ಸದಸ್ಯ:ಆನ್.ಮೈಕಲ್/sandbox

ವಿಕಿಪೀಡಿಯ ಇಂದ
Jump to navigation Jump to search


ವಾಹನ ವಿಮೆ[ಬದಲಾಯಿಸಿ]

ರೈತರ ವಿಮಾ ವಾಹನ

ವಾಹನ ವಿಮೆಯನ್ನು ಕಾರು ವಿಮೆ ಅಥವ ಮೊಟಾರು ವಿಮೆ ಎಂದೂ ಕರೆಯುತ್ತಾರೆ.ಇದನ್ನು ವಾಹನದ ಸುರಕ್ಷತೆಗಾಗಿ ಕರಿದಿಸಲಾಗುತ್ತದೆ.ಈ ವಿಮೆಯ ಪ್ರಾಥಮಿಕ ಬಳಕೆಯೆಂದರೆ ವಹಾನದ ಮಾಲಿಕರಿಗೆ ಆರ್ಥಿಕ ರಕ್ಷಣೆಯನ್ನು ನೀಡುವುದಾಗಿದೆ.ಈ ವಿಮೆಯನ್ನು ಮುಖ್ಯವಾಗಿ ಕಾರು,ಟ್ರಕ್,ಮೋಟರು ಸೈಕಲ್, ಮತ್ತಿತರ ವಾಹನಗಳಿಗಾಗಿ ಕರಿದಿಸಲಾಗುತ್ತದೆ.ವಾಹನ ವಿಮೆಯ ನಿರ್ದಿಷ್ಟ ನಿಯಮಗಳು ಒಂದೊಂದು ಪ್ರಾಂತ್ಯದ ಕಾನೂನಿನೊಂದಿಗೆ ಬದಲಾಗುತ್ತದೆ.ವಾಹನ ವಿಮೆಯಲ್ಲಿ ವಾಹನದ ಕಳ್ಳತನ,ಯಾವುದೆ ತರದ ಹಾನಿಗಳನ್ನೂ ಸೇರಿಸಲಾಗಿದೆ.

ಇತಿಹಾಸ[ಬದಲಾಯಿಸಿ]

ಮೊದಲನೇಯ ಮಹಾಯುದ್ದದ ನಂತರ ವಾಹನಗಳ ವ್ಯಾಪಕವಾದ ಬಳಕೆಯು ನಗರಗಳಲ್ಲಿ ಕಂಡುಬರತೊಡಗಿತು.ಆದರೆ ಈ ಸಂಧರ್ಬದಲ್ಲಿ ವಾಹನ ವಿಮೆಯು ಕಡ್ಡಯವಾಗಿರಲಿಲ್ಲ. ಇದರ ಪ್ರಧಾನ ಉದ್ದೆಶವೆಂದರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದಾಗಿದೆ. ಮೊದಲ ಬಾರಿಗೆ ಕಡ್ಡಾಯವಾದ ವಾಹನ ವಿಮೆಯನ್ನು ಯುನೈಟೆಡ್ ಕಿಂಗ್ಡಂನಲ್ಲಿ ರೋಡ್ ತಾರಿಫ್ಫ್ ಆಕ್ಟ್ ೧೯೩೦ ಪ್ರಕಾರ ಜಾರಿಗೆ ತರಲಾಯಿತು. ವಿಮೆ ಕಡ್ಡಾಯಗೊಳಿಸದ್ದರಿಂದ ವಾಹನ ಮಾಲೀಕರು ಮತ್ತು ಚಾಲಕರು ತಮ್ಮ ಕೇಡುಗಳಿಗೆ, ವಾಹನ ಅಪಘಾತದ ಕಾರಣ ನಡೆಯುವ ಮರಣಕ್ಕೆ ಹಾಗೂ ಅವರ ಇತರೆ ಭಾದ್ಯತೆಗಳಿಗಾಗಿ ಸುರಕ್ಷತೆಯನ್ನು ನೀಡಲಾಗಿರುತ್ತದೆ.೧೯೩೯ರಲ್ಲಿ ಜರ್ಮನಿಯು ಇದಕ್ಕೆ ಸಮಾನವಾದ ಶಾಸನಗಳನ್ನು ಜಾರಿಗೆ ತರಲಾಯಿತು.ಹಲವು ಪ್ರಾಂತ್ಯಗಳಲ್ಲಿ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಬಳಸಬೇಕಾದರೆ ಕಡ್ಡಾಯವಾಗಿ ವಾಹನ ವಿಮೆಯನ್ನು ಹೊಂದಿರಬೇಕು.

ಭಾರತ[ಬದಲಾಯಿಸಿ]

ಭಾರತದಲ್ಲಿನ ವಾಹನ ವಿಮೆಯಲ್ಲಿ ನೈಸರ್ಗಿಕ ಹಾಗೂ ಮಾನವನಿರ್ಮಿತ ವಿಕೋಪಗಳಿಗಳನ್ನು ಸೇರಿಸಿದೆ.ಈ ವಿಮೆಯಲ್ಲಿ ಗಾಡಿ ಚಾಲಾನೆ ಮಾಡುವಾಗ ನಡೆಯುವ ಅಪಘಾತದಲ್ಲಿ ಚಾಲಕನಿಗೆ ಹಾಗೂ ಪ್ರಯಾಣಿಕರಿಗೆ ಸುರಕ್ಷತೆಯನ್ನು ಒದಗಿಸಲಾಗುತ್ತದೆ. ಹಾಗೆಯೆ ಕೆಲವು ಜೆನರಲ್ ವಿಮಾ ಕಂಪನಿಗಳು ಆನ್ಲೈನ್ ವಿಮಾ ಸೇವೆಯನ್ನು ಒದಗಿಸುತ್ತದೆ.ವಾಣಿಜ್ಯ ಅಥವಾ ವೈಯಕ್ತಿಕ ಬಳಕೆಗಾದರೂ ಭಾರತದಲ್ಲಿ ವಾಹನ ವಿಮೆಯು ಕಡ್ಡಾಯಗೊಳಿಸಿದ್ದರೆ.ವಿಮಾ ಕಂಪನಿಗಳು ಪ್ರಮುಖ ವಾಹನ ತಯಾರಕರೊಂದಿಗೆ ಸಂಭಂದ ಬೆಳೆಸಿಕೊಂಡಿರುತ್ತಾರೆ.ಇವರು ತಮ್ಮ ಗ್ರಾಹಕರಿಗೆ ತ್ವರಿತ ಸ್ವಯಂ ಉಲ್ಲೇಖಗಳನ್ನು ನೀಡುತ್ತಾರೆ.ವಿಮೆಯ ಕಂತನ್ನು ಅಂಶಗಳನ್ನು ನೋಡಿದ ನಂತರ ನಿರ್ದರಿಸುತ್ತಾರೆ ಹಾಗೆಯೆ ವಾಹನದ ಮೌಲ್ಯ ಹೆಚ್ಚಾದ್ದಂತೆಯೆ ಕಂತು ವರ್ಧಿಸುತ್ತದೆ.ಭಾರತದಲ್ಲಿ ವಿಮೆಯ ಕ್ಳೈಮ್ ಪಡೆಯಬೇಕಾದರೆ ಕೆಲವು ದಾಖಲೆಗಳ ಅವಶ್ಯಕತೆಯಿದೆ. ಅವುಗಳೆಂದರೆ ವಾಹನದ ಆರ್ಸಿ ಪ್ರತಿ,ಡ್ರೈವಿಂಗ್ ಲೈಸೆಂಸ್ ಪ್ರತಿ, ಎಫ್.ಐ.ಆರ್.ಪ್ರತಿ,ಅಂದಾಜು ಲೆಕ್ಕ,ಕರಾರಿನ ಪ್ರತಿ ಮುಂತಾದವುಗಳು.

ಭಾರತದಲ್ಲಿನ ವಾಹನ ವಿಮೆಯ ಬಗೆಗಳೆಂದರೆ[ಬದಲಾಯಿಸಿ]

 1. ಖಾಸಗಿ ವಾಹನ ವಿಮೆ:ಖಾಸಗಿ ವಾಹನ ವಿಮೆಯು ವೇಗವಾಗಿ ಬೆಳೆಯುತ್ತಿರುವ ಒಂದು ಕ್ಷೇತ್ರವಾಗಿದೆ.ವಿಮೆಯ ಕಂತು ವಾಹನದ ಮೌಲ್ಯ,ವಾಹನ ದಾಖಲೆ ಮಾಡಿರುವ ರಾಜ್ಯ ಹಾಗೂ ವಾಹನ ಉತ್ಪಾದನೆಯ ವರ್ಷ ಇವುಗಳ ಮೇಲೆ ಆದರಿತವಾಗಿರುತ್ತದೆ.
 2. ದ್ವೀಚಕ್ರ ವಾಹನ ವಿಮೆ:ಭಾರತದಲ್ಲಿನ ವಾಹನ ವಿಮೆಯ ಅಡಿಯಲ್ಲಿ ಬರುವ ದ್ವೀಚಕ್ರ ವಾಹನ ವಿಮೆಯಲ್ಲಿ ವಾಹನದ ಚಾಲಕರಿಗೆ ಆಕಸ್ಮಿಕ ಅಪಘಾತದಿಂದ ರಕ್ಷಣೆ ನೀಡುತ್ತದೆ.ಈ ವಿಮೆಯ ಕಂತೆಂದರೆ ಪ್ರಸ್ತುತ ಶೋ ರೊಂ ದರ ಮತ್ತು ಸುಂಕ ಸಲಹಾ ಸಮೀತಿ ನಿಗದಿ ಪಡಿಸಿರುವ ವಿಮಾ ಕರಾರಿನ ಪ್ರಾರಂಭ ಸಮಯದ ಸವಕಳಿ ದರವನ್ನು ಗುಣಿಸಿದಾಗ ದೊರೆಯುವ ಮೊತ್ತವಾಗಿದೆ.
 3. ವಾಣಿಜ್ಯ ವಾಹನ ವಿಮೆ: ವಾಣಿಜ್ಯ ವಾಹನ ವಿಮೆ ಟ್ರಕ್ಸ್ ಮತ್ತು ಎಚ್.ಮ್.ವಿಗಳಿಗೆ ರಕ್ಷಣೆ ನಿಡುತ್ತದೆ.ವಿಮೆಯ ಕಂತು ವಾಹನದ ಮೌಲ್ಯ ಹಾಗೂ ವಾಹನ ದಾಖಲೆ ಮಾಡಿರುವ ಸ್ಥಳದ ಮೇಲೆ ಅವಲಂಭಿಸಿರುತ್ತದೆ.

ವಾಹನ ವಿಮೆ ಸಾಮಾನ್ಯವಾಗಿ ಈ ಕೆಳಕಂಡ ಸಂಧರ್ಭಗಳಿಗೆ ಮಾತ್ರ ರಕ್ಷಣೆ ನೀಡುತ್ತದೆ[ಬದಲಾಯಿಸಿ]

 1. ಆಕಸ್ಮಿಕವಾದ ನಷ್ಟ ಅಥವಾ ಹಾನಿ,ಬೆಂಕಿ, ಮಿಂಚು, ಸ್ವಯಂ ದಹನ, ಬಾಹ್ಯ ಸ್ಫೋಟ, ಕಳ್ಳತನ, ದುರುದ್ದೇಶಪೂರಿತ ಕ್ರೀಯೆ
 2. ಮೂರನೆ ಪಾರ್ಟಿಯ ಕೇಡು ಮತ್ತು ಮರಣದ ಭಾದ್ಯತೆ,ಮೂರನೇ ಪಾರ್ಟಿಯ ಆಸ್ತಿ
 3. ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ ಪರಿಕರಗಳ ನಷ್ಟ, ಹೆಚ್ಚುವರಿ ಪ್ರೀಮಿಯಂನ ಮರುಪಾವತಿ.

ಈ ಕೆಳಗಿನ ಸಂದರ್ಭಗಳನ್ನು ವಾಹನ ವಿಮೆ ಒಳಗೊಂಡಿಲ್ಲ[ಬದಲಾಯಿಸಿ]

೧.ಅನುಗತ ನಷ್ಟ, ಸವಕಳಿ, ಯಾಂತ್ರಿಕ ಮತ್ತು ವಿದ್ಯುತ್ ಸ್ಥಗಿತ ಅಥವಾ ವೈಫಲ್ಯ ೨.ವಾಹನ ಭೌಗೋಳಿಕ ಪ್ರದೇಶದ ಹೊರಗೆ ಬಳಸಿದಾಗ ೩.ಯುದ್ಧ ಅಥವಾ ಪರಮಾಣು ಅಪಾಯ ಮತ್ತು ಮಧ್ಯಪಾನಮಾಡಿ ವಾಹನ ಚಾಲನೆ

ರಶಿಯನ್ ಒಕ್ಕೂಟ[ಬದಲಾಯಿಸಿ]

ರಶಿಯನ್ ಕಾನೂನು ಪ್ರಕಾರ ಎಲ್ಲಾ ವಾಹನ ಮಾಲಿಕರು ವಾಹನ ವಿಮೆಯನ್ನು ಕಡ್ಡಾಯವಾಗಿ ಹೊಂದಿರಬೇಕು.

ಯುನೈಟೆಡ್ ಅರಬ್ ಎಮಿರೇಟ್ಸ್[ಬದಲಾಯಿಸಿ]

ಯುನೈಟೆಡ್ ಅರಬ್ ಎಮಿರೇಟ್ಸ್ರಲ್ಲಿ ಕಾರು ವಿಮೆ ಖರೀದಿ ಮಾಡಿವಾಗ, ಸಂಚಾರ ಇಲಾಖೆಯ 13 ತಿಂಗಳು ವಿಮಾ ದೃಢೀಕರಣ ಪತ್ರವು ಪ್ರತಿ ಸಾರಿ ನೋಂದಾಯಿಸುವಾಗ ಮತ್ತು ವಾಹನ ನೋಂದಣಿ ನವೀಕರಿಸುವಾಗಲು ಅಗತ್ಯವಿರುತ್ತದೆ.

ವ್ಯಾಪ್ತಿ ಮಟ್ಟ[ಬದಲಾಯಿಸಿ]

* ವಿಮೆಯನ್ನು ಖರಿದಿಸಿದ ವ್ಯಕ್ತಿ (ವೈದ್ಯಕೀಯ ಪಾವತಿ)
* ಆಸ್ತಿ ಹಾನಿ
* ವಿಮೆ ಮಾಡಿಸಿದ ವಾಹನ (ಭೌತಿಕ ಹಾನಿ)
* ಮೂರನೆಯ ಪಾರ್ಟಿ ಹಾನಿ(ಕಾರು ಮತ್ತು ಜನರು, ಆಸ್ತಿಪಾಸ್ತಿ ನಷ್ಟ ಮತ್ತು ದೈಹಿಕ ಕೇಡು)
* ಬೆಂಕಿ ಮತ್ತು ಕಳ್ಳತನ
* ವಾಹನದ ಬಾಡಿಗೆ.
* ದುರಸ್ತಿ ವೆಚ್ಚ
* ವಿಮೆ ಪಡೆಯದ ವ್ಯಕ್ತಿಗಳನ್ನು ಒಳಗೊಂಡ ಅಪಘಾತಗಳು

ಪ್ರೀಮಿಯಂ ಕಂತುಗಳ ಆಧಾರ[ಬದಲಾಯಿಸಿ]

ಕಾನೂನಿನ ಪ್ರಕಾರ ವಿಮೆ ಕಂತನ್ನು ಸರ್ಕಾರ ಅಥವಾ ವಿಮೆಕಂಪನಿ ನಿರ್ಧರಿಸಬಹುದು.ಸರ್ಕಾರ ನಿರ್ಧರಿಸದ ಸಂದರ್ಭದಲ್ಲಿ ವಿಮಾಗಣಕ ಅಂಕಿಅಂಶಗಳ ಮಾಹಿತಿ ಬಳಸಿ ಕಂಡುಹಿಡಿಯುತ್ತಾರೆ.ಕಂತು ಹಲವು ಅಂಶಗಳನ್ನು ಆಧರಿಸಿ ಬದಲಾಗುತ್ತದೆ.ಅವುಗಳೆಂದರೆ, ಚಾಲಕನ ರೇಖಾಚಿತ್ರ (ವಯಸ್ಸು, ಲಿಂಗ, ಚಾಲನೆಯ ಇತಿಹಾಸ) ಮತ್ತು ಕಾರಿನ ಬಳಕೆ.

ಲಿಂಗ[ಬದಲಾಯಿಸಿ]

೧ ಮಾರ್ಚ್ ೨೦೦೧,ರಂದು ಯುರೋಪಿಯನ್ ನ್ಯಾಯಾಲಯವು ವಿಮಾಕಂಪನಿಗಳು ಲಿಂಗವನ್ನು ಕಂತಿನ ಲೆಕ್ಕಾಚಾರಕ್ಕಾಗಿ ಬಳಸಿದ್ದಲ್ಲಿ ಇಯು ಸಮಾನತೆ ಕಾನೂನುಗಳನ್ನು ಉಲ್ಲಂಘಿನೆಯಂತೆ ಪರಿಗಣಿಸುವುದಾಗಿ ನಿರ್ದರಿಸಿತು ಹಾಗೆಯೆ ಅದು ತಾರತಮ್ಯ ಮಾಡುವುದಾಗಿ ನ್ಯಾಯಲಯ ಹೇಳಲಾಯಿತು.

ವಯಸ್ಸು[ಬದಲಾಯಿಸಿ]

ಸಾಮನ್ಯವಾಗಿ ೨೫ವಯಸ್ಸಿನ ನಂತರ ವಿಮಾಕಂತು ಕಡಿಮೆಯಾಗುತ್ತದೆ. ಹಿರಿಯ ನಾಗರಿಕರಿಗೆ ನಿವೃತ್ತಿ ರಿಯಾಯಿತಿ ದೊರೆಯುತ್ತದೆ.ಆದರೆ ೬೫ವರ್ಷದ ನಂತರ ವಿಮೆಯ ದರ ಹೆಚ್ಚಾಗುತ್ತದೆ

ಡ್ರೈವಿಂಗ್ ಲೈಸೆನ್ಸ್[ಬದಲಾಯಿಸಿ]

ವಿಮೆಯನ್ನು ಕರಿದಿಸಲು ಡ್ರೈವಿಂಗ್ ಲೈಸೆನ್ಸ್ ಒಂದು ಪ್ರಧಾನ ದಾಖಲೆಯಾಗಿದೆ.

ವೈವಾಹಿಕ ಸ್ಥಿತಿ[ಬದಲಾಯಿಸಿ]

ಅಂಕಿಅಂಶಗಳ ಮಾಹಿತಿಯ ಪ್ರಕಾರ ವಿವಹಿತರಾದವರು ಅಪಘಾತಕ್ಕೆ ಒಳಗಾಗುವುದು ಬಹಳ ಕಡಿಮೆ ಆದರಿಂದ್ದ ವಿವಾಹಿತರಿಗೆ ಕಂತು ಕಡಿಮೆ ಇರುತ್ತದೆ.

ವಾಹನ ವರ್ಗೀಕರಣ[ಬದಲಾಯಿಸಿ]

ಬಳಕೆಯ ಮೇಲೆ ಆಧರಿಸಿ ವಾಹನಗಳನ್ನು ೩ ವಿಧವಾಗಿ ವರ್ಗೀಕರಿಸಬಹುದು.ಅವುಗಳೆಂದರೆ :ಖಾಸಗಿ ವಾಹನ,ದ್ವೀಚಕ್ರ ವಾಹನ,ವಾಣಿಜ್ಯ ವಾಹನ.ಬ್ಳ್ಕೆಯನ್ನು ಆಧರಿಸಿ ಕಂತನ್ನು ನಿರ್ಧರಿಸಲಾಗುತ್ತದೆ.

ಉಲ್ಲೇಖ[ಬದಲಾಯಿಸಿ]

 • Wenzel T. (1995). Analysis of national pay-as-you-drive insurance systems and other variable driving charges. Lawrence Berkeley Lab., CA
 • "Green Slips". New South Wales Government, Motor Accidents Authority
 • Insurance Bureau of Canada. Ibc.ca (1 January 2003).
 • "South African Road Accident Fund Act of 1996". South African Government. Retrieved 4 December 2009
 • "Snapshot, Snapshot Discount: Pay As You Drive (PAYD)". Progressive.com
 • "Need Credit or Insurance? Your credit scores helps determine how much you will pay". ftc.gov. Retrieved 9 January 2010