ಸದಸ್ಯ:106.206.112.39
ಬಾಲ್ಯ
ನನ್ನ ಹೆಸರು ಆದ್ಯ ರಮೇಶ್. ನಾನು ಕರ್ನಾಟಕ ರಾಜ್ಯದ ಚಿಕ್ಕಮಗಳೂರೂ ಜಿಲ್ಲೆಯ, ಮೂಡಿಗೆರೆ ತಾಲೂಕಿನ ರಮೇಶ್ ಮತ್ತು ಸುಧ ದಂಪತಿಗಳ ಮಗಳು ೨೦೦೦ನೆಯ ಇಸವಿಯ, ಜನವರಿ ತಿಂಗಳ, ೧ನೇ ತಾರೀಖಿನಂದು, ಹೊಸ ವರ್ಷದಲ್ಲಿ ಜನಿಸದೆ. ನನಗೆ ಒಬ್ಬ ಅಣ್ಣ ಇದ್ದಾನೆ, ಅವನ ಹೆಸರು ಅಶುತೋಶ್. ಚಿಕ್ಕಂದಿನಿಂದಲೇ ಕುಟುಂಬದಲ್ಲಿ ನಾನು ವಿಶೇಷ ರೀತಿಯ ತುಂಟ ಹುಡುಗಿ. ಅಪ್ಪ ಅಮ್ಮ ತುಂಬಾ ಪ್ರೀತಿಯಿಂದ ಸಾಕಿದರು.ನಾನು ಊಟ ಮಾಡದೆ ಹಠ ಹಿಡಿದಾಗ ಅಮ್ಮ ಆಕಾಶ ತೋರಿಸಿ ಊಟ ಮಾಡಿಸುತ್ತಿದ್ದುದು ಇನ್ನೂ ಕಣ್ಣಿನ ಮುಂದೆಯೇ ಇದೆ. ಅಪ್ಪ ತನ್ನ ಹೆಗಲ ಮೇಲೆ ನನ್ನನ್ನು ಹೊತ್ತುಕೊಂಡು ಊರೆಲ್ಲಾ ತೋರಿಸಿದ ದೃಶ್ಯ ಇನ್ನೂ ನೆನಪಿದೆ. ಒಳ್ಳೆಯ ವಿಷಯಗಳ ಮೇಲೆ ಮಾತ್ರ ನನ್ನ ಗಮನ ಹೋಗುವಂತೆ ನೋಡಿಕೊಂಡರು.ಅಣ್ಣನ ಜೊತೆಯಲ್ಲಿ ಜಗಳ ಮಾಡುತ್ತಿದ್ದೆ, ಆಟಗಳಿಗಾಗಿ ಜಗಳವಾಡುತ್ತಿದ್ದೆವು.
ಶಾಲೆ
೫ ವರ್ಷ ಪಾಯ ಬಂತು, ನನ್ನನ್ನು ಶಾಲೆಗೆ ಸೇರಿಸಲು ಅಪ್ಪ ಅಮ್ಮ ಯೋಚಿಸತೊಡಗಿದರು. ೧ನೇ ತರಗತಿಗೆ ಡಿ.ಎಂ.ಪಿ ಎಂಬ ಶಾಲೆಗೆ ಸೇರಿಸಿದರು. ಈ ಶಾಲೆಯು ಕೊಡಗು ಜಿಲ್ಲೆಯಲ್ಲಿ ಇರುವುದರಿಂದ ನನ್ನನ್ನು ಹಾಸ್ಟೆಲಿಗೆ ಸೇರಿಸಿದ್ದರು. ಆ ಹಚ್ಚ ಹಸಿರ ಗಡ್ಡಗಳ ಮಧ್ಯೆ ವಿದ್ಯೆ ಕಲಿಯುವುದು ತುಂಬಾ ಚೆನ್ನಾಗಿತ್ತು. ಮೊದಲ ದಿನ ಅಮ್ಗ ಅಪ್ಪನನ್ನು ಬಿಟ್ಟು, ಶಾಲೆಯಲ್ಲಿ ಕುಳಿತುಕೊಳ್ಳಲು ಆಗಲಿಲ್ಲ, ಒಂದೇ ಸಮನೆ ಅಳುತ್ತಿದ್ದೆ. ನಂತರ ಶಾಲೆಯ ಬಗ್ಗೆ ಅಪಾರ ಗೌರವ ಉಂಟಾಯಿತು. ಅನೇಕ ಗೆಳತಿಯರ ಪರಿಚಯವಾಯಿತು. ಅವರ ಜೊತೆಯಲ್ಲಿ ಆಟವಾಡುತ್ತ ಕಾಲ ಕಳೆಯುತ್ತಿದೆ. ಅಲ್ಲಿ ಶಿಕ್ಷಕಿಯರು ನನ್ನ ಕೈಹಿಡಿದು ಅನೇಕ ಬಾರಿ ಅಭ್ಯಾಸ ಮಾಡಿಸಿದರು.ಅವರ ಪ್ರೀತಿಯ ಮೃದು ಸ್ವಭಾವ ನಾನು ಬೇಗ ಕಲಿಯಲು ಸಹಕಾರಿಯಾಯಿತು. ಚಿಕ್ಕಂದಿನಿಂದಲೇ ಎಲ್ಲಾ ವಿಷಯಗಳಲ್ಲಿ ಮುಂದಿರುತ್ತಿದ್ದೆ.೧ನೇ ತರಗತಿ ಮುಗಿಸಿ ೨ನೇ ತರಗತಿಗೆ, ೨ನೇ ತರಗತಿ ಮುಗಿಸಿ ೩ನೇ ತರಗತಿಗೆ ಬಂದೆ. ಪ್ರತಿಯೊಂದು ತರಗತಿಯಲ್ಲೂ ಹೊಸ ಹೊಸ ಗೆಳೆಯ~ಗೆಳತಿಯರನ್ನು ಪಡೆಯುತ್ತಾ ಹೋದೆ. ಅವರ ಜೊತೆಗೆ ಆಟ ಆಡುವುದು,ತಮಾಷೆ ಮಾಡುವುದು, ತರಗತಿಯಲ್ಲಿ ಗಲಾಟೆ ಮಾಡುವುದು ನನ್ನ ದಿನನಿತ್ಯದ ಕೆಲಸಗಳು. ಹಾಸ್ಟೆಲಿನಲ್ಲಿ ಪ್ರತಿದಿನವೂ ನನಗಾಗಿ ರುಚಿ ರುಚಿಯಾದ ಅಡುಗೆ ಮಾಡಿಕೊಡುತ್ತಿದ್ದರು. ಹೀಗೇ ೫ನೇ ತರಗತಿವರಗೆ ಬಂದೆ. ಅನೇಕ ಜ್ಞಾಪಕಗಳನ್ನು ಆ ಶಾಲೆ ನನಗೆ ಕೊಟ್ಟಿದೆ. ೫ನೇ ತರಗತಿ ಮುಗಿಸಿದ ನಂತರ,
ಪ್ರೌಢ ಶಾಲೆ
೬ನೇ ತರಗತಿಗೆ ಉಡುಪಿ ಜಿಲ್ಲೆಯ ಶಾರದ ರೆಸಿಡೆಂಷಿಯಲ್ ಶಾಲೆಗೆ ಸೇರಿಕೊಂಡೆ. ಅಲ್ಲಿನ ವಾತಾವರಣಕ್ಕೆ ನನ್ನನ್ನು ಸರಿದೂಗಿಸಿಕೊಂಡೆ.ಹೊಸ ಗೆಳೆಯರನ್ನು ಪರಿಚಯ ಮಾಡಿಕೊಂಡೆ.ಅವರ ಬಗ್ಗೆ ತಿಳಿದುಕೊಂಡೆ, ನನ್ನ ಬಗ್ಗೆ ಅವರಿಗೆ ತಿಳಿಸಿದೆ. ೧೦ನೇ ತರಗತಿಯ ನಂತರ ಪಿ.ಯು.ಸಿ ಕೂರ್ಗ್ ಪದವಿ ಪೂರ್ವ ಕಾಲೆಜಿನಲ್ಲಿ ಮುಗಿಸಿದೆ. ನಾನು ೧ನೇ ತರಗತಿಯಿಂದ ೧೦ನೇ ತರಗತಿವರೆಗು ಹಾಸ್ಟೇಲ್ನಲ್ಲಿದೆ. ಇದರಿಂದ ನಾನು ತುಂಬ ಕಲಿತಿದ್ದೇನೆ. ಈಗ ನಾನು ಕ್ರೈಸ್ಟ್ ಕಾಲೇಜಿನಲ್ಲಿ ಬಿಕಾಂ ವಿದ್ಯಭ್ಯಾಸವನ್ನು ಮಾಡುತಿದ್ದೇನೆ.
ಪ್ರವಾಸ
ನಾನು ಗೋಕರ್ಣ ಮುರುಡೇಶ್ವರ ಮಂಗಳೂರು ಬೆಂಗಳೂರು ಕೊಡಗು ಹಾಸನ್ ಬೇಲೂರ್ ಹಳೇಬೀಡು ಶಿವಮೊಗ್ಗ ಜೋಗ ಜಲಪಾತ ಮುಂತಾದ ಜಾಗಗಳಿಗೆ ಹೋಗಿದ್ದೆ