ಸದಸ್ಯರ ಚರ್ಚೆಪುಟ:Deeksha Shetty123

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Deeksha Shetty123,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೧೦:೫೫, ೯ ಜುಲೈ ೨೦೧೫ (UTC)

                                             ಬ್ಯಾಂಕೋದ್ಯಮ
       ಬ್ಯಾಂಕುಗಳು ಉದ್ದಿಮೆ,ವ್ಯಾಪಾರ ಹಾಗೂ ವ್ಯವಹಾರ ವಹಿವಾಟುಗಳ ನರನಾಡಿಗಳೆಂದು ಹೇಳಲಾಗುತ್ತಿದೆ.
   ಬ್ಯಾಂಕು ಹಣದ ವ್ಯವಹಾರ ನಡೆಸುವ ಒಂದು ಸಂಸ್ಥೆ.ಜನರಿಂದ ಠೇವಣಿಯನ್ನು ಪಡೆದು ಅದನ್ನು ಅಗತ್ಯ ಉಳ್ಳವರಿಗೆ 
   ಸಾಲವನ್ನಾಗಿ ನೀಡಿ ಅಥವಾ ಬೇರೆ ಉದ್ಯಮಗಳಲ್ಲಿ ಹೂಡಿಕೆ ಮಾಡಿ ಲಾಭಗಳಿಸುವ ಉದ್ಯಮವೇ ' ಬ್ಯಾಂಕಿಂಗ್ '
   ಆಗಿದೆ. ಬ್ಯಾಂಕಿಂಗ್ ನಲ್ಲಿರಿಸಿರುವ ಠೇವಣಿಗಳನ್ನು ಜನರು ತಮಗೆ ಬೇಕಾದಾಗ ಅಥವಾ ಅವಧಿ ಮುಗಿದಾಗ ಚೆಕ್ 
   ಅಥವಾ ಇತರ ಸಾಧನಗಳ ಮೂಲಕ ಹಿಂದಕ್ಕೆ ಪಡೆಯಬಹುದು. ಬ್ಯಾಂಕಿಂಗ್ ಸಂಸ್ಥೆಯು ಸಾರ್ವಜನಿಕರ ಹಣವನ್ನು
   ಬೇರೆ ಬೇರೆ ವಿಧದ ಠೇವಣಿ ಖಾತೆಗಳಲ್ಲಿ ಸಂಗ್ರಹಿಸುತ್ತದೆ. ಈ ರೀತಿಯಾಗಿ ಸಂಗ್ರಹಿಸಲ್ಪಟ್ಟ ಹಣವನ್ನು ಗ್ರಾಹಕನ
   ಅವಶ್ಯಕತೆಗಳಿಗನುಗುಣವಾಗಿ ಮರುಪಾವತಿಸಲು ಬದ್ದನಿದ್ದು ಬೇರೆಯವರಿಗೆ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ನೀಡಿ 
   ಲಾಭಗಳಿಸುತ್ತದೆ. ಇನ್ನೂ ಸರಳ ರೀತಿಯಲ್ಲಿ ಹೇಳುವುದಾದರೆ' ಸಾಲವನ್ನು ಕೊಡುವ ಉದ್ದೇಶಕ್ಕಾಗಿ ಠೇವಣಿ ರೂಪದಲ್ಲಿ 
   ಹಣ ಒಗ್ಗೂಡಿಸುವ ವ್ಯವಹಾರದ ಚಟುವಟಿಕೆಯೇ ಬ್ಯಾಂಕಿಂಗ್ ಆಗಿದೆ.'ನಿಮ್ಮ ಹಣ' 'ನನ್ನ ಬುದ್ಧಿವಂತಿಕೆ' - ಈ ತತ್ವದಡಿ
   ಬ್ಯಾಂಕರ್ ವ್ಯವಹಾರ ಮಾಡಿ ಲಾಭಗಳಿಸುತ್ತಾನೆ.