ಸದಸ್ಯ:ಸಚಿನ್ ಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸಚಿನ್ ಕೃಷ್ಣ. ನಾನು ಹುಟ್ಟಿದ್ದು 1995 ನವೆಂಬರ್ 23, ನನ್ನ ಹುಟ್ಟೂರು ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ನನ್ನ ಹುಟ್ಟೂರಿನಲ್ಲಿಯೇ ಪ್ರಾರಂಭಿಸಿ, ಕೋಲಾರದಲ್ಲಿಯೂ ಒಂದು ವರ್ಷ ವಿದ್ಯಾಭ್ಯಾಸ ಮುಗಿಸಿ, ಕಡೆಗೆ ಬೆಂಗಳೂರೆಂಬ ಮಾಯಾ ನಗರಿಗೆ ಕುಟುಂಬದವರೊಂದಿಗೆ ಬಂದಿದ್ದು 2005ರಲ್ಲಿ. ನನ್ನ ತಾಯಿಯ ತವರು ಕೂಡಾ ಇದೇ. ಅವರಿದ್ದದ್ದು ಅಗ್ರಹಾರ ದಾಸರಹಳ್ಳಿಯಲ್ಲಿ. ನಾವು ಮೊದಲಿಗೆ ಸೇರಿದ್ದು ದಾಸರಹಳ್ಳಿಯನ್ನೇ. ನನ್ನನ್ನು ಅಲ್ಲಿಯ ಸರ್ಕಾರಿ ಶಾಲೆಗೆ ಸೇರಿಸಿದರು. ನಾನು 10 ನೇ ತರಗತಿಯವರೆಗೆ ಅಲ್ಲಿಯೇ ಓದಿ, ಪಿಯುಸಿಯನ್ನು ವಿಜಯನಗರದ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡಿದೆ. ಮುಂದೆ ಪದವಿಯನ್ನು ರಾಜಾಜಿನಗರದ ಬಸವೇಶ್ವರ ವಾಣಿಜ್ಯ, ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮುಗಿಸಿದೆ. ನನ್ನ ನೆಚ್ಚಿನ ವಿಷಯ ಕಲೆ. ನಾನು ಮುಂದೆ ಎಂಎ ಪತ್ರಿಕೋದ್ಯಮಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿಗೆ ಸೇರಿ, ಈಗ ಅಂತಿಮ ಸೆಮಿಸ್ಟರ್ ವಿದ್ಯಾಭ್ಯಾಸ ಮಾಡುತ್ತಿದ್ದೇನೆ.

ನನ್ನ ದಿಕ್ಕು ಬದಲಿಸಿದ್ದು ನನ್ನ ಪದವಿ ಪ್ರಾಧ್ಯಾಪಕರ ಹಿತ ನುಡಿಗಳು. ಎಲ್ಲಿಯೋ ಸಲ್ಲ ಬೇಕಾಗಿದ್ದವನನ್ನು ಪತ್ರಿಕೋದ್ಯಮದಲ್ಲಿ ಸಲ್ಲುವಂತೆ ಮಾಡಿದವರು ನನ್ನ ಇಂಗ್ಲೀಷ್ ಪ್ರಾಧ್ಯಾಪಕರಾದ ಕುಮುದಿನಿ ಎಸ್ ಪುತ್ರ. ಅವರ ಅಣತಿಯಂತೆ ನಾನು ಪತ್ರಿಕೋದ್ಯಮಕ್ಕೆ ಸೇರಿ ಅಲ್ಲಿಯೇ ನನ್ನ ಅಭಿರುಚಿಗಳನ್ನು ಬೆಳೆಸಿಕೊಳ್ಳುತ್ತಿದ್ದೇನೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಯಾವುದೇ ಎಡ ಬಲಗಳ ಆಮಿಷಗಳಿಗೆ ಬಲಿಯಾಗದೇ ಹೊಸ ಸಿದ್ಧಾಂತದ ನಿರೀಕ್ಷೆಯಲ್ಲಿರುವ ಅತೃಪ್ತ ಆತ್ಮ ನನ್ನದು.