ಸದಸ್ಯ:ವಿನೀತ್ ಕಟ್ಟಿ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಪಾಲ ದಾಸರು[ಬದಲಾಯಿಸಿ]

ಗೋಪಾಲದಾಸರು ಮೋಹನದಾಸರು ವಿಜಯದಾಸರು

ಗೋಪಾಲದಾಸರು ರಾಯಚೂರು ಜಿಲ್ಲೆಯವರು. ದೇವದುರ್ಗ ತಾಲುಕಿನ ಮೊಸರುಕಲ್ಲು ಗ್ರಮವು ದಾಸರ ಜನ್ಮಸ್ಥಳ. ಅವರ ತಂದೆ ಮುರಾರಿ, ತಾಯಿ ವೆನ್ಕಮ್ಮ. ಜನನ ಕ್ರಿ.ಶ. ೧೭೧೭. ಅವರ ಮುದ್ರಿಕೆ (ಅಂಕಿತ) ಗೋಪಾಲ ವಿಠಲ. ಅವರ ಗುರುಗಳು ವಿಜಯ ದಾಸರು.[೧]

ಬಾಲ್ಯದ ದಿವಸಗಳು[ಬದಲಾಯಿಸಿ]

ಗೋಪಾಲ ದಾಸರ ಬಾಲ್ಯದ ಹೆಸರು 'ಭಾಗಣ್ಣ'. ಅವರು ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಅನಾಥ ವಿಧವೆಯಾದ ವೆಂಕಮ್ಮ, ಮಕ್ಕಳನ್ನು ಕರೆದುಕೊಂಡು ಭಿಕ್ಷುಕಳಾಗಿ ಸಂಚರಿಸುತ್ತ ಗದ್ವಾಲ್ ಸಂಸ್ಥಾನಕ್ಕೆ ಸೇರಿದ ಸಂಕಾಪುರಕ್ಕೆ ಬಂದಳು. ಊರಿನವರು ಇಳಿದುಕೊಳಲು ಸ್ಥಳ ಕೊಡದಿದ್ದ ಕಾರಣ, ಊರಿಗೆ ಅರ್ಧ ಮೈಲು ದೂರದಲ್ಲಿ ಇರುವ ಮಾರುತಿ ಗುಡಿಯಲ್ಲಿ ವಾಸವಾದರಳು. ಆ ಗ್ರಾಮದ ದಯಾಳು ಉಪಾಧ್ಯಾಯರು, ವೆಂಕಮ್ಮನ ನಾಲ್ವರು ಮಕ್ಕಳಿಗೂ ಉಚಿತವಾಗಿ ವಿದ್ಯಾದಾನ ಮಾಡಿದರು. ಶಾನುಭೋಗ ಗುಂಡಪ್ಪನವರು ಭ್ಹಾಗಣ್ಣನಿಗೆ ಧರ್ಮೋಪನಯನ ಮಾಡಿದರು. ಪುರೋಹಿತ ಆಚಾರ್ಯರಿಂದ ಪಾಠ ಕಲಿತರು. ಒಮ್ಮೆ ಕೇಳಿದ ಪಾಠವನ್ನು ಏಕಸಂಧಿಗ್ರಾಹಿಯಾಗಿ ಒಡನೆಯೇ ಒಪ್ಪಿಸುತ್ತಿದ್ದನು. ಒಂದೆರಡು ವರ್ಷಗಳ್ಳಲ್ಲೇ ಯಲ್ಲವನ್ನು ಕಲಿತರು. ಆನಂತರ ತಪ್ಪಸನ್ನಾರಂಭ್ಹಿಸಿದರು. ಸಂಕಾಪುರದ ಬಳಿಯ ಭಾವಿಯಲ್ಲಿ ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಪಕ್ಕದಲ್ಲಿದ್ದ ವಟವ್ರಕ್ಷದ ಬುಡದಲ್ಲಿ ಕುಳೆತು ಎರಡು ವರ್ಷ ಮೌನವ್ರತದಿಂದ ಭಾಗಣ್ನ ತಪ್ಪಸ್ಸು ಮಾಡಿದರು. ಕೆಲ ದುಷ್ಟಜನರು ಪರಿಪರಿಯ ತೋಂದರೆಗಳನ್ನು ಕೊಟ್ಟರು, ಬಿಸಿನೀರು ಸುರಿದರು. ಹಾಗೆ ಮಾಡಿದವರಿಗೆ ಮೈಮೇಲಿ ಬೊಬ್ಬೆಗಳಾದವು. ಹೀಗಾಗಿ ಜನರು ಅವರ ತಂಟೆಗೆ ಹೋಗುವುದನ್ನು ಬಿಟ್ಟರು. ಅವರಿಗೆ ತಪಸ್ಸು ಸಿಧ್ಧಿಸಿತು. ಭಾಗಣ್ಣ ವರಕವಿ ಯಾದರು, ಮಹಾ ಜ್ನಾನಿಯಾದರು. ಯಾರನ್ನು ನೋಡಿದರು ಅವರ ಮೂರು ಜನ್ಮದ ವೃತ್ತಾಂತವನ್ನು ತಿಳಿಯುವ ಮಹಾಜ್ನಾನವು ಭಾಗಣ್ಣನಿಗೆ ಲಭ್ಯವಾಯಿತು. ಸಂಕಾಪುರದಲ್ಲಿ ಈಗಲು ಆ ಸ್ಥಳವನ್ನು ತೋರಿಸುತ್ತಾರೆ. [೨]

ಸಾಧನೆ[ಬದಲಾಯಿಸಿ]

ಭಾಗಾಣ್ಣ ಸಂಗಾಪುರವನ್ನು ಬಿಟ್ಟು ಉತ್ತನೂರಿಗೆ ಬಂದರು. ದಿನವೂ ಜನರಿಗೆ ಅದೃಷ್ಟ ಹೇಳುವುದು, ವೇಂಕಟೇಶ ದೇವರ ಗುಡಿಯಲ್ಲಿ ಹಾಡುತ್ತ ನರ್ತನಸೇವೆ ಮಾಡುವುದು, 'ವೇಂಕಟಕೃಷ್ಣ' ಎಂಬ ಮುದ್ರಿಕೆಯಿಂದ ಕವನ ರಚಿಸಿ ಹಾಡುವುದು ಇದು ಭಾಗಣ್ಣನವರ ಕೆಲಸವಾಗಿತ್ತು. ಭಾಗಣ್ಣನ ಭಕ್ತಿಗೆ ಮೆಚ್ಚಿ ವೇಂಕಟಪತಿಯು ಶ್ರೀಕೃಷ್ಣನ ರೂಪದಲ್ಲಿ ನರ್ತನ ಮಾಡುತ್ತಿದ್ದನು ಎಂಬ ನಂಬಿಕೆ ಇದೆ. ಜನರು ಭಾಗಣ್ಣನವರನ್ನು ದೇವತಾಪುರುಷರೆಂದು ಭಕ್ತಿಯಿಂದ ಕಾಣುತ್ತಿದ್ದರು. ಭಾಗಣ್ಣನವರು ಧನವಂತರಾಗಲಾರಂಭಿಸಿದರು. ಆನಂತರು ಅವರು ಆದವಾನಿಗೆ (ಈಗಿನ ಆದೋನಿ) ಬಂದರು. ಅಲ್ಲಿಯೂ ಅವರ ಅದೃಷ್ಟ, ವಿದ್ಯಾಬಲ, ಧನಪ್ರಾಪ್ತಿ ಹೆಚ್ಚಿತು. ಮುಂದೆ ಅವರಿಗೆ ವಿಜಯದಾಸರ ಪರಿಚಯವಾಯಿತು. ಅವರ ಅನುಗ್ರಹಕ್ಕೆ ಪಾತ್ರರಾಗಿ ಗೋಪಾಲವಿಠಲ ಎಂಬ ಅಂಕಿತ ದೋರೆತು ಗೋಪಾಲದಾಸರಾದರು. [೩]

ಗೋಪಾಲದಾಸರು ಪಂಢರಪುರ, ಕೊಲ್ಹಾಪುರ, ಉಡುಪಿ ಯಾತ್ರೆ ಮಾಡಿದರು. ಗೋಪಾಲದಾಸರು ವಿಜಯದಾಸರು ಆಜ़್ನನುಸಾರ ಮಾನವಿ-ಯ ನರಸಿಂಹಾಚಾರ್ಯರಿಗೆ (ಮುಂದೆ ಅವರೇ ಜಗನ್ನಥದಾಸರು) ಉದರ ಶೂಲೆಯನ್ನು ಪರಿಹರಿಸಿದರು ಹಾಗೂ ತಮ್ಮ ಆಯುಸ್ಸಿನಲ್ಲಿ ೪೦ ವರ್ಷ ಆಯುರ್ದಾನ ಮಾಡಿದರು ಎಂಬ ಪ್ರತೀತಿ. ಆನಂತರ ಜಗನ್ನಾಥದಾಸರ ಉದರಶೂಲೆಯನ್ನು ತಾವು ಅನುಭವಿಸಿದರು. ಹೆಳವನಕಟ್ಟೆ ಗಿರಿಯಮ್ಮ ಇವರ ಶಿಷ್ಯೆ. ಗೋಪಾಲದಾಸರು ತಮ್ಮ ಕೊನೆಯ ದಿನಗಳನ್ನು ಊತ್ತನೂರಿನ ವೇಂಕಟೇಶ ದೇವಾಲಯದಲ್ಲಿ ಕಳೇದರು. [೪]

ಉಲ್ಲೇಖಗಳು[ಬದಲಾಯಿಸಿ]

ಟೆಂಪ್ಲೇಟು:ರೆಫ಼್ ಲಿಸ್ಟ್

  1. http://mythicsociety.org/book/page/2534/
  2. http://www.dvaita.org/haridasa/dasas/gopala.html
  3. http://mythicsociety.org/book/page/2534/
  4. http://mythicsociety.org/book/page/2534/