ಸದಸ್ಯರ ಚರ್ಚೆಪುಟ:PRATHEEKSHA P SHETTY/sandbox
ಗೋಚರ
''ವರ್ಗೀಕರಣ ಶಾಸ್ತ್ರ'' ಜೀವಿಗಳನ್ನು ವರ್ಗೀಕರಿಸಿ ಸಮಾನತೆಗಳು ಮತ್ತು ವ್ಯತ್ಯಾಸಗಳ ಆಧಾರದಲ್ಲಿ ವರ್ಗೀಕರಿಸುವ ಹಾಗೂ ಹೆಸರು ನೀಡುವ ವಿಜ್ಞಾನ ಶಾಖೆಯನ್ನು ವರ್ಗೀಕರಣ ಶಾಸ್ತ್ರ ಎನ್ನುವರು.
ವರ್ಗೀಕರಿಸಲು ಜೀವಿಗಳ ಸ್ವಭಾವ, ಬಾಹ್ಯರಚನೆ, ಆಂತರಿಕ ರಚನೆ, ವಿಕಾಸ ಚರಿತ್ರೆ ಎಂಬಿವುಗಳನ್ನು ಅಧ್ಯಯನಕ್ಕೊಳಪಡಿಸಬೇಕು. ಈ ಅಧ್ಯಯನದ ಮೂಲಕ ವಿವಿಧ ಜೀವಿ ವಿಭಾಗಗಳೊಳಗಿನ ಪರಸ್ಪರ ಸಂಬಂಧವನ್ನು ತಿಳಿಯಲಾಗುತ್ತದೆ. ಇದು ವಿವಿಧ ಭೂವಲಯಗಳಲ್ಲಿರುವ ಸಸ್ಯ-ಪ್ರಾಣಿ ಜಾಲಗಳ ಕುರಿತು ಸಾಮಾನ್ಯ ತಿಳುವಳಿಕೆ ಲಭಿಸಲು ಸಹಾಯಕವಾಗುವುದು. ಅದಲ್ಲದೆ ಸರಳ ರಚನೆಯಿರುವ ಜೀವಿಗಳಿಂದ ಸಂಕೀರ್ಣ ರಚನೆಯಿರುವ ಜೀವಿಗಳು ರೂಪುಗೊಳ್ಳುವ ವಿಕಾಸ ಹಂತಗಳನ್ನು ವಿವರಿಸಲು ಸಹಾಯಕವಾಗುವ ಪುರಾವೆಗಳನ್ನು ವರ್ಗೀಕರಣ ಶಾಸ್ತ್ರ ನೀಡುವುದು.
ವರ್ಗೀಕರಣ ಶಾಸ್ತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ ಕೆಲವು ವಿಜ್ಞಾನಿಗಳು: ೧. ಅರಿಸ್ಟೋಟಲ್ (ಗ್ರೀಸ್ ಕ್ರಿ.ಪೂ. ೩೮೪-೩೨೨) ಜೀವ ಶಾಸ್ತ್ರದ ಜನಕ. ಜೀವಿಗಳನ್ನು ಕೆಂಪು ರಕ್ತವುಳ್ಳವುಗಳು ಮತ್ತು ಇಲ್ಲದವುಗಳು ಎಂದು ವರ್ಗೀಕರಿಸಿದನು. ೨. ಚರಕ ( ಭಾರತ ಕ್ರಿ.ಶ. ೧ನೇ ಶತಮಾನ) ಆಯುರ್ವೇದದ ಜನಕ. ಇನ್ನೂರರಷ್ಟು ಸಸ್ಯ ಪ್ರಾಣಿ ಜಾಲಗಳನ್ನು ಸೇರಿಸಿ ಚರಕ ಸಂಹಿತೆ ಎಂಬ ಗ್ರಂಥವನ್ನು ರಚಿಸಿದನು. ೩. ಕಾರ್ಲ್ ಲಿನೇಯಸ್ (ಸ್ವೀಡನ್ ಕ್ರ.ಶ. ೧೭೦೭-೧೭೭೮) ಆಧುನಿಕ ವರ್ಗೀಕರಣ ಶಾಸ್ತ್ರದ ಜನಕ ಎಂದು ತಿಳಿಯಲ್ಪಡುತ್ತಾನೆ. ವಿವಿಧ ವರ್ಗೀಕರಣದ ಹಂತಗಳನ್ನು ಸೂಚಿಸಿದನು.ಜೀವಿಗಳಿಗೆ ಹೆಸರನ್ನು ನೀಡುವ ದ್ವಿನಾಮ ಪದ್ಧತಿಯನ್ನು ಆವಿಷ್ಕರಿಸಿದನು.
Start a discussion about ಸದಸ್ಯ:PRATHEEKSHA P SHETTY/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:PRATHEEKSHA P SHETTY/sandbox.