ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:PRATHEEKSHA P SHETTY/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                    ''ವರ್ಗೀಕರಣ ಶಾಸ್ತ್ರ''
   
      ಜೀವಿಗಳನ್ನು ವರ್ಗೀಕರಿಸಿ ಸಮಾನತೆಗಳು ಮತ್ತು ವ್ಯತ್ಯಾಸಗಳ ಆಧಾರದಲ್ಲಿ ವರ್ಗೀಕರಿಸುವ ಹಾಗೂ ಹೆಸರು ನೀಡುವ ವಿಜ್ಞಾನ ಶಾಖೆಯನ್ನು ವರ್ಗೀಕರಣ ಶಾಸ್ತ್ರ ಎನ್ನುವರು. 

ವರ್ಗೀಕರಿಸಲು ಜೀವಿಗಳ ಸ್ವಭಾವ, ಬಾಹ್ಯರಚನೆ, ಆಂತರಿಕ ರಚನೆ, ವಿಕಾಸ ಚರಿತ್ರೆ ಎಂಬಿವುಗಳನ್ನು ಅಧ್ಯಯನಕ್ಕೊಳಪಡಿಸಬೇಕು. ಈ ಅಧ್ಯಯನದ ಮೂಲಕ ವಿವಿಧ ಜೀವಿ ವಿಭಾಗಗಳೊಳಗಿನ ಪರಸ್ಪರ ಸಂಬಂಧವನ್ನು ತಿಳಿಯಲಾಗುತ್ತದೆ. ಇದು ವಿವಿಧ ಭೂವಲಯಗಳಲ್ಲಿರುವ ಸಸ್ಯ-ಪ್ರಾಣಿ ಜಾಲಗಳ ಕುರಿತು ಸಾಮಾನ್ಯ ತಿಳುವಳಿಕೆ ಲಭಿಸಲು ಸಹಾಯಕವಾಗುವುದು. ಅದಲ್ಲದೆ ಸರಳ ರಚನೆಯಿರುವ ಜೀವಿಗಳಿಂದ ಸಂಕೀರ್ಣ ರಚನೆಯಿರುವ ಜೀವಿಗಳು ರೂಪುಗೊಳ್ಳುವ ವಿಕಾಸ ಹಂತಗಳನ್ನು ವಿವರಿಸಲು ಸಹಾಯಕವಾಗುವ ಪುರಾವೆಗಳನ್ನು ವರ್ಗೀಕರಣ ಶಾಸ್ತ್ರ ನೀಡುವುದು.

   ವರ್ಗೀಕರಣ ಶಾಸ್ತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ ಕೆಲವು ವಿಜ್ಞಾನಿಗಳು:
  ೧. ಅರಿಸ್ಟೋಟಲ್ (ಗ್ರೀಸ್  ಕ್ರಿ.ಪೂ. ೩೮೪-೩೨೨)
         ಜೀವ ಶಾಸ್ತ್ರದ ಜನಕ. ಜೀವಿಗಳನ್ನು ಕೆಂಪು ರಕ್ತವುಳ್ಳವುಗಳು ಮತ್ತು ಇಲ್ಲದವುಗಳು ಎಂದು ವರ್ಗೀಕರಿಸಿದನು.
 
  ೨. ಚರಕ ( ಭಾರತ ಕ್ರಿ.ಶ. ೧ನೇ ಶತಮಾನ)
         ಆಯುರ್ವೇದದ ಜನಕ. ಇನ್ನೂರರ‍ಷ್ಟು ಸಸ್ಯ ಪ್ರಾಣಿ ಜಾಲಗಳನ್ನು ಸೇರಿಸಿ ಚರಕ ಸಂಹಿತೆ ಎಂಬ ಗ್ರಂಥವನ್ನು ರಚಿಸಿದನು.
  
  ೩. ಕಾರ್ಲ್ ಲಿನೇಯಸ್ (ಸ್ವೀಡನ್ ಕ್ರ.ಶ. ೧೭೦೭-೧೭೭೮)
         ಆಧುನಿಕ ವರ್ಗೀಕರಣ ಶಾಸ್ತ್ರದ ಜನಕ ಎಂದು ತಿಳಿಯಲ್ಪಡುತ್ತಾನೆ. ವಿವಿಧ ವರ್ಗೀಕರಣದ ಹಂತಗಳನ್ನು ಸೂಚಿಸಿದನು.ಜೀವಿಗಳಿಗೆ ಹೆಸರನ್ನು ನೀಡುವ ದ್ವಿನಾಮ ಪದ್ಧತಿಯನ್ನು ಆವಿಷ್ಕರಿಸಿದನು.