ಸದಸ್ಯರ ಚರ್ಚೆಪುಟ:HShivaRam

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ HShivaRam,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.


ಪಾಲಗಿರಿ (talk) ೦೮:೨೨, ೨೬ ಸೆಪ್ಟೆಂಬರ್ ೨೦೧೩ (UTC) ನಮಸ್ಕಾರ

ವಿಕಿ ಪಿಡಿಯಾ ದಲ್ಲಿ ನಾನು ಯಾವ ಜಾಹಿರಾತು ಹಾಕಿಲ್ಲ.

ದಯಮಾಡಿ ಸದಸ್ಯತ್ವ ರದ್ದುಪಡಿಸಿ ಎಚ್.ಶಿವರಾಂ

ಕನ್ನಡ ಸಾಹಿತ್ಯ ಕನ್ನಡ ಸಾಹಿತಿಗಳು‎[ಬದಲಾಯಿಸಿ]

ಕನ್ನಡ ಸಾಹಿತ್ಯ ಕನ್ನಡ ಸಾಹಿತಿಗಳು‎ ಲೇಖನದಲ್ಲಿ ನಿಮ್ಮ ಬಗ್ಗೆ ನೀವೇ ಬರೆದುಕೊಂಡಿರುತ್ತೀರಿ. ಇದು ವಿಶ್ವಕೋಶದ ನಿಯಮಗಳಿಗೆ ವಿರುದ್ದ. ಇದನ್ನು ಈ ಕೂಡಲೇ ಅಳಿಸುವಿಕೆಗೆ ಹಾಕಲಾಗಿದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೫೫, ೩೦ ಸೆಪ್ಟೆಂಬರ್ ೨೦೧೩ (UTC)

ಮಾನ್ಯ , ಓಂ ಶಿವಪ್ರಕಾಶ್, ವಿಶ್ವಕೋಶದ ನಿಯಮಗಳಿಗೆ ನಾನು ಬದ್ಧನಾಗಿದ್ದೇನೆ. ಆದರೆ, ಕನ್ನಡ ಸಾಹಿತ್ಯದಲ್ಲಿ ನನ್ನ ಸಮಕಾಲೀನ ಸಾಹಿತಿಗಳ ಪಟ್ಟಿಯನ್ನು ಇದೇ "ಕನ್ನಡ ಸಾಹಿತ್ಯ ಸಾಹಿತಿಗಳು: ವಿಭಾಗದಲ್ಲಿ ನೋಡಿದೆ. ಅಲ್ಲದೇ, ನನ್ನ ಸಮಕಾಲೀನ ಲೇಖಕರಾದ ಶ್ರೀಯುತ ಬಿ.ಜಿ.ಸತ್ಯಮೂರ್ತಿ ಅವರು ಸಂಪಾದಿಸಿ ಪ್ರಕಟಿಸಿರುವ ಸಾಹಿತಿ ಮಾಹಿತಿ ಕೋಶ-೮ ರಲ್ಲಿ ನನ್ನ ನ್ನು ಪರಿಚಯಿಸಿದ್ದಾರೆ. (ಅಂದರೆ, ನನ್ನ ಜೊತೆ ಪತ್ರಿಕೆಗಳಿಗೆ ಬರೆಯುತ್ತಿದ್ದ ಲೇಖಕರು; ಈಗಲೂ ಕೆಲವರು ಬರೆಯುತ್ತಿದ್ದಾರೆ. ನನ್ನ ಇತ್ತೀಚಿನ ಚಿಂತನ[ಮಂಗಳ ವಾರಪತ್ರಿಕೆ-೦೪-೦೯-೨೦೧೩] ಮತ್ತು ಕವನ [ಮಂಗಳ ವಾರ ಪತ್ರಿಕೆ- ೨೫-೦೯-೨೦೧೩]ಯಲ್ಲಿ ಪ್ರಕಟವಾಗಿದೆ.) ಆದಕಾರಣ ಸೇರಿಸುವ ಪ್ರಯತ್ನ ಮಾಡಿದೆನಷ್ಟೇ. ಹಾಗಾದರೆ, ಮತ್ತೆ ನಮ್ಮ ಬಗ್ಗೆ ಯಾರು ಬರೆಯಲು ಸಾಧ್ಯ..? ಅವರನ್ನು ನಾವು ಹೇಗೆ ಸಂಪರ್ಕಿಸಬೇಕು ದಯವಿಟ್ಟು ತಿಳಿಸಬೇಕು. -ಎಚ್.ಶಿವರಾಂ

ನಮಸ್ತೆ, ನಿಮ್ಮಂತಹ ಲೇಖಕರು ಮೊದಲು ಕನ್ನಡ ವಿಕಿಪೀಡಿಯಕ್ಕೆ ನಿಮ್ಮ ಕೃಷಿಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಸೇರಿಸುತ್ತಾ, ನಿಮ್ಮ ಸುತ್ತಮುತ್ತಲಿನ ಎಲ್ಲರನ್ನೂ ವಿಶ್ವಕೋಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ನಿಮ್ಮ ಕೆಲಸವನ್ನು ನೋಡುವ ಇತರರು ನಿಮ್ಮ ಬಗ್ಗೆ ತಂತಾನೇ ಮುಂದೆ ಬರೆಯುತ್ತಾರೆ. ಕೇವಲ ನಿಮ್ಮ ಮತ್ತು ನಿಮ್ಮ ಸ್ನೇಹಿತರ ಹೆಸರನ್ನು ವಿಕಿಪೀಡಿಯಕ್ಕೆ ಸೇರಿಸಿಕೊಳ್ಳುವ ಆತುರ ಬೇಡ. ಯಾವುದೇ ವ್ಯಕ್ತಿ ಅಥವಾ ವಿಷಯವನ್ನು ವಿಕಿಗೆ ಹೇಗೆ ಸೇರಿಸುತ್ತೇವೆ, ಅದಕ್ಕೆ ಸಂಬಂಧಿಸಿದ ಇತ್ಯಾದಿ ವಿಷಯ ಮತ್ತು ಸೂಕ್ಷ್ಮಗಳನ್ನು ಅರಿಯಲು, ಕನ್ನಡವನ್ನು ವಿಕಿಯ ಮೂಲಕ ಬೆಳೆಸುವುದರ ಬಗ್ಗೆ ಚರ್ಚಿಸಿ, ಚಿಂತನೆ ನೆಡೆಸಲು ನಾವುಗಳು ಆಗ್ಗಾಗ್ಗೆ ನೆಡೆಸುವ ಕಾರ್ಯಾಗಾರಗಳಲ್ಲೊಮ್ಮೆ ನಿಮ್ಮ ಸ್ನೇಹಿತರೊಡನೆ ಭಾಗವಹಿಸಿ. ಪವನಜ ಅವರೂ ಈ ಕಾರ್ಯಾಗಾರಗಳ ಬಗ್ಗೆ ಆಗ್ಗಾಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ನಮ್ಮ ಫೇಸ್‌ಬುಕ್ ಗುಂಪಿನಲ್ಲೂ ಕೂಡ ಇದರ ಬಗ್ಗೆ ಮಾಹಿತಿ ಇರುತ್ತದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೫:೪೩, ೧ ಅಕ್ಟೋಬರ್ ೨೦೧೩ (UTC)

ನಮಸ್ತೆ, ಅಂದಹಾಗೆ, ನೀವು ನೋಡಿರಬಹುದು. ಈಗಾಗಲೇ, ಬೆಳಗುತ್ತಿ ತೀರ್ಥರಾಮೇಶ್ವರ ದ ಬಗ್ಗೆ ಚಿತ್ರ ,ಲೇಖನ ಸೇರಿಸಿದ್ದೇನೆ. ಹೊಸ ಹೊಸ ವಿಷಯಗಳ ಸೇರ್ಪಡೆಗೆ ನಿಮ್ಮೊಡನೆ ಸಹಕರಿಸೋಣ.- ಎಚ್.ಶಿವರಾಂ

ಸಹಿ ಹಾಕುವದು[ಬದಲಾಯಿಸಿ]

ಸೂಚನೆ: ಚರ್ಚಪುಟದಲ್ಲಿ, ನಿಮ್ಮ ಸಹಿ ಹಾಕುವದಕ್ಕೆ ಈ ರೀತಿ~~~~ನಾಲ್ಕು ಡಿಲ್ಡೆಗಳು ಟೈಪು ಮಾಡಿದರೆ,ನಿಮ್ಮ ಹೆಸರು ನಮೊದು ಆಗುತ್ತದೆ.ಪಾಲಗಿರಿ (talk) ೦೬:೫೪, ೧ ಅಕ್ಟೋಬರ್ ೨೦೧೩ (UTC)

ನಿಮ್ಮ ಬಗ್ಗೆ ನೀವೇ ಬರೆಯಬೇಡಿ[ಬದಲಾಯಿಸಿ]

ದಯವಿಟ್ಟು ನಿಮ್ಮ ಬಗ್ಗೆ ನೀವೇ ಲೇಖನ ಬರೆಯಬೇಡಿ. ಇದು ವಿಕಿಪೀಡಿಯ ನಿಯಮಾವಳಿಗೆ ವಿರೋಧ. ನೀವು ಪ್ರಖ್ಯಾತರಾಗಿದ್ದಲ್ಲಿ, ಆ ವಿಷಯ ಜಗತ್ತಿಗೆಲ್ಲ ತಿಳಿಯುವುದು ಅತೀ ಅಗತ್ಯ ಎಂದು ವಿಕಿಪೀಡಿಯನ್ನರು ಭಾವಿಸಿದರೆ ಯಾರಾದರು ತಾವಾಗಿಯೇ ನಿಮ್ಮ ಬಗ್ಗೆ ಲೇಖನ ಸೇರಿಸುತ್ತಾರೆ. ನಿಮ್ಮ ಸಾಧನೆ ಮುಂದುವರೆಸಿ. ಹಾಗೆಯೇ ಜಗತ್ತಿಗೆಲ್ಲ ಉಪಯುಕ್ತ ಅನ್ನಿಸಿದ ವಿಷಯಗಳ ಬಗ್ಗೆ ವಿಶ್ವಕೋಶ ಮಾದರಿಯ ಲೇಖನಗಳನ್ನು ಸೇರಿಸುತ್ತಿರಿ. --Pavanaja (talk) ೦೪:೨೮, ೨ ಅಕ್ಟೋಬರ್ ೨೦೧೩ (UTC)

ದಯವಿಟ್ಟು ಪರಿಶೀಲಿಸಿ, ಎಲ್ಲ ಸದಸ್ಯರು ಬರೆದಂತೆ ಅದು ನನ್ನ ಪರಿಚಯವಷ್ಟೇ. ನನ್ನ ಬಗ್ಗೆ ನಾನೇ ಬರೆದ ಲೇಖನವಲ್ಲ. "ಜಗತ್ತು ನನಗೇನು ಕೊಟ್ಟಿದೆ ಅನ್ನುವುದಕ್ಕಿಂತ ನಾನು ಜಗತ್ತಿಗೆ ಏನು ಕೊಟ್ಟಿದ್ದೇನೆ" ಎನ್ನುವುದರಲ್ಲಿ ನಾನು ನಂಬಿಕೆ ಇಟ್ಟವನು. ಇಷ್ಟಕ್ಕೂ ನಿಮಗೆ ಸರಿಕಾಣದಿದ್ದರೆ ನನ್ನ ಪರಿಚಯ ಲೇಖನ ಅಳಿಸಿ ಹಾಕಿಬಿಡಿ.

ನಿಮ್ಮಬಗ್ಗೆ ಪರಿಚಯವನ್ನು ನಿಮ್ಮ ಸದಸ್ಯರಪುಟHShivaRam ಯಲ್ಲಿ ಮಾಡಬಹುದು.ನಾನು ಈಪುಟದಲ್ಲಿ ನಿಮ್ಮ ಚಿತ್ರ,ಮತ್ತು ಪರಿಚಯ ವಾಕ್ಯ ಬರೆದಿನಿ.ನೋಡಿ,ಬೇಕಂದರೆ,ಇನ್ನೂ ವಿಷಯವನ್ನು ಸೇರಿಸಿರಿ.ಚರ್ಚಪುಟದಲ್ಲಿ ನೀವು ಸಮಾಧಾನ ಕೊಟ್ತಿದೆಮೇಲೆ ನಿಮ್ಮ ಸಹಿ ಹಾಕುವಸಲುವಾಗಿ ~~~~ಟೈಪು ಮಾಡಿರಿ.ಪಾಲಗಿರಿ (talk) ೦೭:೧೧, ೨ ಅಕ್ಟೋಬರ್ ೨೦೧೩ (UTC)

ಪಾಲಗಿರಿಯವರೇ ನಿರ್ವಾಹಕರು , ನನ್ನ ಪರಿಚಯ ಲೇಖನವನ್ನು ಯಾವುದೋ ಮಾಹಿತಿ ಲೇಖನವೆಂಬಂತೆ, "ಈ ಲೇಖನವು ಯಾವುದೇ ಆಧಾರ ಅಥವಾ ಮೂಲಗಳನ್ನು ಉಲ್ಲೇಖಿಸಿಲ್ಲ . ನಂಬಲರ್ಹವಾದ ಆಧಾರಗಳನ್ನು. ಇಲ್ಲಿ ಸೇರಿಸಿರುವ ಲೇಖನದ ಸುಧಾರಣೆಯಲ್ಲಿ ಸಹಾಯ ಮಾಡಿ. ಆಧಾರವಿಲ್ಲದ ವಿಷಯಗಳನ್ನು ಪರಿಶೀಲಿಸಿ ಆಕ್ಷೇಪಣೆ ಸೇರಿಸುವ ಮೂಲಕ ತೆಗೆದುಹಾಕಬಹುದು." ಎಂಬ ಶಿರೋನಾಮೆ ಇತ್ತು ನನ್ನ ಸಾಧನೆಯನ್ನು ಅನುಮಾನಿಸಿ ಹೇಳುವುದೇ?.

ಸದಸ್ಯನಾಗಿ ಪರಿಚಯ ಮಾಡಿಕೊಳ್ಳುವಾಗ, ನಾನು ಒಬ್ಬ ಕನ್ನಡ ಲೇಖಕನಾಗಿ, ನನ್ನ ಕತೆ ಕಾದಂಬರಿಗಳು , ತಂತ್ರಜ್ಞಾನದಲ್ಲಿ ಕನ್ನಡ ಕಂಪ್ಯೂಟರ್ ಪುಸ್ತಕಗಳು ಹಾಗೂ ತತ್ವಜ್ಞಾನದಲ್ಲಿ ಪೌರಾಣಿಕ ಕೃತಿಗಳು ಪ್ರಕಟವಾಗಿವೆ ಎಂದೂ ಅವುಗಳ ಹೆಸರು ಮತ್ತು ಅವು ಯಾವ ಯಾವ ಪತ್ರಿಕೆಗಳಲ್ಲಿ ಹಾಗೂ ಯಾವ ವರ್ಷ ಪ್ರಕಟವಾಗಿವೆ ಮತ್ತು ಪುಸ್ತಕ ರೂಪದಲ್ಲಿ ಯಾವ ವರುಷ ಬಂದಿವೆ ಎಂದು ಉಲ್ಲೇಖಿಸಿ ಹೇಳಿದರೆ, ಅದಕ್ಕೆ ಯಾವುದೇ ಆಧಾರ ಅಥವಾ ಮೂಲಗಳಿಲ್ಲ ಎಂದರೇನರ್ಥ..? ಇದರ ಮೇಲೆ ಅನಗತ್ಯ ಪ್ರಚಾರದ ಸಾಲುಗಳೇನಾದರೂ ಇದ್ದರೆ ಅವುಗಳನ್ನು ನಿರ್ವಾಹಕರೇ ತೆಗೆದು ಹಾಕಿದ್ದಾರಾಗುತ್ತಿತ್ತು. ಬದಲಿಗೆ ಈ ಪರಿಚಯ ಲೇಖನವನ್ನು ಯಾವುದೋ ಒಂದು ಮಾಹಿತಿ ಲೇಖನವೆಂಬಂತೆ ಈ ಲೇಖನಕ್ಕೆ ಯಾವುದೇ ಆಧಾರ ಮೂಲಗಳಿಲ್ಲ ...'ಎನ್ನುವುದು ಸಮಂಜಸವೇ...? ... ಈ ಇಳಿವಯಸ್ಸಿನಲ್ಲಿ ದೇವರ ದಯೆಯಿಂದ ಯಾವ ಕಾಯಿಲೆ ಇಲ್ಲದೇನೆ ಆರೋಗ್ಯವಾಗಿದ್ದೇನೆ, ಆದರೂ ಒಮ್ಮೊಮ್ಮೆ ವೃದ್ಧಾಪ್ಯದ ಬಾಧೆಗಳು ಪೀಡಿಸುವಾಗ, ಈವರೆಗೂ ಇಲ್ಲದೇ ಈ ೬೭ ರ ಪ್ರಾಯದಲ್ಲಿ ವಿಕಿಪೀಡಿಯಾದಲ್ಲಿ ಪ್ರಚಾರ ಗಿಟ್ಟಿಸುವ ಉತ್ಕಟೇಚ್ಛೆ ನನಗೇಕೇ ಸ್ವಾಮಿ...? ನನ್ನಂತಹ ಇಳಿವಯಸ್ಸಿನವರು ಈಗಲೂ ಸಕ್ರಿಯರಾಗಿರುವುದೇ ಅಪರೂಪ. ಹೀಗಿರುವಾಗ ನಮ್ಮ ಕನ್ನಡದ ವಿಶ್ವಕೋಶ- ವಿಕಿಪೀಡಿಯಾಕ್ಕೆ ತಮ್ಮ ಮಾಹಿತಿ/ಕಾಣಿಕೆಗಳನ್ನೂ ನೀಡುವುದರೊಂದಿಗೆ ಉತ್ಸಾಹದಿಂದ ಭಾಗವಹಿಸಲೆಂದು ಹೊಸದಾಗಿ ಸದಸ್ಯರಾಗಲು ಮುಂದೆ ಬರುವ ನನ್ನಂಥ ಹಿರಿಯ ಕನ್ನಡದ ಲೇಖಕರಿಗೆ ಪ್ರೋತ್ಸಾಹಿಸಬೇಕಲ್ಲವೇ ಸ್ವಾಮಿ... HShivaRam (talk) ೧೧:೪೦, ೨ ಅಕ್ಟೋಬರ್ ೨೦೧೩ (UTC) ಎಚ್.ಶಿವರಾಂ

ಶಿವರಾಂ ಅವರೆ,ನಾನು ಮಾಡಿದ್ದು ಆರೋಪಣ ಅಲ್ಲ.ಆಟ್ಯಾಗ್ ಇದ್ದರೆ ಬೇರೇ ಸದಸ್ಯರು ನೋಡಿ ಅಂತಾರ್ಜಾಲದಲ್ಲಿ ಆಧಾರಗಲನ್ನು,ಉಲ್ಲೇಖನಗಳನ್ನು ಉಡಿಕಿ ಅದರಲ್ಲಿ ಸೇರಸಬೇಕಂತ.ನಾನು ಕೆಲವು ವ್ಯಾಸಗಳಿಗೆ ಟ್ಯಾಗ್ ನೋಡಿ ಆಧಾರಗಳು,ಉಲ್ಲೇಖನಗಳನು ಸೇರಿಸಿದ್ದೆನೆ.ನಿಮ್ಮಲೇಖನಬಗ್ಗೆನು ಉಡಿಕಿ ಸೀಕಿದರೆ ಸೇರಿಸ್ತಿನಿ.ನೀವು ಪ್ರಯತ್ನಪಡಿರಿ.ಲೇಖನಗಳಕು ಆಧಾರಗಳು,ಉಲ್ಲೇಖನಗಳಿರುವುದು ವ್ಯಾಸದ ಔಚಿತ್ಯವನ್ನು ಹಚ್ಚಿಸುತ್ತದೆ..ಟ್ಯಾಗ್ ಇರುವದು ತಪ್ಪೆನಿಲ್ಲ.ಮೀಡಿಯಾ ಅಲ್ಲ್ವೆ ಪತ್ರಿಕದವರು,ಪರಿಶೋಧಕರು ಆಧಾರಗಳು,ಮತ್ತು ಉಲ್ಲೇಖನಗಲ್ಲಿದ್ದ ಸಮಾಚಾರವನ್ನೆ ಸ್ವೀಕಾರಮಾಡೆದರು.ನಮ್ಮ ಕನ್ನಡ ವಿಕಿಪೀಡಿಯಲ್ಲಿರುವ ಲೇಖನಗಳು ಅಂತಾ ಉತ್ತಮವಾಗಿರಬೇಕನ್ನದೆ ನಮ್ಮ ತಾಪತ್ರಯ.ವಿಕಿಪೀಡಿಯ ದಲ್ಲಿ ಬರೆಯವರು ಎಲ್ಲರು ಸ್ವಚ್ಚಂತವಾಗಿ(volunteer)ಬರೆಯವರೆ.ಅದಕ್ಕೆ ಎಲ್ಲರಮೇಲೆ ನಮಗೆ ಗೊರವ.ದಯವಿಟ್ಟು ಒಮ್ಮೆ ವಿಕಿಪೀಡಿಯ ನಿಯಮಗಳನ್ನು ಓದಿರಿ.ದಕ್ಷಿಣಭಾಷ ವಿಕಿಪೀಡಿಯ ಗಳಲ್ಲಿ(ತಮಿಳಂ,ಕನ್ನಡ,ತೆಲುಗು,ಮಳಯಾಳಂ)ನಮ್ಮ ವಿಕಿಪೀಡಿಯ ಕಡಿಮೆಸ್ಥಾನದಲ್ಲಿ ಇದೆ.ಉತ್ತಮಗೊಲಸುವದೆನಮ್ಮೆಲ್ಲರದ್ಯೇಯ.ಪಾಲಗಿರಿ (talk) ೧೩:೧೮, ೨ ಅಕ್ಟೋಬರ್ ೨೦೧೩ (UTC)

ಪಾಲಗಿರಿಯವರೇ, ನಿಮ್ಮ ಸಹೃದಯ ಸ್ಪಂದನಕ್ಕೆ ವಂದಿಸುವೆ. ಲೇಖಕನಾಗಿ ವಿಕಿಪಿಡಿಯಾದಲ್ಲಿ ನನ್ನ ಪರಿಚಯ ಬರೆದುಕೊಳ್ಳುವುದಕ್ಕಿಂತ, ನಾನು ಯಾರು ಏನು ಸಾಧನೆ ಮಾಡಿದ್ದೇನೆ ? ಎಂಬುದಾಗಿ ನನ್ನ ಕೃತಿಗಳನ್ನು ಹೆಸರಿಸಿ ನಾನೇ ಅವು ಎಲ್ಲೆಲ್ಲಿ ಪ್ರಕಟವಾಗಿವೆ ಎಂದು ಹೇಳುವುದಕ್ಕಿಂತ, ನನ್ನ ಪರವಾಗಿ ಈಗಾಗಲೇ ತಿಳಿದವರು ಅಥವಾ ಕನ್ನಡ ಅಭಿಮಾನಿ ಓದುಗರು ಹೇಳಿ, ದಾಖಲಿಸಿದರೆ ಅದು ಸೂಕ್ತವೇ ಸಂತೋಷವೇ. ನನ್ನ ಪ್ರೊಫೈಲ್ : ಹಲವು ವರುಷಗಳಿಂದ ನನ್ನ ವೆಬ್ ಪುಟ http://ritertimes.com ಕೊಂಡಿಯಲ್ಲಿ (ಫೋಟೋ ಕ್ಲಿಕ್ಕಿಸಿ)ಇದೆಯಾದರೂ, ಯಾರೂ ಈವರೆಗೆ ಗುರುತಿಸಿ ವಿಕಿಪೀಡಿಯಾಕ್ಕೆ ಬರೆಯುವ ಗೋಜಿಗೆ ಹೋಗಲಿಲಲ್ಲ ಅದು ನನ್ನಂಥ ಹಿರಿಯ ಲೇಖಕನಿಗೆ ನೋವಿನ ವಿಷಯವೇ..ಇರಲಿ ಬಿಡಿ, ಎಷ್ಟೋ ಮಂದಿ ಸಾಧಕರು ಜೀವಮಾನವೆಲ್ಲ ಕಳೆದರೂ ಅವರನ್ನು ಗುರುತಿಸದೇ ಹೋಗುವುದು ದುರಾದೃಷ್ಟಕರವೇ... ಇಷ್ಟಕ್ಕೂ ಕನ್ನಡ ವಿಕಿಪೀಡಿಯಾ ಕಡಿಮೆ ಸ್ಥಾನದಲ್ಲಿದೆ ಎಂದಿದ್ದೀರ... "ಕನ್ನಡಗರು ಅಭಿಮಾನ ಶೂನ್ಯರು ಎನ್ನುತ್ತಾರೆ. ಅದು ಇಲ್ಲವಾಗಬೇಕೆಂಬುದೇ ನಮ್ಮ ನಿಮ್ಮಂತಹ ಹಿರಿಯರ ಆಶಯವಲ್ಲವೇ...?

HShivaRam (talk) ೧೩:೫೯, ೨ ಅಕ್ಟೋಬರ್ ೨೦೧೩ (UTC)

ನಿಮ್ಮ ಪುಟ[ಬದಲಾಯಿಸಿ]

ನಿಮ್ಮ ಬಗೆಗಿನ ಪುಟ ಸರಿಪಡಿಸಿದ್ದೇನೆ. ನೋಡಿ. --Pavanaja (talk) ೦೪:೫೦, ೩ ಅಕ್ಟೋಬರ್ ೨೦೧೩ (UTC)

ಓಂಶಿವಪ್ರಕಾಶ್ ಅವರೇ, ಮೊದಲು ನನ್ನ ಸಾಧನೆಯನ್ನು ನಾನು ಬರೆದುಕೊಂಡೆ. ನಿಜ. ಆನಂತರ, ಅದು ವಿಕಿ ನಿಬಂಧನೆಗೆ ವಿರುದ್ಧ ವೆಂದು ಹೇಳಿದಾಗ ಅದನ್ನು ರದ್ದು ಪಡಿಸಿಬಿಡಿ, ಎಂದೇ ಹೇಳಿದೆ. ಆನಂತರ, ವಿಕಿಗೆ ಹೆಚ್ಚು ಕೂಡುಗೆ ಇತ್ತಿರುವ ಪಾಲಗಿರಿಯವರು ಮತ್ತು ತಂತ್ರ ಜ್ಞರಾದ ಪವನಜ ಅವರೂ ಮತ್ತು ಸೌಭಾಗ್ಯ ವತಿ ಎಂಬುವವರು ನನ್ನ. ಪ್ರೊಫೈಲ್ ಲಿಂಕ್ ಪರಿಶೀಲಿಸಿ ನಾನು ರಾಜ್ಯಮಟ್ಟದ ಲೇಖಕನೆಂದೂ ರಾಜ್ಯಮಟ್ಟದಲ್ಲಿ ಪುರಸ್ಕಾರ ಪ್ರಶಸ್ತಿ ಪತ್ರ ಪಡೆದಿರವೆನೆಂದೇ ಅವರೆ ಖದ್ದಾಗಿ ನನ್ನ ಮಾಹಿತಿ ಹಾಕಿಅಪ್ ಡೇಟ್ ಮಾಡಿದರು. ಬಿ.ಎಸ್.ಚಂದ್ರಶೇಖರ್ ಎಂಬುವರು ಹೇಳಿದಂತೆ ಕೇವಲ ನನ್ನದೊಂದು ಬ್ಲಾಗ್ ಆಧಾರಿತ ವಲ್ಲ. ವಿಕಿಗೆ ನನ್ನ ಕೂಡುಗೆ ಒಂದೆರಡು ಇವೆ.ಇನ್ನೂ ಬರೆಯಲಿದ್ದೆ. ಸದಸ್ಯತ್ವದಲ್ಲೂ ನಾನು ನನ್ನ ಬಗ್ಗೆ ಬರೆದುಕೊಂಡಿದ್ದೇನೆ. ಅದನ್ನೂ ರದ್ದುಗೊಳಿಸಿ. ತೊಂದರೆ ಕೊಟ್ಟದ್ದಕ್ಕೆ ಕ್ಷಮಿಸಿ ಬಿಡಿ.

ನಮಸ್ತೆ, ನಿಮ್ಮ ಸದಸ್ಯ ಪುಟದಲ್ಲಿ ನೀವು ನಿಮ್ಮ ಬಗ್ಗೆ ಮಾಹಿತಿ ಸೇರಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ನಿಮ್ಮ ಬಗ್ಗೆ ಲೇಖನ ನಿಮ್ಮಿಂದಲೇ ಪ್ರಾರಂಭವಾಗುವುದು ತಪ್ಪು. Wikipedia:Notability ಇದರ ಪ್ರಕಾರ ಪ್ರಖ್ಯಾತರನ್ನು ಸಂಪಾದಕರು ಲೇಖನ ಮುಖೇನ ವಿಕಿಗೆ ಸೇರಿಸುವ ಅವಕಾಶವಿದೆ. ಸ್ವಂತ ಜಾಹೀರಾತಿಗೆ ಇಲ್ಲಿ ಅವಶ್ಯವಿಲ್ಲ. Wikipedia:What_Wikipedia_is_not ಇದು ವಿಕಿಪೀಡಿಯ ಯಾವುದಕ್ಕಲ್ಲ ಎಂಬುದನ್ನು ತಿಳಿಸುತ್ತದೆ. ಓದಿ ತಿಳಿಯುತ್ತೀರೆಂದು ಭಾವಿಸುತ್ತೇನೆ. ಜೊತೆಗೆ ನನಗೆ ಸಂದೇಶ ಕಳುಹಿಸಲು ನನ್ನ ಚರ್ಚೆ ಪುಟದಲ್ಲಿ ಮಾತ್ರ ಮಾಹಿತಿ ಸೇರಿಸಿ. ಇಲ್ಲದಿದ್ದಲ್ಲಿ, ಈ ಸಂದೇಶಗಳು ಕಾಣದೇ ಹೋಗಬಹುದು. ಧನ್ಯವಾದಗಳೊಂದಿಗೆ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೧೧, ೧೮ ಮಾರ್ಚ್ ೨೦೧೫ (UTC)
ನಿಮ್ಮ ಬಗ್ಗೆ ಪತ್ರಿಕೆ ಇತ್ಯಾದಿಗಳ ಮುಖೇನ ಮಾಹಿತಿ ಉಲ್ಲೇಖ ಸಂಗ್ರಹಿಸಿ ವಿಕಿಯ ಮೂಲಕ ಖಂಡಿತ ಇತರೆ ಕನ್ನಡಿಗರಿಗೆ ನಿಮ್ಮ ಸಾಧನೆಗಳ ಪ್ರಸರಣೆ ಆಗುತ್ತದೆ. ಕಾಯುತ್ತೀರೆಂದು ಆಶಿಸುತ್ತಾ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೧೫, ೧೮ ಮಾರ್ಚ್ ೨೦೧೫ (UTC)