ಸದಸ್ಯ:ಪೃಥ್ವಿ ರೊಡ್ರಿಗಸ್/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಿಪ್ಟೋಗ್ರಫಿ(ಗುಪ್ತ ಲಿಪಿ ಶಾಸ್ತ್ರ)[ಬದಲಾಯಿಸಿ]

ಕ್ರಿಪ್ಟೋಗ್ರಫಿ ಅಥವಾ ಕ್ರಿಪ್ಟೋಲಜಿ ಎಂಬ ಪದವು ಗ್ರೀಕ್ ಭಾಷೆಯ "ಕ್ರಿಪ್ಟೋಸ್" ಎಂಬ ಪದದಿಂದ ಹುಟ್ಟಿಕೊಂಡಿದೆ. ಕ್ರಿಪ್ಟೋಸ್ ಎಂದರೆ "ನಿಗೂಡ ರಹಸ್ಯ",ಅಥವಾ ನಮ್ಮ ಸಂದೇಶವನ್ನು ಮೂರನೆಯ ವ್ಯಕ್ತಿಗೆ ತಿಳಿಯದಂತೆ ಇನ್ನೊಬ್ಬರಿಗೆ ರವಾನಿಸುವ ತಂತ್ರ. ಆಧುನಿಕ ಗುಪ್ತ ಲಿಪಿ ಶಾಸ್ತ್ರವನ್ನು ಗಣಿತ, ಗಣಕ ವಿಜ್ಞಾನ, ವಿದ್ಯುತ್ ತಂತ್ರ ಹೀಗೆ ಹಲವಾರು ವೈಜ್ಞಾನಿಕ ವಿಷಯಗಳಡಿ ಕಲಿಯಲಾಗುತ್ತಿದೆ.

ಈ ನವ ಶತಕದ ಮೊದಲು, ಕ್ರಿಪ್ಟೋಗ್ರಫಿಯನ್ನು ರಹಸ್ಯಮಯವಾಗಿ ಉಪಯೋಗಿಸಲಾಗುತ್ತಿತ್ತು. ಕಳುಹಿಸಿದ ಸಂದೇಶವನ್ನು ಬೇರೆ ರೂಪಕ್ಕೆ ಪರಿವರ್ತಿಸಿ ಪುನ: ಆ ಸಂದೇಶವನ್ನು ಮೂಲ ಸ್ಥಿತಿಗೆ ತರಲಾಗುತ್ತಿತ್ತು. ಈ ರೀತಿಯ ಸಂದೇಶಗಳನ್ನು ಕಳುಹಿಸಿದ ವ್ಯಕ್ತಿ ಹಾಗೂ ಕಳುಹಿಸಲ್ಪಟ್ಟ ವ್ಯಕ್ತಿ ಮಾತ್ರ ಓದಬಹುದು. ಈ ರೀತಿಯ ರಹಸ್ಯಮಯ ಸಂದೇಶ ರವಾನೆಯನ್ನು ರಕ್ಷಣಾ ಇಲಾಖೆಯವರು, ಗುಪ್ತಚರರು ಉಪಯೋಗಿಸುತ್ತಿದ್ದರು. ಇತ್ತೀಚೆಗೆ, ಈ ತಂತ್ರಜ್ಞಾನವನ್ನು ಅನೇಕ ಗಣಕ-ಯಂತ್ರದ ಕೆಲಸಗಳಲ್ಲಿ ಅಳವಡಿಸಲಾಗಿದೆ.

ಮೊದಲೆಲ್ಲಾ ರಹಸ್ಯ ಲಿಪಿ ಇಲ್ಲಿನ ಅಧಿಕಾಂಶ ಜನರಿಗೆ ಓದಲಾಗುತ್ತಿರಲಿಲ್ಲ. ಆದರೆ ಇಂದಿನ ಅಕ್ಷರಸ್ಥ ವಿರೋಧಿಗಳ ಮಧ್ಯೆ ನಮಗೆ ನಿಜವಾದ ಗೂಢಲಿಪಿಶಾಸ್ತ್ರ ಅಗತ್ಯವಿದೆ.ಈ ಗೂಢಲಿಪಿಶಾಸ್ತ್ರದಲ್ಲಿ ಸೈಫರ್ ರೀತಿಯ ಸಂದೇಶವನ್ನು ಅಳವಡಿಸಲಾಗಿದೆ. ಅಕ್ಷರಗಳ ಅನುಕ್ರಮವಾದ ಜೋಡಣೆಯನ್ನು ಸೈಫರ್ಗಳು ಎಂದು ಕರೆಯಲಾಗುತ್ತದೆ. ಸೈಫರ್ಗಳು ವ್ಯವಸ್ಥಿತವಾಗಿ ಅಕ್ಷರಗಳನ್ನು ಅಥವಾ ಅಕ್ಷರಗಳ ಗುಂಪುಗಳನ್ನು ಬದಲಾಯಿಸುತ್ತದೆ. ಪರ್ಯಾಯ ಸೈಫರ್ಗಳು(ಉದಾಹರಣೆಗೆ: 'ಹಲೋ ವರ್ಲ್ಡ್' 'ehlol owrdl' ಹೀಗೆ ಸರಳ ಮರುಜೋಡಣೆಯ ಯೋಜನೆಯಲ್ಲಿ ಸೈಫರ್ಗಳನ್ನು ಜೋಡಿಸಲಾಗುತ್ತದೆ.) ಈ ರೀತಿಯ ಸರಳ ಆವೃತ್ತಿಗಳು ಉದ್ಯಮಶೀಲ ವಿರೋಧಿಗಳಿಗೆ ಹೆಚ್ಚು ಗೋಪ್ಯತೆ ನೀಡಲಿಲ್ಲ. ಆರಂಭದಲ್ಲಿದ್ದ ಪರ್ಯಾಯ ಸೈಫರ್ಗಳನ್ನು ಪ್ರತಿ ಅಕ್ಷರದ ವರ್ಣಮಾಲೆಯ ಕೆಳಗೆ ಮತ್ತಷ್ಟು ಅಕ್ಷರಗಳನ್ನು ಕೆಲವು ನಿಗದಿತ ಸಂಖ್ಯೆಗಳ ಆಧಾರದ ಮೇಲೆ ಅಳವಡಿಸಲಾಗಿತ್ತು. ಆ ತಂತ್ರವನ್ನು ಸೀಸರ್ ಸೈಫರ್ ಎಂದು ಕರೆಯುತ್ತಿದ್ದರು. ಸ್ಯೂಟಾನಿಯಸ್ ಜೂಲಿಯಸ್ ಸೀಸರ್ ಅವನ ಸೇನಾಪತಿಯನ್ನು ಸಂಪರ್ಕಿಸಲು ಮೂರು ಶಿಫ್ಟ್ ಬಳಸಿದರು ಎಂಬ ವರದಿಯಿದೆ. ಗೂಢಲಿಪೀಕರಣದ ಪ್ರಾಚೀನ ಬಳಕೆಯ ಈಜಿಪ್ಟ್ (1900 BCE) ರಲ್ಲಿ ಕಲ್ಲಿನಲ್ಲಿ ಕೆತ್ತಿದ ಸೈಫರ್ಟೆಕ್ಸ್ಟ್ ದೊರಕಿದೆ.

ಶಾಸ್ತ್ರೀಯ ಅನೇಕ ಗ್ರೀಕರು, ರಹಸ್ಯ ಬರಹಗಾರಿಕೆ ಪ್ರಾಚೀನ ಕಾಲದಲ್ಲಿ ಮೊದಲು ಅಭಿವೃದ್ಧಿಪಡಿಸಲಾಯಿತು ಎಂದು ವಾದಿಸುತ್ತಾರೆ. ಮೊದಮೊದಲ ಉದಾಹರಣೆಯೆಂದರೆ, ಹೆರೊಡೊಟಸ್, ಗುಲಾಮರ ಬೋಳಿಸಲಾದ ತಲೆ ಮೇಲೆ ಹಚ್ಚೆ ಮತ್ತು ಅಡಗಿಸಿಟ್ಟಿದ್ದ ಸಂದೇಶ. ರಹಸ್ಯ ಬರಹಗಾರಿಕೆಯ ಆಧುನಿಕ ಉದಾಹರಣೆಗಳು ಅಗೋಚರ ಶಾಯಿಯಲ್ಲಿವೆ. ಮಾಹಿತಿಯನ್ನು ರಹಸ್ಯವಾಗಿಡಲು, microdots ಮತ್ತು ಡಿಜಿಟಲ್ ನೀರುಗುರುತುಗಳನ್ನು ಉಪಯೋಗಿಸಲಾಗಿದೆ.

ಭಾರತದಲ್ಲಿ, 2000 ವರ್ಷದ Vātsyāyana Kautiliyam ಮತ್ತು Mulavediya ಎಂಬ ಸೈಫರ್ಗಳಲ್ಲಿ ಎರಡು ರೀತಿಯ ತಂತ್ರಗಳಿವೆ. Kautiliyam ರಲ್ಲಿ ಸೈಫರ್ ಅಕ್ಷರದ ಬದಲಿ ಸ್ವರಗಳು ಹಾಗೂ ವ್ಯಂಜನಗಳ ಮಾರ್ಪಾಡಾಯಿತು.

ಗುಪ್ತ ಲಿಪಿ ಶಾಸ್ತ್ರವನ್ನು, ಆಧುನಿಕ ಕ್ಷೇತ್ರದಲ್ಲಿ ಹಲವಾರು ಅಧ್ಯಯನಗಳನ್ನಾಗಿ ವಿಂಗಡಿಸಬಹುದು. ಈ ಅಧ್ಯಯನಗಳಲ್ಲಿ ಕೆಲವನ್ನು ನೋಡೋಣ.

ಅನೇಕಸಾಮ್ಯತೆಯ-ಕೀ (ಸಾಮ್ಯತೆಯ-ಕೀ ಅಲ್ಗಾರಿದಮ್) ಸಾಮ್ಯತೆಯ-ಕೀ ಗುಪ್ತ ಲಿಪಿ ಒಂದು ಪ್ರಮುಖ ಗೂಢಲಿಪೀಕರಣವಾಗಿದ್ದು ಇದರಲ್ಲಿ ಅಸಂಕೇತೀಕರಣವನ್ನು ಬಳಸಬಹುದಾಗಿದೆ. ಸಾಮ್ಯತೆಯ-ಕೀ ಗುಪ್ತ ಕಳುಹಿಸುವವ ಮತ್ತು ಸ್ವೀಕರಿಸುವವರು ಇಬ್ಬರೂ ಒಂದೇ ಕೀ ಪಟ್ಟಿಯನ್ನು ಹಂಚಿಕೊಂಡಿರುತ್ತಾರೆ.ಈ ಕೀ ಪಟ್ಟಿಯಲ್ಲಿ ಗೂಢಲಿಪೀಕರಣ ವಿಧಾನಗಳನ್ನು ಸೂಚಿಸಲಾಗಿರುತ್ತದೆ. ಈ ಗೂಢಲಿಪೀಕರಣ ತಂತ್ರವನ್ನು ಜೂನ್ 1976 ರಂದು ಸಾರ್ವತ್ರಿಕವಾಗಿ ಜಾರಿಗೊಳಿಸಲಾಗಿದೆ.