ಸದಸ್ಯರ ಚರ್ಚೆಪುಟ:Martisrachana

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Martisrachana


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (ಚರ್ಚೆ) ೧೫:೧೬, ೧೧ ಜುಲೈ ೨೦೧೫ (UTC)

ಡೆಟ್ ಫಂಡ್ಸ್ ಡೆಟ್ ಫಂಡ್ಸ್ ಅಂದರೆ ನಿಗಧಿತ ಆದಾಯ ಬರುವ ಯೋಜನೆಗಳಲ್ಲಿ ಮಾತ್ರ ಹೂಡಿಕೆ ಮಾಡುವ ಫಂಡ್ಸ್, ಕಂಪನಿಯ ಬಾಂಡುಗಳು, ಡಿಬೆಂಚರುಗಳು, ಸಕರ್ಾರದ ಉಳಿತಾಯ ಪತ್ರಗಳು - ಇವೆಲ್ಲ ನಿಗದಿತ ಆದಾಯ ತರುವ ಸಾಧನಗಳು. ಹಾಗಾಗಿ ಡೆಟ್ ಫಂಡ್ಸ್ ಅವುಗಳಲ್ಲಿ ಹಣ ತೊಡಗಿಸುತ್ತದೆ. ಡೆಟ್ ಫಂಡ್ಸ್ ಈ ಕೆಳಗಿನವುಗಳಲ್ಲಿ ಹೂಡಿಕೆ ಮಾಡುತ್ತದೆ. 1. ರಾಷ್ಟ್ರೀಯ ಉಳಿತಾಯ ಪತ್ರಗಳು 2. ಅಂಚೆ ಕಛೇರಿಯ ಡಿಪಾಸಿಟ್ಗಳು 3. ಪಬ್ಲಿಕ್ ಪ್ರಾವಿಡೆಂಟ್ ಯೋಜನೆ 4. ಬ್ಯಾಂಕ್ ಡಿಪಾಸಿಟ್ಗಳು 5. ಕಂಪನಿ ಫಿಕ್ಸೆಡ್ ಡಿಪಾಸಿಟ್ಗಳು 6. ಇನ್ಫ್ರಾಸ್ಟ್ರಕ್ಚರ್ ಬಾಂಡ್ಸ್ 7. ಟ್ರಜರಿ ಬಿಲ್ಸ್ 8. ಕಾಲ್ ಮನಿ ಮಾರ್ಕೆಟ್

      ರಾಷ್ಟ್ರೀಯ ಉಳಿತಾಯಪತ್ರಗಳನ್ನು ಒಮ್ಮೆ ಖರೀದಿಸಿದರೆ, ಅವುಗಳಿಂದ ಬರುವ ಬಡ್ಡಿಯಿಂದ ಆದಾಯ ಬೆಳೆಯುತ್ತದೆ. ಹಾಗೆಯೇ ಅಂಚೆ ಕಚೇರಿ ಡಿಪಾಸಿಟ್ಗಳು ಕೂಡ ಪ್ರತಿ ತಿಂಗಳೂ ಹಣ ಕಟ್ಟಿಸಿಕೊಂಡು ಆದಾಯವನ್ನೂ ವೃದ್ಧಿಸುತ್ತದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ಗಳು, ಬ್ಯಾಂಕ್ ಡಿಪಾಸಿಟ್ಗಳು, ಕಂಪನಿ ಫಿಕ್ಸೆಡ್ ಡಿಪಾಸಿಟ್ಗಳು ಒಂದು ನಿಗದಿತ ಸಮಯಕ್ಕೆ ಪ್ರತಿಫಲ ತರುತ್ತದೆ. ಇನ್ಫ್ರಾಸ್ಟ್ರಕ್ಚರ್ ಬಾಂಡ್ಗಳನ್ನು ಖರೀದಿಸಿದರೆ, ನಿಗದಿತ ಸಮಯದ ನಂತರ ಕೇಂದ್ರ ಸರ್ಕಾರ ಬಡ್ಡಿಯ ಸಮೇತ ಅಸಲನ್ನು ಹಿಂದಿರುಗಿಸುತ್ತದೆ.

ಟ್ರಜರಿ ಬಿಲ್ಸ್ ಅಂದರೆ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಳಿ ಕರೆನ್ಸಿ ಜಾಸ್ತಿಯಾದಾಗ ಅದನ್ನು ಕಡಿಮೆ ಮಾಡಿಕೊಳ್ಳಲು ಕೊಡುವ ಉಳಿತಾಯ ಪತ್ರಗಳು. ಇವು ಬಡ್ಡಿ ಸಹಿತವಾಗಿರುತ್ತದೆ ಮತ್ತೆ ರಿಜರ್ವ್ ಬ್ಯಾಂಕ್ನವರಿಗೆ ಹಣದ ಕೊರತೆಯಾದಾಗ ಈ ಟ್ರಸರಿ ಬಿಲ್ಗಳನ್ನು ಮತ್ತೆ ಕೊಳ್ಳುತ್ತದೆ. ಹಾಗೆ ಅದರಿಂದ ಬರುವ ಬಡ್ಡಿ ಮ್ಯೂಚುಅಲ್ ಫಂಡ್ಸ್ಗೆ ಲಾಭ. ಕಾಲ್ ಮನಿ ಅಂದರೆ ಬ್ಯಾಂಕುಗಳು ಮತ್ತು ಸ್ಟಾಕ್ ಮಾರ್ಕೆಟ್ ಬ್ರೋಕರ್ಗಳು, ತಮ್ಮ ತಾತ್ಕಾಲಿಕ ಅಗತ್ಯಗಳಿಗಾಗಿ ಇತರರಿಂದ ಹಣ ಪಡೆದುಕೊಂಡು ಕೊಡುವ ಪತ್ರಗಳು. ಹಾಗೆ ಹಣ ತೆಗೆದುಕೊಂಡಿದ್ದಕ್ಕೆ ಬಡ್ಡಿ ಕೊಡುತ್ತದೆ. ಸಾಮಾನ್ಯವಾಗಿ ಮೇಲಿನ ಯೋಜನೆಗಳ ಮೂಲಕ ಮ್ಯೂಚುಅಲ್ ಫಂಡ್ಸ್ಗೆ ಬರುವ ಆದಾಯ ಶೇಖಡಾ 4 ರಿಂದ 8 ರಷ್ಟು. ಇಂತಹ ಫಂಡ್ಗಳ ಮೂಲ ಉದ್ದೇಶ ನಿಗದಿತ ಆದಾಯದ ಜೊತೆಗೆ ಅಸಲಿಗೆ ಭದ್ರತೆ ತರುವುದೇ ಆಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ, ಮೇಲಿನ ನಿಗಧಿತ ಅದಾಯ ಸಾಧನಗಳಾದ ಕಂಪನಿ ಬಾಂಡ್ಗಳು, ಡಿಬೆಂಚರುಗಳ ಮೇಲೆ ಬರುವ ಬಡ್ಡಿ, ಆದಾಯಗಳ ಮೇಲೆಯೇ ಈ ಫಂಡ್ಗಳ ಆದಾಯ ಅವಲಂಬಿಸಿರುತ್ತದೆ. ಅಂದರೆ ಬಡ್ಡಿಯ ಮೌಲ್ಯ ಏರಿಕೆಯಾದಾಗ ಆ ಸಾಧನಗಳಿಂದ ಹೆಚ್ಚು ಆದಾಯ ಬರುವುದು, ಬಡ್ಡಿಯ ಮೌಲ್ಯ ಇಳಿಕೆಯಾದಾಗ ಆದಾಯ ಕಡಿಮೆಯಾಗುವುದು. ಇಂತಹ ಬದಲಾವಣೆಗೆ ಈ Debt funds ಈಡಾಗುತ್ತದೆ. ಡೆಟ್ ಫಂಡ್ಸ್ ಪ್ರಯೋಜನಗಳು: ಈ Debt fundsಗಳಲ್ಲಿ ಕೆಲವು ಲಾಭಗಳೂ ಇವೆ. 1. ಕಡಿಮೆ ರಿಸ್ಕ್:

      ಈ ರೀತಿಯ ವ್ಯವಹಾರದಲ್ಲಿ ನಮ್ಮ ಹಣ ಮುಳುಗಿ ಹೋಗುವ ಅಪಾಯವಿರುವುದಿಲ್ಲ. ಈಕ್ವಿಟಿ ಫಂಡ್ಗಳಿಗೆ ಹೋಲಿಸಿದರೆ ಆದಾಯ ಕಡಿಮೆ ಇದ್ದಾಗ್ಯೂ, ನಮ್ಮ ಹಣ ಮತ್ತೆ ಶೆೇಕಡಾ 80 ರಿಂದ 90 ರವರೆಗೂ ಬರುವ ಅವಕಾಶವಿದೆ. ಏಕೆಂದರೆ ಡೆಟ್ ಫಂಡ್ಗಳಲ್ಲಿನ ವಿವಿಧ ಯೋಜನೆಗಳಲ್ಲಿ ತೊಡಗಿಸಿದ ಬಂಡವಾಳ ಹಾಗೆಯೇ ಇರುತ್ತದೆ. ಮಾರುಕಟ್ಟೆಯ ಏರಿಳಿತಗಳಿಗೆ ಅವು ಒಳಪಡುವುದಿಲ್ಲ.

2. ಬೇಕೆನಿಸಿದಾಗ ಹಣ:

       ಈ ಯೋಜನೆಗಳಲ್ಲಿ ನಮ್ಮ ಹಣವನ್ನು ಅಗತ್ಯ ಬಿದ್ದಾಗ ತಕ್ಷಣ ಪಡೆಯಬಹುದು. ಈ ದಿನ ನೆಟ್ ಅಸೆಟ್ ಮೌಲ್ಯಕ್ಕೆ ಅನುಗುಣವಾಗಿ ಹಣ ಪಡೆಯಬಹುದು. ಈಕ್ವಿಟಿ ಫಂಡ್ಗಳಲ್ಲಿರುವಂತೆ ಲಾಕ್ ಇನ್ ಪೀರಿಯಡ್, ಹಲವಾರು ಶುಲ್ಕಗಳು ಈ ಫಂಡ್ಗಳಲ್ಲಿ ಅಷ್ಟಾಗಿ ಇಲ್ಲ. ಕೆಲವು ಫಂಡ್ಸ್ಗಳಿಗೆ ಮಾತ್ರವೇ ಲಾಕ್ ಇನ್ ಪೀರಿಯಡ್ ಇರುತ್ತದೆ.

3. ತೆರಿಗೆ ವಿನಾಯಿತಿಗಳು: ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಕೆಲವು ವಿಧದ ಆಜಛಣ ಜಿಣಟಿಜ ಗಳಲ್ಲಿ ಹೂಡಿಕೆ ಮಾಡಿ ಆ ಮೂಲಕ ಬರುವ ಆದಾಯದಲ್ಲಿ ಸುಮಾರು 12000 ರೂಗಳವರೆಗೆ ವಿನಾಯಿತಿ ಪಡೆಯಬಹುದು. ಡೆಟ್ ಫಂಡ್ಗಳಲ್ಲಿ ಉತ್ತಮವಾದವುಗಳು: ಸದ್ಯದಲ್ಲಿ ಬಡ್ಡಿ ಮೌಲ್ಯ ಏರಿಕೆಯಾಗುತ್ತಿದೆ. ಎಲ್ಲಿ ಹೆಚ್ಚು ಪ್ರತಿಫಲವಿರುತ್ತದೋ ಅಲ್ಲಿ ಹೆಚ್ಚು ರಿಸ್ಕ್ ಕೂಡಾ ಇರುತ್ತದೆ. ಬಹಳಷ್ಟು ವೃದ್ಧರು, ನಿವೃತ್ತರು ಈ ಬಾಂಡ್ ಫಂಡ್ಗಳಲ್ಲಿ ಹೂಡಿಕೆ ಮಾಡುತ್ತಾರೆ. ಅವರ ಜೀವನ ನಿರ್ವಹಣೆಗೆ ಪ್ರತಿ ತಿಂಗಳೂ ಆದಾಯದ ಜೊತೆಗೆ ಅವರ ಹೂಡಿಕೆಗೆ ಭದ್ರತೆಯನ್ನು ಕೂಡ ಈ ಬಾಂಡ್ ಫಂಡ್ಸ್ ಒದಗಿಸುತ್ತದೆ. ಹಿಂದೊಮ್ಮೆ 15% ಕ್ಕೂ ಆದಾಯ ಕೊಡುತ್ತಿದ್ದಂಥ ಇವು ಈಗ 6-7% ಕ್ಕಿಂತಲೂ ಹೆಚ್ಚು ಆದಾಯವನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಎಂಥ ರಿಸ್ಕನ್ನು ಬಯಸದವರು ಈ ಬಾಂಡ್ಗಳ ಕಡೆ ಗಮನಹರಿಸುತ್ತಾರೆ.