ಸದಸ್ಯರ ಚರ್ಚೆಪುಟ:2230980Hariprasad

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ 2230980Hariprasad


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೮:೪೯, ೨ ಆಗಸ್ಟ್ ೨೦೨೩ (IST)[reply]

“ಗೋಕಾವಿ ನೆಲದ ಜನಪದ ಕವಿಗಳು”[ಬದಲಾಯಿಸಿ]

ಕರ್ನಾಟಕ, ಅಂದರೆ ಇಡೀ ಕರ್ನಾಟಕ (ಅಖಂಡ ಕರ್ನಾಟಕ)ವನ್ನು ಅಧ್ಯಯನಕಾರರು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಎಂದು ಕರೆದುಕೊಂಡದ್ದುಂಟು. ಕರಾವಳಿಯಲ್ಲಿಯೇ ಮಲೆನಾಡು ಎಂದೂ ವಿಭಾಗಿಸಿಕೊಂಡಿರುವರು. ಅಧ್ಯಯನಕಾರರು ಸಾಂಸ್ಕೃತಿಕ ದೃಷ್ಟಿಯಿಂದ ಒಂದು ತಾಲೂಕಿನಲ್ಲಿಯೇ ನಾಡು ಎಂಬುದಾಗಿಯೂ ಹೆಸರಿಸಿರುವರು. ಉದಾ: ಗೋಕಾಕ ತಾಲೂಕು; ಇಲ್ಲಿಯೇ 'ಕುಂದರ ನಾಡು' ಒಂದು ನೆಲದ ಗುಣದಿಂದ ಕರೆಯಿಸಿಕೊಂಡುದುದುಂಟು. ಸಗರ ನಾಡು, ಶರಣರನಾಡು, ಕೃಷ್ಣಯನಾಡು ಇವೆಲ್ಲವುಗಳನ್ನು ಜನಪದರು ಭೂಷಣ, ಜಲಗುಣ, ಜನಗುಣ ಸಂಸ್ಕೃತಿಯ ಗುಣಗಳಿಂದ ಕರೆದಿರುವರು. ಆದರೆ ಕನ್ನಡ - ಕನ್ನಡಿಗರು ಒಂದಾಗಿರುವ 'ಕರ್ನಾಟಕ'ವು (೧೯೭೩) ಒಂದೇ ಒಂದು ರಾಜ್ಯ ಎಂಬುದನ್ನು ಮರೆಯುವಂತಿಲ್ಲ.

ಕರ್ನಾಟಕದಲ್ಲಿ ಬೆಳಗಾವ ಜಿಲ್ಲೆಯೊಳಗಿನ ವಿಸ್ತ್ರತ ತಾಲೂಕು ಗೋಕಾಕ ಎಂಬುದು ಸರ್ವರಿಗೂ ತಿಳಿದಿರುವ ಸಂಗತಿಯಾಗಿದೆ. ಗೋಕಾಕವನ್ನು ಈಗ ಎರಡು ವರುಷಗಳ ಹಿಂದೆ ಜನತೆಯ ಜಿಲ್ಲೆಯನ್ನಾಗಿ ಪರಿವರ್ತಿಸಲು ಸರಕಾರವನ್ನು ಒತ್ತಾಯಿಸಿ, ಚಳುವಳಿ ನಡೆಯಿಸಿ, ಹೋರಾಟವನ್ನು ನಿಲ್ಲಿಸಿದರು.

ಗೋಕಾಕದ ಜನ - ಮನದ ಹೆಸರು “ಗೋಕಾವಿ'' ಗೋವುಗಳ ಕಾಯುವ ಸ್ಥಳದಿಂದಾಗಿ ಈ ಹೆಸರು ಮಾನ್ಯವಾಗಿದೆ. ಈ ಗೋಕಾವಿ ತಾಲೂಕವೇ ಆಗಲಿ, ಜಿಲ್ಲೆಯೇ ಆಗಲಿ ನೆಲ- ಜಲ ಮಾತ್ರ ಒಂದು ಎಂಬುದನ್ನು ಮರೆಯುವಂತಿಲ್ಲ. ದೇಶದ ಮತ್ತು ರಾಜ್ಯದ ನಕಾಶೆಯಲ್ಲಿ 'ಗೋಕಾವಿ' (ಗೋಕಾಕ) ಪ್ರಸಿದ್ದಿಯನ್ನು - ತನ್ನದೇ ಆದ ಸಂಸ್ಕೃತಿಯನ್ನೂ

ಹೊಂದಿರುವುದು. ಈ ಪ್ರಸಿದ್ದಿಗೆ ಒಂದೊಂದು ಪ್ರಬಂಧವನ್ನೇ ಬರೆಯ ಬೇಕಾಗುವುದು. ಇಲ್ಲಿ ಗೋಕಾವಿ ನೆಲದಲ್ಲಿ ವಾಸವಾಗಿ ಹೋದ ಜನಪದ ಕವಿಗಳನ್ನು ನೆನಪಿಸುವ ಸಂಕ್ಷಿಪ್ತಕಾರ್ಯವನ್ನು ಅಂದರೆ ದಾಖಲಾತಿಯನ್ನು ಮಾಡಲಾಗಿದೆ.

ಯಾವುದೇ ಕವಿ ತಾನು ರಚಿಸತಕ್ಕ ಹಾಡೇ ಇರಲಿ, ಪ್ರದರ್ಶಿಸ ತಕ್ಕ ಕಲೆಯೇ ಇರಲಿ ದೇಶೀಯ ಬಳಕೆಯಿಂದ ಜನಪದ ಎಂಬುದನ್ನು ಗೊತ್ತು ಪಡೆಯಿಸುತ್ತಾನೆ. ತನ್ನ ಹೆಸರನ್ನು ಅಥವಾ ಅಂಕಿತವನ್ನು, ತನ್ನ ಶಿಷ್ಯರಿಂದ ನುಡಿಸುವ ಪರಂಪರೆಯನ್ನು ಕಾಣುತ್ತೇವೆ. ಮೌಖಿಕವಾಗಿ ಹಾಡುವುದು ಕೇಳುತ್ತೇವೆ. ಹಾಗೇ ಪ್ರದರ್ಶನಾತ್ಮಕ ಕಲೆಗಳ ಪರಂಪರೆಯೂ ಸಾಗಿ ಬಂದಿವೆ. ಜನಪದ ನಾಟಕಕಾರರೂ ತಮ್ಮ ಕೃತಿಗಳಿಗೆ ದೇಶಿಗಬ್ಬವೆಂದು ಕರೆದುಕೊಂಡಿರುತ್ತಾರೆ. ದೇಶಿಯನ್ನು ಸಹಜವಾಗಿಯೇ ಬಳಸಿ ಬಳಸಿ ಗಟ್ಟಿಗೊಳಿಸಿದ್ದುಂಟು. ಭಾಷೆಯು, ದೇಶಿಯಿಂದ ಜನಪದ - ಜಾನಪದವಾಗುತ್ತದೆ. ಅದರಲ್ಲಿ ನಂಬಿಕೆಗಳು, ಜನ ಬಳಸುವ ಅಲಂಕಾರ - ವಸ್ತುಗಳ ಹೇಳಿಕೆಗಳು, ಗಾದೆಯ ಮಾತುಗಳು ಸಮ್ಮೇಳನಗೊಳ್ಳುತ್ತವೆ.  ಈ ದೃಷ್ಟಿಯಿಂದ ಗೋಕಾವಿ (ಗೋಕಾಕ) ತಾಲ್ಲೂಕಿನ ನೆಲ ಅಂದರೆ ವಿಸ್ತಾರಗೊಂಡ ಜನಪದ ಕವಿಗಳನ್ನು ಕಾಣಬೇಕಾಗುವುದು.  ಈ ನೆಲದಲ್ಲಿ ವಾಸವಾದ, ವಾಸವಾಗಿ ಬೇರೆಡೆ ಹೋದ, ಬೇರೆಡೆಯಿಂದ ಬಂದು ಈ ನೆಲದಲ್ಲಿ ನೆಲಸಿ ಮತ್ತೊಂದೆಡೆ ಹೋದವರು ಹೀಗೆ ತಮ್ಮ ಜೀವನ - ಬಾಳು - ಬದುಕು ನೂಕಿದ ಕವಿಗಳೆಲ್ಲರನ್ನೂ ಗೋಕಾವಿ ನೆಲದವರು ಎಂದು ಕರೆಯಲಾಗಿದೆ.  ಗೋಕಾವಿ ನೆಲವು ಗರತಿಯರ ತವರು ಮನೆ ಏನೋ ಎಂಬಂತೆ ಅರಿವಿನಂಗಳದಲ್ಲಿ ಮೂಡಿ ನಿಲ್ಲುತ್ತದೆ.  ಈ ಬಗೆಗೆ ವಿಶಾಲ ಅರ್ಥವುಳ್ಳ ಗರತಿಯ ಹಾಡನ್ನು ನಾವಿಲ್ಲಿ ಕೇಳೋಣ.

ಆಕಾಶ ನನ್ನಪ್ಪ ಭೂದೇವಿ ನನ್ನವ್ವ

ಭೂಪಾಲ ನನ್ನ ಮಗನವ್ವ |  ಈ ದೇಶದ

ಭಾಗೀನದಾರರು ಬಳಗವ್ವು

(ಗಿಳಿ ಕುಂತ ಕೂಗ್ಯಾವ ಪುಟ - ೫೯)

ಇಡೀ ತ್ರಿಪದಿಯು ಆಕಾಶ, ಭೂಮಿ, ಭೂಪಾಲ, ದೇಶ ಮತ್ತು ಬಳಗ ತನ್ನವುಗಳು- ತನ್ನವರು ಎಂಬ ಅನುಭಾವವನ್ನು ತಿಳಿಸುತ್ತದೆ.

ಹಾಗೇ - ಇನ್ನೊಂದು ತ್ರಿಪದಿಯು

ಮನಕ ಶಾಂತಿ ಬೇಕ ಮನಿಗೆ ಶಾಂತಿ ಬೇಕ

ಶಾಂತಿ ಬೇಕ ಮೊದಲು ದೇಶಕ 1 ಜಗವ

ಶಾಂತೆಂಬ ಮಂತ್ರ ಹಿಡಿಬೇಕ 11 (ಪು - ೪೦)

ಗರತಿಯು ಶಾಂತತೆಯ ಮೂಲ ಮಾನವನ ಮನಸ್ಸಿನಲ್ಲಿ ಬೇಕು ಎಂಬುದಾಗಿ ತಿಳಿಸಿದ್ದಾಳೆ.  ಒಬ್ಬೊಬ್ಬಮಾನವ ಶಾಂತತೆಯ ಅರಿವು ಮೂಡಿಸಿಕೊಂಡಾಗ, ಇಡೀ ನಾಡು, ದೇಶ, ಜಗತ್ತು ಶಾಂತ ರೀತಿಯಿಂದ ಬದಕುತ್ತದೆ ಎಂಬ ಸಾಂಸ್ಕೃತಿಕ ಮನೋಭಾವ ತಿಳಿಯುತ್ತದೆ ಎಂಬ ಧ್ವನಿ ನಮ್ಮೆದುರಿಗಿದೆ.

ಇಂತಹ ತ್ರಿಪದಿಗಳು ಯಾವ ಕಾಲದಲ್ಲಿ ಹುಟ್ಟಿಕೊಂಡವು ಎಂಬ ಸಂಶೋಧನೆ ತಿಳಿಯದು.  ಅದ್ದರೆ ಅವು ಸಾರ್ವಕಾಲಿಕ ನೈತಿಕ ಸಂಹಿತೆಗಳಾಗಿ ತೋರುತ್ತವೆ.

ಗೋಕಾವಿ ನೆಲದಲ್ಲಿ ಗರತಿಯರ ಹಾಡುಗಳು, ಹಂತಿ ಹಾಡುಗಳು, ಬಲೋರಿ ಹಾಡುಗಳು, ಹೋಳಿ ಹಾಡುಗಳು, ಲಾವಣಿಗಳು, ಕರ್ಬಲ್ ಹಾಡುಗಳು, ಬೆಳದಿಂಗಳ ಹಾಡುಗಳು, ಕಥನದ ಹಾಡುಗಳು, ಉತ್ಸವ – ಉತ್ಸಾಹದ ಹಾಡುಗಳು ಪ್ರತಿ ಹಳ್ಳಿ - ಹಳ್ಳಿಗಳಲ್ಲಿ ಕೇಳುತ್ತೇವೆ.  ಡೊಳ್ಳಿನ ಹಾಡುಗಳಂತೂ ಸಂಗ್ರಹವಾದರೆ, ಡೊಳ್ಳಿನಾಕಾರದ ಗ್ರಂಥಗಳ ಸಂಪುಟ - ಸಂಪುಟಗಳಾಗುತ್ತಿವೆ.  'ಕನ್ನಡ ಜಾನಪದಕ್ಕೆ ಸಾವಿಲ್ಲ' ಎಂಬ ಅಭಿಪ್ರಾಯಗಳು ಹೊರ ಹೊಮ್ಮುತ್ತಿವೆ.  ವೃತ್ತಿ ಗಾಯಕರಾದ ಗೋಕಾಕ ಗೊಂದಲಿಗರ ಕಥೆಗಳು ಹಾಡುಗಳು- ಕುಣಿತಗಳು ಪ್ರಸಿದ್ದಿಯನ್ನು ಪಡೆದಂತಹವು.  ಶ್ರೀಭಗಪ್ಪ ಗೊಂದಳಿ - ಶ್ರೀಈಶ್ವರಪ್ಪಗೊಂಡಲಿ ತಮ್ಮ ಜೀವನದ ತುಂಬ ಹಾಡು - ಕಥೆಗಳನ್ನು ಹೇಳಿ ತಮ್ಮ ಬದುಕು ಸಾಗಿಸಿದರು.  ಸಾತು -ಶ್ಯಾಮಣ್ಣನ ಲಾವಣಿಗಳು ಕಥೆಗಳು - ಸಣ್ಣಾಟದ ಕಥೆಗಳು ಇವರ ನಾಲಿಗೆಯ ಮೇಲೆ ಕುಣಿದಾಡುತ್ತಿದ್ದವು.  ಕೇಳುಗರು ಇವರ ಸಾಹಿತ್ಯವೆಲ್ಲವನ್ನು ಜ್ಞಾನಾರ್ಜನೆಗಾಗಿ - ಮನರಂಜನೆಗಾಗಿ ಪ್ರದರ್ಶಿಸಲು ಓಣಿ - ಓಣಿಗೆ ಹಳ್ಳಿ - ಹಳ್ಳಿಗೆ ಕರೆಯುತ್ತಿದ್ದರು.  ಇವರ ಹಾಡುಗಳು - ಕಥೆಗಳಿಂದ ಭಕ್ತಿ - ಭಾವ ಜನತೆಯಲ್ಲಿ ಮೂಡುತ್ತಿತ್ತು ಹಾಡುಗಳು - ಕವನಗಳು ಆಶು ಕವಿಗಳಾಗಿ ಬಿಡುತ್ತವೆ.  ಹೀಗಾಗಿ ಇವರ ಕಲಾವೃತ್ತಿಗೆ ಹೆಚ್ಚಿನ ಮೆರಗು ಬರುತ್ತಿತ್ತು.  ಇನ್ನು ಇಂತಹ ಪರಿಸರದಲ್ಲಿ ಜಾನಪದ ಸಾಹಿತ್ಯವನ್ನು ಕಟ್ಟಿ ನಿಲ್ಲಿಸಿದ ಗೋಕಾವಿ

ನೆಲದ ಕವಿಗಳನ್ನು ತಿಳಿಯೋಣ.

೧.  ಗೋಕಾವಿಯ ಸಿದ್ಧ ಸೇವಕ

ಈ ಕವಿಯು ಸಾತು - ಕ್ಯಾಮಣ್ಣನಕ್ಕಿಂತ ಮೊದಲಿನವನು ಎಂಬುದು ತಿಳಿಯುತ್ತದೆ.  ಈಗ ಬದುಕಿದ ಹಿರಿಯರನ್ನು ಕೇಳಿದಾಗ, ಕವಿಯ ವಿವರ ತಿಳಿಯದಿದ್ದರೂ ಕಾಲಮಾನವನ್ನು ತರ್ಕಬದ್ಧವಾಗಿ ತಿಳಿಸುತ್ತಾರೆ.  ಈತನು ಸಂಚಾರಿ ಕವಿಯಾಗಿದ್ದನು.  ಡೊಳ್ಳಿನ ಹಾಡುಗಳನ್ನು ಹಂತಿಯ ಹಾಡುಗಳನ್ನು ಲಾವಣಿಗಳನ್ನು ರಚಿಸಿರುವುದು ತಿಳಿದು ಬರುತ್ತದೆ.

ಧರೆಯೊಳು ಡೊಳ್ಳು ನುಡಿಯತಾವ

ಧರೆಯೊಳು ಡೊಳ್ಳು ನುಡಿತಾಮ ।  ಎಂಬ ಪದವನ್ನು ಹಾಡುಗಾರರು ಹೇಳುತ್ತಾರೆ.  ಡೊಳ್ಳಿನ ಮಹಿಮೆ ಹೇಳಿ, ಕೊನೆಗೆ 'ಗುರುವರ ಸಿದ್ದ ಸೇವಕನ ಡೊಳ್ಳು ನುಡಿಯತಾವ, ತಾಳ ನಡೆಯ್ತಾವ' ಎಂಬುದು ಸ್ಪಷ್ಟತೆ ಕಾಣುತ್ತೇವೆ.

ಡಾ||  ಎಂ.ಎಸ್.  ಸುಂಕಾಪೂರವರು ಗೋಕಾಕದ ಅಳಿಯಂದಿರರು.  ಅವರು ಹೋಳಿ ಹಾಡನ್ನು ಸಂಗ್ರಹಿಸಿದ್ದಾರೆ.

ಧರೆಯೊಳು ಗೋಕಾವಿ ಪುರದೊಳಗಿರುವನು ಗುರುವರ ಸಿದ್ದ ಸೇವಕನು |  ಅದು

ಬರುತಿರೆ ಮಹಾಲಿಂಗ ಪುರದೊಳವನು |  ವಸ್ತಿ ಇರುತಿರಲು ರಾಮನಾಟ ನೋಡಿದನು |  ಇದರ ಚರಿತವ ನೋಡಿ ಕವಿತೆ ಬರೆದನು ರಸಿಕನು ಅರತುಳ್ಳ ಸುಜನರು ಕೇಳಿರಿ ​​ಲಾಲಿಸಿದನು.

  ಈ ಕವಿಯು ಹಲವಾರು ಸಣ್ಣಾಟಗಳನ್ನು ಬರೆದು ತಿಳಿದು ಬರುತ್ತದೆ.  'ಪತಿವರತಾ' ಬಯಲಾಟವು ಅನೇಕ ವರುಷಗಳಿಂದ ಆಡುತ್ತಿರುವುದು ಈಗ ಮಾಯವಾದಂತಿದೆ.


೨.  ಕುಲಿಗೋಡ ತಮ್ಮಣ್ಣ

ಗೋಕಾಕ ತಾಲ್ಲೂಕಿನಲ್ಲಿ ಕುಳಿಗೋಡ ಗ್ರಾಮ, ಗೋಕಾಕದಿಂದ ಪೂರ್ವ-ಪೂರ್ವಕ್ಕಿರುವ ಯಾದವೀ ರಸ್ತೆಯಲ್ಲೇ ಇದೆ.

ಕುಲಿಗೋಡ ತಮ್ಮಣ್ಣನು ಮಾಧ್ವ ಬ್ರಾಹ್ಮಣ ವಂಶದವನಾಗಿ ಜನ್ಮತಾಳಿದವನು.  ಚಿಕ್ಕಂದಿನಲ್ಲಿ ಹಟಮಾರಿತನದ ನಡಾವಳಿ ಇತ್ತು.  ಅವನ ನಡಾವಳಿಯಿಂದ ತಂದೆಗೆ ಚಿಂತೆಯಾಗಿ ಮಗನನ್ನು ಬೈದಾಗ, ಕುಲಿಗೋಡ ಭೀಮೇಶ (ಮಾರುತಿ) ಗುಡಿಯಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದನೆಂಬುದನ್ನು ಶ್ರೀ ಶರಣ ಭೀಮಪ್ಪ ಕೃಷ್ಣಪ್ಪ ಪುಗಶೆಟ್ಟಿ ಅವರು ತಿಳಿಸಿದ್ದುಂಟು.  ಅವನಿಗೆ (ತಮ್ಮಣ್ಣಗೆ) ಹನುಮಾನನ ಆಶೀರ್ವಾದ ಆದದ್ದುಂಟೆಂಬ ಧ್ವನಿಯಿದೆ.  ಶ್ರೀ ಪುರಶೆಟ್ಟಿ ಮನೆತನವು ಹೊಸಕುಪ್ಪಿಗೆ ಪೂರ್ವ ಅವರ ಹಿರಿಯರು ಕುಳಿಗೋಡದಲ್ಲಿ ವಾಸವಾಗಿದ್ದು, ಕಟ್ಟಡಕೆಲಸಗಳನ್ನು ಮಾಡುವಂತೆ, ಹನಮಂತ ದೇವರ ಗುಡಿಕಟ್ಟಿ, ಪಗಾರ ಪಡೆಯಲಿಲ್ಲ!  ಪುಕ್ಕಟೆಯಾಗಿ ಗುಡಿ ನಿರ್ಮಾಣ ಮಾಡಿದ ಕಾರಣ ಆ ಹಿರಿಯರಿಗೆ ಪುಗಶೆಟ್ಟಿ ಎಂಬ ಹೆಸರು ಪ್ರಾಪ್ತವಾಯಿತೆಂದು ಅವರ ಹೇಳುವವರು ಹೇಳುತ್ತಾರೆ.  ಬುದ್ದಿ ಬಲಿತ ಮೇಲೆ ತಮ್ಮಣ್ಣನು ಚಿನಿವಾರ ಉದ್ಯೋಗ ಕೈಕೊಂಡನು.  ಸಂಚಾರಿಯಾದನು, ಅಪರಾಳ ತಮ್ಮಣ್ಣನು ಬರೆದು ಪ್ರಯೋಗಿಸಿದ ಶ್ರೀ ಕೃಷ್ಣ ಪಾರಿಜಾತವನ್ನು (ಕಾವ್ಯಮಯವಾದ ನಾಟಕ) ಸರಳೀಕೃತಗೊಳಿಸಿದನು.  ಶ್ರೀ ಆನಂದಕಂದರು (ಡಾ|| ಬೆಟಗೇರಿ ಕೃಷ್ಣಶರ್ಮರು) ಹೇಳುವಂತೆ ಗಣಪತಿಯ ಸ್ತೋತ್ರ, ಗೊಲ್ಲತಿ (ಗೌಳಗಿತ್ತಿ), ಗೋಪಾಲ - ಗೌಳಗಿತ್ತಿ ಪ್ರಸಂಗಗಳನ್ನು ರಚಿಸಿ, ರಂಗಭೂಮಿಯ ಮೇಲೆ ತಾನೇ ಪ್ರದರ್ಶನಕಾರನಾದನು.  ಮೇಳಕಟ್ಟಿ ಆಟ ಆಡಿಸಿದನು.  ಗಣಪತಿಯ ಸ್ತೋತ್ರದ ನಂತರ 'ಒಡೆಯ ಕುಲಿಗೋಡರಂಗ

ನಡತಿ ಬಲ್ಲವನೇನ?'  ಎಂದೂ, ಇನ್ನೂ ಕೆಲವಡೆ

'ಒಡೆಯ ಕುಲಿಗೋಡರಂಗ

ನಡತಿ ಬಲ್ಲವನು' ಎಂಬುದಾಗಿ ಹಾಡಹಡುತ್ತಾರೆ.

ಸಂಭಾಷಣೆಯು ಬಯಲಾಟದಲ್ಲಿ ಅತೀ ಮಹತ್ವದ ತಿಳುವಳಿಕೆಯನ್ನು ನೀಡಿದೆ.  ಆ ಕೆಲಸವನ್ನು ತಮ್ಮಣ್ಣನು ಮಾಡಿದನು.  ದಾಸ ಸಾಹಿತ್ಯದ ಪ್ರಭಾವವು ಕುಲಿಗೋಡ ತಮ್ಮಣ್ಣನ ಮೇಲಾಗಿರುವುದನ್ನು ಕಾಣುತ್ತೇವೆ.  ಉದಾ: ಗೌಳಗಿತ್ತಿಯ ಹಾಲು ಮಾರಲು ಹೊರಟ ಹಾಡು

'ಚಂದ್ರಗಾವಿಯನುಟ್ಟು

ದುಂಡ ಮುತ್ತನೆ ಕಟ್ಟಿಸಿ

ಪೆಂಡೆಯರುಳಿಯ ನಟ್ಟು

ಕೆಂದಾವಿನ ಹಾಲ

ಹರವಿಯ ಹೊತ್ತುಕೊಂಡು

ಬಂದಾಳು ಬೀದಿಗಾಕೆ' ಎಂಬ ಹಾಡು ಜನಪದ ಸಂಗೀತದೊಡನೆ ದೃಶ್ಯ ಮನ ನರ್ತಿಸುತ್ತದೆ.  ಗೌಳಗಿತ್ತಿ ಆಗ ನರ್ತಿಸುತ್ತಲೇ ಇರುತ್ತಾಳೆ.  ರಸಿಕತೆ ಅಲ್ಲಿ ಸೂಸುತ್ತದೆ.  ಹಾಡು ಮುಂದೊರೆಯುತ್ತದೆ.  ದೂತಿ ಹಾಗೂ ಗೌಳಗಿತ್ತಿಯ ಸಂಭಾಷಣೆ ರಸಮಯವಾಗಿರುತ್ತದೆ.

ಹೀಗೆ ಶ್ರೀ ಕೃಷ್ಣ ಪಾರಿಜಾತವು ಒಂದು ಸಂಪೂರ್ಣ ಜನಪದ ಬಯಲಾಟವಾಗಿ ಪರಿಣಮಿಸಿದೆ.  ಕವಿ ಕುಲಿಗೊಂಡ ತಮ್ಮಣ್ಣ ಸಾಹಿತ್ಯ ಲೋಕದಲ್ಲಿ ಅಮರನಾಗಿದ್ದಾನೆ.  ನಮಗೆ ಪ್ರಾಥಮಿಕ ಶಿಕ್ಷಣದ ಶಿಕ್ಷಕರಾದ ಕುಲಿಗೋಡದ ಶ್ರೀ ಮುದಕಪ್ಪ ರಾಮಚಂದ್ರ ನಾಯಕ (ರಡ್ಡಿ) ಅವರು ಕುಲಿಗೋಡ ತಮ್ಮಣ್ಣಪ್ಪನ ಕೆಲವು ಜಾವಳಿ ಪದಗಳನ್ನು ಹೇಳಿದರು.  ದೇಶಿ ಮಾತು ಮಾರ್ಗ ಇವುಗಳ ನಡುವಿನ ಹಾಡು ರಚನೆ ಭಕ್ತಿ - ಶೃಂಗಾರದ ಗುಣ – ಗೇಯತೆಯುಳ್ಳ ಹಾಡುಗಳಾಗುವುದು ನಮಗೀಗ ತಿಳಿದು ಬರುತ್ತಿದೆ.  ಈಗ ಕುಲಿಗೋಡ ತಮ್ಮಣ್ಣನ ಪ್ರಸಿದ್ಧಿ ಜಾನಪದ ಲೋಕದಲ್ಲಿ ಅಮರವಾಗಿದೆ.  ಮುಂದಿನ ಕಲಾಕಾರರೂ ಸ್ಮರಣೆಗೊಳ್ಳುತ್ತ ಕೆಲವು ಕಟ್ಟು ಪ್ರಸಂಗಗಳನ್ನು ಹೇಳುತ್ತ ಸಾಗಿದರು.

೩.  ಗೋಕಾಕದ ಅನಂತಾಚಾರ್ಯ

ಬ್ರಾಹ್ಮಣ ಮತಸ್ಥನಾದ ಅನಂತಾಚಾರ್ಯರು 'ಅನಂತಾದ್ರೀಶ' ಎಂಬ ಅಂಕಿತದಿಂದ ಅನುಭವದ ಪದಗಳನ್ನು ರಚಿಸಿದ್ದಾನೆಂಬುದು ತಿಳಿದು ಬರುತ್ತದೆ.

ಗೋಕಾಕ ಕಿಲ್ಲೆಯಲ್ಲಿ ದೇಶಪಾಂಡೆ ಮನೆತನದ ಸಂಬಂಧಿ ಎಂಬುದು ತಿಳಿಯುತ್ತದೆ.  ವೈಷ್ಣವ ಪಂಥದ ಮೇಲೆ ಈ ಕವಿದಾಗಿತ್ತು.  ಸಂಸ್ಕೃತ ಭಾಷೆಯಲ್ಲೂ ಸಂಗೀತದಲ್ಲೂ ಪ್ರಸಿದ್ದಿ ಪಡೆದವನು.

ಈ ಕವಿಯು ಬಯಲಾಟಗಳನ್ನು ಬರೆದವನಾಗಿದ್ದಾನೆ.  ಶ್ರೀ ಕೃಷ್ಣ ಪಾರಿಜಾತದಂತೆ 'ಶ್ರೀ ವೆಂಕಟೇಶ ಪಾರಿಜಾತ' ರಚಿಸಿದ ಕೀರ್ತಿ ಇವನದ್ದಾಗಿದೆ.  ವೆಂಕಟೇಶ ಪಾರಿಜಾತವು ಜನಪದ ಕಾವ್ಯದಲ್ಲಿದೆ.  ಈ ಪಾರಿಜಾತದ ಹಾಡುಗಳನ್ನು ಮಂಗಳಾರುತಿಯಲ್ಲಿ ಹಾಡುತ್ತಾರೆ.  ಇವುಗಳಿಗೆಲ್ಲ ಜನಪದ ಧಾಟಿಯುಂಟು.  ಹಲವಾರು ಲಾವಣಿಗಳನ್ನು ಬರೆದಿರುವ ಕವಿ, ಭಕ್ತಿಗೆ, ಪ್ರಾಧಾನಿಕೆಯನ್ನು ನೀಡಿದ್ದಾರೆ.

ಒಂದು ಹಾಡು:

ಹ್ಯಾಂಗ ಮಾಡಲೆವ್ವಾ ನಾನು ಏ ಮಾತ ನಾ |  ಇ ವ್ಹಾಂಗ ಮಾಡಲೆವ್ವಾ ನಾನು ||  ಪಲ್ಲ ||


------------------------------

------------------------------

ಕಂತುಪಿತನಂತಾದ್ರೀಶ ನಿಂತಲ್ಲೆ ನಾಚಿಕೆ ಬಿಟ್ಟು ಬ್ರಾಂತಳಾಗಿ ಕುಳಿತ ಆತಗೆ ಎಂಥ ಕುದರಿ ಕಳಿಸಲಮ್ಮ.

ಅನಂತಾಚಾರ್ಯರು ಪಾರಿಜಾತವನ್ನು ಬರೆದರೆಂದು ಕೆಲವರ ಪ್ರತೀತಿ ಇತ್ತು ಶ್ರೀ ವೆಂಕಟೇಶ ಪಾರಿಜಾತದ ಪ್ರತಿ ದೊರೆತಾಗ ಬಹುಶಃ ಶಿವಪಾರಿಜಾತೆ ಬರೆದಿರಲಿಕ್ಕಿಲ್ಲ ಎಂಬುದು ಖಚಿತವಾಗಿದೆ.

೪.  ಕವಿ ಬಾಲಗೋಪಾಲ

ಕವಿ ಬಾಳಗೋಪಾಲ ಈಗಿನ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯವನು.  ಆದರೆ ಅವನು ವಿಶೇಷವಾಗಿ ಗೋಕಾಕದಲ್ಲಿ ವಾಸವಾಗುತ್ತಿದ್ದನೆಂಬುದನ್ನು ಶ್ರೀ ವಿ.ವಿ.ದೇಶಪಾಂಡೆಯವರು ನನಗೆ ಬೇಕಾಗಿದ್ದಾರೆ.  'ಬಾಳಗೋಪಾಲನ ಲಾವಣಿಗಳು - ನಿಂಗಣ್ಣ ಸಣ್ಣಕ್ಕಿಯು ಸಮಾಜ ಪುಸ್ತಕ ಧಾರವಾಡದಿಂದ ೧೯೭೯ರಲ್ಲಿ ಪ್ರಕಟಗೊಂಡಿದ್ದಾರೆ.  ಈ ಕವಿಯ ಗಣಪತಿಯ ಸ್ತವನವನ್ನು ಕೇಳೋಣ.

ಗಜಾನನ ಗಣಪತಿ

ಮಾಡತೇನ ನಿನ್ನ ಸ್ತುತಿ

ಪಹಿಲೆ ಪ್ರಥಮ ನಾನಾ - ನನ್ನ

ಮಾನ ಅಪಮಾನ ಎಲ್ಲಾ

ನಿಮ್ಮ ಸ್ವಾದೀನಾ

-----------------

-----------------

-----------------

ಬಾಗೇವಾಡಿ ಗ್ರಾಮ ಚಂದ

ಕವಿ ಹುಟ್ಟತಾವ ಕಲ್ಪನದಿಂದ

ದೇಶಕ ವಾಹೀನಾ -

ಬಾಳಗೋಪಾಳನ ಅಕ್ಷರಾ

ಬಹಳ ಹಸನ ಹಸನಾ.

ಬಾಳಗೋಪಾಲನ್ನು ಕನ್ನಡ - ಸಂಸ್ಕೃತ - ಮರಾಠಿ ಬಲ್ಲವನಾಗಿದ್ದನು.  ಶ್ರೀ ಜಡಿಸಿದ್ದೇಶ್ವರ ಪ್ರಭಾವವು ಕವಿಯ ಮೇಲಾಯಿತು.  ಈ ಗೋಕಾಕ ತಾಲೂಕಿನ ಸೂಣಧೋಳಿಯ ಗ್ರಾಮದ ಜಡಿಸಿದ್ದೇಶ್ವರ ಗುಡಿಯಲ್ಲೂ ಕೆಲಕಾಲ ವಾಸಮಾಡಿ ಲಾವಣಿಗಳನ್ನು ರಚಿಸಿದನೆಂಬುದಾಗಿ ಕಲ್ಲೊಳ್ಳಿಯಲ್ಲಿ ವಾಸವಾಗಿರುವ ಲಾವಣಿಕಾರ ಶ್ರೀನದಾಫ ನನಗೆ ಸಂಶೋಧನೆ ಮಾಡಲು ಹೋದಾಗ ತಿಳಿಸಿದುಂಟು.

ಶ್ರೀ ಸಿದ್ದೇಶ್ವರ ಸದ್ಗುರುವಿನ ದಯದಿಂದ |

ಯಾರದಿಲ್ಲ ನಮಗ ಅಂಜಿಕೆ |

ಕವಿ ಗೋಪಾಲ ಕಲಗಿ ಹಾಡವರ |

ತೆಲಿಮ್ಯಾಲ ಅಗಳಿ ಜಡದಾ ।

ವಾದನ ಹಾಡುಗಳಲ್ಲ ಬಾಳಗೋಪಾಳನು ಹರದೇಶಿ (ಪುರುಷ ಪ್ರಧಾನ) ಪಕ್ಷದವನು.  ಅಂದರೆ ಗಂಡು ಹೆಚ್ಚು ಎಂಬ ಹೆಗ್ಗಳಿಕೆಯ ಕವಿ ಇವನಾಗಿದ್ದನು.  ಹಾಡುಕಾರರು ಹೇಳುವಂತೆ ಸಾವಿರಾರು ಲಾವಣಿಗಳನ್ನು ರಚಿಸಿದ್ದನೆಂಬುದು ಪ್ರತೀತಿ.  ಹೆಚ್ಚಿನ ಸಂಶೋಧನೆ ಇನ್ನೂ ನಡೆಯಬೇಕಾಗಿದೆ.

೫.  ಗೋಕಾವಿ ಮಲ್ಲೇಶಪ್ಪ

ಗೋಕಾವಿ ಜನಪದ ಕವಿಗಳ ಹಚ್ಚು- ಹಸುರಿನ ನೆಲ ಎಂಬುದಕ್ಕೆ ಮಲ್ಲೇಶಪ್ಪನು ಸಾಕ್ಷಿಯಾಗಿರುವ ಕವಿವರ್ಯನು.

ಈ ಕವಿ ಇಲ್ಲಿಯ ಪತ್ತಾರ ಅಯ್ಯಪ್ಪನ ಮಗ.  ಈ ಕವಿಯ ಹಸ್ತಪ್ರತಿಗಳು ಗೋಕಾವಿ ಪತ್ತಾರದ ಮನೆಗಳಲ್ಲಿವೆ.  ಮಗ ಲಕ್ಷ್ಮಣನು ಕವಿಯಾಗಿದ್ದನು.  ಮೊಮ್ಮಗ ಕಾಳಪ್ಪನೂ ಜನಪದ ಕವಿ.  ಮೈತ್ರಿ, ರಾಮಭೀಮ, ವಟ ಸಾವಿತ್ರಿ ಪ್ರಸಿದ್ಧ ಲಾವಣಿಗಳು.  ಇವರೀಗ ಗೋಕಾಕ ತಾಲೂಕಿನ ಢವಳೇಶ್ವರ ಮತ್ತು ಮುಧೋಳ ತಾಲೂಕಿನ ಮಹಾಲಿಂಗ ಪುರಗಳಲ್ಲಿ ನೆಲೆಸಿದ್ದಾರೆ.  “ನಾಗೇಶಿ’ ಪಂಗಡದ ಹಾಡುಗಳನ್ನು ರಚಿಸಿರುವ ಕವಿಗಳಿವರು.  ಗೋಕಾಕದ ಸಾತು - ಕ್ಯಾಮಣ್ಣನ ಸಮಕಾಲೀನವಾದ ಮಲ್ಲೇಶಪ್ಪನು ಸಂಚಾರಿಯೂ ಆಗಿದ್ದನು.  'ಏಕನಾಥ' ಅನ್ನುವ ಗುರುವಿನಿಂದ ಸಾತುಕ್ಯಮಣ್ಣ ಹಾಗೂ ಮಲ್ಲೇಶಪ್ಪನು ಜ್ಯೋತಿಷ್ಯಶಾಸ್ತ್ರವನ್ನು ಕಲಿತಿದ್ದು ತಿಳಿದು ಬರುತ್ತಿದೆ.  ಇವರಿಬ್ಬರು ಲಾವಣಿ ಪಂಗಡಗಳಿಗೆ ಲಾವಣಿ ಬರೆದು ಕೊಡುತ್ತಿದ್ದರು.

ಕಾಳಿಕಾ ಸ್ತೋತ್ರವನ್ನು ಮಲ್ಲೇಶಪ್ಪನು ಗೊಂದಲಿಗರಿಗೆ ಕಲಿಸಿದನೆಂದೂ ತಿಳಿಯುತ್ತದೆ.  ತನ್ನ ಅಂಕಿತವನ್ನು ಕವಿ ಮಲ್ಲೇಶ, ಪತ್ತಾರ ಮಲ್ಲೇಶ ಎಂದು ಬಳಸಿದ್ದಾನೆ.

ಗೋಕಾವಿಗಳಲ್ಲಿ ಮೋಜಿನ ತಾರ | 

ಹುಟ್ಟತಾವ ಕವಿ ಚಂದ ಚಂದಾ | 

ಪತ್ತಾರ ಮಲ್ಲೇಶನ ದಯದಿಂದಾ |

------------------------------

ಇನ್ನೊಂದೆಡೆಗೆ -

ಪತ್ತಾರ ಮಲ್ಲೇಶನ ಕವಿ ಚಂದಾ |

ಹಾಡಿದರ ಮೂಡಿ ಬಂಧಾಂಗ ಚಂದ್ರಾ |

ಗೋಕಾಕದ ಜಿನಗಾರ (ಚಿತ್ರಗಾರ) ಸಾಂಬಣ್ಣನು ಇವನ ಜೊತೆ ಗೂಡಿ ಹಾಡುತ್ತಿದ್ದನೆಂದು ಜಿನಗಾರ ಮನೆತನದ ಶ್ರೀಮತಿ ಸೋನುಬಾಯಿ ಚಿತ್ರಗಾರ (ಚಿತಾರೆ) ಹೇಳಿದರು.  ಪತ್ತಾರ ಮನೆತನಗಳಲ್ಲಿ ಬಿದ್ದುಕೊಂಡಿರುವ ಲಾವಣಿಗಳನ್ನು ಸಂಗ್ರಹಿಸಿದಾಗ ಹೆಚ್ಚಿನ ಜನಪದವು ಹೊರಬಂದಂತೆ.

೬.  ಗೋಕಾವಿ ಯಲ್ಲಪ್ಪ

ಗೋಕಾಕ ಗಿರಣಿ (ಗೋಕಾಕ ಫಾಲ)ದಲ್ಲಿ ದುಡಿಯುತ್ತಿದ್ದ ಒಬ್ಬ ಕವಿ.  ಅವನೇ ಯಲ್ಲಪ್ಪ ಅಥವಾ ಗಿರಣಿಯಲ್ಲಪ್ಪ ನೆಂದು ಹೆಸರುವಾಸಿಯಾದ ಜನಪದ ಕವಿ.  ಗೋಕಾಕ ಸಮೀಪದ ಅಡಿಬಟ್ಟಿ ಗ್ರಾಮದವನು.  ಕಟ್ಟಿ ಚೆನ್ನನ ಚರಿತ್ರೆಯನ್ನು ಲಾವಣಿಯಾಗಿಸಿ ಪ್ರಸಿದ್ದಿ ಪಡೆದವನಿವನು.  ಕೆಲವು ಕಡೆಗೆ ಅಡಿಬಟ್ಟಿಯ ಮಲ್ಲ (ಶೂರ) ಗಿರಣಿಯಲ್ಲಣ್ಣನೆಂದು ಪ್ರಸಿದ್ದಿ ಪಡೆದನು.

ಬಡತನವನ್ನು ಅನುಭವಿಸಿದ ಕವಿ, ಬಡವರ ಗೆಳತನ ಕಟ್ಟಿ, ಅವರಿಗೆ ಸಹಾಯ ಮಾಡುತ್ತಿದ್ದೇನೆ.  ಯಾವಾಗಲೂ ಗಿರಣಿ ನಡೆದು ಹೋಗುತ್ತಿದ್ದನು.  ಕಟ್ಟಿ ಚೆನ್ನನ ಲಾವಣಿ ಲಭ್ಯವಾಗಿದೆ.

೭.  ಕವಿರತ್ನ ಕ್ಯಾಮಣ್ಣ

ಸಾತು - ಕ್ಯಾಮಣ್ಣನ ಆಯುಷ್ಯ ೧೦೨ ವರ್ಷ ಬದುಕಿದ್ದನು.  ಕ್ಯಾಮಣ್ಣನ ಗುರುರೂಪದಲ್ಲಿ ಸಾತಪ್ಪ ಇದ್ದನು.  ಸಾತಪ್ಪನನ್ನು ಪ್ರೀತಿಯಿಂದ ಸಾತೂ ಎಂದು ಕ್ಯಾಮಣ್ಣನೇ ಹೆಸರಿಸಿದವನು.  ಜೀವನದಲ್ಲಿ ಅನೇಕ ನಾಟಕಗಳನ್ನು ಬರೆದವನು.  ಲಾವಣಿಯನ್ನು ರಚಿಸಿದನು,--------- ಕವಿಯ ಅಡ್ಡ ಹೆಸರು ಹಾವನಾಳಿ.  ಇವರಾದ ಶ್ರೀಬಾಳಪ್ಪ ಯಲ್ಲಪ್ಪ ಹಾವನಾಳಿ ವಡಗಾಂವ - ಬೆಳಗಾವಿ ಮನೆಗೆ ಭೇಟಿ ಇತ್ತಾಗ, (ದಿನಾಂಕ ೨೦-೫-೧೯೭೮) ಕವಿಯ ನಿಜ ಜೀವನ ತಿಳಿಯಿತು.'  ಸಾತಪ್ಪ ಕಾಮೋಜಿ ಮನೆತನದವನು.  ಪ್ರೀತಿಯ ಸಾತೂ ಕಣ್ಣಿಲ್ಲದ ಕ್ಯಾಮಣ್ಣನಿಗೆ ವಿಷಯ ನಿರೂಪಣೆ ಮಾಡುತ್ತಿದ್ದನು.

ಗೋರ ಕುಂಬಾರ, ಸತಿ ಸಾವಿತ್ರಿ, ಸಂತ ಸಕೂಬಾಯಿ, ಚಿಲ್ಲಾಳ, ಚಂದುನಿ ಮುಂತಾದ ಬಯಲಾಟಗಳನ್ನು ರಚಿಸಿದ್ದನು.  'ಸಾತು - ಕ್ಯಾಮಣ್ಣನ ಲಾವಣಿಗಳು ಒಟ್ಟು ೧೭ (ಹದಿನೇಳು) ಪ್ರಕಟ.  ಇನ್ನೂ ಎರಡು ಲಾವಣಿಗಳು ಉಳಿದುಕೊಂಡಿವೆ.  ಸಾತು ಕ್ಯಾಮಣ್ಣನು ಇತರ ಪದ್ಯಗಳನ್ನು ರಚಿಸಿರುವರು.  ಹಾಡುಕಾರರು - ಸಂಗ್ರಹಕಾರರು ಕ್ಯಾಮಣ್ಣನ ಹೆಸರು (ನ್ಯಾಮಣ್ಣ- ಶ್ಯಾಮಣ್ಣ) ಎಂದು ದಾಖಲಾಯಿಸಿದ್ದನ್ನು ನಾನು ತಿಳಿಸಿ

ಬರೆದಿರುವೆನು.  ಈ ನನ್ನ ಸಂಗ್ರಹದಲ್ಲಿ ಕ್ಯಾಮಣ್ಣನ ವಂಶಾವಳಿಯನ್ನು ಪ್ರಕಟಿಸಿರುವೆನು.  ಶ್ಯಾಮಣ್ಣನಿಗೆ ಸಂಕವ್ವ (ಶಂಕರವ್ವ) ಹೆಂಡತಿಯೂ ಇದ್ದಳು.  ಪರಪ್ಪ, ದತ್ತಪ್ಪ, ಶಿವಗಂಗವ್ವ , ಶಿವಲಿಂಗವ್ವ, ಮಕ್ಕಳನ್ನೂ ಹಡೆದಿದ್ದರು.  ಲಾವಣಿಯ ಕೊನೆಯಲ್ಲಿ ಅಥವಾ ಯಾವುದಾದರೂ ಹಾಡಿನ ಕೊನೆಯಲ್ಲಿ ' ಸಾತು - ಕ್ಯಾಮಣ್ಣ ಅಂತಾನ ಹಿಂಗ ಭಕ್ತಿ', ಗೀ ಗೀ ಪದಗಳಲ್ಲಿ 'ಸಾತು - ಕ್ಯಾಮಣ್ಣ ಹೇಳ್ಯಾನ್ರಿ', ' ಹೇಳ್ಯಾಂತಿ ಸರಸದ ಮಾತು ಸಾತೂ - ಕ್ಯಾಮಣ್ಣ' ಅಂಕಿತಗಳುಂಟು.  ಸಹಸ್ರಾರು ಲಾವಣಿಗಳನ್ನು ರಚಿಸಿ, ನೂರಾರು ಹಾಡುವ ಪಂಗಡದವರಿಗೆ ಸಹಾಯವಾಗಿ ಪ್ರಚಾರ ಮಾಡಿರುವ ಕವಿರತ್ನವೆಂದು ಕೇವಣ್ಣನ (ಕ್ಯಾಮಣ್ಣನ) ಭಾವಿ ಚಿತ್ರದ ಕೆಳಗೆ ಜನನ 1850 ಅಲ್ಲಿಯೇ ಮರಣ (ಕೈಲಾಸ)

೮.  ಗೋಕಾವಿ ಬನಪ್ಪ

ಶ್ರೀ ಬನಪ್ಪ ಶಂಕರಪ್ಪ ಹೂನೂರು ಎಂಬುದು ಗೋಕಾವಿಯ ಬನಪ್ಪನ ಪೂರ್ಣ ಹೆಸರು.  ಇವನು ಕ್ರಿ.ಶ.೧೭೭೭ರ ಬರದಲ್ಲಿ ಬಾಲಕನಾಗಿದ್ದನು.  ಇವರ ತಂದೆಯು ಇವನಿಗೆ ಬರದ ಛಾಯೆಯಲ್ಲಿ ಹುಟ್ಟಿದವನೆಂದು ಆಶು ಮಾತುಗಳನ್ನಾಡಿ ನಗುತ್ತಿದ್ದರು.

ಬನಶಂಕರಿಯ ಕುಲದೇವಿಯ ಪುರುಷ ಹೆಸರು ಬನಶಂಕರ (ಬನಪ್ಪ) ಎಂದು ನೇಕಾರರಲ್ಲಿ ಪರಂಪರಾಗತವಾದ ನಾಮಾವಳಿಯಾಗಿ ಸಾಗಿ ಬಂದಿದೆ.  ಬಾಲಕನಿದ್ದಾಗ ಮಠದ ಶಾಲೆಗೆ ಹೋಗಿ 4-5 ವರುಷ ಅಕ್ಷರಾಭ್ಯಾಸ ಮಾಡಿದವನು.  ಗೋಕಾವಿ ೧೯ನೆಯ ಶತಮಾನದಲ್ಲಿ ಜನಪದ ಮಾಯವೇ ಆಗಿಹೋಗಿತ್ತು.  ಜನಪದ ಹಾಡುಗಳಿಗೆ ಜನಪದ ಕಲೆಗಳಿಗೆ ಗೋಕಾವಿ ಕೇಂದ್ರ ಸ್ಥಳವಾಗಿತ್ತು ಕಾರವಾರ - ಖಾನಾಪೂರ, ಬೆಳಗಾವಿ, ಜಮಖಂಡಿ, ಬಿಜಾಪುರ, ರಾಮದುರ್ಗ, ಮಿರಜ - ಸಾಂಗಲಿ ಭಾಗಗಳಿಂದ, ಚಿಂಚಲಿ - ರಾಯಭಾಗ, ಕುಡಚಿಗಳಿಂದ ಜನಪದ ಹಾಡುಗಳು - ನಾಟಕಕಾರರೂ ಓಡೋಡಿ ಗೋಕಾಕಕ್ಕೆ ಬರುತ್ತಿದ್ದರು.  ಅದನ್ನು ಕೇಳಿ.

ಗೋಕಾವಿಗೆ ಕವಿದಾರ ಕವಿಗಾರರಾ

ಬಂದ ಸೇರಾರ ಗುರುಗಳ ಪಾದಕ

ಸಾತು - ಕ್ಯಾಮಣ್ಣ ತಿಳಿಸ್ಕಾರ ಮಜಕೂರ

ಹಿಂದ - ಮುಂದ ಆಗೂದು ಕೌತೂರ್ಕಾ

ಹಾಡಿ - ಹೇಳ್ತಾರ ಬನಪ್ಪನ ಮ್ಯಾಳಾS

ಬಂದ ಕೇಳರಿ ಗೊಂಬಿ ಗುಡಿಮಗ್ಗಲಾ ||

ಗೋಕಾಕ ಗೊಂಬಿ ಗುಡಿಯ ಹಾದಿಯ ಬದಿಯಲ್ಲಿಯೇ ಹೂನೂರವರ ಮನೆತನಗಳಿವೆ.  ಇದು ಸತ್ಯ ಸಂಗತಿ.

ನೇಕಾರ ಮನೆಯವನಾದ ಶ್ರೀ ಬನಪ್ಪನು ಉತ್ತಮ ನಟನಾಗಿದ್ದನು.  ಯಾವುದೇ ನಾಟಕಕ್ಕೆ ಕರೆದಾಗ ಸ್ತ್ರೀ ಪಾತ್ರವನ್ನೇ ವಹಿಸುತ್ತಿದ್ದನು.  ಕಲಾವಿದ ಬನಪ್ಪನು ಗೋಕಾಕ ಸಾವಜಿಯವರ “ಕಲ್ಪ ವೃಕ್ಷ ನಾಟಕ ಕಂಪನಿ'ಯಲ್ಲಿ ಸ್ತ್ರೀ ಪಾತ್ರಧಾರಿಯಾಗಿದ್ದನು.  'ಲಿಖಿತ ಲೀಲಾ' ಎಂಬ ನಾಟಕದಲ್ಲಿ ನಾಯಕಿ ಪಾತ್ರವನ್ನು ಅಭಿನಯಿಸಿದ್ದಾರೆ ಪ್ರತ್ಯಕ್ಷ ಕಂಡ ಶ್ರೀ ಶಿವಶಂಕರ ಎಲ್.  ತಡಕೋಡ ಅವರು.  ದಿ.  ೧೨-೮-೨೦೦೦ರ ದಂದು ಅವರ ಸಾಹಿತ್ಯ ಚಿಂತನ ಕಮ್ಮಟದಲ್ಲಿ ಮುಖಾಮುಖಿಯಾಗಿ ಕೇಳಿತು.  ಕವಿ ಶ್ರೀ ಬನಪ್ಪನು ಕೊಣ್ಣೂರ ಕೆಂಪಯ್ಯ ಸ್ವಾಮಿಯ ಭಕ್ತನಾಗಿದ್ದನು.  ಇವರಿಗೆ ಪಾವಾಡೆಪ್ಪ ಕಾಡಪ್ಪ ಅಧೃಶಪ್ಪ ಮಲ್ಲಪ್ಪ ಗುರುಸಿದ್ದಪ್ಪ, ಸದಾಶಿವ ಆರು ಜನ ಗಂಡಸ ಮಕ್ಕಳು ಸಂಕವ್ವ (ಶಂಕಶಿವ್ವ) ಎಂಬ ಹೆಣ್ಣು ಮಗಳು ಜನಿಸಿದರು.

ಶ್ರೀ ಬನಪ್ಪನು ನೇಕಾರಿಕೆಯ ಜೊತೆ, ನಾಟಕ ಪಾತ್ರಧಾರಿಯಾಗಿದ್ದನು.  ತನ್ನ ಅನುಭವದಿಂದ ಲಾವಣಿಗಳನ್ನು ರಚಿಸಿದನು.  ಗೀ ಗೀ ಪದಗಳ ರಚನೆಯನ್ನು ಮಾಡಿದನು.  ನಾಗೇಶಿ ಪಂಗಡದವರಾದ ಶ್ರೀ ಬನಪ್ಪ ಗೋಕಾಕದ 'ನಾಗೇಶಿ' ಮಠವನ್ನು ಪ್ರತಿಷ್ಠಾಪಿಸಿ, ಅಲ್ಲಿಯೇ ತನ್ನ ರಚನೆಗಳನ್ನು ಇತರರಿಗೆ ಕಲಿಸುತ್ತಿದ್ದನು.  ಬರ ಬರುತ್ತ ತನ್ನ ಹಾಡುಗಾರಿಕೆಗೆ (ತುಂತುಣಿ - ತಾಳಕ್ಕೆ) ತಮ್ಮ ಮಕ್ಕಳನ್ನೇ ಸಂಗಾತಿಗಳಾಗಿ ಮೇಳ ಮಾಡಿಕೊಂಡರು.  'ನೇಕಾರರ ಗೋಳು' ಎಂಬ ಲಾವಣಿ - ಪ್ರಕಟಗೊಂಡಿದೆ.  ತನ್ನೆಲ್ಲ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿ, ಉದ್ಯೋಗಿಗಳನ್ನಾಗಿ ಮಾಡಿದನು.

9.  ಬೋರಗುಂಡಿ - ತಮ್ಮಣ್ಣಪ್ಪ

ಗೋಕಾಕದ ಬೋರಗುಂಡಿ ತಮ್ಮಣ್ಣಪ್ಪ ಸಾತು - ಕ್ಯಾಮಣ್ಣನ ಲಾವಣಿಗಳನ್ನು ಹಾಡು ಹಾಡು ತನ್ನ ಪದಗಳನ್ನು ರಚನೆ ಮಾಡುತ್ತಿದೆ.  ಇತರರ ಹಾಡುಗಳಿಗೆ ಸವಾಲಾದಾಗ ಟೀಕಾಕಾರನಾಗಿ ಕಂಡನು.  ಕುರುಬರ (ಹಾಲುಮತ) ಜನಾಂಗದವನಾದ ಈತನು ತನ್ನ ಹಾಡುಗಳಲ್ಲಿ ಕುರುಬರ ಮಹಿಮೆಯ ದೃಷ್ಟಾಂತಗಳನ್ನು ಹಾಡಿದ್ದಾನೆ.

'ಹಾಲುಮತದವರ ಹಾಡಕೇಳಿ ಆಗ್ಯಾರ ಮನುಷ್ಯಾರ ಇಲ್ಲಿ ತನಕ ಇದ್ರೋ ಬರೆ ಆಕಾರಾ ತಮ್ಮಣ್ಣ ತಿಳಿಶ್ಯಾನ ನಿರಾಕಾರಾ ।'  ತಮ್ಮಣ್ಣನ ಮಗಸಿದ್ದಪ್ಪನು ಹಾಡುಗಾರನಾಗಿದ್ದರೆ, ಕಟ್ಟಡ ಕಟ್ಟುವ (ಗೌಂಡಿ)ಕೆಲಸಗಾರನಾಗಿದ್ದನು.  ಬರ ಬರುತ್ತ ತನ್ನ ತಂದೆಯ ಹಾಡುಗಳ ಹಸ್ತಪ್ರತಿಯನ್ನು ಹಾಡುಗಾರರಿಗೆ ಮಾರಿಕೊಂಡು ಬದುಕಿದನು.  ಕೊಂಡ ಹಾಡುಗಳಿಗೆ ಹಾಡುಗಳು ತಮ್ಮ ಮುದ್ರಿಕೆಯನ್ನು ಒತ್ತಿದರು.  ನೂರಾರು ಹಾಡುಗಳನ್ನು ಬರೆದ ಬೋರಗುಂಡಿ ಜನಪದ ಕವಿ ಮಾಲಿಕೆಯಲ್ಲಿ ಸಣ್ಣವನಾಗಿ ಹಾಡುಗಾರರಲ್ಲಿ ದೊಡ್ಡವನಾಗಿ ಕಾಣುತ್ತಿದ್ದಾನೆ.

೧೦.  ಸುಣಧೋಳಿಯ ಸಿದ್ದರಾಮ (೧೮೮೦ - ೧೯೩೫)

೧೨.  ಮನ್ನಿಕೇರಿ ಲಕ್ಷ್ಮಣ (೧೮೯೬ - ೧೯೪೦)

೧೩.  ಯಾದವಾಡ ಹುಸೇನಿ (೧೮೯೦- ೧೯೭೮)

೧೪.  ಹುಲಕುಂದ ಗೀಗೀಕಾರರು

ಮೇಲಿನ ಸುಣಧೋಳಿ ಸಿದ್ಧರಾಮ ಮನ್ನಿಕೇರಿ ಲಕ್ಷ್ಮಣ, ಯಾದವಾಡ ಹುಸೇನಿ ಹಾಗೂ ಹುಲಕುಂದದ ಗೀಗೀ ರಚನಾಕಾರರ ಬದುಕು ಜನಪದ ಸಾಹಿತ್ಯದ ಬಗೆಗೆ ಪ್ರತ್ಯೇಕವಾಗಿ ಬರೆಯಬೇಕಾಗಿದೆ.  ಈ ಲೇಖನಕ್ಕೆ ಬಾಳಗೋಪಾಲನ ಲಾವಣಿಗಳು, ಗಿಳಿಕುಂತ ಕೂಗ್ಯಾವ, ಸಾತು ಕ್ಯಾಮಣ್ಣನ ಲಾವಣಿಗಳು ಹಾಗೂ ಜನಪದ ಕವಿ ಚರಿತ್ರೆ (ಎಂ.ಎಸ್.ಲಟ್ಟೆ) ಹಾಗೂ ನನ್ನ ಬಳಿಯಲ್ಲಿದ್ದ ಹಸ್ತಪ್ರತಿಗಳ ಟಿಪ್ಪಣಿಗಳನ್ನೂ ಬಳಸಲಾಗಿದೆ.

2230980Hariprasad (ಚರ್ಚೆ) ೧೮:೦೪, ೧೫ ಜನವರಿ ೨೦೨೪ (IST)[reply]