ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Kushal P K

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Kushal P K


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Sangappadyamani (ಚರ್ಚೆ) ೧೨:೧೮, ೨೧ ಜೂನ್ ೨೦೧೭ (UTC)

ಚಿತ್ರ:Assembly-Election-2018-B.jpg
Karnataka Vidhana Sabha election

ಎಸ್ ಎಸ್ ಮಲ್ಲಿಕಾರ್ಜುನ, ಶಾಸನ ಸಭೆಯ ಸದಸ್ಯ, ಉತ್ತರ ದಾವಣಗೆರೆ ಕ್ಷೇತ್ರ ,ಕರ್ನಾಟಕ ವಿಧಾನ ಸಭೆ.

[ಬದಲಾಯಿಸಿ]

ಶಾಮನೂರು ಮಲ್ಲಿಕಾರ್ಜುನರವರ

            ಶಾಮನೂರು ಮಲ್ಲಿಕಾರ್ಜುನರವರ ಜನನ ೨೨ ಸೆಪ್ಟೆಂಬರ್ ೧೯೬೭ ದಾವಣಗೆರೆ ಜಿಲ್ಲೆ ಕರ್ನಾಟಕ ರಾಜ್ಯ. ಇವರ ತಂದೆ ಶಾಮನೂರು ಶಿವಶಂಕರಪ್ಪ, ಪ್ರಸ್ತುತ ಕರ್ನಾಟಕದ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆಗೆ ಕ್ಯಾಬಿನೆಟ್ ಸಚಿವರಾಗಿದ್ದಾರೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಧಾನಸಭೆಯ ಸದಸ್ಯರಾಗಿದ್ದಾರೆ ಮತ್ತು ಎಸ್.ಎಸ್. ಬಾಕೇಶ್, ಎಸ್.ಎಸ್.ಗನೇಶ್ ಇವರ ಒಡಹುಟ್ಟಿದವರು.ಇವರ ಮಡದಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ.
            ಇವರು  ಬಿ.ಕಾಂ. ಎಂ.ಎಸ್.ಬಿ ನಿಂದ, ಕಾಲೇಜ್ ಆಫ್ ಕಾಮರ್ಸ್, ದಾವಣಗೆರೆ ಮೈಸೂರು ವಿಶ್ವವಿದ್ಯಾಲಯ ಏಪ್ರಿಲ್ ೧೯೯೦, ಪಿ.ಯು.ಸಿ. ಆ .ರ್ .ಜಿ . ನಿಂದ ಏಪ್ರಿಲ್ ೧೯೮೬  ರಲ್ಲಿ ಕಾಲೇಜ್ ದಾವಣಗೆರೆ, ಎಸ್.ಎಸ್.ಎಲ್.ಸಿ. ಡಿ.ಆರ್.ಆರ್ ನಿಂದ, ಏಪ್ರಿಲ್ ೧೯೮೩ ರಲ್ಲಿ ಹೈಸ್ಕೂಲ್ ದಾವಣಗೆರೆ ಮುಗಿಸಿದ್ದಾರೆ. ಇವರು ಕರ್ನಾಟಕ ಸರ್ಕಾರದ ಮಾಜಿ ಯುವಕರ ಕಲ್ಯಾಣ ಸಚಿವ ಮತ್ತು ಕ್ರೀಡಾ ಸಚಿವರಾಗಿದ್ದರು. ಮಲ್ಲಿಕಾರ್ಜುನರವರ ರಾಜ್ಯದಲ್ಲಿ ಕಿರಿಯ ಸಚಿವರಾಗಿದ್ದಾರೆ ಎಂಬ ದಾಖಲೆಯನ್ನು ಹೊಂದಿದ್ದಾರೆ. ಇವರು [http://"ಕೃಷಿ%20ಮಾರ್ಕೆಟಿಂಗ್%20ಮತ್ತು%20ತೋಟಗಾರಿಕೆ" "ಕೃಷಿ ಮಾರ್ಕೆಟಿಂಗ್ ಮತ್ತು ತೋಟಗಾರಿಕೆ"] ಇಲಾಖೆ ಮತ್ತು     "ಆರೋಗ್ಯ ಮತ್ತು ಕುಟುಂಬ ಕಲ್ಯಾಣದ" ( ವೈದ್ಯಕೀಯ ಶಿಕ್ಷಣವನ್ನು ಹೊರತುಪಡಿಸಿ) ಮಂತ್ರಿಯಾಗಿ ಕಾರ್ಯನಿರ್ವಹಿಸುತಿದ್ದರೆ.
ಚಿತ್ರ:S S Malikarjun.jpg
member of legislative assembly

ದಾವಣಗೆರೆ ಕ್ಷೇತ್ರ

ಚಿತ್ರ:Vidhana Soudha .jpg
Vidhana Soudha


           ಇವರ ಕ್ಷೇತ್ರ ದಾವಣಗೆರೆ ರಾಜ್ಯದ ಆರನೇ ಅತಿದೊಡ್ಡ ನಗರ ಮತ್ತು ನಾಮಸೂಚಕ ದಾವಣಗೆರೆ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ಇಲ್ಲಿಯವರೆಗೂ "ಹತ್ತಿ ಹಬ್" ಮತ್ತು [http://"ಕರ್ನಾಟಕದ%20ಮ್ಯಾಂಚೆಸ್ಟರ್" "ಕರ್ನಾಟಕದ ಮ್ಯಾಂಚೆಸ್ಟರ್"] ಎಂದು ಜನಪ್ರಿಯವಾಗಿದೆ. ಲೋಕಸಭಾ ಕ್ಷೇತ್ರವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ೨೮  ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಭಾರತೀಯ ರಾಜ್ಯಗಳ ಪುನಸ್ಸಂಘಟನೆಯ ನಂತರ ೧೯೭೭ರಲ್ಲಿ ಮಾತ್ರ ಈ ಕ್ಷೇತ್ರವನ್ನು ರಚಿಸಲಾಯಿತು. ದಾವಣಗೆರೆಯಲ್ಲಿ  ಸಾಮಾನ್ಯ ಮತದಾರರು, ಎನ್ನಾರೈ ಮತದಾರರು ಮತ್ತು ಸೇವಾ ಮತದಾರರು ಸೇರಿದಂತೆ ಒಟ್ಟು ೨,೩೩,೧೦೭ ಮತದಾರರು ಮತದಾರರಾಗಿದ್ದಾರೆ. ಸಾಮಾನ್ಯ ಮತದಾರರಲ್ಲಿ ೧,೧೭,೨೩೧ ಪುರುಷರು,  ೧,೧೫,೮೧೪ ಸ್ತ್ರೀಯರು ಮತ್ತು ೨೫ ಇತರರು. ಕ್ಷೇತ್ರದ ಮತದಾರರ ಅನುಪಾತವು ೯೮.೭೬ ಮತ್ತು ಅಂದಾಜು ಸಾಕ್ಷರತೆಯು ೮೫%. ದಾವಣಗೆರೆ ಕ್ಷೇತ್ರದ  ಹಿನ್ನೆಲ್ಲೆಯನ್ನು ನೋಡುವುದಾದರೆ ೨೦೧೪ ರಲ್ಲಿ ಬಿಜೆಪಿ, ೨೦೦೮ ರಲ್ಲಿ ಬಿಜೆಪಿ ಹಾಗು ಕಳೆದ ಸಾಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಇಸಾರಿ ಚುನಾವಣೆಯಲ್ಲಿ ಮತ್ತೆ ಭಾರತೀಯ ಜನತಾ ಪಾರ್ಟಿ  ಜಯವನ್ನು ಸಾಧಿಸೆದ್ದೆ. 


ರಾಜಕೀಯ ಕ್ಷೇತ್ರ

            ಮಲಿಕ್ಕಾರ್ಜುನ ಅವರನ್ನು ಬಿಜೆಪಿ ಎಸ್.ಎ.ರವೀಂದ್ರನಾಥ್ ಅವರು ೪೦೭೧ ಮತಗಳಿಂದ ಸೊಲ್ಲಿಸಿದ್ದಾರೆ. ಎಸ್.ಎ.ರವೀಂದ್ರನಾಥ್ ೭೬೫೪೦ ಮತಗಳನ್ನು ಪಡೆದರೆ, ಎಸ್.ಎಸ್.ಮಲ್ಲಿಕಾರ್ಜುನ್ ೭೨೪೬೯ ಮತಗಳನ್ನು ಪಡೆದಿದ್ದಾರೆ. ಆನಂದ.ಎಂ.,ಜನತಾ ದಳದ
ಸದಸ್ಯ ೫೩೮೧ ಮತಗಳನ್ನು ಪಡೆದು ಮೂರನೇ ಸ್ಥಾನವನ್ನು ಕರ್ನಾಟಕ ವಿಧಾನಸಭೆ ಚುನಾವಣೆ ೨೦೧೮ರಲ್ಲಿ ದಾವಣಗೆರೆ ಉತ್ತರದಲ್ಲಿ ಸ್ಥಾನ ಪಡೆದರು. ಒಟ್ಟು ೧೫೪೩೯೦  ಮತದಾರರು ತಮ್ಮ ಮತದಾನ ಹಕ್ಕುಗಳನ್ನು ಭಾರತೀಯ ಜನತಾ ಪಕ್ಷ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಜನತಾ ದಳಕ್ಕೆ ಚಲಾಯಿಸಿದರೆ. ೨೦೧೩ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ೬೪ .೮೨ % ರಷ್ಟು ಮತದಾರರು ಮತ ಚಲಾಯಿಸಿದ್ದು , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ಸಿ) ಪಕ್ಷದಿಂದ ಮಲ್ಲಿಕಾರ್ಜುನ ರವರು ಈದೇ ಕ್ಷತ್ರದಲ್ಲಿ  ೫೭,೨೮೦ ಮತಗಳಿಂದ (೪೨.೬%) ಗೆದ್ದಿದ್ದರು.