ಸದಸ್ಯ:ಕೆಜಗದೀಶ್೧೫/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೆಟ್ರೋರಾಸಾಯನಿಕಗಳು[ಬದಲಾಯಿಸಿ]

ಪೆಟ್ರೋಲಿಯಂ ಅಥವಾ ನೈಸರ್ಗಿಕ ಅನಿಲದಿಂದ ದೊರೆಯುವ ವಸ್ತುಗಳಿಗೆ ಪಟ್ರೋರಾಸಾಯನಿಕಗಳೆಂದು ಹೆಸರು.ಪೆಟ್ರೋರಾಸಾಯನಿಕಗಳನ್ನು ಬಣ್ಣಗಳು,ಡಿಟರ್ಜೆಂಟ್ ಗಳು, ಪ್ಲಾಸ್ಟಿಕ್ ಗಳು,ಕೃತಕ ನೂಲುಗಳು,ಕೀಟನಾಶಕಗಳು,ಪೂತಿನಾಶಕಗಳು ಮತ್ತು ಸೌಂದರ್ಯ ವರ್ಧಕಗಳಂತಹ ಹಲವಾರು ಉತ್ಪನ್ನಗಳಲ್ಲಿ ಕಚ್ಛಾವಸ್ತುಗಳನ್ನಾಗಿ ಉಪಯೋಗಿಸಲಾಗುತ್ತಿದೆ. ಈ ದಿನಗಳಲ್ಲಿ ನಾವು ಸುಮಾರು ೫೦,೦೦೦ ಕ್ಕೂ ಮಿಗಿಲಾಗಿ ಪೆಟ್ರೋರಾಸಾಯನಿಕಗಳನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸುತ್ತಿದ್ದೇವೆ.

ನೈಸರ್ಗಿಕ ಅನಿಲ[ಬದಲಾಯಿಸಿ]

ನೈಸರ್ಗಿಕ ಅನಿಲವು ಹೈಡ್ರೋಕಾರ್ಬನ್ ಗಳ ಮಿಶ್ರಣವಾಗಿದ್ದು ಪೆಟ್ರೋಲಿಯಮ್ ಬಾವಿಗಳಲ್ಲಿ ಉಪೋತ್ಪನ್ನವಾಗಿ ದೊರೆಯುತ್ತದೆ.ಇದು ಶೇ ೮೦ ರಷ್ಟು ಮಿಥೇನ್,ಶೇ ೧೩ ರಷ್ಟು ಈಥೇನ್ ಮತ್ತು ಇತರೆ ಹೈಡ್ರೋಕಾರ್ಬನ್ ಗಳನ್ನು ಅಲ್ಪ ಪ್ರಮಾಣದಲ್ಲಿ ಹೊಂದಿರುವ ಮಿಶ್ರಣ. ನೈಸರ್ಗಿಕ ಅನಿಲವು ಸ್ವಚ್ಛ ಮತ್ತು ದಕ್ಷತೆಯ ಇಂಧನ.ನೈಸರ್ಗಿಕ ಅನಿಲದ ದಹನದಿಂದ ಉತ್ಪತ್ತಿಯಾಗುವ ಹೊಗೆಯ ಪ್ರಮಾಣ ನಿರ್ಲಕ್ಷಿತ. ನೈಸರ್ಗಿಕ ಅನಿಲವನ್ನು ಗೃಹ ಉಪಯೋಗಿ ಇಂಧನವನ್ನಾಗಿ ಬಳಸಲಾಗುತ್ತಿದೆ. CNG ಎಂದು ಪ್ರಖ್ಯಾತ ವಾಗಿರುವ ಸಂಕುಚಿತ ನೈಸರ್ಗಿಕ ಅನಿಲವನ್ನು ವಾಹನಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ಗಳ ಬದಲಿಯಾಗಿ ಬಳಸಲಾಗುತ್ತಿದೆ.ಕೈಗಾರಿಕೆಗಳಲ್ಲಿನ ಕುದಿಹಂಡೆ (ಬಾಯ್ಲರ್) ಗಳಿಗೆ ಉಷ್ಣದ ಮೂಲವನ್ನಾಗಿ ಬಳಸಲಾಗುತ್ತಿದೆ. ಫಾರ್ಮಾಲ್ಡಿಹೈಡ್,ಮೆಥನಾಲ್, ಕಾರ್ಬನ್ ಮಸಿ ಮುಂತಾದವುಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಉಲ್ಲೇಖ[ಬದಲಾಯಿಸಿ]

Sami Matar and Lewis F. Hatch (2001). Chemistry of Petrochemical Processes. Gulf Professional Publishing. ISBN 0-88415-315-0. Staff (March 2001). "Petrochemical Processes 2001". Hydrocarbon Processing: 71–246. ISSN 0887-0284.