ಸದಸ್ಯ:ಪೃಥ್ವಿ ರೊಡ್ರಿಗಸ್
ಹೆಸರು : ಪೃಥ್ವಿ ರೊಡ್ರಿಗಸ್.
ಊರು : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು.
ಹುಟ್ಟಿದ ದಿನಾಂಕ : ೧೬-೦೪-೧೯೯೫.
ಹವ್ಯಾಸ : ಕಾದಂಬರಿಗಳನ್ನು ಓದುವುದು(ಪತ್ತೇದಾರಿ), ಗಿಟಾರ್, ಕೀ-ಬೋರ್ಡ್, ತಬಲ, ಹಾಗೂ ಹಾರ್ಮೋನಿಕಾದಂತಹ ವಾದ್ಯಗಳನ್ನು ನುಡಿಸುವುದು, ಬಾಸ್ಕೆಟ್ ಬಾಲ್(ಬುಟ್ಟಿ-ಚೆಂಡು), ಟೇಬಲ್ ಟೆನ್ನಿಸ್, ವಾಲಿಬಾಲ್, ಚೆಸ್ ಗಳಂತಹ ಆಟಗಳನ್ನಾಡುವುದು, ಹೊಸ ಹಾಡುಗಳನ್ನು ಕಲಿಯುವುದು, ಲೇಕನಗಳನ್ನು ಬರೆಯುವುದು, ಇತ್ಯಾದಿ,.
ಸಾಧನೆಗಳು : "ದೆರ್ ಇಸ್ ಪೀಸ್", ಎಂಬ ಹಾಡಿನ ರಚನೆ, ಖಾಸಗಿ ಪತ್ರಿಕೆಗಳಲ್ಲಿ ಲೇಖನಗಳ ಪ್ರಕಟಣೆ, ಬಾಸ್ಕೆಟ್ ಬಾಲ್, ಥ್ರೋ- ಬಾಲ್, ವಾಲಿಬಾಲ್, ಹಾಗೂ ಅಥ್ಲೆಟಿಕ್ಸ್ ಗಳಲ್ಲಿ ಅನೇಕ ಪ್ರಶಸ್ತಿಗಳು ದೊರಕಿವೆ.
ಮೇಲಿರುವ ಕೆಲವು ವಿಷಯಗಳಿಂದ ನನ್ನ ಬಗ್ಗೆ ಕೆಲವು ಮಾಹಿತಿಗಳು ನಿಮಗೆ ದೊರೆತಿವೆ. ನನ್ನ ಜೀವನದ ಹಲವು ಹಂತಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ತಂದೆ ಮಾರ್ಕ್ ರೊಡ್ರಿಗಸ್ ಹಾಗೂ ತಾಯಿ ಹಿಲ್ಡಾ ರೊಡ್ರಿಗಸ್ ರವರಿಗೆ ನಾನು ಮೊದಲನೆಯ ಮಗು. ನನ್ನ ನಂತರ ನನ್ನ ತಂಗಿ ಹಾಗೂ ತಮ್ಮ ಹುಟ್ಟಿದರು. ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಾಲಾಭ್ಯಾಸವನ್ನು ಸಂತ ಜೋಸೆಫರ ಕನ್ನಡ ಮಾಧ್ಯಮ ಶಾಲೆ, ಕೊಪ್ಪದಲ್ಲಿ ಮುಗಿಸಿದೆ. ನನ್ನ ಪದವಿಪೂರ್ವ ಕಾಲೇಜನ್ನು ಸಂತ ಅಲೋಶಿಯಸ್ ಪಿ. ಯು ಕಾಲೇಜಿನಲ್ಲಿ ಮುಗಿಸಿ, ಕೇರಳದ ತಿರುವನಂತಪುರದಲ್ಲಿ ಇಂಗ್ಲಿಷ್ ಅಭ್ಯಸನ ಮುಗಿಸಿದೆ.ಈಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ ಸಿ ತರಬೇತಿಯನ್ನು ಮಾಡುತ್ತಿದ್ದೇನೆ.
ನಾನು ಚಿಕ್ಕವನಿರುವಾಗಲೇ ನನಗೆ ಏನೋ ಒಂದು ಸಾಧನೆಯನ್ನು ಮಾಡಬೇಕೆನಿಸಿತ್ತಿತ್ತು. ಬಾಲ್ಯದಿಂದಲೇ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದ್ದೆ. ಆದರೆ ನಾನು ಒಂದು ಹಳ್ಳಿಯಲ್ಲಿದ್ದ ಕಾರಣ ಹೊರಗಿನ ಪ್ರಪಂಚದ ಆಗುಹೋಗುಗಳು ತಿಳಿಯುತ್ತಿರಲಿಲ್ಲ. ಆದರೆ, ನನ್ನನ್ನು ಒಳ್ಳೆಯ ವಿದ್ಯಾರ್ಥಿಯನ್ನಾಗಿ ಮಾರ್ಪಡಿಸಿದ್ದು ನನ್ನ ನೆಚ್ಚಿನ ಗುರುಗಳು. ಶಿಕ್ಷಕರ ಹಾಗೂ ಶಿಕ್ಷಕಿಯರ ನೆರವಿನಿಂದ ನಾನು ಚೆನ್ನಾಗಿ ಕಲಿಯಲಾರಂಭಿಸಿದೆ. ಸಂತ ಜೋಸೆಫರ ಕನ್ನಡ ಮಾಧ್ಯಮ ಶಾಲೆಯಲ್ಲಿ ದೊಡ್ಡ ದೊಡ್ಡ ಶಿಕ್ಷಣ ಸಾಮಗ್ರಿಗಳು ಇರದಿದ್ದರೂ, ಒಬ್ಬ ವಿದ್ಯಾರ್ಥಿಗೆ ಬೇಕಾದ ಎಲ್ಲಾ ಮೌಲ್ಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡೆ.ಈಗ ಒಬ್ಬ ಮೌಲ್ಯಭರಿತ ವಿದ್ಯಾರ್ಥಿಯಾಗಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ. ಎಸ್. ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ)ಯನ್ನು ಕಲಿಯುತ್ತಿದ್ದೇನೆ.
ಧನ್ಯವಾದಗಳು.