ವಿಷಯಕ್ಕೆ ಹೋಗು

ಸದಸ್ಯ:ಡಾ. ಸತೀಶ್ ಪಾಟೀಲ್/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜಯಗರದ ದೇವಾಲಯಗಳು[ಬದಲಾಯಿಸಿ]

ವೈಷ್ಹವ ದೇವಾಲಯಗಳು[ಬದಲಾಯಿಸಿ]

ವಿಜಯಗನರ ಸಾಮ್ರಾಜ್ಯವು ಶೈವ ಮತ್ತು ವೈಷ್ಣವ ಸೇರಿದಂತೆ ವಿವಿಧ ಧರ್ಮಗಳಿಗೆ ಸಮಾನ ಆಧ್ಯತೆ ನೀಡಿತ್ತು.. ಹಾಗಾಗಿ ಇಲ್ಲಿ ಶೈವ ಧರ್ಮಶೈವ ಧರ್ಮದ ಸಂಕೇತವಾಗಿ ವಿರೂಪಾಕ್ಷೇಶ್ವರ ದೇವಾಲಯ, ಸಾಸಿವೆ ಕಾಳು ಗಣಪ, ಕಡಲೇಕಾಳು ಗಣಪ, ಬಡವಿ ಲಿಂಗ ಮುಂತಾದ ಕೆತ್ತನೆಗಳು ಕಂಡುಬರುತ್ತವೆ. ಹಾಗೆಯೇ ವೈಷ್ಣವ ಧರ್ಮವೈಷ್ಣವ ಧರ್ಮಕ್ಕೆ ಸಂಕೇತವಾಗಿ ವಿಠಲ ದೇವಾಲಯ, ಹಜಾರರಾಮ ದೇವಾಲಯ, ಕೃಷ್ಣ ದೇವಾಲಯಗಳು ಕಾಣುತ್ತೇವೆ.

ಹಜಾರರಾಮ ದೇವಾಲಯ[ಬದಲಾಯಿಸಿ]

ಹಜಾರರಾಮ ದೇವಾಲಯವನ್ನು ನಿರ್ಮಾಣ ಮಾಡಿದವನು ವಿಜಯನಗರದ ಪ್ರಖ್ಯಾತ ದೊರೆಯಾದ ಶ್ರೀಕೃಷ್ಣ ದೇವರಾಯನು.[೧]

ರಾಮಾಯಣ ದೃಶ್ಯಗಳು[ಬದಲಾಯಿಸಿ]

ಹಜಾರರಾಮ ದೇವಾಲಯವು ವಿಜಯನಗರ ಸಾಮ್ರಾಜ್ಯದಲ್ಲಿ [೨]ನಿರ್ಮಾಣಗೊಂಡ ಹಲವು ದೇವಾಲಯಗಳಲ್ಲಿ ಪ್ರಮುಖವಾದದು. ಈ ದೇವಾಲಯವು ರಾಮಾಯಣದ ಕತೆಗಳನ್ನು ನಿರೂಪಿಸುತ್ತದೆ. ದೇವಾಲಯದ ಸುತ್ತಲೂ ರಾಮಾಯಣದ ಕತೆಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ರಾಮ-ಸೀತೆಯರ ವಿವಾಹ, ಕೈಕೆಯಿಯ ಮಾತಿಗೆ ಕಟ್ಟುಬಿದ್ದು ಕಾಡಿಗೆ ತೆರಳುವ ರಾಮ-ಲಕ್ಷಣ-ಸೀತೆಯರ ದೃಶ್ಯಗಳೂ ಇಲ್ಲಿವೆ. ಮಾರೀಚನ ವಧೆ ಜಟಾಯು-ರಾವಣರ ಕದನ, ವಾಲಿ-ಸುಗ್ರೀವರ ವಾಗ್ವಾದ, ರಾವಣ ಸಂಹಾರ ಸೇರಿದಂತೆ ವಿವಿಧ ಕೆತ್ತನೆಗಳಿವೆ. ದೇವಾಲಯದ ಹೊರಭಾಗದಲ್ಲಿ ಮೂರು ಸಾಲುಗಳಲ್ಲಿ ಕೆತ್ತನೆಗಳಿದ್ದು, ಮೇಲಿನ ಸಾಲು ರಾಮಾಯಣದ ಆರಂಭದ ಕತೆಯನ್ನು ವಿವರಿಸಿದರೆ ನಂತರದ ಸಾಲು ರಾಮ-ಲಕ್ಷಣ ಮತ್ತು ಸೀತೆಯರ ಕಾಡಿನ ಸಂಕಟಗಳನ್ನು, ಸೀತೆಯ ಅಪಹರಣವನ್ನೂ ಚಿತ್ರಿಸಿದೆ.[೩] ಹಾಗೆಯೇ ಪೂರ್ತಿ ಕೆಳಗಿನ ಸಾಲು ವಾನರೊಂದಿಗೆ ಲಂಕೆಗೆ ತೆರಳುವ ರಾಮನು ರಾವಣನನ್ನು ಸಂಹಾರ ಮಾಡಿ, ಮರಳಿ ಆಯೋದ್ಯೆಗೆ ಮರಳುವ ದೃಶ್ಯಗಳಿವೆ.

ಉಲ್ಲೇಖಗಳು[ಬದಲಾಯಿಸಿ]

  1. https://www.google.com/maps/place/Hazara+Raama+Temple/@15.3177709,76.4661933,17z/data=!3m1!4b1!4m6!3m5!1s0x3bb77e32bda7e721:0x5d25ceea575028e8!8m2!3d15.3177657!4d76.4687682!16s%2Fg%2F1vzv23q6?entry=ttu
  2. https://hampi.in/hazara-rama-temple
  3. https://hampi.in/hazara-rama-temple