ಸದಸ್ಯ:Manasa Idyadka

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೈವಿಕ ತಂತ್ರಜ್ಞಾನ

ಕೋಶಿಕಾ ವಿಜ್ಞಾನ, ಸೂಕ್ಷ್ಮಾಣು ಜೀವಿಶಾಸ್ತ್ರ, ತಳಿಶಾಸ್ತ್ರ ಹಾಗೂ ಜೀವರಾಸಾಯನಶಾಸ್ತ್ರಗಳು ಜೀವವಿಜ್ಞಾನದ ವಿವಿಧ ಶಾಖೆಗಳು. ಜೀವ ವಿಜ್ಞಾನದ ಈ ಶಾಖೆಗಳೊಂದಿಗೆ ತಂತ್ರಜ್ಞಾನವನ್ನು ಬೆಸುಗೆ ಮಾಡಲಾಗಿದ್ದು ತಳಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಎಂಬ ನೂತನ ವಿಜ್ಞಾನ ಶಾಖೆಗಳು ಈಗ ರೂಪುಗೊಂಡಿವೆ.

ಜೀವಿಗಳ ಗುಣಲಕ್ಷಣಗಳನ್ನು ಬಳಸಿಕೊಂಡು ಉಪಯುಕ್ತ ಉತ್ಪನ್ನಗಳನ್ನು ಪಡೆಯುವ ತಂತ್ರಜ್ಞಾನವೇ ಜೈವಿಕ ತಂತ್ರಜ್ಞಾನ. ಜೈವಿಕ ತಂತ್ರಜ್ಞಾನದ ಅರ್ಥವನ್ನು ಈ ಕೆಳಕಂಡಂತೆ ಕೂಡಾ ವಿವರಿಸಲಾಗಿದೆ. ಜೈವಿಕ ಕಾರ್ಯವಿಧಾನಗಳನ್ನು ಬಳಸಿಕೊಳ್ಳುವ ವಿಜ್ಞಾನವೇ ಜೈವಿಕ ತಂತ್ರಜ್ಞಾನ. ಜೀವಿಗಳು,ಜೈವಿಕ ಕ್ರಿಯೆಗಳು ಅಥವಾ ಜೈವಿಕ ಸಂಘಟನೆಗಳನ್ನು ತಯಾರಿಕಾ ಘಟಕ ಮತ್ತು ಸೇವೆಗಾಗ್ ಅನ್ವಯಿಸುವುದೇ ಜೈವಿಕ ತಂತ್ರಜ್ಞಾನ. ಜೈವಿಕ ತಂತ್ರಜ್ಞಾನ ಎಂಬ ಪದ ಮೊದಲು ೧೯೨೦ರಲ್ಲಿ ಬ್ರಿಟನ್ ದೇಶದ ಲೀಡ್ಸ್ ನಲ್ಲಿ ಬಳಕೆ ಬಂದಿತು.


ತಂತ್ರಜ್ಞಾನದ ಬೆಳವಣಿಗೆ ಜೈವಿಕ ತಂತ್ರಜ್ಞಾನವು ವೃದ್ಧಿಗೊಳ್ಳಲು ಬಹಳ ಮುಖ್ಯವಾಗಿ ಅತ್ಯಾಧುನಿಕ ತಂತ್ರಜ್ಞಾನವು ನೆರವಾಗಿದೆ. ೧. ತಳಿ ತಂತ್ರಜ್ಞಾನ ವಂಶವಾಹಿಗಲಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟುಮಾಡುವ ತಂತ್ರಜ್ಞಾನವೇ ತಳಿತಂತ್ರಜ್ಞಾನ. ಪ್ರಯೋಗಾಲಯಗಳಲ್ಲಿ ವಂಶವಾಹಿಗಳನ್ನು ಬದಲಾಯಿಸಲು ಬಳಸಲಾಗುತ್ತಿರುವ ಕಾರ್ಯತಂತ್ರಕ್ಕೆ ಪುನರ್ ಯೋಜಿತ ಡಿ.ಎನ್.ಎ ತಂತ್ರಜ್ಞಾನ ಎಂದು ಹೆಸರು.

೨. ಡಿ.ಎನ್.ಎ ಬೆರಳಚ್ಚು ತಂತ್ರಜ್ಞಾನ ಇದು ಜೈವಿಕ ತಂತ್ರಜ್ಞಾನದ ಮತ್ತೊಂದು ಪ್ರಮುಖ ಕಾರ್ಯತಂತ್ರ. ಒಂದು ಪ್ರಬೇದದ ಜೀವಿಗಳ ನಡುವೆ ಇರುವ ತಳಿಸಂಬಂಧ ಸಾಮ್ಯತೆಗಳನ್ನು ಮತ್ತು ಜೀವಿಗಳನ್ನು ಗುರುತಿಸಲು ಇದು ಸಹಕಾರಿಯಾಗಿದೆ.

೩. ಅಂಗಾಂಶ ಕೃಷಿ ಸಸ್ಯದ ಕತ್ತರಿಸಿದ ಅಂಗ, ಅಂಗಾಂಶ ಅಥವಾ ಜೀವಕೋಶಗಳನ್ನು ಸೂಕ್ತ ಪೋಷಕ ಮಾಧ್ಯಮದಲ್ಲಿ ನಿಯಂತ್ರಿತ ಸನ್ನಿವೇಶದಲ್ಲಿ ಸಸ್ಯಗಳನ್ನು ಸೃಷ್ಟಿಸುವ ವಿಧಾನಕ್ಕೆ ಅಂಗಾಂಶ ಕೃಷಿ ತಂತ್ರಜ್ಞಾನವೆಂದು ಹೆಸರು.


ಈ ಸದಸ್ಯರ ಊರು ಮಂಗಳೂರು.