ಸದಸ್ಯ:Deeksha Shetty123

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                           ಸಾರಿಗೆ ಮತ್ತು ಸಂಪರ್ಕ ಸಾಧನ


                  ನಮಗೆ ತಿಳಿದಿರುವಂತೆ,ಸರಕುಗಳು ನಿದಿ೯ಷ್ಟಪಡಿಸಿದ 
             ಸ್ಥಳಗಳಲ್ಲಿ ಮಾತ್ರ ಉತ್ಪಾದಿಸಲ್ಪಡುತ್ತವೆ.ಉದಾಹರಣೆಗೆ 
             ಅಸ್ಸಾಂನಲ್ಲಿ ಟೀ ಉತ್ಪಾದಿಸಲಾಗುತ್ತದೆ.ಗುಜರಾತ್ ಮತ್ತು
             ಮಹಾರಾಷ್ಟ್ರಗಳಲ್ಲಿ ಹತ್ತಿಯನ್ನು,ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ
             ರಾಜ್ಯಗಳಲ್ಲಿ ಸೆಣಬನ್ನು,ಉತ್ತರ ಪ್ರದೇಶ,ಬಿಹಾರ್ ಮತ್ತು 
             ಮಹಾರಾಷ್ಟ್ರಗಳಲ್ಲಿ ಸಕ್ಕರೆಯನ್ನು ಉತ್ಪಾದಿಸಲಾಗುತ್ತದೆ.ಆದರೆ
             ಈ ಎಲ್ಲಾ ಸರಕುಗಳು ದೇಶದ ವಿವಿಧೆಡೆ ಅನುಭೋಗಿಸಲಾಗುತ್ತದೆ.
             ಸ್ಥಳದ ತೊಡಕನ್ನು ವಿವಿಧ ರೀತಿಯ ಸಾರಿಗೆಗಳ ಮೂಲಕ
             ನಿವಾರಿಸಬಹುದು,ವಿವಿಧ ರೀತಿಯ ಸಾರಿಗೆಗಳಾದ ರಸ್ತೆ ಸಾರಿಗೆ,
             ರೈಲು ಸಾರಿಗೆ,ಜಲ ಸಾರಿಗೆ ಅಥವಾ ವಾಯು ಸಾರಿಗೆಯ
             ಸಾಧನಗಳ ಮೂಲಕ ಕಚ್ಚಾ ವಸ್ತುಗಳನ್ನು ಮಾರುಕಟ್ಟೆಯಿಂದ 
             ಉತ್ಪಾದನಾ ಕೇಂದ್ರಕ್ಕೆ ಸಾಗಿಸಬಹುದಾಗಿದೆ ಹಾಗೆಯೇ 
             ಸಿದ್ಧವಸ್ತುಗಳನ್ನು ಉತ್ಪಾದನಾ ಕೇಂದ್ರದಿಂದ ಗ್ರಾಹಕರ
             ಉಪಭೋಗಕ್ಕಾಗಿ ಮಾರುಕಟ್ಟೆಗೆ ಸಾಗಿಸಬಹುದಾಗಿದೆ.ಸಾರಿಗೆ
             ಸೌಲಭ್ಯದ ಜೊತೆಗೆ ಸಂವಹನ ಸೌಲಭ್ಯವೂ ಕೂಡ ಅಗತ್ಯವಿದೆ.
             ಉತ್ಪಾದಕರಿಗೆ,ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಬೇಕಾದ 
             ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಪೂರಕವಾಗಿ
             ಸಂವಹನ ಸೌಲಭ್ಯವು ಕೆಲಸವನ್ನು ನಿವ೯ಹಿಸುತ್ತವೆ.ಹಾಗಾಗಿ 
             ಅಂಚೆ ಸೇವೆಗಳು ಮತ್ತು ದೂರವಾಣಿ  ಸೌಲಭ್ಯಗಳು ವ್ಯವಹಾರದ 
             ಚಟುವಟಿಕೆಯ ಪೂರಕಗಳು ಎಂದು ಪರಿಗಣಿಸಲ್ಪಡುತ್ತವೆ.