ಸದಸ್ಯರ ಚರ್ಚೆಪುಟ:Manasa Idyadka

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Manasa Idyadka,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೫:೨೫, ೯ ಜುಲೈ ೨೦೧೫ (UTC)

ಪ್ಲಾಸ್ಟಿಕ್ ಗಳು[ಬದಲಾಯಿಸಿ]

ಆಧುನಿಕ ವ್ಯಾಖ್ಯೆಯ ಪ್ರಕಾರ ಪ್ಲಾಸ್ಟಿಕ್ ಅಂದರೆ ಕೃತಕವಾಗಿ ತಯಾರಿಸಬಹುದಾದ ಮತ್ತು ಶಾಖ ಕೊಟ್ಟು ಮೆತ್ತಗೆ ಮಾಡಿ ಅಚ್ಚುಹಾಕಿ ಉಪಯುಕ್ತ ವಸ್ತುಗಳನ್ನಾಗಿ ತಯಾರಿಸಬಲ್ಲ ಪದಾರ್ಥ. ಪ್ಲಾಸ್ಟಿಕ್ ದೈತ್ಯಾಣುಗಳಿಂದ ಸಂಯೋಜಿತವಾದ ವಸ್ತು. ಪ್ಲಾಸ್ಟಿಕನ್ನು ತಯಾರಿಸುವಾಗ ಪ್ರಕೃತಿದತ್ತವಾಗಿ ದೊರೆಯುವ ಪಾಲಿ ಮರಗಳನ್ನು ಉಪಯೋಗಿಸಬಹುದು. ಹತ್ತಿ ಹಾಗೂ ಮರದ ನಾರುಗಳಲ್ಲಿರುವ ಸೆಲ್ಯೂಲೋಸನ್ನು ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸುತ್ತಾರೆ.

ಪ್ಲಾಸ್ಟಿಕ್ ತಯಾರಿಕೆಯಲ್ಲಿ ವಿವಿಧ ಹಂತಗಳಿವೆ. ಕಚ್ಚಾವಸ್ತುಗಳನ್ನು ರಾಸಾಯನಿಕವಾಗಿ ಸಿದ್ಧಪಡಿಸಿದಾಗ ಸಿಗುವ ವಸ್ತು ರೆಸಿನ್. ಈ ರೆಸಿನ್ನಿನಿಂದ ಸಿದ್ಧವಾದ ಪ್ಲಾಸ್ಟಿಕ್ ಗೆ ವಿಶಿಷ್ಟ ಗುಣಗಳನ್ನು ನೀಡಲು ಕೆಲವು ವಸ್ತುಗಳನ್ನು ತಯಾರಿಕೆಯ ಹಂತದಲ್ಲೇ ಸೇರಿಸುವುದುಂಟು. ಎಲ್ಲ ಪಾಲಿಮರುಗಳಿಗೆ ಸಂಶ್ಲೇಷಿತ ನೂಲುಗಳು ಅನ್ನುತ್ತಾರೆ. ಬಲಪ್ರಯೋಗ ಮಾಡಿದಾಗ ಕನಿಷ್ಠ ಪಕ್ಷ ಒಂದೂವರೆ ಪಟ್ಟು ಹಿಗ್ಲಿ ಬಲಪ್ರಯೋಗ ನಿಲ್ಲಿಸಿದಾಗ ಪುನ: ಯಥಾಸ್ಥಿತಿಗೆ ಬರಬಲ್ಲ ಪಾಲಿಮರುಗಳಿಗೆ ಎಲಾಸ್ಟೋಮರುಗಳು ಆನ್ನುತ್ತಾರೆ.

ಪ್ಲಾಸ್ಟಿಕ್ ಗಳ ಉಪಯೋಗಗಳು ಅಪಾರ. ಮನುಷ್ಯ ಪಾಲಿಧೀನು ಪಾಕೀಟಿನಲ್ಲಿ ಹಾಲು ತರುತ್ತಾನೆ. ಪ್ಲಾಸ್ಟಿಕ್ ಪಾತ್ರಗಳನ್ನು ಬಳಸುತ್ತಾನೆ. ಪ್ಲಾಸ್ಟಿಕ್ ಕನ್ನಡಕ ಧರಿಸಿ ಕೈಯಲ್ಲಿ ಪಾಲಿವೀನೈಲಿನ ಸೂಟ್ ಕೇಸನ್ನು ಹಿಡಿದುಕೊಂಡು ಪಾಲಿ ಪ್ರೋಪಿಲೀನ್ ಚಾಪೆಯ ಮೇಲೆ ಪ್ಲಾಸ್ಟಿಕ್ ಪಾದರಕ್ಷೆಗಳನ್ನು ಮೆಟ್ಟಿ ನಡೆಯುತ್ತಾನೆ. ಅಂಗವಿಕಲರನ್ನು ನಡೆಯುವಂತೆ ಮಾಡಲು, ರಕ್ತನಾಳಗಳನ್ನು ಜೋಡಿಸಲು ಪ್ಲಾಸ್ಟಿಕನ್ನು ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಯುಗದ ಉತ್ತಮ ಅಂಶಗಳು ಇನ್ನೂ ಮುಂದೆ ಬರಲಿವೆ. ಇನ್ನೂ ಸಂಶ್ಲೇಷಣೆಯ ದಿಶೆಯಲ್ಲಿ ರಸಾಯನ ವಿಜ್ಞಾನಿ, ಉಷ್ಣತೆ, ಒತ್ತಡ ಪ್ರಮಾಣ, ದ್ರಾವಣ ಮುಂತಾದವುಗಳನ್ನು ಯುಕ್ತಾಯುಕ್ತತೆ ಮತ್ತು ವಿವೇಕದಿಂದ ಬಳಸಿ ಇಚ್ಛಿತ ಅಣು ತೂಕದ ಪ್ಲಾಸ್ಟಿಕನ್ನು ಸಂಶ್ಲೇಷಿಸಲು ತಯಾರಾಗಿದ್ದಾನೆ. ಈ ಎಲ್ಲ ಸಾಧನಗಳನ್ನು ತಾಳಮೇಳದಲ್ಲಿ ಉಪಯೋಗಿಸಿಕೊಂಡು ನಮಗೆ ಬೇಕಾದಂತಹ ನಮ್ಯ ಬಲವುಳ್ಳ ಜಲನಿರೋಧಕ, ಶಾಖನಿರೋಧಕ, ಪಾರದರ್ಶಕ ಗುಣಗಳು ಇರುವಂತಹ ಪ್ಲಾಸ್ಟಿಕನ್ನು ತಯಾರಿಸಬಹುದು.

ಜೀವಕೋಶಗಳು[ಬದಲಾಯಿಸಿ]

ಎಲ್ಲ ಜೀವಿಗಳ ಮೂಲಭೂತ ಘಟಕಗಳೇ ಜೀವಕೋಶಗಳು. ಬ್ಯಾಕ್ಟೀರಿಯ, ಅಮೀಬ, ಶಿಲೀಂದ್ರ ಅಥವಾ ಮರ, ಮಾನವ ಎಲ್ಲವುಗಳ ದೇಹಗಳೂ ಜೀವಕೋಶಗಳಿಂದಾಗಿವೆ. ಬ್ಯಾಕ್ಟೀರಿಯಾದಂಥ ಮೊನೆರಾ ಸಾಮ್ರಾಜ್ಯದ ಜೀವಿಗಳ ಜೀವಕೋಶ ಸರಳ. ಇತರ ಸಾಮ್ರಾಜ್ಯದ ಜೀವಿಗಳ ಜೀವಕೋಶ ಹೆಚ್ಚು ಸಂಕೀರ್ಣ, ಜೀವಕೋಶಗಳು ಬಹಳ ಸೂಕ್ಷ್ಮ ರಚನೆಗಳು. ಇವುಗಳನ್ನು ಕಾಣಲು ಸೂಕ್ಷ್ಮದರ್ಶಕಗಳು ಬೇಕು. ಜೀವಕೋಶಗಳ ಗಾತ್ರವನ್ನು ಮೈಕ್ರೋ ಮೀಟರಿನಲ್ಲಿ ಅಳೆಯುತ್ತಾರೆ. ತಮ್ಮ ಗಾತ್ರ, ಸಂಖ್ಯೆ, ಆಕಾರ, ರಚನೆಗಳಲ್ಲಿ ಜೀವಕೋಶಗಳು ಬಹಳಷ್ಟು ವ್ಯತ್ಯಾಸ ತೋರಿಸಿದರೂ ಎಲ್ಲವುಗಳ ಮೂಲಭೂತ ರಚನೆ ಒಂದೇ ಎನ್ನಬಹುದು. ಪ್ರತಿಯೊಂದು ಜೀವಕೋಶವನ್ನು ಒಂದು ಸೂಕ್ಷ್ಮ ಕಾರ್ಖಾನೆ ಎನ್ನಬಹುದು. ಇದರಲ್ಲಿ ಸಾವಿರಾರು ರಾಸಾಯನಿಕ ಕ್ರಿಯೆಗಳು ಎನ್ ಜೈಮುಗಳ ನಿಯಂತ್ರದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತವೆ. ಮಾನವನ ದೇಹದಲ್ಲಿ ಸುಮಾರು ಅರವತ್ತು ಸಾವಿರ ಬಿಲಿಯನ್ ಜೀವಕೋಶಗಳಿವೆ. ದೇಹದ ವಿವಿಧ ಭಾಗಗಳ ಜೀವಕೋಶಗಳು ತಮ್ಮ ತಮ್ಮ ಕಾರ್ಯಗಳಿಗೆ ಸೂಕ್ತವಾದ ವಿವಿಧ ಆಕಾರ, ರಚನೆ ಪಡೆದಿರುತ್ತವೆ.

ವ್ಯವಸ್ಥಿತ ನ್ಯೂಕ್ಲಿಯಸ್ ಇರುವ ಹಾಗೂ ಸಂಕೀರ್ಣವಾದ ಜೀವದ್ರವ್ಯ ರಚನೆ ಇರುವ ಜೀವಕೋಶಗಳು ಯುಕಾರ್ಯೊಟಿಕ್ ಜೀವಕೋಶಗಳು ಎನಿಸುವುದು. ಇಂತಹವು ಮೊನೆರಾ ಸಾಮ್ರಾಜ್ಯ ಹೊರತು ಇತರ ಸಾಮ್ರಾಜ್ಯಗಳ ಜೀವಿಗಳಲ್ಲಿ ಇರುತ್ತವೆ. ಇಂತಹ ಜೀವಕೋಶಗಳನ್ನು ಇಲೆಕ್ಟ್ರಾನ್ ಸೂಕ್ಷ್ಮದರ್ಶಕಗಳಂಥ ಅತ್ಯಾಧುನಿಕ ತಂತ್ರಜ್ಞಾನದಿಂದ ವಿಜ್ಞಾನಿಗಳು ಅಭ್ಯಸಿಸಿದ್ದಾರೆ. ಜೀವಕೋಶಗಳ ಸುತ್ತಲೂ ಹೊದಿಕೆಯಂತಿರುವ ಜೀವಂತ ತೆಳುಪರೆಯೇ ಪ್ಲಾಸ್ಮಾಪರೆ. ಇದು ವಸ್ತುಗಳ ಒಳ ಮತ್ತು ಹೊರಗಿನ ಚಲನೆಗಳನ್ನು ನಿಯಂತ್ರಿಸುತ್ತದೆ. ಜೀವಕೋಶದ ನ್ಯೂಕ್ಲಿಯಸ್ ಒಂದು ನಿಯಂತ್ರಕ ಕೇಂದ. ಅನುವಂಶಿಕ ವಸ್ತುಗಳಾದ ಡಿ.ಎನ್.ಎ ಬೃಹದಾಣುಗಳು ನ್ಯೂಕ್ಲಿಯಸ್ ಒಳಗಿನ ಕ್ರೊಮೋಸೋಮುಗಳಲ್ಲಿರುವುದರಿಂದ, ಜೀವಕೋಶದ ಯಾವತ್ತೂ ಆಗುಹೋಗುಗಲು ನ್ಯೂಕ್ಲಿಯಸ್ ನ ನಿರ್ದೇಶನದಂತೆ ನಡೆಯುತ್ತವೆ.

ಪ್ರಾಣಿ ಜೀವಕೋಶಗಳಿಗೆ ಪ್ಲಾಸ್ಮಾಪರೆಯೇ ಅತಿ ಹೊರಗಿನ ಹೊದಿಕೆ. ಸಸ್ಯಕೋಶಗಳಿಗೆ ಇದಕ್ಕೆ ಹೆಚ್ಚುವರಿಯಾಗಿ ಸೆಲ್ಯುಲೋಸ್ ಕೋಶಬಿತ್ತಿ ಇರುತ್ತದೆ. ಇಷ್ಟು ಮಾತ್ರವಲ್ಲ ದ್ಯುತಿ ಸಂಶ್ಲೇಷಣೆ ನಡೆಸುವ ಆರ್ಗನೆಲ್ ಗಳಾದ ಹಸಿರು ಕ್ಲೋರೋ ಪ್ಲಾಸ್ಟ್ ಗಳು ಸಸ್ಯ ಜೀವ ಕೋಶಗಳಲ್ಲಿ ಮಾತ್ರ ಕಾಣಸಿಗುತ್ತವೆ. ದೊಡ್ಡ ಗಾತ್ರದ ಕುಹರಗಳಿರುವುದು ಸಸ್ಯ ಜೀವಕೋಶಗಳ ಇನ್ನೊಂದು ವಿಶೇಷತೆ.