ಸದಸ್ಯರ ಚರ್ಚೆಪುಟ:Albi thomas aloy

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Albi thomas aloy,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೮:೧೭, ೨೪ ಆಗಸ್ಟ್ ೨೦೧೫ (UTC)

ವೈರಸ್ಸುಗಳು[ಬದಲಾಯಿಸಿ]

ಜೀವಿಗಳೆಲ್ಲವೂ ಸೂಕ್ಷ್ಮ ಹಾಗೂ ಕಾರ್ಯನಿರ್ವಾಹಕ ಮೂಲ ಕೋಶಗಳಿಂದಾಗಿವೆ. ಅಂದರೆ ಜಿವಿ ಏಕಕೋಶಿ ಅಥವಾ ಕೋಶಿ ಜಾಲಗಳಿಂದಾದ ಜೈವಿಕ ಯಂತ್ರ. ಜೀವಿ ಮತ್ತು ನಿರ್ಜೀವಿಯ ಮಧ್ಯಂತರದ ಸೇತುವೆಯಂತಿವೆ ವೈರಸ್ಸುಗಳು. ೧೮೯೮ರಲ್ಲಿ ಡಚ್ ಜೀವ ವಿಜ್ಞಾನಿ ಮಾರ್ಟಿನಸ್ ವಿಲ್ಲೆಮ್ ಬೈಜೆರಿಂಕ್ ಮೊದಲಿಗೆ ವೈರಸ್ಸುಗಳನ್ನು ಪತ್ತೆ ಹಚ್ಚಿದ. ಹೊಗೆ ಸೊಪ್ಪಿನ ಸಸ್ಯಗಳಲ್ಲಿ ರೋಗ ಉಂಟೂ ಮಾಡುವ ಇವನ್ನು ರೋಗ ಪೀಡಿತ ಎಲೆಗಳಿಂದ ತೆಗೆದ ರಸದ ಮೂಲಕ ಆರೋಗ್ಯವಂತ ಸಸ್ಯಕ್ಕೆ ಸೋಂಕಿಸಿದಾಗ ಅದು ರೋಗಪೀಡಿತವಾದುದು ಕಂಡು ಬಂತು. ಬ್ಯಾಕ್ಟೀರಿಯಾಗಳನ್ನು ರೋಧಿಸಬಹುದಾದ ಜರಡಿಗಳಲ್ಲಿ ಶೋಧಿಸಿದಾಗಲೂ ಈ ರಸ ಮಾರಕವಾಗಿಯೇ ಇದ್ದಿತು. ಇಂತಹ ಸೂಕ್ಷ್ಮಾತಿ ಸೂಕ್ಷ ನಂಜನ್ನು ವೈರಸ್ಸು ಎಂದು ಈ ಹೆಸರಿಸಿದೆ. ಇದು ವಿಷ ಎಂದು ಅರ್ಥೈಸುವ ಲ್ಯಾಟಿನ್ ಪದ.

ವೈರಸ್ಸುಗಳು ಸ್ವಾತಂತ್ರವಾಗಿದ್ದುಕೊಂಡು ಸಂತಾನೋತ್ಪತ್ತಿ ಮಾಡಿಕೊಳ್ಳಬಲ್ಲ ಕೋಶಗಳಲ್ಲ, ಯಾವುದೇ ಜೀವಿಯ ಕೋಶದೊಳಗೆ ಹೊಕ್ಕಾಗ ಮಾತ್ರ ಇವು ತಮ್ಮ ಚಟುವಟಿಕೆಗಳನ್ನು ತೋರುತ್ತದೆ. ಇವನ್ನು ಜೀವಂತ ರಾಸಾಯನಿಕ ವಸ್ತು ಎನ್ನಬಹುದು. ವೈರಸ್ಸುಗಳದೇ ಒಂದು ವಿಶೇಷ ಗುಂಪು ಅವು ಸುಮಾರು ೩೦೦ ರಿಂದ ೩೦೦ಎ ಗಳು ಆಕಾರ ಮತ್ತು ವೈವಿಧ್ಯಮಯ ರಚನೆಗಳನ್ನು ಹೊಂದಿರುತ್ತದೆ. ವೃತ್ತಾಕಾರ ಅಥವಾ ಕೋಲಿನ ಆಕಾರದಲ್ಲಿದ್ದು ಅವು ಬಾಲ ಹೊಂದಿರುತ್ತವೆ ಅಥವಾ ಬಲರಹಿತವಾಗಿರುತ್ತದೆ.

ವೈರಸ್ಸಿನಲ್ಲಿರುವ ನ್ಯೂಕ್ಲಿಯೋ ಪ್ರೊಟೀನಿನ ಸಣ್ಣ ತುಂಡನ್ನು ವೈರಿಯಾನ್ ಎಂದು ಕರೆಯಲಾಗುತ್ತದೆ. ಇದು ವೈರಸ್ ನ ನ್ಯೂಕ್ಲಿಯಿಕ್ ಆಮ್ಲ ಹೊಂದಿದ್ದು, ಪ್ರೊಟೀನಿನ ಹೊರಕವಚವುಳ್ಳದ್ದು, ಪ್ರೊಟೀನಿನ ಈ ಹೊರ ಕವಚವೇ ಕ್ಯಾಪ್ಸಿಡ್ ಈ ಸಂಕೀರ್ಣ ಪ್ರೊಟೀನ್ ಪೊರೆಯನ್ನು ಕಾಪ್ಸೋಮಿರ್ (ಕ್ಯಾಪ್ಸಿಡ್ ನ ತುಣುಕು) ಎನ್ನುತ್ತಾರೆ. ಕಾಪ್ಸೋಮಿರ್ ರಚನೆ ಮತ್ತು ಪ್ರೋಟೀನ್ ಸಂಖ್ಯೆಗಳಲ್ಲಿ ವ್ಯತ್ಯಾಸ ತೋರುತ್ತದೆ. ಹೊಗೆಸೊಪ್ಪಿನ ವೈರಸ್ಸಾದ ಟೊಬಾಕೊ ಮೊಸೈಕ್ ವೈರಸ್ (ಟಿಎಂವಿ) ನಲ್ಲಿ ಸುಮಾರು ೨,೨೦೦ ಇಂತಹ ತುಣುಕುಗಳಿವೆ. ಕೆಲವು ವೈರಸ್ಸುಗಳಲ್ಲಿ ಹೊರಕವಚವಿಲ್ಲದಿರಬಹುದು ಮತ್ತೆ ಕೆಲವಕ್ಕೆ ಕ್ಯಾಪ್ಸಿಡ್ ನ ಸುತ್ತ ಮತ್ತೊಂದು ಪೊರೆಯಾ ಇರಬಹುದು. ಉದಾ : ಇನ್ ಪ್ಲುಯೆನ್ಸಾ ವೈರಸ್ಸು ಇಂತಹ ಪೊರೆಗಳು ಅಜೈವಿಕ ಪರಿಸರದಲ್ಲಿ ವೈರಸ್ಸಿಗೆ ರಕ್ಷಣೆ ನೀಡುತ್ತವೆ. ನ್ಯೂಕ್ಲಿಯಿಕ್ ಆಮ್ಲದ ಇರುವಿಕೆಯನ್ನು ಆಧರಿಸಿ ವೈರಸ್ಸುಗಲನ್ನು ಆರ್.ಎನ್.ಎ (ಕೈಬೋ ನ್ಯೂಕ್ಲಿಯಿಕ್ ಆಸಿಡ್) ಮತ್ತು ಡಿ.ಎನ್.ಎ (ಡಿ ಆಕ್ಸಿರೈಬೋ ನ್ಯೂಕ್ಲಿಯಿ ಆಸಿಡ್) ವೈರಸ್ಸುಗಳೆಂದು ಗುರುತಿಸಬಹುದು. ಇವುಗಳಲ್ಲಿ ಶಕ್ತಿ ಬಿಡುಗಡೆ ಮಾಡುವ ಯಾವುದೇ ಉಪಾಪಚಯ ಕಿಣ್ವಗಳು ಇಲ್ಲದಿರುವುದರಿಂದ ಇವುಗಳನ್ನು ಅಂತ:ಕೋಶ ಪರಾವಲಂಬಿಗಳೆಂದು ಪರಿಗಣಿಸಬಹುದು.

ವೈರಸ್ಸುಗಳು ಆಕ್ರಮಣ ಮಾಡುವ ಜೀವಿಗಳ ಆಧಾರದ ಮೇಲೆ ಅವನ್ನು ೩ ಗುಂಪುಗಳಾಗಿ ವರ್ಗೀಕರಿಸಬಹುದು. ೧. ಬ್ಯಾಕ್ಟೀರಿಯಗಳ ವರಸ್ಸು ೨. ಸಸ್ಯ ವೈರಸ್ಸು ೩. ಪ್ರಾಣಿ ವೈರಸ್ಸು

ಬ್ಯಾಕ್ಟೀರಿಯಾ ವೈರಸ್ಸನ್ನು ಬ್ಯಾಕ್ಟೀರಿಯೋಫೇಜ್ ಇಲ್ಲವೇ ಫೇಜ್ ಎಂದು ಕರೆಯುತ್ತಾರೆ ಮಾನವ ಅಥವಾ ಇತರೇ ಪ್ರಾಣಿಗಳ ದೊಡ್ಡ ಕರುಳಿನಲ್ಲಿರುವ ಪರಾವಲಂಬಿ ಇ. ಕೋಲಿ ಬ್ಯಾಕ್ಟೀರಿಯಾಗಳಲ್ಲಿ ಸಾಮಾನ್ಯವಾಗಿ ಕಾಣಬರುವ ಫೇಜ್ ಟಿ೪ ಬ್ಯಾಕ್ಟೀರಿಯೋಫೇಜ್

ಮಿಶ್ರತಳಿ ಸಸ್ಯಗಳು[ಬದಲಾಯಿಸಿ]

ಎರಡು ವಿಭಿನ್ನ ತಳಿ ಪ್ರಭೇದ ಅಥವಾ ಜಾತಿಗೆ ಸೇರಿದ ಸಸ್ಯಗಳನ್ನು ಸಂಕರ ಮಾಡಿದಾಗ ದೊರೆಯುವ ಸಂತಾನವೇ ಮಿಶ್ರತಳಿ. ಬಹುತೇಕ ಮಿಶ್ರತಳಿಯ ಹುಟ್ಟು, ಬೆಳವಣಿಗೆ, ಇಳುವರಿ, ದೇಹಸ್ಥಿತಿ ಇತ್ಯಾದಿಗಳು ಮೂಲ ತಳಿಗಿಂತ ಉತ್ತಮವಾಗಿರುತ್ತದೆ. ಇದಕ್ಕೆ ಹೈಬ್ರಿಡ್ ವಿಗರ್ ಅಥವಾ ಹೆಟಿರೋಸಿಸ್ (ಸಂಕರ ಸತ್ವ) ಎಂದು ಹೆಸರು. ಸಸ್ಯಾಭಿವೃದ್ಧಿಗಾಗಿ ಮನವನು ಮಿಶ್ರತಳಿಗಳನ್ನು ಉತ್ಪಾದಿಸುತ್ತಲೇ ಬಂದಿದ್ದಾನೆ. ಇಪ್ಪತ್ತನೇ ಶತಮಾನದ ಪ್ರಾರಂಭದಿಂದ, ಎಂದರೆ ತಳಿಶಾಸ್ತ್ರದಲ್ಲಿ ತಿಳಿವಳಿಕೆ ಹೆಚ್ಚಾದಂದಿನಿಂದ, ಮಿಶ್ರತಳಿ ಉತ್ಪಾದನೆ ಹೆಚ್ಚು ವೈಜ್ಞಾನಿಕವಾಗಿ ನಡೆಯುತ್ತಿದೆ. ಎರಡು ವಿಭಿನ್ನ ಆದರೆ ಸನಿಹದ ಸಂಬಂಧಿಗಳನ್ನು (ತಳಿ, ಪ್ರಭೇದ, ಜಾತಿ ಯಾವುದೇ ಮಟ್ಟದಲ್ಲಿ) ಸಂಕರಿಸಿ ಪಡೆಯುವ ಮುಂದಿನ ಉತ್ತಮ ಸಂತಾನವೇ ಎಫ್೧ (ಪಿಲಿಯಲ್) ಮಿಶ್ರತಳಿ. ಆದರೆ ಈ ಎಫ್೧ ಮಿಶ್ರತಳಿಗಳ ಬೀಜಗಳನ್ನು ಬಿತ್ತಿದರೆ ಸಿಗುವ ಸಂತಾನದ ಸಸ್ಯಗಳ ಗುಣಮಟ್ಟದಲ್ಲಿ ಕುಸಿತ ಕಂಡು ಬರುತ್ತದೆ. ಆದ್ದರಿಂದ ಜನಕ ಸಸ್ಯಗಳ ಸಂಕರವನ್ನು ಪ್ರತಿ ವರ್ಷವೂ ಹೊಸ ಎಫ್೧ ಮಿಶ್ರತಳಿಗಳನ್ನು ಪಡೆಯುತ್ತಲೇ ಇರಬೇಕು.

ಹಲವಾರು ಉದ್ದೇಶಗಳಿಗಾಗಿ ಮಿಶ್ರತಳಿಗಳನ್ನು ಉತ್ಪಾದಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹೆಚ್ಚಿನ ಇಳುವರಿ, ಹೆಚ್ಚಿನ ಗುಣಮಟ್ಟ, ಕೀಟಗಳ ಆಕ್ರಮಣ ತಡೆಯುವ ಸಾಮರ್ಥ್ಯ, ನೀರಿನ ಕೊರತೆಯನ್ನು ತಾಳಿ ಬದುಕುವ ಶಕ್ತಿ ಈ ಉದ್ದೇಶದಿಂದ ಕೆಲವು ಗಿಡಗಳಲ್ಲಿ ಮಿಶ್ರತಳಿ ಪಡೆಯಲು ಆಯ್ದು ಗಿಡದ ಫರಾಗವನ್ನು ಮೆದು ಬ್ರಷ್ ಮೂಲಕ ಅಪೇಕ್ಷಿತ ಗಿಡದ ಶಲಾಕಾಗ್ರಕ್ಕೆ ಸವರಬೇಕು. ಆಮೇಲೆ ಶಲಾಕಾಗ್ರಕ್ಕೆ ಮುಸುಕು ಹಾಕಬೇಕು. ಅನಂತರ ದೊರೆತ ಬೀಜಗಳಿಂದ ಮಿಶ್ರತಳಿ ಸಸ್ಯಗಳನ್ನು ಪಡೆಯಬಹುದು.

ಭತ್ತ, ಗೋಧಿ, ತೆಂಗು, ತರಕಾರಿಗಳು, ಹಣ್ಣುಗಳು ಎಲ್ಲವುಗಳ ಮಿಶ್ರತಳಿಗಳು ಈಗ ಲಭ್ಯ. ಪ್ರಕೃತಿಯಲ್ಲಿ ಸಹಜವಾಗಿ ಮಿಶ್ರತಳಿಗಳ ಸೃಷ್ಟಿಯಾಗುತ್ತಲೇ ಇದ್ದು ಈ ಕ್ರಿಯೆಯು ಸಸ್ಯ ವಿಕಾಸದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಕಲ್ಲು ಹೂಗಳು[ಬದಲಾಯಿಸಿ]

ಒಣ ಬಂಡೆಗಳ ಮೇಲೋ, ಮಾವಿನ ಮರದ ತೊಗಟೆಗಳ ಮೇಲೋ ಅಂಟಿ ಬೆಳೆದ ಕಲ್ಲು ಹೂಗಳನ್ನು ನೀವು ನೋಡಿರಬಹುದು. ಇವು ನಿಜವಾಗಿ ಹೂಗಳಲ್ಲ ಕಲ್ಲು ಹೂಗಳು. ಶೈಲವ ಹಾಗೂ ಶಿಲೀಂದ್ರ ಎಂಬ ಎರಡು ವಿಭಿನ್ನ ಗುಂಪಿನ ಜೀವಿಗಳ ನಿಕಟ ಸಹಬಾಳ್ವೆಯಿಂದಾದ ಯಮಳ ಜೀವಿಗಳು. ಇತರ ಜೀವಿಗಳು ಬದುಕಲಾರದ ಕಠಿಣ ಪ್ರದೇಶಗಳಲ್ಲಿ ಕಲ್ಲು ಹೂಗಳು ಬದುಕಬಲ್ಲವು. ಆದರೆ ಕಲ್ಲು ಹೂಗಳ ಘಟಕಗಳಾದ ಶೈಲವ, ಶಿಲೀಂದ್ರಗಳೇ ಪ್ರತೀಕವಾಗಿ ಇಲ್ಲಿ ಬದುಕಲಾರವು. ಹಾಗಾದರೆ ಕಲ್ಲುಹೂಗಳಿಗೆ ಇದು ಹೇಗೆ ಸಾಧ್ಯ? ಕಲ್ಲು ಹೂಗಳಲ್ಲಿ, ವಾತವರದಿಂದ ನೀರನ್ನು ಹೇರುವ ಕೆಲಸವನ್ನು ಶಿಲೀಂಧ್ರವು ಮಾದಿದರೆ, ಸೂರ್ಯನ ಬೆಳಕು, ನೀರು, ಕಾರ್ಬನ್ ಡೈ ಆಕ್ಶೈಡ್ ಗಳನ್ನು ಉಪಯೋಗಿಸಿಕೊಂಡು ಆಹಾರ ತಯಾರಿಸುವ ಕೆಲಸವನ್ನು ಶೈವಲವು ಮಾಡುವುದು. ನೀರು, ಆಹಾರಗಳನ್ನು ಎರಡೂ ಹಂಚಿಕೊಳ್ಳುವುವು. ಆದುದರಿಂದಲೇ ಬರಡು ಪ್ರದೇಶಗಳಲ್ಲಿ ಇವು ಬದುಕಬಲ್ಲವು. ಎರಡು ವಿಭಿನ್ನ ಜೀವಿಗಳ ಶಾಶ್ವತ ಒಗ್ಗೂಡುವಿಕೆಯಿಂದ ಕಲ್ಲು ಹೂಗಳು ಸಹಬಾಳ್ವೆಗೆ ಉತ್ತಮ ಉದಾಹರಣೆಗಳು ಎನಿಸಿವೆ. ಇಂತಹ ಜೀವನದಿಮ್ದ ಧ್ರುವ ಪ್ರದೇಶಗಳ ಹಿಮಗಡ್ಡೆಗಳ ಮೇಲೂ ಇವು ಸಮೃದ್ಧವಾಗಿ ಬೆಳೆಯಬಲ್ಲವು. ಹಿಮಾಲಯ ಪರ್ವಗಗಳಲ್ಲಿ ೫೫೫೦ ಮೀಟರ್ ಅಡಿಗಳ ಎತ್ತರ ಪ್ರದೇಶಗಳಲ್ಲೂ ಇವುಗಳ ಜೀವನ ನಿರಾತಂಕ.

ಸುಮಾರು ೧೫೦೦೦ ಪ್ರಬೇದಗಳ ಕಲ್ಲುಹೂಗಳಿವೆ. ಇವುಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ವಿಭಾಗಿಸುತ್ತಾರೆ. ಬಂಡೆ, ತೊಗಟೆಗಳಿಗೆ ಪೂರ್ತ ಅಂಟಿ ಬೆಳೆಯುವ ಕ್ರಸ್ಟೋಸ್ ಕಲ್ಲು ಹೂಗಳು, ಎಲೆಯಂತೆ ಹಬ್ಬಿ ಬೆಳೆಯುವ ಪೋಲಿಯೋಸ್ ಕಲ್ಲು ಹೂಗಳು ಹಾಗೂ ಕವಲೊಡೆದ ಕಡ್ಡಿಯಾಕೃತಿಯ ಪ್ರೊಟಿಯೋಸ್ ಕಲ್ಲು ಹೂಗಳು ಮೊದಲನೆಯ ಗುಂಪು ಒಣ ಪ್ರದೇಶಗಳಿಗೂ ಎರಡನೆಯದು ಗುಂಪು ಒಣ ಪ್ರದೇಶಗಳಿಗೂ, ಎರಡನೆಯದು ಸ್ವಲ್ಪ ಮಳೆಬೀಳುವ ಪ್ರದೇಶಗಳಿಗೂ, ಕೊನೆಯದು ತೇವಾಂಶಗಳಿರುವ ಪ್ರದೇಶಗಳಿಗು ಹೊಂದಿ ಬೆಳೆಯುವಂತಹವು. ಕಲ್ಲುಹೂಗಳು ಗುಂಡು ಸೂಜಿಯ ತಲೆಯ ಗಾತ್ರದಿಂದ ತೊಡಗಿ ಒಂಬತ್ತು ಅಡಿಗಳವರೆಗಿನ ಗಾತ್ರ ವ್ಯತ್ಯಾಸ ಪ್ರದರ್ಶಿಸುತ್ತವೆ.

ಕೆಲವು ಕಲ್ಲುಹೂಗಳು ವಿಚಿತ್ರ ಜೀವನ ನಡೆಸುತ್ತದೆ. ಕಲ್ಲು ಜೀವಿಗಳು ಅತಿ ನಿಧಾನವಾಗಿ ಬೆಳೆಯುವ ಜಿವಿಗಳು, ಕೆಲವು ಒಂದು ವರ್ಷದಲ್ಲಿ ಒಂದು ಮಿ.ಮೀ ನಷ್ಟ ಬೆಳೆಯಲಾರವು. ಹೆಚ್ಚೆಂದರೆ, ಒಂದು ಸೆ.ಮಿ ಗಿಂತ ಹೆಚ್ಚಿನ ವಾರ್ಷಿಕ ಬೆಳವಣಿಗೆ ಇವಕ್ಕಿಲ್ಲ. ಉತ್ತರ ಧ್ರುವ ಪ್ರದೇಶಗಳ ಕೆಲವು ಕಲ್ಲು ಹೂಗಳ ಪ್ರಯ ೪೦೦೦ ವರ್ಷಗಳಂತೆ.

ಜೌಷಧಿ, ಬಣ್ಣ, ಲಿಟ್ಮಸ್ ಕಾಗದ, ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಕಲ್ಲು ಹೂಗಳ ಬಳಕೆಯಾಗುತ್ತದೆ. ಕಲ್ಲು ಬಂಡೆಳಿಂದ ಮಣ್ಣುಂಟಾಗುವಲ್ಲಿ ಕಲ್ಲು ಹೂಗಳ ಪಾತ್ರ ಗಣನೀಯ.