ಸದಸ್ಯ:ಭಾಸ್ಕರ ಜಿ ಶೇಟ್/sandbox

ವಿಕಿಪೀಡಿಯ ಇಂದ
Jump to navigation Jump to search

ಕಾಳು ಮೆಣಸು[ಬದಲಾಯಿಸಿ]

ಪ್ರಾಚೀನ ಕಾಲದಿಂದಲೂ ಜನ ಸಾಮಾನ್ಯರಿಗೆ ತಿಳಿದಿರುವ ಸಾಂಬಾರ ಪದಾರ್ಥಗಳಲ್ಲಿ ಇದೂ ಸಹ ಒಂದು. ಉಷ್ಣ ಪ್ರದೇಶದಲ್ಲಿ ಬೆಳೆಯಬಹುದಾದ ಅತೀ ಕಡಿಮೆ ಖರ್ಚಿನ ಲಾಭದಾಯಕ ಬೆಳೆಗಳಲ್ಲಿ ಇದೂ ಒಂದಾಗಿದ್ದು ಇದಕ್ಕಿದ್ದ ಉತ್ತಮ ಬೆಲೆಯಿಂದಾಗಿ ಕಪ್ಪು ಚಿನ್ನ ಎಂತಲೂ ಕರೆಯಲ್ಪಟ್ಟಿದೆ. ಇಂಗ್ಲಿಷರ ಕಾಲದಲ್ಲಿಯೂ ಇದು ಭಾರತದಿಂದ ಆ ದೇಶಗಳಿಗೆ ರಪ್ತಾಗುತ್ತಿತ್ತು[೧].

ವಿಧಗಳು[ಬದಲಾಯಿಸಿ]

ಇದರಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.

  1. ಸೊಪ್ಪು ಕಾಳು ಮೆಣಸು (ಕಪ್ಪು ಕಾಳು ಮೆಣಸು)
  2. ಬಿಳಿ ಕಾಳು ಮೆಣಸು (ಬೋಳು ಕಾಳು ಮೆಣಸು)[೨]

ಬೆಳೆದ ಕಾಳು ಮೆಣಸನ್ನು ಕೊಯ್ದು ಸಿಪ್ಪೆ ಸಮೇತ ಒಣಗಿಸಿದರೆ ಅದು ಕಪ್ಪು ಕಾಳು ಮೆಣಸಾಗುವುದು. ಬೆಳೆದ ಕಾಳು ಮೆನಸನ್ನು ಮೂರು ನಾಲ್ಕು ದಿನಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಬಳಿಕ್ಕ ತಿಕ್ಕಿ ಸಿಪ್ಪೆ ತೆಗೆದು ಒಣಗಿಸಿದರೆ ಅದು ಬೋಳು ಕಾಳು ಮೆಣಸಾಗುವುದು.

ಕಾಳು ಮೆಣಸಿನ ಬಳ್ಳಿ

ಉಪಯೋಗ[ಬದಲಾಯಿಸಿ]

ವಿಶೇಷವಾಗಿ ಇದನ್ನು ಅಡುಗೆ ಇತ್ಯಾದಿಗಳಿಗೆ ಬಳಸುತ್ತಿದ್ದರೂ ಉತ್ತಮ ಔಷಧೀಯ ಗುಣಗಳನ್ನೂ ಸಹ ಹೊಂದಿದೆ. ಕೆಮ್ಮು, ಕಫ ಇತ್ಯಾದಿಗಳ ಔಷಧಿಗಳಿಗಾಗಿಯೂ ಇದು ಬಳಸಲ್ಪಡುತ್ತಿದೆ.

ಬೆಳೆಯುವ ಪ್ರದೇಶಗಳು[ಬದಲಾಯಿಸಿ]

ಇದು ಬಳ್ಳಿಯಾಗಿ ಬೆಳೆಯುವುದರಿಂದ ತೆಂಗು ಅಡಿಕೆ ಇತ್ಯಾದಿ ಮರಗಳ ಆಶ್ರಯ ಬೇಕಾಗುತ್ತದೆ. ಕರ್ನಾಟಕದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಉಪಬೆಳೆಯಾಗಿ ಬೆಳೆಯುತ್ತಾರೆ.

ವಿಭಿನ್ನ ಬಣ್ಣಗಳಲ್ಲಿ ಕಾಳು ಮೆಣಸು


ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕ ಸರ್ಕಾರದ ಕನ್ನಡ ಮಾಧ್ಯಮದ ೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ
  2. https://en.wikipedia.org/wiki/Black_pepper