ಸದಸ್ಯ:Albi thomas aloy
ಜೀನ್ಸ್ ಮತ್ತು ಜೀನ್ ಥೆರಫಿ
ತಂದೆ ತಾಯಿಯರ ವ್ಯಕ್ತಿತ್ವ, ಗುಣಲಕ್ಷಣ ಹಾಗೂ ಅವರಲ್ಲಿದ್ದ ಕೆಲವು ಕಾಯಿಲೆಗಳು ಸಹ ಅವರ ಮಕ್ಕಳಲ್ಲೂ ಪ್ರಕಟವಾಗುವುದನ್ನು ಕಾಣಬಹುದು. ಹಾಗೆ ಹುಟ್ಟಿ ಥೆರಫಿ ಪಡೆದ ಲಕ್ಷಣಗಳು ಮತ್ತು ವ್ಯಾಧಿಗಳು ಬದಲಿಸಲಾಗದ್ದೆಂಬ ನಂಬಿಕೆ ಕೂಡ ಇತ್ತು. ನಮ್ಮ ದೇಹದ ಜೀವಕೋಶಗಳ ಬೀಜ ಕೇಂದ್ರದಲ್ಲಿರುವ ವರ್ಣತಂತುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅವುಗಳಲ್ಲಿರುವ ವಂಶವಾಹಿ ಜೀನ್ಸ್ ಗಳ ಮೂಲಕ ಕುಟುಂಬದವರ ಅನುವಂಶೀಯ ಲಕ್ಷಣಗಳು ಮುಂದಿನ ಸಂತತಿಗೆ ರವಾನೆಯಾಗುತ್ತವೆಂಬುದು ಈಗ ಸಾಬೀತಾಗಿದೆ.
ಜೀನ್ಸ್ ಗಳ ರಚನೆ ಸಂಕೀರ್ಣ ರೀತಿಯದು, ಅವು ಮೂಲಭೂತವಾಗಿ ಡೀ-ಆಕ್ಸೀ ರೈಬೋ ನ್ಯೂಕ್ಲಿಯಿಕ್ ಆಸಿಡ್ ಡಿ.ಎನ್.ಎ ಮತ್ತು ರೈಬೋನ್ಯೂಕ್ಲಿಯಿಕ್ ಆಸಿಡ್ ಆರ್.ಎನ್.ಎ ಎಲೆಕ್ಟ್ರಾನಿಸಕ್ ಸುಕ್ಷ್ಮ ದರ್ಶಕದ ಮೂಲಕ ವರ್ಣತಂತು ಮತ್ತು ಜೀನ್ ಗಳನ್ನು ಸಾವಿರ ಲಕ್ಷಪಟ್ಟು ಹಿಗ್ಗಿಸಿ ನೋಡಿದಾಗ ಪ್ರತಿಯೊಂದು ಜೀನೂ ಡಿ.ಎನ್.ಎ ಸರಪಳಿಯ ಒಂದು ಭಾಗವಾಗಿರುವುದು ಕಂಡುಬರುತ್ತದೆ. ಪ್ರತಿಯೊಮ್ದು ಡಿ.ಎನ್.ಎ ಯೂ ಅಡಿನೀನ್, ಸೈಟೋಸಿಸ್, ಗ್ವುವನೀನ್, ಡೈಮೀನ್, ಟೈರೋಸೀನ್ ಮುಂತಾದ ನ್ಯೂಕ್ಲಿಯೋಟೈಡ್ ಗಳಿಂದಾಗಿರುತ್ತದೆ. ಡಿ.ಎನ್.ಎ ಯ ಈ ನ್ಯೂಕ್ಲಿಯೋಟೈಡ್ ಗಳೇ ವ್ಯಕ್ತಿಯ ಗುಣಲಕ್ಷಣಗಳ ಅನುವಮ್ಶೀಯತೆಯ ಸೂತ್ರವನ್ನು ಹೊಂದಿದ್ದು ಅವನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಮುಂಸಾಗಾಣಿಕೆ ಮಾಡುವ ಅಧ್ವರ್ಯಗಳೆಂದೇ ಈಗ ನಂಬಲಾಗಿದೆ. ಈ ಕಾರ್ಯವನ್ನು ಡಿ.ಎನ್.ಎ ಯೂ ತನ್ನ ಸಂದೇಶವಾಹಕ ಹಾಗೂ ಕಾರ್ಯ ನಿರ್ವಾಹಕ ಆರ್.ಎನ್.ಎ ಯ ಮೂಲಕ ಒಂದು ತಲೆಮಾರಿನಿಮ್ದ ಇನ್ನೊಂದು ತಲೆಮಾರಿಗೆ ಸಾಗಿಸುವ ಕಾರ್ಯವನ್ನು ಮಾಡುತ್ತದೆ. ದೇಹದ ರಚನೆ ಮತ್ತು ಅದರ ವಿವಿಧ ಕಾರ್ಯಕಲಾಪಗಳಿಗೆ ಅವಶ್ಯಕವಾದ ಪ್ರೊಟೀನುಗಳನ್ನು ಅವು ತಯಾರಿಸುತ್ತದೆ. ಅಂತಹ ಒಂದು ಜೀನ್ ನ ರಚನೆ ಅಥವಾ ಕಾರ್ಯಕಲಾಪಗಳಲ್ಲಿ ವ್ಯತ್ಯಾಸ ಉಂಟಾದರೆ ಅದರಿಂದ ಸಂಶ್ಲೇಷಣೆಯಾಗುವ ಪ್ರೊಟೀನ್ ಸಹಾ ವ್ಯತ್ಯಾಸವಾಗುತ್ತದೆ. ಇಲ್ಲದೆ ಅದರ ಕೊರತೆಯುಂಟಾಗುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಜೀನ್ ಗಳಲ್ಲಿ ಇಂತಹ ವ್ಯತ್ಯಾಸಗಳುಂಟಾದಾಗಲೇ ಆ ಜನ ನ್ಯೂನತೆ ಇಲ್ಲವೆ ಅನುವಂಶಿಕ ಕಾಯಿಲೆಗಳು ಉಂಟಾಗುವುದು.
ಜೀನ್ ಗಳಲ್ಲಿ ಉಂಟಾಗಬಹುದಾದ ಇಂತಹ ದೋಷಗಳನ್ನು ಶಿಶು ಗರ್ಭಾವಸ್ಥೆಯಲ್ಲಿರುವಾಗಲೇ ಕಂಡು ಹಿಡಿಯುವುದು ಈಗ ಸಾಧ್ಯವಾಗಿದೆ. ಈ ತರಹದ ದೋಷಾಯುಕ್ತ ಜೀನ್ ಗಳನ್ನು ತೆಗೆದುಹಾಕಿ ಅವುಗಳ ಜಾಗದಲ್ಲಿ ಪ್ರಯೋಗಾಲಯದಲ್ಲಿ ತಯಾರಿಸಿದ ಇಚ್ಚಿತ ಡಿ.ಎನ್.ಎ ತುಂಡುಗಳನ್ನು ಸೇರಿಸುವ ಪ್ರಯತ್ನಗಳು ಫಲಪ್ರದವಾಗುತ್ತಿರುವ ವರದಿಗಳಿವೆ.
ಈ ವಿಧಾನವನ್ನು ಜಿನೆಟಿಕ್ ಇಂಜಿನಿಯರಿಂಗ್ ಅಥವಾ ಜೀನ್ ಥೆರಫಿ ಎನ್ನಲಾಗುತ್ತದೆ. ಪ್ರಸ್ತುತ ಇತರ ಹಲವು ಜನ ಕಾಯಿಲೆಗಳೇಅಲ್ಲದೆ ಕ್ಯಾನ್ಸರ್ ನಂಥ ವ್ಯಾಧಿಯ ಚಿಕಿತ್ಸೆಯಲ್ಲೂ ಈ ವಿಧಾನ ಯಶಸ್ವಿಯಾಗಿ ಪ್ರಯೋಗಿಸಲ್ಪಡುತ್ತಿದೆ.