ಸದಸ್ಯ:ಡಾ.ಪ್ರಕಾಶ ಗ.ಖಾಡೆ
ಡಾ. ಪ್ರಕಾಶ ಗ. ಖಾಡೆ
ಡಾ. ಪ್ರಕಾಶ ಗಣಪತಿ ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ, ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾಗಿ 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ , ಬಾಗಲಕೋಟೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ . ಪತ್ರಿಕೋದ್ಯಮ, ರಂಗಭೂಮಿ, ಜಾನಪದ, ಶಿಕ್ಷಣ, ಸಂಶೋಧನೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲ ವ್ಯಕ್ತಿತ್ವ, ಕನ್ನಡದ ಪ್ರಮುಖ ಪತ್ರಿಕೆಗಳಲ್ಲ್ಲಿ, ಆಕಾಶವಾಣಿ, ದೂರದರ್ಶನಗಳಲ್ಲಿ ನಿರಂತರವಾಗಿ ಲೇಖನ, ಕವಿತೆ, ಕಥೆ, ವಿಮರ್ಶೆ ಪ್ರಕಟ ಮತ್ತು ಪ್ರಸಾರ. ಈವರೆಗೆ ಗೀತ ಚಿಗಿತ, ಪ್ರೀತಿ ಬಟ್ಟಲು, ತೂಕದವರು, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕೃಷ್ಣಾ ತೀರದ ಜನಪದ ಒಗಟುಗಳು, ಮುನ್ನುಡಿ ತೋರಣ, ಜತ್ತಿ ಕಾವ್ಯಾಭಿವಂದನ, ನೆಲಮೂಲ ಸಂಸ್ಕೃತಿ, ಕನ್ನಡ ಪತ್ರಿಕೆ ಮತ್ತು ಸಾಹಿತ್ಯ, ಜಾನಪದ ಕೋಗಿಲೆ ಗೌರಮ್ಮ ಚಲವಾದಿ, ಸಾಹಿತ್ಯ ಸಂಗತಿ ,ಮೌನ ಓದಿನ ಬೆಡಗು, ಬಾಗಲಕೋಟೆ ಹೋಳಿ, ಕಾವ್ಯ ನಾದದ ಧ್ಯಾನ, ಹಲಸಂಗಿ ಸಾಹಿತ್ಯದ ದೇಸಿಯತೆ, ಬೇಂದ್ರೆ ಕಾವ್ಯದ ದೇಸಿಯತೆ ವಿಮರ್ಶಾ ಸಂಕಲನಗಳು. ಚೆಲುವಿ ಚಂದ್ರಿ, ಬಾಳುಕುನ ಪುರಾಣ ಕಥಾ ಸಂಕಲನಗಳು ಸೇರಿದಂತೆ 51 ಕೃತಿಗಳು ಪ್ರಕಟವಾಗಿವೆ. ನಾಡಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ಅಕ್ಕಮಹಾದೇವಿ ವಿಶ್ವವಿದ್ಯಾಲಯ , ವಿಜಯಪುರ ಹಾಗೂ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ವಿಶ್ವವಿದ್ಯಾಲಯ ಗಳು ಪದವಿ ತರಗತಿಗಳಿಗೆ ಇವರು ಬರೆದ ಲೇಖನಗಳು ಪಠ್ಯಗಳಾಗಿವೆ.,ಶಿವಮೊಗ್ಗ,ವಿಜಾಪುರ, ಮೈಸೂರುಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕೇರಳದಲ್ಲಿ ಜರುಗಿದ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ. ಬೆಂಗಳೂರಿನಲ್ಲಿ ಜರುಗಿದ ಮೇಘ ಮೈತ್ರಿ 6 ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಾಗೂ ವಿಜಯಪುರದಲ್ಲಿ ಜರುಗಿದ ಕನ್ನಡ ಪುಸ್ತಕ ಪರಿಷತ್ತು ರಾಜ್ಯ ಮಟ್ಟದ ಸಮ್ಮೇಳನದ ಗೌರವಕ್ಕೆ. ಪಾತ್ರರಾದರು.ಭಾಲ್ಕಿಯಲ್ಲಿ ಜರುಗಿದ ಗಡಿನಾಡು ಸಾಂಸ್ಕೃತಿಕ ಸಮ್ಮೇಳನ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.ಉತ್ತಮ ವಾಗ್ಮಿ, ಕ್ರಿಯಾಶೀಲ ಅಧ್ಯಾಪಕ,ಜಾನಪದ ತಜ್ಞ, ರಂಗ ಚಿಂತಕ. ಸಾಹಿತಿ ಡಾ.ಪ್ರಕಾಶ ಗ .ಖಾಡೆ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ.ಇದೇ 10.6.2025 ರಂದು ಡಾ.ಪ್ರಕಾಶ ಗಣಪತಿ ಖಾಡೆ ಅವರಿಗೆ 60 ವರ್ಷಗಳು ತುಂಬಿದವು.ಅಂದು ಸಂಜೆ ಬೆಂಗಳೂರಿನಲ್ಲಿರುವ ಅಳಿಯ ಮತ್ತು ಮಗಳ ಮನೆಯಲ್ಲಿ ಕುಟುಂಬವರ್ಗದವರ ಸಮ್ಮುಖದಲ್ಲಿ ಸರಳವಾಗಿ ತಮ್ಮ ಅರವತ್ತನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
#