನ್ನು ಕನ್ನಡ ಸಂಘ ಪಡೆದಿದೆ.
ಕ್ರೈಸ್ಟ್ ವಿಶ್ವವಿದ್ಯಾಲಯದ ಕನ್ನಡ ಸಂಘದ ಪ್ರಕಟಣೆಗಳು.
-:ಕವನ:-
- ನಾಡಿಯಾ ಮೇಲಿನ ಗಲಿ - ಕಾ.ವೆಂ.ರಾಜಗೋಪಾಲ್- 1971
- ಕ್ರಿಸ್ತಾಂಜಲಿ - ಎಡ್.ನಾರಾಲಹಳ್ಳಿ ಬಾಲಸುಬ್ರಮಣ್ಯ, ಮತ್ತು ಲಕ್ಷ್ಮಣ ಕೊಡಾಸೆ - 1973
- ಮಿಲರೆಪ - ಎಸ್.ಶಿವಪ್ರಕಾಶ್- 1977
- ತೌತರ - ಬಿ.ಆರ್.ಲಕ್ಷ್ಮಣ ರಾವ್ - 1977
- ಕೃಷ್ಣಸಂದೇಶ - ಕಾ.ಸು.ರಾಮಚಂದ್ರ- 1984
- ದೆಹಲಿಗೆ ಬಂದ ಹೊಸ ವರ್ಷ- ಬಿ.ರಾಮಚಂದ್ರ ಶರ್ಮಾ - 1988
- ನನ್ನ ಪಾಡಿಗೆ ನಾನು - ಅಬ್ದುಲ್ ರಶೀದ್- 1992
- ಬಾಹುಬಲಿ - ಎಸ್.ಮಂಜುನಾಥ್- 1993
- ಬುಗುಡಿ - ಕಮಲಾ ಹಂಪನ- 1993
- ದಾರಿಗೆ ಹಚ್ಚಿದ ದೀಪಾ -ವಿದ್ಯಾರ್ಥಿಗಳಿಂದ- 1990
-:ಪ್ರಬಂಧಗಳು:-
- ಬಹುಮಾನಿತ ಲೇಖನಗಳು- ವಿದ್ಯಾರ್ಥಿಗಳಿಂದ ೧೯೭೩
- ಸಮಗ್ರ ಲಿಖಿತಾ ಪ್ರಬಂಧಗಳು- (ವಿಜೇತ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ) - ಎ.ಎಸ್.ಮೂರ್ತಿ ರಾವ್- ೧೯೮೮
- ನಮ್ಮ ಪ್ರೀತಿಯ ಕ್ರಿಕೆಟ್ (ವಿಜೇತ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ)- ಕೆ.ಸತ್ಯನಾರಾಯಣ - ೧೯೮೮
- ತೆರೆದ ಮನ- ಹೆಚ್.ನರಸಿಂಹಯ್ಯ- ೧೯೯೨
- ಈಗಾ ಈಗಿರುವ ಲೋಕದಲ್ಲಿ- ದೇವು ಪತ್ತರ- ೨೦೦೦
ಕನ್ನಡ ಸಂಘ ಇಲ್ಲಿಯವರೆಗೆ ವಿದ್ಯಾರ್ಥಿಗಳ ಲೇಖನ, ಕವನ, ಸ್ಪರ್ದೆಯ ಪುಸ್ತಕಗಳೂ ಸೇರಿದಂತೆ ೨೩೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಕನ್ನಡ ಸಂಘ ಪ್ರಕಟಿಸಿರುವ ಕೃತಿಗಳಿಗೆ ಹಲವಾರು ಪ್ರಶಸ್ತಿಗಳು ಬಂದಿದೆ. ಈವರೆಗೆ ಒಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಂಟು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಪ್ರಶಂಸಾರ್ಹವಾದ ಖಾಸಗಿ ಸಂಸ್ಥೆಗಳಿಂದ ಒಂಭತ್ತು ಇತರೆ ಪ್ರಶಸ್ತಿಗಳು ದೊರಕಿವೆ. ಸಂಘ ಪ್ರಕಟಿಸಿದ ಎರಡೂ ಪುಸ್ತಕಗಳು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯ ಪುಸ್ತಕಗಳಾಗಿದ್ದವು. ಕಾದಂಬರಿಯೊಂದು ಚಲನಚಿತ್ರವಾಗಿದೆ.
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೆದ್ದ ಕನ್ನಡ ಸಂಘದ ಪುಸ್ತಕಗಳು
- ವಿಶ್ಲೇಷಣೆ - ಹೆಚ್.ಶಿವಪ್ರಕಾಶ್ - ೧೯೮೨
- ಪುರುಷ ಬಿದ್ದ ನೆಲದಲ್ಲಿ- ಎ.ಎನ್.ಮೂರ್ತಿ ರಾವ್- ೧೯೮೪
- ಸಮಗ್ರ ಲಲಿತಾ ಪ್ರಬಂಧಗಳು- ಕೆ.ಸತ್ಯನಾರಾಯಣ - ೧೯೮೯
- ನಮ್ಮ ಪ್ರೀತಿಯ ಕ್ರಿಕೆಟ್- ಟಿ.ಎನ್.ಸೀತಾರಾಮ್ - ೧೯೮೯
- ಎರಡು ನಾಟಕಗಳು- ಹೆಚ್.ನರಸಿಂಹಯ್ಯ- ೧೯೯೨
- ತೆರೆದ ಮನ- ಎಸ್.ಜಿ.ಸಿದ್ದಾರಾಮಯ್ಯ- ೧೯೯೩
- ಅವಳೇದೆಯ ಜಂಗಮ- ರಹಮತ್ ತರೀಕೆರೆ- ೧೯೯೪
- ಪ್ರತಿ ಸಂಸ್ಕೃತಿ- ನೇಮಿಚಂದ್ರ- ೧೯೯೪
- ಬೆಳಕಿಗೊಂಡು ಕಿರಾನಾ ಮೇರಿ ಕ್ಯೂರಿ- ಲಕ್ಷ್ಮಿಪತಿ ಕೋಲಾರ - ೧೯೯೪
- ಕಾಲುದಾರಿ- ಸಾಹಿತ್ಯ ವಿಮರ್ಶೆ- ೨೦೦೨
ವರಕವಿ ದ.ರಾ.ಬೇಂದ್ರೆಯವರ ನಿಧನ ನಂತರ ಅವರ ಸ್ಮೃತಿಯಲ್ಲಿ ಸಂಘ ಬೇಂದ್ರೆ ನಮನ ವಿಶೇಷ ಉಪನ್ಯಾಸ ಮಾಲೆಯನ್ನು ಸ್ನೇಹವಲಯ ಅಂಕಣಗಳೊಂದಿಗೆ ಸೇರಿ ವ್ಯವಸ್ಥೆ ಮಾಡಿತ್ತು. ಬೇಂದ್ರೆಯವರ ಹತ್ತು ಸಾವಿರ ಭಾವಚಿತ್ರಗಳನ್ನು ಮುದ್ರಿಸಿ ಮಾರಾಟ ಮಾಡಿತು. ಈ ಮಾಲೆಯಲ್ಲಿನ ಉಪನ್ಯಾಸಗಳನ್ನು ಪುಸ್ತಿಕೆಯ ರೂಪದಲ್ಲಿ ಪ್ರಕಟಿಸಿ ಪ್ರತಿ ವರ್ಷವೂ ಈ ಉಪನ್ಯಾಸಗಳು ಮುಂದುವರೆಯುತ್ತಿವೆ.
ಡಾ|| ಹೆಚ್.ಎಸ್.ರಾಘವೇಂದ್ರ ರಾವ್ ರವರ ಹಾಡೆ ಹಾದಿಯ ತೋರಿತು ಕೃತಿಯನ್ನು ೩೧ ಜನವರಿ ೧೯೯೫ ರಂದು ನೂರನೆಯ ಪುಸ್ತಕವಾಗಿ ಪ್ರಕಟಿಸುತ್ತಿದೆ. ಇದು ಬೇಂದ್ರೆ , ಕುವೆಂಪು, ಪು.ತಿ.ನ., ಕವಿತೆಗಳ ವಿಶಿಷ್ಟತೆಯ ಅಧ್ಯಯನವನ್ನೊಳಗೊಂಡ ಮಹಾ ಪ್ರಬಂಧ.
ಈವರೆಗೂ ಕನ್ನಡ ಸಂಘ ವರಕವಿ ದ.ರಾ.ಬೇಂದ್ರೆಯವರ ಸ್ಮರಣಾರ್ಥವಾಗಿ ಕವಿಯ ಜನ್ಮದಿನದಂದು ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವುದರ ಮುಖೇನ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದೆ. ಜನವರಿ ೩೧ ೨೦೦೪ರಂದು ಡಾ|| ರಾಘವೇಂದ್ರ ರಾವ್ ರವರ ತರುತದದ ಪುಷ್ಪ, ಡಾ|| ದ.ರಾ.ಬೇಂದ್ರೆ ಸ್ಮೃತಿ ಅಂತರ ಕಾಲೇಜು ಕವನ ಸ್ಪರ್ದೆಯ ಬಹುಮಾನಿತ ಕವನದಿಂದ ಭಾವತರದ ಹಾಡಿಯಲ್ಲಿ ಮತ್ತು ಬಹುಮಾನಿತ ಅ.ನ.ಕೃ ಲೇಖನಗಳನ್ನು ಕೃತಿಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.
ಕನ್ನಡ ಸಂಘದ ಸ್ಥಾಪನೆಗೆ ಪ್ರೇರಣೆಯಾಗಿದ್ದ ಕರ್ನಾಟಕ ಸಂಘದ ಸಂಚಾಲಕರಾಗಿದ್ದ ಕನ್ನಡ ಕವಿ ಜೆ.ಪಿ.ರಾಜರತ್ನಂ ಮತ್ತು ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಅ.ನ.ಕೃಷ್ಣರಾವ್ ಅವರ ಜನ್ಮ ಶತಮಾನೋತ್ಸವವನ್ನು ೨೦೦೮ ನೇ ವರ್ಷದಲ್ಲಿ ಆಚರಿಸುವುದು ಕನ್ನಡ ಸಂಘದ ಮಹೋದ್ದೇಶವಾಗಿದೆ. ಈ ಇಬ್ಬರು ಶ್ರೇಷ್ಠ ಲೇಖಕರ ನೆನಪಿನಾರ್ಥವಾಗಿ ಕನ್ನಡ ಸಂಘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ.