ಸದಸ್ಯರ ಚರ್ಚೆಪುಟ:AMULYA M GOWDA

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ AMULYA M GOWDA,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ಲೇಖನ ಸೇರಿಸುವಾಗ

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ

Palagiri (ಚರ್ಚೆ) ೦೭:೫೯, ೧೩ ಜುಲೈ ೨೦೧೫ (UTC)

ಕರ್ನಾಟಕ ಚಿತ್ರಕಲಾ ಪರಂಪರೆ 


ವ್ಯಕ್ತಿ ವಿಶಿಷ್ಟ ಸಾಧನೆಯ ಪರಮಾರಾಧಕರಂತೆ ಸೃಷ್ಟಿಸುತ್ತಿರುವ, ೨೧ನೇ ಶತಮಾನದ ಪ್ರಾರಂಭದ ಇಂದಿನ ದಿನಗಳ ಕನ್ನಡ ಸಂಸ್ಕೃತಿಯ ದೃಶ್ಯಕಲೆಯ ಕಲಾವಿದ/ ಕಲಾವಿದೆಯರ ಅಪೂರ್ಣ ವರ್ತಮಾನ, ಇತಿಹಾಸವಾಗಲಿರುವ ಭವಿಷ್ಯದಲ್ಲಿ ವಿಶಿಷ್ಟ ಆಯಾಮಗಳನ್ನು ಪಡೆದುಕೊಳ್ಳಬಹುದು. ಆದರೆ ಈ ಹಿಂದಿನ ನಮ್ಮ ದೃಶ್ಯಕಲೆಯ ಇತಿಹಾಸ ನಮಗೆ ತೆರೆದುಕೊಟ್ಟಿರುವ ಕೌತುಕದ ಕಿಟಕಿಗಳೇನೂ ಸಾಮಾನ್ಯವಲ್ಲ! ಆ ದೃಶ್ಯಕಲೆಯ ರೂಪ, ಅಂಶಗಳ ಸೃಷ್ಟಿ ಪ್ರಕ್ರಿಯೆಯ ಮೊದಲ ಹೆಜ್ಜೆಗಳು ನಿಗೂಢವೂ ಹೌದು. ಆ ಮೊದಲ ಹೆಜ್ಜೆಗಳ, ಆದಿಮಾನವನ ಕಲೆಯನ್ನು ಇತಿಹಾಸ ಪೂರ್ವಕಲೆ, ಪ್ರಾಗೈತಿಹಾಸಿಕ ಕಲೆ ಎಂದೂ ಕರೆಯಲಾಗಿದೆ.

  ಮಾನವ ಬೇಟೆಯಾಡುತ್ತಿದ್ದಾಗ ಮತ್ತು ಆಹಾರೋತ್ಪಾದನೆ ಮಾಡಲು ಕಲಿತಾಗಿನ ಹಾಗೂ ಲೋಹಗಳ ಉಪಯೋಗ ಕಂಡು ಕೊಂಡ ಕಾಲಗಳಲ್ಲಿ ಸೃಷ್ಟಿಯಾದ ಕಲೆಯ ವಿವಿಧ ಘಟ್ಟಗಳು ಇತಿಹಾಸ ಪೂರ್ವ ಕಲೆಯ ಪುಟಗಳಾಗಿ ಅರಳಿವೆ. ಮಾನವನ ಮೂಲಭೂತ ಅವಶ್ಯಕತೆಗಳಾದ ಊಟ, ವಾಸ-ಬಟ್ಟೆಗಳೊಂದಿಗೆ ಬದುಕುವ ಅನ್ವೇಷಣೆಯೊಂದಿಗೆ, ವಿವಿಧ ಹಂತಗಳ ಹಲವು ಹಿಮಯುಗಗಳ ನಂತರದ, ಹಳೆಯ ಶಿಲಾಯುಗದ ಅಂತ್ಯದ ಕಾಲದಲ್ಲಿ ಹಾಸುಹೊಕ್ಕು ಈ ಕಲೆ ಬೆಳೆದುಬಂದಿದೆ. ಮೀನು ಹಿಡಿಯುವುದರಲ್ಲಿ ನಿರತರಾಗಿದ್ದು, ಪ್ರಾಣಿಗಳ ಬೇಟೆ ಮತ್ತು ಪ್ರಾಣಿಗಳೊಂದಿಗೆ ಹತ್ತಿರದ ಸಂಬಂಧ, ಅವಲಂಬನೆ ಹೊಂದಿದ ಶಿಲಾಯುಗದ ಜನರಿಂದ ನಮ್ಮ ಕಲೆಯ ವಿನಮ್ರ ಅರಂಭದ ಮಾದರಿಗಳನ್ನು ಕಾಣುತ್ತೇವೆ. ನಂತರದ ಸೂಕ್ಷ್ಮ ಶಿಲಾಯುಗ, ಹೊಸಶಿಲಾಯುಗ, ಶಿಲಾತಾಮ್ರಯುಗ, ಕಬ್ಬಿಣಯುಗದ ಬೃಹತ್ ಶಿಲಾಯುಗ ಮತ್ತು ಈ ಇತಿಹಾಸ ಪೂರ್ವ ಕಾಲವೇ ಅಲ್ಲದೆ, ಇತಿಹಾಸದ ಆರಂಭದ ಕಾಲಗಳಲ್ಲೂ ಕಲೆ ತನ್ನದೇ ಆದ ರೀತಿಯಲ್ಲಿ ಮುನ್ನಡೆಯಿತು. ಈ ಮೊದಲ ಹೆಜ್ಜೆಗಳಲ್ಲಿ ನಮಗೆ ಬಹುಷಃ ಇನ್ನೂ ಗೊತ್ತಿರದ ಹಲವು ಸಾವಿರ ವರ್ಷಗಳ ತಾಲೀಮು ಇದ್ದಿರಬಹುದು! ಹಿಮಯುಗಗಳಲ್ಲಿ ಗುಹೆಗಳನ್ನು ಆಶ್ರಯಿಸಲೇಬೇಕಿದ್ದ ಮಾನವ ಹಲವು ಗುಂಪುಗಳಲ್ಲಿ ಗುರುತಿಸಲ್ಪಟ್ಟಿದ್ದಾನೆ. ಅವನ ಬದುಕಿನಲ್ಲಿ ಕಲೆ ಪ್ರಮುಖ ಪಾತ್ರವನ್ನು ವಹಿಸಿರಲೇಬೇಕು. ಒಟ್ಟಾರೆ ಈ ಕೆಲೆಯ ಹೆಜ್ಜೆಗಳನ್ನು ಸ್ಥೂಲವಾಗಿ ಬೇಟೆಗಾರರ ಕಲೆ, ಆಹಾರೋತ್ಪಾದಕರ ಕಲೆ, ಲೋಹಗಾರರ ಕಲೆ ಎಂಬ ಮೂರು ವಿಭಾಗಗಳಲ್ಲಿ ಗಮನಿಸಬಹುದು.
 ಸುಮಾರು ೧೦,೦೦೦ ವರ್ಷಗಳ ಹಿಂದೆ ಆಫ್ರಿಕಾದಿಂದ ಪ್ರಾರಂಭವಾದ ಮಾನವನ ಸಾಮಾಜಿಕ ಚಹರೆಗಳಲ್ಲಿ, ಆದಿಮಕಲೆಯ ಮೊದಲ ಹೆಜ್ಜೆಗಳು ಪಶ್ಚಿಮ ಯೂರೋಪನ್ನು ಆವರಿಸಿ, ನಮ್ಮ ನರ್ಮದಾ ನದಿಯ ಆವರಣಕ್ಕೂ ಧಾವಿಸಿ, ನಂತರ ಪೂರ್ವಏಷ್ಯಾವನ್ನು ಆವರಿಸಿತು. ನರ್ಮದಾ ನದಿಯ ಆಚೀಚೆಯಿಂದ ನಮ್ಮ ದೇಶದ ಉದ್ದಗಲಕ್ಕೂ ಹರಡಿದ್ದ ಈ ಕಲೆಯ ಶೋಧವು ಆಕಸ್ಮಿಕವಾಗಿ ಅಲ್ಲಲ್ಲಿ ೧೮೮೦ರಿಂದ ಪ್ರಾರಂಭವಾಯಿತು. ಬಳ್ಳಾರಿ ಸಮೀಪದ ಕುಪ್ಪಗಲ್ಲು ಗ್ರಾಮದ ಗುಡ್ಡದ ಗುಂಡುಗಳ ಮೇಲೆ ಕುಟ್ಟಿ, ಊರಿ ಬಿಡಿಸಿದ ಚಿತ್ರಗಳನ್ನು ಕಂಡುಕೊಂಡದ್ದು ಆಗಲೆ.

೧೯೩೫ರಲ್ಲಿ ರಾಯಚೂರು ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೆಬೆನಕಲ್ ಗುಡ್ಡಗಳಲ್ಲಿ ಕಂಡುಬಂದ ವರ್ಣಚಿತ್ರ ಗುಹೆಗಳು ಮೂರು. ೧೯೫೭ರಲ್ಲಿ, ದಿವಂಗತ ಡಾ| ವಿಷ್ಣು ಎಸ್. ವಾಕನ್ಕರ್ ಮಧ್ಯಪ್ರದೇಶದಲ್ಲಿ ೭೫೪ ಕಲ್ಲಾಸರೆಗಳ ೫೦೦ರಲ್ಲಿ ಚಿತ್ರಗಳನ್ನು ಕಂಡರು ನಂತರ ದಕ್ಷಿಣ ಭಾರತವನ್ನೂ, ಕರ್ನಾಟಕವೂ ಒಳಗೊಂಡಂತೆ ನೂರಾರು ಸ್ಥಳಗಳಲ್ಲಿ ಶಿಲಾಶ್ರಯ ಚಿತ್ರಗಳು (Rock paintings) ಕಂಡು ಬಂದಿವೆ. ಬೆಂಗಳೂರಿಗೂ ಒಮ್ಮೆ ಬಂದಿದ್ದ ವಾಕನ್ಕರ್ ನಮ್ಮ ರಾಜ್ಯದ ಅಂಥ ಸ್ಥಳಗಳ ಬಗ್ಗೆ ಚರ್ಚಿಸಿ, ದೆಹಲಿಯಿಂದ ಬೆಂಗಳೂರು ತಲುಪುವ ರೈಲುಹಾದಿಯ, ಆಂಧ್ರ, ಕರ್ನಾಟಕ ಗಡಿಭಾಗಗಳ ಬೆಟ್ಟಗಳ ಶಿಲಾಶ್ರಯಗಳನ್ನು ಶೋಧಿಸಲು ನನಗೆ ಸೂಚಿಸಿದ್ದೂ ಉಂಟು. ಹಲವಾರು ಶೋಧಕರು ನಮ್ಮ ರಾಜ್ಯದ ಹಲವೆಡೆ ಇತಿಹಾಸ ಪೂರ್ವ ಕಲೆಯ ಚಹರೆಗಳನ್ನು ಗುರುತಿಸಿದ್ದಾರೆ. ಇನ್ನೂ ಪೂರ್ಣಗೊಂಡಿಲ್ಲದ ಈ ಅನ್ವೇಷಣೆಯಲ್ಲಿ, ಇಡೀಭಾರತದ ಶಿಲಾಯುಗದ ಚಿತ್ರಕಲೆಯನ್ನು ೨೦ ಶೈಲಿಗಳಲ್ಲಿ ವರ್ಗಿಕರಿಸಲಾಗಿದೆ. ಬಾದಾಮಿ, ತೆಕ್ಕಲಕೋಟೆ ಮೊದಲಾದೆಡೆಗಳಲ್ಲಿ ಕೆಂಪು ಅಥವಾ ಕಂದು, ಕೆಂಪು-ಬಿಳುಪು ಬಣ್ಣಗಳ ಚಿತ್ರಗಳು ಕಾಣಿಸಿಕೊಂಡಿವೆ.

 ಕ್ರಿ. ಶ. ೧೩೦೦ರ ನಂತರ ನಮ್ಮ ಆದಿಮಜನರ ಚಿತ್ರಗಳಲ್ಲಿ ಮಬ್ಬಗೆಂಪು, ಕಪ್ಪುಬಣ್ಣದ ಬಳಪ, ಕೆಂಪು, ಕಂದು ಅಥವಾ ಕಪ್ಪುಬಣ್ಣದ ಕಬ್ಬಿಣದ ಅದಿರು . ಕ್ರಿ. ಶ. ೧೩೦೦ರ ನಂತರ ನಮ್ಮ ಆದಿಮಜನರ ಚಿತ್ರಗಳಲ್ಲಿ ಮಬ್ಬಗೆಂಪು, ಕಪ್ಪುಬಣ್ಣದ ಬಳಪ, ಕೆಂಪು, ಕಂದು ಅಥವಾ ಕಪ್ಪುಬಣ್ಣದ ಕಬ್ಬಿಣದ ಅದಿರು ಬಣ್ಣಗಳ ಚಿತ್ರಗಳು ಕಂಡುಬರುತ್ತವೆ. ಹಂಪೆಯ ವಿರೂಪಾಕ್ಷ ದೇವಾಲಯದ ಬಳಿ ಹರಿಯುವ ತುಂಗಭದ್ರ ನದಿಯ ಆಚೆ, ಈಚೆ, ಆನೆಗೊಂದಿಯ ಹುಚ್ಚಪ್ಪಯ್ಯನಮಠದ ಸುತ್ತಮುತ್ತ, ಹಾಗೂ ಆನೆಗೊಂದಿಯಿಂದ ಮುಂದೆ ಪಶ್ಚಿಮಕ್ಕೆ ಸಿಗುವ ರಾಮಾಪುರದ ತಿರುವಿನ ಒನಕೆ ಕಿಂಡಿ ಎಂಬ ಇಕ್ಕಟ್ಟಾದ ಹಾದಿಯ ನಂತರ ಸಿಗುವ ಶಿಲಾಶ್ರಯ ಚಿತ್ರಗಳು ಮನುಷ್ಯ ಪ್ರಾಣಿ, ಬೇಟೆ ಹಾಗೂ ವಿಶಿಷ್ಟ ಆಚರಣೆಯ ಕಂದು-ಬಿಳಿಬಣ್ಣಗಳ ಚಿತ್ರಗಳಿವೆ. ಗುಲ್ಬರ್ಗಾದ ಯಾದ್‌ಗೀರ್ ಬಳಿಯ ಬಳಿಚಕ್ರ, ಬಾದಾಮಿಯ ಸುತ್ತಮುತ್ತಲಿನ ಸಿಡಿಲಫಡಿ, ಸೀತೆದೊಣಿ, ಸೂಳಿಫಡಿ, ಕೋಳಿಫಡಿ ಅಲ್ಲದೆ ರಾಮಗಿರಿಯಿಂಥ ಹಲವು ಸ್ಥಳಗಳಲ್ಲಿ ಇತಿಹಾಸ ಪೂರ್ವ ಚಿತ್ರಗಳಿವೆ. ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ಇತಿಹಾಸ ಪೂರ್ವ ಶಿಲ್ಪವನ್ನೂ ಶೋಧಿಸಲಾಗಿರುವುದು ಸಾಮಾನ್ಯ ಸಂಗತಿಯಲ್ಲ.
 ಹೀಗೆ ನಮ್ಮ ರಾಜ್ಯದ ನೂರಾರು ಸ್ಥಳಗಳಲ್ಲಿ ಇಂಥ ಚಿತ್ರಗಳ ಸೆಳಕುಗಳಿವೆ. ಹಲವೆಡೆ ಅನ್ವೇಷಣೆಗಳು ಆಸಕ್ತರಿಂದ ಮುಂದುವರೆದಿವೆ. ಇಂಥ ಆದಿಮಜನರ ಕಲೆ ಮುಂದಿನ ಇತಿಹಾಸ ಕಾಲದ ಕಲೆಯ ಬೆಳವಣಿಗೆಗಳ ಕಾಲಕ್ಕೆ ತಮ್ಮ ಗಮನಾರ್ಹ ಪ್ರಭಾವಗಳನ್ನು ಬೀರಿದವಲ್ಲದೆ, ತಮ್ಮದೇ ಆದ ವಿಶಿಷ್ಟ ಛಾಪನ್ನು ಹೊಂದಿ ಅನನ್ಯವಾಗಿದೆ. ಈ ಇತಿಹಾಸಪೂರ್ವ ಮತ್ತು ಇತಿಹಾಸ ಕಾಲದ ಚಿತ್ರಕಲೆಯ ಕೊಂಡಿಯನ್ನು ಬಾದಾಮಿಯ ಗುಹೆಗಳಲ್ಲಿ ಹಾಗೂ ಆ ಪರಿಸರದ ಸುತ್ತಲಿನ ಗುಹೆಗಳಲ್ಲಿ ಇಂದಿಗೂ ಕಾಣಬಹುದಾಗಿದೆ. ಇದು ನಮ್ಮ ಕಲೆಯ ಒಂದು ವಿಶೇಷ.
 ಬಹುಷಃ ಮಾಂತ್ರಿಕ ಕಾರಣಗಳಿಗಾಗಿ ಸೃಷ್ಟಿಯಾದ ಈ ಚಿತ್ರಗಳು ಬಹುತೇಕ ಬಾಹ್ಯರೇಖಾ ರೂಪ ಹಾಗೂ ಚಪ್ಪಟೆ ಬಣ್ಣಗಳ ರೂಪಗಳೇ ಆಗಿದ್ದರೂ, ಆದಿಮ ಜನರು ಆ ಪ್ರಾಣಿಗಳೊಂದಿಗೆ ಹೊಂದಿದ್ದ ನಿಕಟತೆ, ಸಹ ಸಂಬಂಧ ಇತ್ಯಾದಿಗಳಿಂದಾಗಿ ತೀವ್ರಭಾವ ಹಾಗೂ ಶಕ್ತಿಶಾಲೀ ರೂಪಕಲ್ಪನೆಗಳಿಂದ ಕೂಡಿವೆ. ಆ ರೂಪಗಳ ಸೌಂದರ್ಯ ಇಂದಿಗೂ ನಮ್ಮನ್ನು ಆಕರ್ಷಿಸುತ್ತದೆ. ಈ ಚಿತ್ರಗಳ `ವಿಕೃತಿ’ ಸೌಂದರ್ಯ, ಅವರ ಸಾಂಪ್ರದಾಯಿಕ, ಸಾಂಕೇತಿಕ ಶೈಲಿಗಳ ಪ್ರತೀಕಗಳಾಗಿದ್ದು ಅಭಿವ್ಯಕ್ತಿಗೆ ಪೂರಕವಾಗಿ ಸಮರ್ಥವಾಗಿ ದುಡಿಸಿಕೊಳ್ಳಲ್ಪಟ್ಟಿವೆ. ಪ್ರತಿ ಪಂಗಡದ ಅನುವಂಶಕ ನಂಬಿಕೆಗಳು, ಆಚಾರಗಳು ಮಡುಗೊಂಡಿವೆ. ಸಾಮಾನ್ಯವಾಗಿ ಮಾನವಾಕಾರಗಳ ಜತೆ ಜತೆಗೆ ಪ್ರಾಣಿಗಳೂ ಕಾಣಿಸಿಕೊಂಡಿವೆ. ಕೆಲವೊಮ್ಮೆ ಇವೆರಡರ ಸಂಕೀರ್ಣ ರೂಪಗಳ ಸೃಷ್ಟಿಗೆ ಮತೀಯ ನಂಬಿಕೆಗಳು ಸ್ಫೂರ್ತಿನೀಡಿರಬಹುದು. ಇವುಗಳ ನಾಟಕೀಯ ಕಲ್ಪನಾ ನಿರೂಪಣೆಯೋ, ಅಧಿಕಾರ ಅಥವಾ ಗೌರವದ ಸೂಚಕವೋ ಆ ಜನರ ಅಭಿವ್ಯಕ್ತಿ ಗುರಿಯಾಗಿದೆ. ಈ ದೃಶ್ಯಾಭಿವ್ಯಕ್ತಿಯಲ್ಲಿ ಆದಿಮ ಜನರ ಉಬ್ಬು ಶಿಲ್ಪ ಹಾಗೂ ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿಯೂ ಕಂಡುಕೊಳ್ಳಲಾದ ಪೂರ್ಣಶಿಲ್ಪ, ವರ್ಣಚಿತ್ರಗಳು ಮೂಡಿಬಂದಿವೆ. ಬಂಡೆಗಳನ್ನು ಕೊರೆದು ಮೂಡಿಸಿದ ರೇಖಾಚಿತ್ರಗಳೂ ಗಮನಾರ್ಹ.

ಮೆಗಾಪಿಕ್ಸೆಲ್ ಎಂಬ ಮಾಯೆ[ಬದಲಾಯಿಸಿ]

ಮೆಗಾಪಿಕ್ಸೆಲ್ ಎಂಬ ಮಾಯೆ

ಡಿಜಿಟಲ್ ಕ್ಯಾಮರ ಕೊಳ್ಳುವಾಗ ಎದುರಾಗುವ ಒಂದು ಬಹುಮುಖ್ಯ ಪದ ಮೆಗಾಪಿಕ್ಸೆಲ್. ಹೆಚ್ಚು ಮೆಗಾಪಿಕ್ಸೆಲ್ ಆದಷ್ಟು ಕ್ಯಾಮರ ಒಳ್ಳೆಯದು ಎಂಬ ಭಾವನೆ ಜನರಲ್ಲಿದೆ. ವ್ಯಾಪಾರಿಗಳೂ ಅದಕ್ಕೆ ನೀರೆರೆಯುತ್ತಾರೆ. ಆದರೆ ಈ ಮೆಗಾಪಿಕ್ಸೆಲ್ ಎಷ್ಟು ಮಹತ್ವವುಳ್ಳದ್ದು?

ಸಂಖ್ಯಾಮಟ್ಟಕ್ಕಿಂತ ಗುಣಮುಟ್ಟ ಮುಖ್ಯ. ಒಪ್ಪುತ್ತೀರಿ ತಾನೆ? ಇದು ಹಲವು ಕ್ಷೇತ್ರಗಳಿಗೆ ಅನ್ವಯವಾಗುತ್ತದೆ. ಇದು ನಮ್ಮ ಗ್ಯಾಜೆಟ್‌ಗಳ ಲೋಕಕ್ಕೂ ಒಪ್ಪುತ್ತದೆ.

ಕ್ಯಾಮರಾ ಕೊಳ್ಳುವಾಗ ಮೊಟ್ಟಮೊದಲನೆಯ ಪ್ರಶ್ನೆಯೇ ಮೆಗಾಪಿಕ್ಸೆಲ್‌ಗಳದು. “ಸ್ವಾಮಿ ಇದು ನೋಡಿ 12 ಮೆಗಾಪಿಕ್ಸೆಲ್, ಇದಕ್ಕೆ 12 ಸಾವಿರ ಬೆಲೆ. ಅದು ನೋಡಿ ಎಂಟೇ ಮೆಗಾಪಿಕ್ಸೆಲ್, ಅದಕ್ಕೆ 8 ಸಾವಿರ ಬೆಲೆ. ನಿಮಗೆ ಗೊತ್ತೇ ಇದೆ, ಹೆಚ್ಚು ಮೆಗಾಪಿಕ್ಸೆಲ್ ಇದ್ದಷ್ಟು ಒಳ್ಳೆಯ ಚಿತ್ರ ತೆಗೆಯಬಹುದು. ಅಂದ ಮೇಲೆ 12 ಸಾವಿರದ ಕ್ಯಾಮರಾವನ್ನೆ ಕೊಂಡುಕೊಳ್ಳುತ್ತೀರಿ ತಾನೆ?” ಅಂದ ವ್ಯಾಪಾರಿಯ ಮಾತು ನಿಮ್ಮನ್ನು ಆತನ ವಾದಗಳಿಗೆ ಒಪ್ಪುವಂತೆ ಮಾಡಿಬಿಡುತ್ತದೆ. ಆದರೆ ಈ ಮೆಗಾಪಿಕ್ಸೆಲ್ ಎಂಬ ಮಿಥ್ಯೆಯ ಬಗ್ಗೆ ಸ್ವಲ್ಪ ಕಣ್ಣಾಡಿಸೋಣ.

ಮೊತ್ತಮೊದಲನೆಯದಾಗಿ ಈ ಮೆಗಾಪಿಕ್ಸೆಲ್ ಎಂದರೇನು ನೋಡೋಣ. ಪಿಕ್ಸೆಲ್ (pixel) ಎನ್ನುವುದು picture element ಎನ್ನುವುದರ ಹೃಸ್ವ ರೂಪ. ಗಣಕ ಪರದೆ ಅಥವಾ ಮುದ್ರಿತ ಚಿತ್ರದಲ್ಲಿ ಅಡ್ಡಕ್ಕೆ ಮತ್ತು ನೀಟಕ್ಕೆ ಚುಕ್ಕಿಗಳಿರುತ್ತವೆ. ಚುಕ್ಕಿಗಳ ಗಾತ್ರ ಅತಿ ಚಿಕ್ಕದಾಗಿರುತ್ತದೆ. ಈ ಚುಕ್ಕಿಗಳು ಒಟ್ಟು ಸೇರಿ ಚಿತ್ರವಾಗುತ್ತದೆ. ಈ ಒಂದು ಚುಕ್ಕಿಯೇ ಪಿಕ್ಸೆಲ್. ಮೆಗಾ ಎಂದರೆ 106. ಅಂದರೆ ಹತ್ತು ಲಕ್ಷ ಅರ್ಥಾತ್ ಒಂದರ ಮುಂದೆ ಆರು ಸೊನ್ನೆ ಬರೆಯಬೇಕು. ಆದರೆ ಗಣಕ ಪರಿಭಾಷೆಯಲ್ಲಿ ಮೆಗಾ ಎಂದರೆ 10,48,576.

ಈಗ ಇನ್ನೊಂದು ಪದವನ್ನು ತಿಳಿಯೋಣ. ಅದುವೇ ರೆಸೊಲೂಶನ್. ಒಂದು ಚಿತ್ರದಲ್ಲಿ ಅಡ್ಡಕ್ಕೆ ಮತ್ತು ನೀಟಕ್ಕೆ ಎಷ್ಟು ಚುಕ್ಕಿಗಳನ್ನು ಪೇರಿಸಿದ್ದೀರಿ ಎಂಬುದೇ ರೆಸೊಲೂಶನ್. ಸಾಮಾನ್ಯ ಗಣಕ ಪರದೆಯ ರೆಸೊಲೂಶನ್ 1024 x 768 ಇರುತ್ತದೆ. ಇತರೆ ರೆಸೊಲೂಶನ್‌ಗಳು 640 x 480, 800 x 600, ಇತ್ಯಾದಿ. 1024 x 768 ಎಂದರೆ ಪರದೆಯ ಅಡ್ಡಕ್ಕೆ 1024 ಚುಕ್ಕಿಗಳಿವೆ ಮತ್ತು ನೀಟಕ್ಕೆ 768 ಚುಕ್ಕಿಗಳಿವೆ ಎಂದರ್ಥ. ಈ ಚುಕ್ಕಿಗಳ ಸಂಖ್ಯೆ ಜಾಸ್ತಿಯಿದ್ದಷ್ಟು ಪರದೆ ಒಳ್ಳೆಯದು ಮತ್ತು ಮೂಡಿಬಂದ ಚಿತ್ರ ನೈಜವಾದುದಕ್ಕೆ ಹೆಚ್ಚು ಸಮೀಪವಾಗಿರುತ್ತದೆ. ಚುಕ್ಕಿಗಳು ಸೇರಿ ಚಿತ್ರವಾಗುತ್ತದೆ. ಇದು ಗಣಕ ಪರದೆಯ ರೆಸೊಲೂಶನ್.

ಮುದ್ರಣಕ್ಕೆ ಬಂದಾಗ ಇನ್ನೊಂದು ರೆಸೊಲೂಶನ್ ಅಸ್ತಿತ್ವದಲ್ಲಿದೆ. ಅದು ಸಾಮಾನ್ಯವಾಗಿ ಒಂದು ಇಂಚಿಗೆ 300 ಅಥವಾ 600 ಇರುತ್ತದೆ. ಇದನ್ನು dots per inch (DPI) ಎಂದು ಕರೆಯುತ್ತಾರೆ. ಇದನ್ನು ಮುದ್ರಣದ ಸಾಂದ್ರತೆ ಎಂದೂ ಕರೆಯಬಹುದು. ಇದೇ ರೀತಿ ಪರದೆಗೂ ಸಾಂದ್ರತೆಯಿದೆ. ಅದು ಸಾಮಾನ್ಯವಾಗಿ ಒಂದು ಇಂಚಿಗೆ 102 ಚುಕ್ಕಿ ಆಗಿರುತ್ತದೆ.

ಈಗ ಮೆಗಾಪಿಕ್ಸೆಲ್ ಕಡೆಗೆ ಬರೋಣ. 3 ಮೆಗಾಪಿಕ್ಸೆಲ್ ಕ್ಯಾಮರಾದಲ್ಲಿ ತೆಗೆದ ಚಿತ್ರದಲ್ಲಿ ಅಡ್ಡಕ್ಕೆ 2,048 (horizontal) ಮತ್ತು ನೀಟಕ್ಕೆ 1,536 (vertical) ಪಿಕ್ಸೆಲ್‌ಗಳಿರುತ್ತವೆ, ಅರ್ಥಾತ್ 31,45,728 ಚುಕ್ಕಿಗಳಿರುತ್ತವೆ. ಈ ಲೆಕ್ಕಾಚಾರದಲ್ಲಿ ಅಡ್ಡ ಮತ್ತು ನೀಟಗಳ ಗುಣಲಬ್ಧವು ಗಣನೆಗೆ ಬರುತ್ತದೆ. ಆದುದರಿಂದ ಮೆಗಾಪಿಕ್ಸೆಲ್ ಅನ್ನು ದುಪ್ಪಟ್ಟು ಮಾಡಿದಾಗ ಒಂದು ಆಯಾಮದಲ್ಲಿ ಅಂದರೆ ಉದ್ದ ಅಥವಾ ನೀಟದಲ್ಲಿ ಅದರ ಗುಣಮಟ್ಟದಲ್ಲಿ ಕೇವಲ 40% ಹೆಚ್ಚಳ ಆಗಿರುತ್ತದೆ. ಇದನ್ನು ಸ್ವಲ್ಪ ವಿಶದೀಕರಿಸೋಣ. 10 ಮೆಗಾಪಿಕ್ಸೆಲ್ ಚಿತ್ರದ ಗಾತ್ರ 3888 x 2592 ಆಗಿರುತ್ತದೆ. 5 ಮೆಗಾಪಿಕ್ಸೆಲ್‌ನ ಚಿತ್ರದ ಗಾತ್ರ 2816 x 1880 ಆಗಿರುತ್ತದೆ. ಉದ್ದವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ 3888 ಅನ್ನುವುದು 2816 ಕ್ಕಿಂತ ಕೇವಲ 38% ಜಾಸ್ತಿಯಾಗಿರುತ್ತದೆ, ದುಪ್ಪಟ್ಟು ಆಗಿರುವುದಿಲ್ಲ!

ಈ ಮೆಗಾಪಿಕ್ಸೆಲ್ ಮತ್ತು ರೆಸೊಲೂಶನ್ ಕೊನೆಗೊಳ್ಳುವುದು ಮುದ್ರಣದಲ್ಲಿ. ಅಲ್ಲಿ ಅದು ಇಂಚಿಗೆ ಸಾಮಾನ್ಯವಾಗಿ 300 ಇರುತ್ತದೆ. ನಾವು ಯಾವ ಗಾತ್ರದಲ್ಲಿ ಫೋಟೋವನ್ನು ಮುದ್ರಿಸುತ್ತೇವೆ ಎಂಬುದು ನಮಗೆ ಯಾವ ರೆಸೊಲೂಶನ್ ಬೇಕು ಎಂಬುದನ್ನು ನಿರ್ಧರಿಸುತ್ತದೆ. ಇಂಚಿಗೆ 300 ಚುಕ್ಕಿ ಅಂದರೆ 6 x 4 ಇಂಚಿನ ಫೋಟೋದ ರೆಸೊಲೂಶನ್ 1600 x 1200 ಆಗುತ್ತೆ. ಇದು 2 ಮೆಗಾಪಿಕ್ಸೆಲ್‌ಗಳಿಗೀಮತಲೂ ಸ್ವಲ್ಪ ಕಡಿಮೆಯೇ. ಹಾಗಿದ್ದರೆ ನಿಮಗೆ 10, 18, ಮೆಗಾಪಿಕ್ಸೆಲ್‌ಗಳು ನಿಜವಾಗಿಯೂ ಬೇಕೇ? 12 ಮೆಗಾಪಿಕ್ಸೆಲ್ ರೆಸೊಲೂಶನ್‌ನಲ್ಲಿತೆಗೆದ ಚಿತ್ರವನ್ನು ನೀವು ಸಿನಿಮಾ ಪೋಸ್ಟರ್‌ಗಳ ಗಾತರದಲ್ಲಿ ಮೆಜೆಸ್ಟಿಕ್ ಬಸ್‌ಸ್ಟ್ಯಾಂಡ್‌ನಲ್ಲಿ ತೂಗುಹಾಕುವಷ್ಟು ದೊಡ್ಡ ಗಾತ್ರದಲ್ಲಿ ಮುದ್ರಿಸಬಹುದು.

ಇಷ್ಟೆಲ್ಲ ಹೇಳಿದ ಮೇಲೂ ಈ ಮೆಗಾಪಿಕ್ಸೆಲ್ ರೆಸೊಲೂಶನ್ ಕೆಲವೊಮ್ಮೆ ಮಹತ್ವ ಪಡೆಯುತ್ತದೆ. ಅದು ಅತ್ಯುತ್ತಮ ಗುಣಮಟ್ಟದ ಚಿತ್ರ ಬೇಕಾದಾಗ. ಪೋಸ್ಟ್‌ಕಾರ್ಡ್ ಗಾತ್ರದ (6 x 4 ಇಂಚು) ಫೋಟೋದಲ್ಲಿ ಒಂದು ಹೂವಿನ ಪರಾಗ ರೇಣುಗಳು ಸ್ಪಷ್ಟವಾಗಿ ಮೂಡಿ ಬರಬೇಕಾದರೆ ನೀವು ಮೇಲೆ ನೀಡಿದ ಲೆಕ್ಕಾಚಾರದಂತೆ ಎರಡು ಮೆಗಾಪಿಕ್ಸೆಲ್‌ನಲ್ಲಿ ಫೊಟೋ ತೆಗೆದರೆ ಅದು ಅಷ್ಟು ಚೆನ್ನಾಗಿ ಮೂಡಿಬರುವುದಿಲ್ಲ. ಅದರ ಬದಲು ಹತ್ತು ಮೆಗಾಪಿಕ್ಸೆಲ್‌ನಲ್ಲಿ ತೆಗೆದು ನಂತರ ಫೋಟೋಶಾಪ್‌ನಲ್ಲಿ ಅದನ್ನು 6 x 4 ಇಂಚಿನ ಗಾತ್ರಕ್ಕೆ ಕುಗ್ಗಿಸಿದರೆ ಚಿತ್ರ ತುಂಬ ಚೆನ್ನಾಗಿ ಮೂಡಿಬರುತ್ತದೆ. ಇದು ಎಲ್ಲ ವೃತ್ತಿನಿರತ ಛಾಯಾಗ್ರಾಹಕರಿಗೆ ಗೊತ್ತಿರುವ ಸತ್ಯ.

ಈ ಮೆಗಾಪಿಕ್ಸೆಲ್‌ನ ಜೊತೆ ಕ್ಯಾಮರಾದ ಸಂವೇದಕ (sensor) ಎಷ್ಟು ದೊಡ್ಡದಿದೆ ಮತ್ತು ಯಾವ ಗುಣಮಟ್ಟದ್ದು ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ. ಈ ಸಂವೇದಕಗಳು ದೊಡ್ಡದಿದ್ದಷ್ಟೂ ಒಳ್ಳೆಯದು. ಆದುದರಿಂದಲೇ ಡಿಜಿಟಲ್ ಕ್ಯಾಮರಾದ 8 ಮೆಗಾಪಿಕ್ಸೆಲ್ ಮೊಬೈಲ್ ಫೋನಿನ 8 ಮೆಗಾಪಿಕ್ಸೆಲ್‌ಗಿಂತ ಎಷ್ಟೋ ಪಾಲು ಉತ್ತಮ ಚಿತ್ರ ನೀಡುವುದು. ಯಾಕೆಂದರೆ ಡಿಜಿಟಲ್ ಕ್ಯಾಮರಾದ ಸಂವೇದಕ ದೊಡ್ಡದಿರುತ್ತದೆ. ಇದೇ ಕಾರಣಕ್ಕೆ ಎಸ್‌ಎಲ್‌ಆರ್ ಕ್ಯಾಮರಾಗಳ ಚಿತ್ರಗಳ ಗುಣಮಟ್ಟ ಏಮ್ ಆಂಡ್ ಶೂಟ್ ಕ್ಯಾಮರಾಗಳ ಗುಣಮಟ್ಟಕ್ಕಿಂತ ಚೆನ್ನಾಗಿರುವುದು. ಇನ್ನೂ ಒಂದು ಮಹತ್ವದ ವಿಷಯವೆಂದರೆ ಕ್ಯಾಮರಾದ ಲೆನ್ಸ್‌ನ ಗುಣಮಟ್ಟ. ಅದು ಚೆನ್ನಾಗಿಲ್ಲದಿದ್ದಲ್ಲಿ ಎಷ್ಟು ಮೆಗಾಪಿಕ್ಸೆಲ್ ಇದ್ದರೂ ಪ್ರಯೋಜನವಿಲ್ಲ. ಸಾಮಾನ್ಯವಾಗಿ ಎಸ್‌ಎಲ್‌ಆರ್ ಕ್ಯಾಮರಾಗಳ ಲೆನ್ಸ್‌ಗಳ ಗುಣಮಟ್ಟ ಏಮ್ ಆಂಡ್ ಶೂಟ್ ಕ್ಯಾಮರಾಗಳ ಲೆನ್ಸ್‌ಗಳ ಗುಣಮಟ್ಟಕ್ಕಿಂತ ಹೆಚ್ಚಾಗಿರುತ್ತದೆ. ಅಷ್ಟು ಮಾತ್ರವಲ್ಲ ಅವುಗಳ ವ್ಯಾಸವೂ ಜಾಸ್ತಿ ಇರುತ್ತದೆ. ಇದರಿಂದಾಗಿ ಅವುಗಳ ಬೆಳಕು ಗ್ರಹಿಸುವ ಶಕ್ತಿ ಜಾಸ್ತಿ ಇರುತ್ತದೆ. ಹೆಚ್ಚು ಬೆಳಕನ್ನು ಸಂಗ್ರಹಿಸಬಲ್ಲುದು ಎಂದರೆ ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರ ಪಡೆಯಬಹುದು ಎಂದು ಅರ್ಥೈಸಬೇಕು.