ಸದಸ್ಯರ ಚರ್ಚೆಪುಟ:ಸಚಿನ್ ಕೃಷ್ಣ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ ಸಚಿನ್ ಕೃಷ್ಣ


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- New user message (ಚರ್ಚೆ) ೦೯:೨೦, ೬ ಫೆಬ್ರುವರಿ ೨೦೧೮ (UTC)

ಅಳಿ[ಳ]ಲು[ಬದಲಾಯಿಸಿ]

ಅವ್ವಳಿಲು ಕೆಮ್ಮುತ್ತಾ ಮಾಗಿದ ಹಣ್ಣಾರಿಸುತ್ತಿದೆ. ‘ಯವ್ವಾ ಅಯ್ಯ ಹೋದ್ಮೇಲ್ ನಿಂಗ್ ಬಾಳ್ ತ್ರಾಸ್ ಆಗಕತ್ತದಾ’, ಎಂದು ಮರಿ ಅಳಿಲು ಕೇಳಿತು. ಅವ್ವಳಿಲು ಬಾಡಿದ ಮುಖದಲ್ಲಿ, ‘ಹ್ಞೂಂ ಎಂದು ತಲೆಯಾಡಿಸುತ್ತಾ, ‘ಅವರು ಇರೋಮಟ್ಟ ನಾನು ನನ್ ಗೂಡ್ನಾಗ ರಾಣಿ ಇದ್ದಾಗ್ ಇದ್ದೆ. ನನ್ನನ್ನ ಹೊರಗ ಹೋಗ್ಲಿಕ್ಕಾ ಬಿಡೋವಲ್ರೂ, ನಾನು ಹೋಗಾಕತ್ತೀನಿ ಅಂದ್ರೂ ನಿಂಗ್ ಯಾಕಬ್ಬೆ ಆ ಪಾಡು, ನಾ ಇರೋ ಮಟ್ಟ ನಿನ್ನ ಚೆಂದ ನೋಡ್ಕಾತ್ತೀನಿ’, ಅಂತ ಅಂತಿದ್ರು. ‘ಅವತ್ತು ಹಂಗಾ ಹೇಳಿ ಮನೆಯಿಂದ ಹೊರ ಹೋದೋರು ಪುನಃ ವಾಪಸ್ಸಾಗ್ಲೀ ಇಲ್ಲ. ಅದೂ ಅವರ ತಪ್ಪಿರಲಿಲ್ವಂತಾ. ಗಸಗಸೆ ಮರ ಹತ್ತಿ ಹಣ್ಣು ಕಿತ್ತು ಕೆಳ ಬಿಡ್ತಾ ಇದ್ದೋರು, ಹಾಗೆ ಪಕ್ಕದ ಮರಕ್ಕೆ ಹೆಗರಿದ್ದಷ್ಟೇ ಆಯ ತಪ್ಪಿ ಕೆಳ ಬಿದ್ದದ್ದಷ್ಟೆ. ಬಿದ್ದ ರಭಸಕ್ಕೆ ಪಕ್ ಅಂತಾ ಪ್ರಾಣ ಹೋತು’ ಅಂತ ಜೊತೆಲಿದ್ದ ಬಸ್ಯಾ ಹೇಳಿದ್ದು.

ನಂಕಾ ಕೊನೆ ಮಾತು ತಿಳಿಸ್ದಾ ಹೊಂಟೋದ್ರು. ನೀ ನನ್ ಹೊಟ್ಟೆಲಿದ್ದಿ, ನನ್ ಗೋಳು ಕೇಳೋರಿಲ್ಲಿಲ್ಲ. ಗಂಡ ಹೋದ ಅಂತ ನನ್ನ ಸಾಕ್ಲಿಕ್ ಯಾರೂ ಮುಂದ್ ಬರಲಿಲ್ಲ. ನಾ ನಿನ್ನ ಸಾಕೋಕ ಎಷ್ಟು ಪಾಡು ಪಟ್ನೋ ಆ ದ್ಯಾಮರಿಗೆ ಗೊತ್ತು’.

ಅವ್ವಳಿಲು ಹೇಳ್ತಿದ್ದ ಕತೀ ಕೇಳಿ ಮರಿ ಅಳಿಲು ಗೊಳೋ ಅಂತಾ ಅಳಾಕತ್ತಿತ್ತು.

‘ಅವ್ವಾ ನೀ ಅಳ್ಬೇಡಾ, ನಾ ಈಗ ಚೆನ್ನಾಗಿ ಓಡಾಡಕತ್ತೀನಿ, ನಿನ್ ಬವಣೆ ಒಸಿ ನಂಗು ತಾ, ನಾ ನಿಂಕ್ ಹೆಗಲ್ ಕೊಡ್ತೀನಿ, ಇಬ್ಬರೂ ಚೆಂದ್ ಬಾಳಾ ಕಟ್ಟೋಣಾ, ಆಗ್ಲೇ’ ಅಂತು.

ಅವ್ವಳಿಲು ‘ನೀ ಇನ್ನು ಕೂಸದಿ, ನಿಂಕ ನಮ್ಮ ರಾಕ್ಷಸರ ಬಗ್ಗಿ ತಿಳಿದಿಲ್ಲ’

‘ಅವ್ವಾ, ಅವ್ವಾ, ಈ ರಾಕ್ಷಸರು ಅಂದ್ರೆ ಯಾರಾ?’

‘ಅಯ್ಯೋ ಮಗಾ ರಾಕ್ಷಸರಾ ಅಂದ್ರಾ ಮನುಷ್ಯ ಪ್ರಾಣಿಗಳದಾರಾ. ಅವ್ರಿಗೆ ಇತರರ ಮೇಲೆ ಕಬರ್ ಇರ್ಲೀ, ತಮ್ಮ ಮೇಲೂ ಕಬರ್ ಇಲ್ಲ. ಅವರದ್ದು ಆಡಿದ್ದೇ ಆಟ. ಅವರು ಬೆಳಿದೇ ಇರೋ ಮರಗಳ್ನಾ ತಾವು ಕಡ್ದು ದುಡ್ಡು ಮಾಡ್ಕೋತ್ತಾರಾ, ಅಷ್ಟಕ್ಕಾ ಬಿಡೋವಲ್ರೂ, ಪ್ರಕೃತಿ ಮಾತೇನಾ ಹಾಳ್ ಮಾಡಾಕತ್ತಾರಾ, ನೀರನ್ನು ಮಲಿನಾ ಮಾಡೋಕತ್ತಾರಾ, ಆ ದ್ಯಾಮ್ರು ಎಲ್ಲರಿಗೂ ಕೊಟ್ಟದ್ದನ್ನ ಏನೂ ಉಳಿಸಾಕತ್ತಿಲ್ಲ. ಎಲ್ಲ ತಮಿಗೆ ಬೇಕು ಅನ್ನೋ ಸ್ವಾರ್ಥಿಗಳು. ಅವರಿಗೆ ಅವರ ಜೊತೆಗಾರರ ಬಗ್ಗಿ ಚಿಂತಿಲ್ಲ. ಇನ್ನೂ ಅವರಂಗೆ ಬದುಕ ಸಾಗಿಸೋ ನಮ್ಮ ಬಗ್ಗೆ ಎಲ್ಲಿ?’

‘ಮಗಾ, ಅವರ ಗಲಿಬಿಲಿ, ಗಾಬರಿ, ಸ್ವಾರ್ಥಕ್ಕ ನಮ್ಮಂತ ಲಕ್ಷಾಂತರ ಜೀವಿಗಳು ಮಣ್ಣಾಗ್ ಹುಗಿದೋದ್ವು. ಅಂತಾ ಜಗತ್ನಾಗ ನಾವು ಜೀವ ತೇತಿದ್ದೀವಿ. ಆ ದ್ಯಾಮ್ರು ಬುದ್ಧಿ ಇಲ್ದೆ ನಮ್ಮನ್ನ ಈ ಶನಿಗಳ ಮಧ್ಯೆ ಬಿಟ್ಟಾನಾ. ನೀನು ಆ ಶನಿಗಳ ಕೈಲಿ ಸಿಕ್ಕು ಮಣ್ಣಾಗೋದು ನಂಕ ಇಷ್ಟಿಲ್ಲ. ನಾ ಸತ್ರೂ ನೀ ಬದುಕಬೇಕು’ ಅಂತಾ ಹೇಳ್ತು. ‘ಆತವ್ವ, ನಿನ್ನ ಮಾತಂಗೆ ಆಗ್ಲಿ, ಕೆಲವ್ ದಿನವಷ್ಟೇ. ಆಮ್ಯಾಕ್ ನಾನು ನಿನ್ ಪೈಕಿ ಬರೋನೇ’ ಅಂತೂ.

ಅವ್ವಳಿಲು ‘ಸರಿ ಮಗ, ಈಗ ಮಲಗು ನೀ’ ಅಂತೇಳಿ ಜೋಗುಳ ಹಾಡಿ ಮಲಗಿಸಿತು. ಮುಂಜಾನಾಯ್ತು, ಅವ್ವಳಿಲು ‘ಮಗಾ ಎದ್ದೇಳೋ ಮಟ ಹೊಟ್ಟೆಗ್ ಏನಾದ್ರು ತಂದ್ ಬಿಡೋಣಾಂತ ಗೂಡು ಬಿಟ್ಟು ಹೊರಗ್ ಹೋತು. ಮರಿ ಅಳಿಲು ಇನ್ನೂ ನಿದ್ದೆ ಮಾಡಾಕತ್ತಿತ್ತು. ಅವ್ವ ಸಂದಿ ಗೊಂದಿ ತಿರುಗಿ ಗಸಗಸೆ ಹಣ್ಣನ್ನು ಆರಿಸಿ ತಂದು ಕಾತಿತ್ತು. ಮರಿ ಅಳಿಲು ಎದ್ದು ಹಣ್ಣು ತಿಂದು, ‘ಅವ್ವಾ ನಾ ಆಟ ಆಡೋಕ್ ಹೋಗ್ಲೇ?’ ಅಂತು. ಅವ್ವಳಿಲು ‘ಹೋಗ, ಆದ್ರೆ ಹುಷಾರ ನೋಡು ಮತ್ತಾ’ ಅಂತೇಳಿ ಕಳಿಸ್ತು.

ಮರಿ ಅಳಿಲು ತನ್ನ ಗೆಳೆಯರ ಕೂಡಿ ಮರ ಹತ್ತೋದು ಇಳಿಯೋ ಆಟ ಆಡ್ತಾ ಇತ್ತು. ಆ ಗೆಳೆಯರಿಗೆಲ್ಲಾ ಅದೇನೋ ಖುಸಿ, ಆಡ್ತಾ ಆಡ್ತಾ ಮರ ಮರ ಎಗರ್ತಾ ಇದ್ವು. ಅವ್ವಳಿಲು ಮರಿ ಅಳಿಲು ಆಟ ಆಡಿ ಬಂದ್ ಮೇಲಾ ಊಟಾ ಮಾಡ್ಸೋಣಾಂತ ಕಾತಿತ್ತು.

ಹಿಂಗ್ ಮರ ಮರ ನೆಗಿತಿದ್ ಕೆಲವು ಅಳಿಲುಗಳು ದಾರಿ ತಪ್ಪೋದ್ವು. ಅವ್ವ ಕಾತಿದ್ ಅಳಿಲು ಕೂಡಾ ಅವುಗಳ ಜೊತೆಗೆ ಇತ್ತು. ಅದಕ್ಕಾ ದಾರಿ ಕಾಣ್ದೆ ಗಲಿಬಿಲಿ ಮಾಡ್ಕೋತ್ತಾ, ಎಲ್ಲ ಅಳಿಲುಗಳು ದಿಕ್ಕಾಪಾಲಾಗಿ ಹೋದ್ವು. ಈ ಮರಿ ಅಳಿಲು ಅವ್ವನ್ನ ನೆನಸ್ಕೋತ್ತಾ, ಬಾಳ ಅಳಾಕತ್ತಿತ್ತು. ಅದರ ದಾರಿ ಯಾವುದು ಅಂತಾನು ಅದಕ್ಕೂ ತಿಳಿವೊಲ್ದು. ಹೀಗ್ ದಾರಿ ಹುಡ್ಕೋ ಮುಂದ, ಒಂದು ರಸ್ತೆ ಬದೀಲ್ ನಿಲ್ತು. ಅಷ್ಟರಾಗೊಬ್ಬ ತನ್ನ ಬೈಕ್ ಮೇಲೆ ಬಾಳ್ ರಭಸವಾಗಿ ಜೋರು ಶಬ್ದ ಮಾಡ್ಕೋತ್ತಾ ಬರ್ತಾ ಇದ್ದ. ಅದನ್ನ ಕಂಡ ಮರಿ ಅಳಿಲು ಭಯದಿಂದ ಈ ಕಡೆಯಿಂದ ಆ ಕಡೆಗೆ ಓಡ್ಬಿಡ್ತು. ಆತನೋ ಅಳಿಲು ರಸ್ತೆ ದಾಟ್ತಲ್ಲ ಅಂತಾ ಅದೇ ವೇಗದಲ್ಲಿ ಮುಂದೋದ.

ಈತನಿಗೆ ಎದುರಾಗಿ ಮತ್ತೊಂದು ಬೈಕ್ ಬರಾಕತ್ತಿತ್ತು. ಅದನ್ನು ಕಂಡ ಆ ಮರಿ ಅಳಿವು ಮತ್ತದೇ ಗಾಬರಿಯಿಂದ ಪುನಃ ವಾಪಾಸ್ಸಾಗ್ಬಿಡ್ತು. ರಭಸನಾ ಕಡಿಮೆ ಮಾಡೋಕಾಗ್ದ ಆ ವ್ಯಕ್ತಿ ಬೈಕ್ನಾ ಹಿಂಬದಿ ಚಕ್ರ ಆ ಮರಿ ಅಳಿಲಿನ ಮೇಲೆ ಒಂದು ಕ್ಷಣ ಹತ್ತಿಳೀತು. ಆ ಮರಿ ಅಳಿಲು ಗಾಬರಿಯಿಂದ ಬಿಗಿ ಹಿಡಿದ್ದಿದ್ದ ತನ್ನುಸಿರನ್ನಾ ಥಟ್ಟನೆ ಬಿಟ್ಬಿತ್ತು.

ಆ ಬೈಕ್ ಸವಾರನಿಗೂ ಕೊಂಚ ಗಾಬರಿಯಾಗಿ ತನ್ನ ಬೈಕ್ ನಿಲ್ಲಿಸಿ, ಬಂದು ಮರಿ ಅಳಿಲನನ್ ಅಲ್ಲಾಡಿಸಿದ, ಆ ಅಳಿಲು ತನ್ನ ಜೀವ ಕಳೆದುಕೊಂಡಿತ್ತು. ಆತನೂ ಬಹಳ ಗದ್ಗದಿತನಾಗಿ, ‘ನನ್ನ ಗಾಡಿಗೆ ಯಾಕವ್ವ ಸಿಕ್ದೆ ನೀ?’ ಅಂತಾ ಕೂಗುತ್ತಾ ಆ ಸತ್ತ ಮರಿ ಅಳಿಲನ್ನು ಪಕ್ಕದ ಬದಿಗೆ ಸರಿಸಿ ತನ್ನ ಸವಾರಿ ಮುಂದುವರೆಸಿದ. ಮರಿ ಅಳಿಲನ್ನು ಕಾದಿದ್ ಅವ್ವಾಗ್ ಬಾಳ ಗಾಬರಿಯಾತು. ಅದರ ಗೆಳೇರನ್ನ ಕೇಳ್ತು. ಅವುಗಳು ಅಲ್ಲೋದ ಇಲ್ಲೋದ ಅಂದ್ವು. ಈ ಅವ್ವಳಿಲು ಗಾಬರಿ ಮತ್ತಾ ಹೆಚ್ಚಾಗಿ ಅವುಗಳ್ ಹೇಳಿದ್ ದಾರೀಲಿ ಓಡ್ತು.

ಪಾಪ ಮರಿ ಅಳಿಲು ರಸ್ತೆ ಬದೀಲಿ ಸತ್ತು ಬಿದ್ದದ್ದನ್ನ ಕಂಡು ಅವ್ವಳಿಲು ಚೀರುತ್ತಾ ಓಡಿ ತನ್ನ ಮಗುವನ್ನು ಬಳಸಿ, ‘ಯಾಕಪ್ಪ ನನ್ನ ಮಾತಾ ಮೀರ್ ಹೋದೆ ನೀ, ನಾ ಹೇಳ್ದಾ ತಾನಾ, ನಿಂಕ, ಬೇಡ, ಬೇಡ, ಮನುಷ್ಯ ಪ್ರಾಣಿ ಸರಿ ಇಲ್ಲ, ನೀಚರು ಅಂತಾ, ಆದ್ರೂ ನೀ ನನ್ನ ಮಾತು ಕೇಳೊಲ್ದೆ, ಈಗ್ ನನ್ ಬಿಟ್ಟು ಬಾಳಾ ದೂರಾ ಹೋದಾ, ನನ್ ಗಂಡಾ ಹೋದಾ, ಅಂತಾ ನಾ ನಿನ್ ಸಲುವಾಗಿ ನಾ ಸಾಯ್ದೆ ಬದುಕಿತ್ತೆ, ಮತ್ತೀಗಾ ನೀನು ಹೋದೆ ನಾ ಯಾರ್ ಸಲುವಾಗ್ ಇರ್ಲಿ’

‘ಎದ್ದೋಳೋ ವ್ವಾ, ಎದ್ದೋಳೋ, ನಿಮ್ಮವ್ವ ಬಂದೀನಿ, ನೋಡಾ ಮತ್ತೆ, ಒಮ್ಮೆ ಕಣ್ ಬಿಡೋ’ ಅಂತಾ ಅಳ್ತಾ ಅಳ್ತಾ ಆ ಸತ್ತ ಮರಿ ಮೇಲೆ ತಲೆ ಇಟ್ಟು ಮಲಗಿ ಬಿಡ್ತು. ಅದರ ನೋವನ್ನ ಕೇಳೋರು ಯಾರೂ ಇಲ್ಲ, ಪ್ರೀತಿ ಮಾಡ್ತಿದ್ ಗಂಡ ಇಲ್ಲ, ಸಾಂತ್ವನ ಹೇಳೋ ಮಗಾನೂ ಇಲ್ಲ. ಅದರ ದುಃಖನಾ ಹೋಗ್ಸೋರು ಯಾರ್ ಇದ್ದಾರಾ ಮತ್ತೆ? ಯಾರೂ ಇಲ್ಲ.... ಸಚಿನ್ ಕೃಷ್ಣ

ಬದಲಾಗಬೇಕಿರುವುದು ಫೇಸ್‍ಬುಕ್ ವಾಟ್ಸ್‍ಅಪ್ ಡಿಪಿಯಲ್ಲ... ಅನಾಗರೀಕರಾದ ನಾವು....[ಬದಲಾಯಿಸಿ]

ಯಾರಿಗೆ ಬಂತು? ಎಲ್ಲಿಗೆ ಬಂತು? 47ರ ಸ್ವಾತಂತ್ರ್ಯ ಎಂಬ ಪದ್ಯವಂತು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ನೆನಪಿಗೆ ಬಾರದೆ ಇರಲಿಕ್ಕಿಲ್ಲ. ಹೇಳಿಕೊಳ್ಳಲು ನಮಗೆ ಸ್ವಾತಂತ್ರ್ಯ ಬಂದು 72ರ ಸಂಭ್ರಮ.! ಅರೇ.. ಸಂಭ್ರಮವೇ... ಯಾವ ರೀತಿ... ರಾಷ್ಟ್ರವನ್ನೇ ಪೂರಾ ದೋಚಿ, ಮತ್ತೆ ದೋಚಲು ಏನು ಸಿಗದ ಬಡಕಲು ಭಾರತವನ್ನು ಬಿಟ್ಟು ಹೋದ ದಿನವೆಂಬ ಸಂಭ್ರಮವೇ... ಒಳ ಕುತಂತ್ರಿಗಳ ಮಸಲತ್ತಿನಿಂದ ಸಹೋದರರಂತಿದ್ದ ಪಾಕಿಸ್ತಾನವನ್ನು ಕಳೆದುಕೊಂಡೆವಲ್ಲವೆಂಬ ಸಂಭ್ರಮವೇ... ಮಹಾತ್ಮರೆಂದೆನಿಸಿಕೊಂಡ ಗಾಂಧೀಜಿಯ ಕನಸು ನನಸಾದರೂ ಬಲವಿಲ್ಲದಂತಾಗಿದೆ ಎಂಬ ದುಃಖದ ಸಂಭ್ರಮವೋ... ಭಾರತದ ಪ್ರತಿಯೊಬ್ಬನೂ ಪಡೆದಿರುವ ಆದರೆ ಅನುಭವಿಸಲು ಹೆಣಗಾಡುತ್ತಿರುವ ಆರ್ಟಿಫಿಷಿಯಲ್ ಸ್ವಾತಂತ್ರ್ಯವನ್ನು ಗಳಿಸಿದ್ದೇವೆಂಬ ಸಂಭ್ರಮವೋ... ಯಾವ ಸಂಭ್ರಮಕ್ಕೆ ನಾವು ಸ್ವಾತಂತ್ರ್ಯ ದಿನವೆಂದು ಆಚರಿಸಿ ಸ್ವೀಟು ತಿಂದು ಮತ್ತೆ ನಮ್ಮ ದಿನನಿತ್ಯ ವಿಕೃತಿಯಲ್ಲಿ ಮುಂದುವರೆಯಬೇಕೋ ನಾಕಾಣೆ...

ನಾವು ನಿಜವಾದ ಸ್ವಾತಂತ್ರ್ಯವನ್ನು ಗಳಿಸಿದ್ದೇವೆಯೋ ಎಂಬ ಯಕ್ಷ ಪ್ರಶ್ನೆಯಂತು ಮೂಡುತ್ತಲೇ ಇರುತ್ತದೆ.. ಸಿಕ್ಕ ಸ್ವಾತಂತ್ರ್ಯವನ್ನು ನಾವು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿದ್ದೇವೆ.. ಬಳಸಿಕೊಂಡರೂ ಯಾರ ಒಳಿತಿಗಾಗಿ... ಯಾರ ಉದ್ಧಾರಕ್ಕಾಗಿ... ಯಾರ ಅಭ್ಯುದಯಕ್ಕಾಗಿ... ಯೋಚಿಸಬೇಕಾದ ಸಂಗತಿಗಳಾದರೂ ಉತ್ತರಿಸಬಹುದಾದ ಸಹೃದಯಿ ಕೊರತೆಯಂತು ನೀಗಿಸದಂತಾಗಿದೆ. ಸ್ವಾತಂತ್ರ್ಯವಂತೆ ಸ್ವಾತಂತ್ರ್ಯ ಮಹಾತ್ಮರೆಂದೆನಿಸಿಕೊಂಡ ಗಾಂಧಿ ಯಾವ ಹೆಣ್ಣು ಮಗಳು 12 ಗಂಟೆಯ ರಾತ್ರಿ ಒಬ್ಬಳೇ ನಿರ್ಭಯದಿಂದ ಒಡಾಡುತ್ತಾಳೋ ಅಂದೇ ನಮಗೆ ಸ್ವಾತಂತ್ರ್ಯ ಸಿಕ್ಕಿದಂತೆ ಎನ್ನುತ್ತಿದ್ದರಂತೆ. ನನ್ನ ಪ್ರಕಾರ ಅಂತಹ ಸ್ವಾತಂತ್ರ್ಯ ಅಲಭ್ಯವೇ.. ರಾತ್ರಿ 12 ಗಂಟೆಗಂತೆ... ಎಲ್ಲರೂ ಸತ್ತವರಂತೆ ಎದ್ದು ಒಡಾಡುವಾಗಲೇ ಹೆಣ್ಣೊಬ್ಬಳು ಧೈರ್ಯದಿಂದ ಓಡಾಡುವ ಪರಿಸ್ಥಿತಿ ಭಾರತದಲ್ಲಿ ಇಲ್ಲ... ಭಾರತ ಹೆಣ್ಣಿಗೆ ದೇವತಾ ಸ್ವರೂಪವನ್ನು ನೀಡಿದೆ ಎಂಬುದು ಹೇಳಿಕೊಳ್ಳಲು ಮಾತ್ರ... ತಮಗೆ ಅಗತ್ಯ ಬಂದಾಗ ದೇವರಂತೆ, ತಾಯಿಯಂತೆ, ಮಗಳಂತೆ, ಅಕ್ಕನಂತೆ, ತಂಗಿಯಂತೆ ಇನ್ನೂ ಅಗತ್ಯ ಬಂದಾಗ ಸೂಳೆಯಂತೆ, ಕಾಮದ ವಸ್ತುವಂತೆ, ಮಾಂಸ ಮುದ್ಧೆಯಂತೆ, ತೆವಲು ನೀಗಿಸುವ ಯಂತ್ರದಂತೆ ಬಿಂಬಿಸುವ ಅಯೋಗ್ಯರಿಗೆ ಮನ್ನಣೆ ನೀಡಿದ ಭಾರತದಲ್ಲಿ ನಾವಿದ್ದೇವೆ. ನಮಗೆ ಸ್ವಾತಂತ್ರ್ಯ ಬಂದು 72 ವರ್ಷವಾಗಿದೆ. ಬಾವುಟ ಹಾರಿಸಿ, ಸ್ವೀಟು ತಿಂದು ಪುನಃ ಅದೇ ವಿಕೃತಿಯಲ್ಲಿ ಚೆನ್ನಾಗಿ ಬದುಕೋಣ ಅಲ್ಲವೇ... ಬೋಲೋ ಭಾರತ್ ಮತಾಕಿ.... ವಂದೇ... ಮಾತರಂ... ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ಫೇಸ್‍ಬುಕ್, ವಾಟ್ಸ್‍ಅಪ್, ಇನ್ಸ್ ಸ್ಟಾ ಗ್ರಾಂ ಡಿಪಿ ಬದಲಾದರೆ ಏನು ಪ್ರಯೋಜನವಿಲ್ಲ... ನಾಚಿಕೆಯಾಗಬೇಕು ಅಂತಹ ಅನಾಗರೀಕರಿಗೆ...