ಸದಸ್ಯ:PRATHEEKSHA P SHETTY/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

' ಕುಟುಕು ಕಣವಂತಗಳು

ಈ ವಂಶದ ಪ್ರಾಣಿಗಳ ದೇಹದ ಒಳಗೆ ಜೀರ್ಣಕ್ರಿಯೆಯಲ್ಲಿ ಸಹಕರಿಸುವ ಜಠರಾವಕಾಶ (ಸೀಲೆಂಟರಾನ್) ವನ್ನು ಹೊಂದಿರುವುದರಿಂದ ಇವುಗಳಿಗೆ 'ಸೀಲೆಂಟೆರೇಟಾ' ಎಂದು ಹೆಸರು. ಅಲ್ಲದೆ ಶತ್ರುಗಳಿಂದ ರಕ್ಷಿಸಿಕೊಳ್ಳಲು ಮತ್ತು ಆಹಾರ ಜೀವಿಗಳನ್ನು ಕೊಲ್ಲಲು 'ಕುಟುಕುಕಣ'ಗಳನ್ನು ಹೊಂದಿರುವ ಪ್ರಾಣಿಗಳಾಗಿರುವುದರಿಂದ ಕುಟುಕುಕಣವಂತಗಳೆಂದೂ ಹೆಸರಿದೆ ಕುಟುಕುಕಣವಂತಗಳು ಜಲವಾಸಿಗಳಾಗಿವೆ.ಕೆಲವು ಪ್ರಾಣಿಗಳು ಸಿಹಿನೀರಿನಲ್ಲೂ ಕಂಡು ಬರುತ್ತವೆ. ಈ ಪ್ರಾಣಿಗಳು ಎರಡು ರೂಪಗಳಲ್ಲಿ ಕಂಡುಬರುತ್ತವೆ. ದೇಹಭಿತ್ತಿಯು ಎರಡು ಪದರಗಳಿಂದ ನಿರ್ಮಿತವಾಗಿದ್ದು ಇವುಗಳನ್ನು' ಇಪ್ಪದರದ ಪ್ರಾಣಿಗಳು' ಎನ್ನುತ್ತಾರೆ. ಹೊರಪದರಕ್ಕೆ' ಹೊರದರ್ಮ' ಎಂದೂ ಒಳಪದರಕ್ಕೆ 'ಒಳದರ್ಮ' ಎಂದೂ ಹೆಸರು.ಇವೆರಡು ಪದರಗಳ ನಡುವೆ ಜೀವಕೋಶಗಳಿಲ್ಲದ ಲೋಳೆ ರೂಪದ ರಚನೆಯಿದೆ. ಈ ವಿಶಿಷ್ಟವಾದ ರಚನೆಯನ್ನು 'ಮೀಸೋಗ್ಲಿಯಾ' ಎಂದು ಕರೆಯಲಾಗುತ್ತದೆ. ಈ ಪ್ರಾಣಿಗಳ ದೇಹದಲ್ಲಿ ಕಂಡುಬರುವ 'ನೆಮಾಟೋಸಿಸ್ಟಗಳೆಂಬ' ಹೆಸರಿನ ವಿಶಿಷ್ಟ ಕುಟುಕುಕೋಶಗಳು ಶತ್ರುಗಳಿಂದ ರಕ್ಷಿಸಿಕೊಳ್ಳಲು ಮತ್ತು ಆಹಾರದ ಬೇಟೆಗೆ ಜೀವಿಗಳನ್ನು ಕೊಲ್ಲಲು ಸಹಾಯಕವಾಗಿವೆ. ಇವುಗಳನ್ನು ಉತ್ಪತ್ತಿ ಮಾಡುವ ಜೀವಕೋಶಗಳನ್ನು 'ನಿಡೋಬ್ಲಾಸ್ಟ' ಎನ್ನುತ್ತಾರೆ. ಪ್ರಾಣಿಗಳು ಬಾಗಲು, ಹಿಗ್ಗಲು, ಕುಗ್ಗಲು ಸಹಾಯಕವಾದ ಸ್ನಾಯು- ಅನುಲೇಪಕ ಜೀವಕೋಶಗಳು ಎರಡೂ ಪದರಗಳಲ್ಲಿ ಕಂಡುಬರುತ್ತವೆ. ಸೀಲೆಂಟರಾನ್ ಅಥವಾ ಜಠರಾವಕಾಶವು ಸರಳವಾಗಿರಬಹುದು.ಕವಲೊದೆದಿರಬಹುದು ಅಥವಾ ಸ್ನಾಯು ತಡಿಕೆಗಳಿಂದ ವಿಭಾಗವಾಗಿರಬಹುದು. ಬಾಯಿಯ ಸುತ್ತಲೂ ಸಂಕುಚಿಸಬಲ್ಲ ಕರಬಳ್ಳಿಗಳಾಗಿರಬಹುದು.ಕರಬಳ್ಳಿಗಳಲ್ಲಿ ಕುಟುಕುಕಣಗಳು ( ಕುಟುಕುಕೋಶಗಳು ) ಸಂಗ್ರಹವಾಗಿ ಆಹಾರವನ್ನು ಪಡೆಯಲು ಸಹಕರಿಸುತ್ತವೆ.


ಸಸ್ಯ ವೈವಿಧ್ಯ[ಬದಲಾಯಿಸಿ]

ಉತ್ತಮ ಗುಣಮಟ್ಟದ ನಾಟಿ ಗಿಡಗಳನ್ನು ಉತ್ಪಾದಿಸುವ ಆಧುನಿಕ ರೀತಿಗಳು ಇಂದು ಕಾಣಲ್ಪಡುತ್ತವೆ. ಫಲವತ್ತತೆಯಿಲ್ಲದ ಮಣ್ಣಿನಲ್ಲಿ ಉತ್ತಮ ಗುಣಮಟ್ಟದ ನಾಟಿ ಗಿಡಗಳನ್ನು ಉಪಯೋಗಿಸಿದರೂ ಉತ್ತಮ ಬೆಳೆ ಸಿಗಬೇಕೆಂದಿಲ್ಲ. ಮಣ್ಣಿನ ಗುಣಮಟ್ಟವೂ ಸಸ್ಯದ ಆರೋಗ್ಯಕ್ಕೆ ಅಗತ್ಯ. ಒಂದು ಸಸ್ಯಾವಶೇಷವು ಮಣ್ಣಿಗೆ ನೀಡುವ ಪೋಷಕಾಂಶವನ್ನು ಇನ್ನೊಂದು ಸಸ್ಯಾವಶೇಷವು ನೀಡಬೇಕೆಂದಿಲ್ಲ. ವೈವಿಧ್ಯಮಯವಾದ ಸಸ್ಯಾವಶೇಷಗಳು ಎಷ್ಟರ ಮಟ್ಟಿಗೆ ಮಣ್ಣಿನಲ್ಲಿ ಕೊಳೆಯುತ್ತವೆಯೋ ಅಷ್ಟೇ ಪ್ರಮಾಣದಲ್ಲಿ ಮಣ್ಣಿಗೆ ಫಲವತ್ತತೆ ಲಭಿಸುವುದು.

ಎಡೆ ಬೆಳೆ[ಬದಲಾಯಿಸಿ]

ಪ್ರಧಾನ ಬೆಳೆಗಳೆಡೆಯಲ್ಲಿ ಪ್ರಧಾನ ಬೆಳೆಗೆ ತೊಂದರೆಯಾಗದ ರೀತಿಯಲ್ಲಿ ಕೃಷಿಮಾಡುವ ಅಲ್ಪಾವಧಿಯ ಬೆಳೆಗಳನ್ನು ಎಡೆಬೆಳೆ ಎನ್ನುವರು. ಮಣ್ಣಿನ ಫಲವತ್ತತೆ ಉಳಿಸಲು ಇದು ಸಹಾಯಕವಾಗಿದೆ.

ಪರ್ಯಾಯ ಬೆಳೆ[ಬದಲಾಯಿಸಿ]

ಒಂದು ಕೃಷಿ ಬೆಳೆಯ ನಂತರ ಅದೇ ಬೆಳೆಯನ್ನು ಪುನಃ ಬೆಳೆಸದೆ ಇತರ ಬೆಳೆಗಳನ್ನು ಕೃಷಿ ಮಾಡುವ ವಿಧಾನವನ್ನು ಪರ್ಯಾಯ ಬೆಳೆಎನ್ನುವರು. ಮಧ್ಯಂತರ ಅವಧಿಗಳಲ್ಲಿ ಭತ್ತದ ಗದ್ದೆಯಲ್ಲಿ ಅಲಸಂಡೆ, ಉದ್ದು ಮುಂತಾದವುಗಳನ್ನು ಕೃಷಿ ಮಾಡುತ್ತಾರೆ.

ದ್ವಿದಳಧಾನ್ಯ ಸಸ್ಯಗಳು[ಬದಲಾಯಿಸಿ]

ನೈಟ್ರಜನ್, ಸಸ್ಯಗಳ ಬೆಳವಣಿಗೆಗೆ ಅಗತ್ಯವಿರುವ ಒಂದು ಮೂಲವಸ್ತುವಾಗಿದೆ. ವಾತಾವರಣ ನೈಟ್ರಜನನ್ನು ನೇರವಾಗಿ ಹೀರಿಕೊಳ್ಳಲು ಸಸ್ಯಗಳಿಗೆ ಸಾಮರ್ಥ್ಯವಿಲ್ಲ. ನೀರಿನಲ್ಲಿ ವಿಲೀನವಾದ ನೈಟ್ರೇಟ್ ಲವಣಗಳನ್ನು ಸಸ್ಯಗಳು ಹೀರಿಕೊಳ್ಳುತ್ತವೆ. ಆದರೆ ಕೆಲವು ಬೇಕ್ಟೀರಿಯಾಗಳಿಗೆ ವಾತಾವರಣದ ನೈಟ್ರಜನನ್ನು ನೈಟ್ರೇಟಾಗಿ ಪರಿವರ್ತಿಸಲು ಸಾಧ್ಯವಿದೆ. ರೈಝೋಬಿಯಂ ಈ ರೀತಿಯ ಒಂದು ಬೇಕ್ಟೀರಿಯವಾಗಿದೆ. ಅಲಸಂಡೆ, ನಾಚಿಕೆ ಮುಳ್ಳು, ವಜ್ರನೀಲಿ, ಹುರುಳಿ, ಉದ್ದು ಮುಂತಾದ ಸಸ್ಯಗಳ ಬೇರಿನಲ್ಲಿ ವಾಸಿಸುವ ಇವುಗಳು ವಾತಾವರಣದ ನೈಟ್ರಜನನ್ನು ಹೀರಿಕೊಳ್ಳುವುವು. ಈ ಸಸ್ಯಗಳು ಕೊಳೆಯುವಾಗ ಪೋಷಕಾಂಶಗಳು ಮಣ್ಣಿಗೆ ಸೇರುತ್ತವೆ.

ಹಲ್ಲು[ಬದಲಾಯಿಸಿ]

ಆಹಾರದ ಪಚನ ಬಾಯಿಯಲ್ಲಿ ಆರಂಭವಾಗುವುದು. ಈ ಕ್ರಿಯೆಗೆ ಜೊಲ್ಲು ರಸದಲ್ಲಿರುವ ಕಿಣ್ವ ಸಹಾಯ ಮಾಡುವುದು. ಹಲ್ಲು ಮನುಷ್ಯ ಶರೀರದ ಅತ್ಯಂತ ಗಟ್ಟಿಯಾದ ಭಾಗವಾಗಿದೆ. ಹಲ್ಲಿನ ಕುರಿತು ಗಮನ ನೀಡದಿದ್ದರೆ ಬಹಳ ಸುಲಭವಾಗಿ ಹಲ್ಲು ಹಾನಿಗೀಡಾಗುವುದು.

ದಂತ ಕ್ಷಯ[ಬದಲಾಯಿಸಿ]

ಹಲ್ಲಿನ ಅತ್ಯಂತ ಹೊರಗಿನ ಪದರು ಇನಾಮಲ್. ಇದು ಶರೀರದ ಅತ್ಯಂತ ಗಟ್ಟಿಯಾದ ವಸ್ತು. ಅದನ್ನು ಸುಲಭವಾಗಿ ಹಾನಿಗೀಡುಮಾಡಲು ಸಾಧ್ಯವಿಲ್ಲ. ಚಂದ್ರಕಾಂತ ಶಿಲೆಯು ಆಮ್ಲದೊಂದಿಗೆ ವರ್ತಿಸಿ ಕರಗಿ ಹೋಗುವಂತೆಯೇ, ಕೇಲ್ಸಯಂ ಅಂಶವುಳ್ಳ ಇನಾಮಲ್ ಕೂಡಾ ಆಮ್ಲದೊಂದಿಗೆ ವರ್ತಿಸಿ ಇಲ್ಲದಾಗುವುದು. ಹಲ್ಲುಗಳ ಎಡೆಯಲ್ಲಿ ಆಹಾರದ ಅವಶೇಷಗಳು ಸಿಲುಕಿಕೊಳ್ಳುವಾಗ ಬೇಕ್ಟೀರಿಯಾಗಳು ಅದರಿಂದ ಪೋಷಣೆಯನ್ನು ನಡೆಸುತ್ತವೆ. ಇದರ ಪರಿಣಾಮವಾಗಿ ಲೇಕ್ಟಿಕ್ ಆಸಿಡ್ ಉತ್ಪಾದಿಸಲ್ಪಡುವುದು. ಈ ಆಮ್ಲವು ಇನಾಮಲಿನ ಸವೆತಕ್ಕೆ ಕಾರಣವಾಗುವುದು. ಸಿಹಿಯಾದ ಆಹಾರ ವಸ್ತುಗಳು ಬೇಕ್ಟೀರಿಯಾಗಳ ಚಟುವಟಿಕೆಯನ್ನು ತ್ವರಿತಗೊಳಿಸುವುದು.

ಹಾಲು ಹಲ್ಲುಗಳು[ಬದಲಾಯಿಸಿ]

ಸುಮಾರು ಆರು ತಿಂಗಳು ಪ್ರಾಯವಾಗುವಾಗ ಹಲ್ಲು ಮೊಳೆಯಲು ಆರಂಭವಾಗುವುದು. ಈ ಹಲ್ಲುಗಳು ಹಾಲು ಹಲ್ಲುಗಳೆಂದು ಕರೆಯಲ್ಪಡುತ್ತವೆ. ಮೇಲ್ದವಡೆ ಮತ್ತು ಕೆಳದವಡೆಯಲ್ಲಾಗಿ ಹತ್ತರಂತೆ ಹಲ್ಲುಗಳುಂಟಾಗುವುದು. ಆರು ವರ್ಷದಿಂದ ಹಾಲು ಹಲ್ಲುಗಳು ಒಂದೊಂದಾಗಿ ಉದುರಲು ತೊಡಗುವುವು. ಆ ಬಳಿಕ ಬರುವ ಹಲ್ಲುಗಳು ಶಾಶ್ವತ ಹಲ್ಲುಗಳಾಗಿವೆ. ಇವು ತುಂಡಾದರೆ ಅಥವಾ ಕಿತ್ತು ಹೋದರೆ ಆ ಜಾಗದಲ್ಲಿ ಹೊಸ ಹಲ್ಲುಗಳು ಮೊಳೆಯುವುದಿಲ್ಲ. ಕೊನೆಗೆ ಮೊಳೆಯುವ ಹಲ್ಲುಗಳು ದವಡೆಯ ಮೂಲೆಯಲ್ಲಿರುವ ಅರೆಯುವ ಹಲ್ಲುಗಳಾಗಿವೆ.

ಕಡಿಯುವ ಹಲ್ಲು[ಬದಲಾಯಿಸಿ]

ಇವು ಮುಂಭಾಗದಲ್ಲಿನ ಮೇಲ್ದವಡೆ ಮತ್ತು ಕೆಳದವಡೆಯಲ್ಲಿರುವ ಎಂಟು ಹಲ್ಲುಗಳಾಗಿವೆ. ಇವು ಕಚ್ಚಿ ತುಂಡರಿಸಲು ಸಹಾಯ ಮಾಡುತ್ತವೆ.

ಕೋರೆ ಹಲ್ಲು[ಬದಲಾಯಿಸಿ]

ಇವು ಕಡಿಯುವ ಹಲ್ಲುಗಳ ಸಮೀಪದ ಎರಡು ಬದಿಗಳಲ್ಲಿ ಮೇಲೆ ಮತ್ತು ಕೆಳಗೆ ಇರುವ ನಾಲ್ಕು ಹಲ್ಲುಗಳು. ಇವು ಆಹಾರವನ್ನು ಕಚ್ಚಿ ಸಿಗಿಯಲು ಸಹಾಯ ಮಾಡುವುದು.

ಕಡೆಯುವ ಹಲ್ಲು[ಬದಲಾಯಿಸಿ]

ಕೋರೆಹಲ್ಲಿನ ಸಮೀಪದ ಎರಡು ಬದಿಗಳಲ್ಲಿ ಮೇಲ್ದವಡೆ ಮತ್ತು ಕೆಳದವಡೆಯಲ್ಲಾಗಿ ಇರುವ ಎಂಟು ಹಲ್ಲುಗಳಿವು. ಈ ಹಲ್ಲುಗಳು ಜಗಿದು ಅರೆಯಲು ಸಹಾಯ ಮಾಡುವುದು.

ಅರೆಯುವ ಹಲ್ಲು[ಬದಲಾಯಿಸಿ]

ಕಡೆಯುವ ಹಲ್ಲುಗಳ ನಂತರ ಮೇಲ್ದವಡೆ ಮತ್ತು ಕೆಳದವಡೆಯಲ್ಲಾಗಿರುವ ಹನ್ನೆರಡು ಹಲ್ಲುಗಳು. ಜಗಿದು ಅರೆಯಲು ಸಹಾಯ ಮಾಡುವುದು.